ಭಾರತದಲ್ಲಿ ಲೆನೊವೊ ಟ್ಯಾಬ್‌ M9 ಅನಾವರಣ; ಅತ್ಯಾಕರ್ಷಕ ಫೀಚರ್ಸ್‌ ಬಗ್ಗೆ ತಿಳಿಯಿರಿ!

|

ಗ್ಯಾಜೆಟ್‌ ತಯಾರಿಕಾ ಕಂಪೆನಿಗಳಲ್ಲಿ ಭಾರತದ ಲೆನೊವೊ ಕಂಪೆನಿ ಸಹ ಪ್ರಮುಖವಾಗಿದ್ದು, ಸ್ಮಾರ್ಟ್‌ಕ್ಲಾಕ್‌, ಸ್ಮಾರ್ಟ್‌ ಸ್ಪೀಕರ್‌, ಲ್ಯಾಪ್‌ಟಾಪ್‌, ಪಿಸಿ ಸೇರಿದಂತೆ ಹಲವಾರು ರೀತಿಯ ಡಿವೈಸ್‌ಗಳನ್ನು ಅತ್ಯುತ್ತಮ ಫೀಚರ್ಸ್‌ ನೊಂದಿಗೆ ಪರಿಚಯಿಸಿದ್ದು, ಕೆಲವು ವಾರಗಳ ಹಿಂದಷ್ಟೇ ಲೆನೊವೊ ಟ್ಯಾಬ್‌ M8 4th ಜನ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿತ್ತು. ಇದರ ಸಾಲಿಗೆ ಈಗ ಮತ್ತೊಂದು ಟ್ಯಾಬ್‌ ಸೇರ್ಪಡೆಯಾಗಿರುವುದು ಲೆನೊವೊ ಪ್ರಿಯರಲ್ಲಿ ಸಂತಸ ಉಂಟುಮಾಡಿದೆ.

ಲೆನೊವೊ

ಹೌದು, ಭಾರತದಲ್ಲಿ ಲೆನೊವೊ ಟ್ಯಾಬ್‌ M9 (Lenovo Tab M9 9 ) ಅನ್ನು ಲಾಂಚ್ ಮಾಡಲಾಗಿದೆ. ಈ ಟ್ಯಾಬ್ ಲೆನೊವೊ ಟ್ಯಾಬ್‌ M8 ನಂತೆಯೇ ಪ್ರವೇಶ ಮಟ್ಟದ ಟ್ಯಾಬ್‌ ಆಗಿದ್ದು, ಮೀಡಿಯಾ ಟೆಕ್‌ ಹಿಲಿಯೋ G80 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಜೊತೆಗೆ 5100mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿರುವುದು ವಿಶೇಷ. ಹಾಗಿದ್ರೆ ಇದರ ಇನ್ನಷ್ಟು ಫೀಚರ್ಸ್‌ ಹಾಗೂ ಭಾರತದಲ್ಲಿ ಈ ಟ್ಯಾಬ್‌ನ ಬೆಲೆ ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಈ ಹೊಸ ಟ್ಯಾಬ್‌ M9 9 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 1340 × 800 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಹಾಗೆಯೇ 400nits ಬ್ರೈಟ್‌ನೆಸ್‌ ಮತ್ತು 176ppi ಪಿಕ್ಸೆಲ್ ಸಾಂದ್ರತೆಯನ್ನು ಈ ಡಿಸ್‌ಪ್ಲೇ ಪಡೆದುಕೊಂಡಿದೆ. ಅದರಲ್ಲೂ ಈ ಡಿವೈಸ್‌ ಅನ್ನು ಓದುವುದಕ್ಕೆ ಹೆಚ್ಚು ಬಳಕೆ ಮಾಡುವುದರಿಂದ ವೈಡೆವಿನ್ L1 ಮತ್ತು TÜV ರೈನ್‌ಲ್ಯಾಂಡ್ ಫೀಚರ್ಸ್‌ ಕಣ್ಣಿನ ಆರೈಕೆ ಮಾಡಲಿದೆ.

ಯಾವ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ?

ಯಾವ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ?

ಲೆನೊವೊದ ಈ ಹೊಸ ಟ್ಯಾಬ್ಲೆಟ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G80 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಹಿಲಿಯೋ G80 2 × ಕಾರ್ಟೆಕ್ಸ್ A75 (ಕಾರ್ಯಕ್ಷಮತೆ) ಕೋರ್‌ಗಳನ್ನು ಹಾಗೂ 6 × ಕಾರ್ಟೆಕ್ಸ್ A55 (ದಕ್ಷತೆ) ಕೋರ್‌ಗಳನ್ನು ಬಳಕೆ ಮಾಡಿಕೊಂಡು ಉತ್ತಮ ಅನುಭವ ನೀಡಲಿದೆ. ಇದರೊಂದಿಗೆ ಆಂಡ್ರಾಯ್ಡ್ 12 ನಲ್ಲಿ ರನ್‌ ಆಗಲಿದ್ದು, ಆಂಡ್ರಾಯ್ಡ್ 13 ಅಪ್‌ಗ್ರೇಡ್‌ಗೂ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಇದು ಮೂರು ವೇರಿಯಂಟ್‌ನಲ್ಲಿ ಲಭ್ಯವಿದ್ದು, 3GB + 32GB, 4GB + 64GB, ಹಾಗೂ 4GB + 128GB ಯ ಆಯ್ಕೆಗಳಿವೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಈ ಟ್ಯಾಬ್ಲೆಟ್ 8 ಮೆಗಾಪಿಕ್ಸೆಲ್‌ ರಿಯರ್‌ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ವಿಡಿಯೋ ಕರೆಗಳಿಗೆ ಹಾಗೂ ಮೀಟಿಂಗ್‌ಗಳಿಗೆ ಯೋಗ್ಯವಾಗಿದೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಹೊಸ ಟ್ಯಾಬ್ ಡಾಲ್ಬಿ ಅಟ್ಮಾಸ್ ಆಡಿಯೊದೊಂದಿಗೆ ಡ್ಯುಯಲ್ ಸ್ಪೀಕರ್ ರಚನೆ ಪಡೆದುಕೊಂಡಿದ್ದು, ವಿಡಿಯೋ ಕರೆಗಳಿಗಾಗಿ ಮೈಕ್ರೊಫೋನ್ ಆಯ್ಕೆ ಸಹ ಪಡೆದುಕೊಂಡಿದೆ. ಇನ್ನು ಭದ್ರತೆ ದೃಷ್ಟಿಯಿಂದ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದರಲ್ಲಿ ಇಲ್ಲವಾದರೂ ಫೇಸ್ ಅನ್‌ಲಾಕ್ ಫೀಚರ್ಸ್‌ ನೀಡಿರುವುದು ವಿಶೇಷ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಟ್ಯಾಬ್ M9 ಟ್ಯಾಬ್ಲೆಟ್‌ 5100mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 15W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ. ಈ ಮೂಲಕ 13 ಗಂಟೆಗಳ ವಿಡಿಯೋ ಪ್ಲೇಬ್ಯಾಕ್‌ ಸಿಗಲಿದೆ. ಹಾಗೆಯೇ ಚಾರ್ಜಿಂಗ್ ಹಾಗೂ ಡೇಟಾ ವರ್ಗಾವಣೆಗಾಗಿ ಯುಎಸ್‌ಬಿ 2.0 ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಲೆನೊವೊ ಟ್ಯಾಬ್ M9 ಗೆ ಭಾರತದಲ್ಲಿ ಆರಂಭಿಕ ಬೆಲೆ 11,600 ರೂ. ಗಳಿಂದ ಲಭ್ಯವಾಗಲಿದೆ. ಈ ಟ್ಯಾಬ್‌ ಮೂರು ಸ್ಟೋರೇಜ್‌ ವೇರಿಯಂಟ್‌ ಜೊತೆಗೆ ಆರ್ಕ್ಟಿಕ್ ಗ್ರೇ ಮತ್ತು ಫ್ರಾಸ್ಟ್ ಬ್ಲೂ ಎಂಬ ಎರಡು ಬಣ್ಣದಲ್ಲಿ ಲಭ್ಯ ಇರಲಿದೆ. ಇನ್ನು ಈ ಟ್ಯಾಬ್‌ ಅನ್ನು Q2 2023 ರಿಂದ ಖರೀದಿ ಮಾಡಬಹುದಾಗಿದೆ.

Best Mobiles in India

English summary
Lenovo Tab M9 with MediaTek Helio G80 Launched; Price, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X