ಲೆನೊವೊದಿಂದ ಹೊಸ ಟ್ಯಾಬ್‌ ಲಾಂಚ್‌; ತಲ್ಲಣಗೊಳಿಸುವ ಫೀಚರ್ಸ್‌ ಆಯ್ಕೆ!

|

ಲೆನೊವೊ ಸಂಸ್ಥೆಯ ವಿಭಿನ್ನವಾದ ಡಿವೈಸ್‌ಗಳು ಈಗಾಗಲೇ ಟೆಕ್‌ ವಲಯದಲ್ಲಿ ಭಾರೀ ಸದ್ದು ಮಾಡುತ್ತಿವೆ. ಅದರಲ್ಲೂ ಇತ್ತೀಚೆಗೆ ಪರಿಚಯಿಸಲಾದ ಡ್ಯುಯಲ್‌ ಡಿಸ್‌ಪ್ಲೇ ಆಯ್ಕೆ ಹಾಗೂ ವಿಭಿನ್ನ ಫೋಲ್ಡಬಲ್‌ ಆಯ್ಕೆ ಇರುವ ಲ್ಯಾಪ್‌ಟಾಪ್‌ಗಳು ಭಾರತದ ಟೆಕ್‌ ವಲಯವನ್ನು ತಲ್ಲಣಗೊಳಿವೆ. ಇದರ ನಡುವೆ ಈಗ ಹೊಸ ಹಾಗೂ ಅತ್ಯಾಕರ್ಷಕವಾದ ಟ್ಯಾಬ್ಲೆಟ್‌ ಅನ್ನು ಅನಾವರಣ ಮಾಡಲಾಗಿದ್ದು, ಈ ಟ್ಯಾಬ್‌ ಎರಡು ಸ್ಟೋರೇಜ್‌ ವೇರಿಯಂಟ್‌ನಲ್ಲಿ ಲಭ್ಯ ಇದೆ.

ಲೆನೊವೊದಿಂದ ಹೊಸ ಟ್ಯಾಬ್‌ ಲಾಂಚ್‌; ತಲ್ಲಣಗೊಳಿಸುವ ಫೀಚರ್ಸ್‌ ಆಯ್ಕೆ!

ಹೌದು, ಲೆನೊವೊ ಭಾರತದಲ್ಲಿ ಲೆನೊವೊ ಟ್ಯಾಬ್‌ P11 5G ( Lenovo Tab P11 5G )ಟ್ಯಾಬ್ಲೆಟ್ ಅನ್ನು ಅನಾವರಣ ಮಾಡಿದ್ದು, ಈ ಟ್ಯಾಬ್‌ 11 ಇಂಚಿನ ಡಿಸ್‌ಪ್ಲೇ ಆಯ್ಕೆ ಹೊಂದಿದೆ. ಸ್ಟೈಲಸ್ ಬೆಂಬಲದೊಂದಿಗೆ ಆಕರ್ಷಕ ಲುಕ್‌ ಪಡೆದುಕೊಂಡಿರುವುದರಿಂದ ಲೆನೊವೊ ಪ್ರಿಯರಿಗೆ ಖಂಡಿತಾ ಇಷ್ಟ ಆಗಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ
ಲೆನೊವೊ ಟ್ಯಾಬ್‌ P11 5G ಟ್ಯಾಬ್‌ 11 ಇಂಚಿನ 2K ಡಿಸ್‌ಪ್ಲೇ ಹೊಂದಿದ್ದು, ಇದು 2000x1200 ಪಿಕ್ಸೆಲ್‌ ರೆಸಲ್ಯೂಶನ್ ನೀಡಲಿದೆ. ಹಾಗೆಯೇ ರಿಫ್ರೆಶ್ ರೇಟ್‌ 60Hz ಹೊಂದಿದೆ. ಟ್ಯಾಬ್ಲೆಟ್‌ಗಳ ಮೇಲೆ ದಪ್ಪವಾದ ಬೆಜೆಲ್‌ಗಳು ಕಾಣಿಸಿಕೊಂಡಿದ್ದು, ದೃಢ ಹಿಡಿತವನ್ನು ಪಡೆಯಲು ಬಳಕೆದಾರರಿಗೆ ಈ ಮೂಲಕ ಸಹಕಾರಿಯಾಗಿದೆ. ಇದರೊಂದಿಗೆ IPS ಡಿಸ್‌ಪ್ಲೇ ಆಯ್ಕೆ ಡಾಲ್ಬಿ ವಿಷನ್ ಕಂಟೆಂಟ್ ಅನ್ನು ಸಹ ಬೆಂಬಲಿಸಲಿದೆ.

ಲೆನೊವೊದಿಂದ ಹೊಸ ಟ್ಯಾಬ್‌ ಲಾಂಚ್‌; ತಲ್ಲಣಗೊಳಿಸುವ ಫೀಚರ್ಸ್‌ ಆಯ್ಕೆ!

ಪ್ರೊಸೆಸರ್‌ ವಿವರ
ಈ ಹೊಸ ಟ್ಯಾಬ್ಲೆಟ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G 5G ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಬಳಕೆದಾರರಿಗೆ ಹೆಚ್ಚಿನ ವೇಗದ ಸಂಪರ್ಕವನ್ನು ನೀಡುವ ಉದ್ದೇಶದಿಂದ 6GHz 5G ನೆಟ್‌ವರ್ಕ್‌ಗಳನ್ನು ಬೆಂಬಲಿಸುತ್ತದೆ. ಹಾಗೆಯೇ ಲೆನೊವೊ ಟ್ಯಾಬ್‌ P11 5G ಆಂಡ್ರಾಯ್ಡ್‌ 11 ನೊಂದಿಗೆ ಪ್ಯಾಕ್‌ ಆಗಿದ್ದು, ಆಂಡ್ರಾಯ್ಡ್‌ 12L ಅನ್ನು ಸಹ ಬೆಂಬಲಿಸಲಿದೆ ಎನ್ನಲಾಗಿದೆ. ಆದರೆ, ಇದರ ಓಎಸ್‌ ಬಗ್ಗೆ ನಿಖರವಾಗಿ ಮಾಹಿತಿ ಬಹಿರಂಗಪಡಿಸಿಲ್ಲ. ಹಾಗೆಯೇ 128GB ಹಾಗೂ 256GB ಯ ಎರಡು ವೇರಿಯಂಟ್ ಆಯ್ಕೆಯಲ್ಲಿಈ ಟ್ಯಾಬ್‌ ಲಭ್ಯ ಇರಲಿದೆ.

ಕ್ಯಾಮೆರಾ ವಿವರ
ಹಿಂಬದಿಯ ಕ್ಯಾಮೆರಾ ಮಾಡ್ಯೂಲ್ ಆಟೋ ಫೋಕಸ್‌ನೊಂದಿಗೆ 13 ಮೆಗಾಪಿಕ್ಸೆಲ್ ಸೆನ್ಸರ್‌ ಹೊಂದಿದೆ. ಹಾಗೆಯೇ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸರ್‌ ಆಯ್ಕೆ ಪಡೆದುಕೊಂಡಿದ್ದು, 3D ಚಿತ್ರಣ ಮತ್ತು ಗೆಸ್ಚರ್ ಫೈಂಡ್‌ಗೆ ಇದು ಅನುವು ಮಾಡಿಕೊಡಲಿದೆ.

ಬ್ಯಾಟರಿ ಸಾಮರ್ಥ್ಯ ಹಾಗೂ ಕನೆಕ್ಟಿವಿಟಿ ಆಯ್ಕೆ
20W ಚಾರ್ಜಿಂಗ್‌ನೊಂದಿಗೆ 7700mAh ಸಾರ್ಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, 12 ಗಂಟೆಗಳವರೆಗೆ ತಡೆರಹಿತ ವಿಡಿಯೋ ಸ್ಟ್ರೀಮಿಂಗ್ ಅನ್ನು ನೀಡಲಿದೆ ಎಂದು ಲೆನೊವೊ ತಿಳಿಸಿದೆ. ಬ್ಲೂಟೂತ್‌ ಆವೃತ್ತಿ 5.1, ವೈ ಫೈ 6, ಹಾಗೂ ಯುಎಸ್‌ಬಿ ಟೈಪ್‌ ಸಿ 3.2 ಜನ್‌ 1 ಆಯ್ಕೆ ಪಡೆದುಕೊಂಡಿದೆ.

ಲೆನೊವೊ ಪ್ರಿಸಿಶನ್ ಪೆನ್‌ 2 ಸ್ಟೈಲಸ್ ಮತ್ತು ಕೀಬೋರ್ಡ್‌ನಂತಹ ಲೆನೊವೊದ ಆಂತರಿಕ ಟೂಲ್ಸ್‌ಗಳನ್ನು ಇದು ಬೆಂಬಲಿಸುತ್ತದೆ. ಆದರೆ, ಈ ಎರಡೂ ಬಿಡಿಭಾಗಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ ಎಂಬುದು ನಿಮ್ಮ ಗಮನಕ್ಕಿರಲಿ.

ಲೆನೊವೊದಿಂದ ಹೊಸ ಟ್ಯಾಬ್‌ ಲಾಂಚ್‌; ತಲ್ಲಣಗೊಳಿಸುವ ಫೀಚರ್ಸ್‌ ಆಯ್ಕೆ!

ಭಾರತದಲ್ಲಿ ಇದರ ಬೆಲೆ ಹಾಗೂ ಲಭ್ಯತೆ
ಈ ಟ್ಯಾಬ್ ಎರಡು ವೇರಿಯಂಟ್‌ನಲ್ಲಿ ಲಭ್ಯವಿದ್ದು, ಇದರಲ್ಲಿ 128GB ಸ್ಟೋರೇಜ್‌ ವೇರಿಯಂಟ್‌ಗೆ 29,999 ರೂ. ಗಳ ಆರಂಭಿಕ ಬೆಲೆ ಇದ್ದು, 256GB ಸ್ಟೋರೇಜ್ ವೇರಿಯಂಟ್ ಗೆ 34,999 ರೂ. ಗಳ ಆರಂಭಿಕ ಬೆಲೆ ನಿಗದಿ ಮಾಡಲಾಗಿದೆ. ಈ ಡಿವೈಸ್‌ ಅನ್ನು ನೀವು ಅಮೆಜಾನ್‌ ಹಾಗೂ ಇತರೆ ರಿಟೇಲರ್‌ ಹಾಗೂ ಆನ್‌ಲೈನ್ ಸ್ಟೋರ್‌ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
Lenovo Tab P11 5G tablet with 11-inch display launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X