ಲೆನೊವೊ ಟ್ಯಾಬ್ P11 ಪ್ರೊ ಲಾಂಚ್‌: ಬೆಲೆ, ಫೀಚರ್ಸ್‌ ಬಗ್ಗೆ ತಿಳಿಯಿರಿ

|

ಜಗತ್ತಿನಲ್ಲಿ ಪ್ರಮುಖ ಗ್ಯಾಜೆಟ್‌ ತಯಾರಿಕ ಕಂಪೆನಿಗಳ ಸಾಲಿನಲ್ಲಿರುವ ಲೆನೊವೊ ಈಗಾಗಲೇ ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ ಹಾಗೂ ಇಂಟರ್ನೆಟ್‌ ಆಧಾರಿತ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ನಡುವೆ ಈಗ ಎರಡನೇ ತಲೆಮಾರಿನ ಹೈ ಎಂಡ್‌ ಟ್ಯಾಬ್ಲೆಟ್ ಅನ್ನು ಲಾಂಚ್ ಮಾಡಿದೆ. ಈ ಟ್ಯಾಬ್ಲೆಟ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಕೊಂಪನಿಯೊ 1300T (MediaTek Kompanio 1300T) ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ.

ಲೆನೊವೊ

ಹೌದು, ಲೆನೊವೊ ಕಂಪೆನಿ ಲೆನೊವೊ ಟ್ಯಾಬ್ P11 ಪ್ರೊ ಅನ್ನು ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ ಡಿವೈಸ್‌ ಗಾಜಿನಂತಹ ಫಿನಿಶ್‌ನೊಂದಿಗೆ ಡ್ಯುಯಲ್ ಟೋನ್ ವಿನ್ಯಾಸದ ಆಯ್ಕೆ ಪಡೆದಿದ್ದು, 8GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ಹೊಂದಿದೆ. ಹಾಗಿದ್ದರೆ ಈ ಡಿವೈಸ್‌ನ ಬೆಲೆ ಹಾಗೂ ಇನ್ನಿತರ ಪ್ರಮುಖ ಫೀಚರ್ಸ್‌ಗಳನ್ನು ಈ ಲೇಖನದಲ್ಲಿ ತಿಳಿಯೋಣ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಟ್ಯಾಬ್ P11 ಪ್ರೊ (2ನೇ ಜೆನ್) ಡಿವೈಸ್‌ 11.2 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, 15:9 ಆಕಾರ ಅನುಪಾತದೊಂದಿಗೆ 2560 x 1536 ಪಿಕ್ಸೆಲ್‌ನ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಹಾಗೆಯೇ 360Hz ಟಚ್ ಸ್ಯಾಂಪ್ಲಿಂಗ್ ರೇಟ್ ಹಾಗೂ 600 nits ಬ್ರೈಟ್‌ನೆಸ್‌ ಹೊಂದಿದ್ದು, 120Hz ರಿಫ್ರೆಶ್ ರೇಟ್ ಫೀಚರ್ಸ್‌ ಪಡೆದಿದೆ. ಅದರಲ್ಲೂ ಪ್ರಮುಖವಾಗಿ ಡಾಲ್ಬಿ ವಿಷನ್ HDR ಮತ್ತು HDR10+ ಗೆ ಈ ಡಿವೈಸ್‌ ಬೆಂಬಲ ನೀಡುತ್ತದೆ. ಈ ಡಿವೈಸ್‌ ನೀಲಿ ಬೆಳಕನ್ನು ಫಿಲ್ಟರ್ ಮಾಡಲು TUV ರೈನ್‌ಲ್ಯಾಂಡ್ ನಿಂದ ಪ್ರಮಾಣೀಕರಿಸಲ್ಪಟ್ಟಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಈ ಡಿವೈಸ್‌ ಆಕ್ಟಾಕೋರ್ ಮೀಡಿಯಾ ಟೆಕ್ ಕೊಂಪನಿಯೊ 1300T ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 8GB RAM ಹಾಗೂ 256GB ಸ್ಟೋರೇಜ್ ಸಾಮರ್ಥ್ಯ ಇದರಲ್ಲಿದ್ದು, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೂ ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ. ಇದು ಇನ್‌ಬಿಲ್ಟ್‌ ಟ್ರ್ಯಾಕ್‌ಪ್ಯಾಡ್‌ ಆಯ್ಕೆ ಪಡೆದಿದ್ದು, ಈ ಡಿವೈಸ್ ಅನ್ನು ಲ್ಯಾಪ್‌ಟಾಪ್‌ ಆಗಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್‌ನಲ್ಲಿ ರನ್‌ ಆಗಲಿದೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಈ ಡಿವೈಸ್‌ನಲ್ಲಿ 13 ಮೆಗಾಪಿಕ್ಸೆಲ್ ರಿಯರ್‌ ಕ್ಯಾಮೆರಾ ಹಾಗೂ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾವನ್ನು ಹೊಂದಿದೆ. ಇದರಿಂದ ಮೀಟಿಂಗ್‌ಗಳು ಹಾಗೂ ವಿಡಿಯೋ ಕಾಲಿಂಗ್‌ ಸೌಲಭ್ಯ ಪಡೆಯಬಹುದು.

ಕನೆಕ್ಟಿವಿಟಿ ಆಯ್ಕೆ ಹಾಗೂ ಇತರೆ

ಕನೆಕ್ಟಿವಿಟಿ ಆಯ್ಕೆ ಹಾಗೂ ಇತರೆ

ಈ ಸ್ಮಾರ್ಟ್‌ ಡಿವೈಸ್‌ ಬ್ಲೂಟೂತ್ ಆವೃತ್ತಿ 5.1 ಮತ್ತು ವೈ-ಫೈ 6 ನೊಂದಿಗೆ ಪ್ಯಾಕ್‌ ಆಗಿದ್ದು, ವೈರ್‌ಲೆಸ್ ಚಾರ್ಜಿಂಗ್ ಆಯ್ಕೆಯನ್ನು ಹೊಂದಿದೆ. ಇದು ಜೆಬಿಎಲ್‌ನ ನಾಲ್ಕು-ಸ್ಪೀಕರ್ ಸಿಸ್ಟಂ ಆಯ್ಕೆ ಪಡೆದಿದ್ದು, ಇವು ಡಾಲ್ಬಿ ಅಟ್ಮೋಸ್‌ ಬೆಂಬಲ ಪಡೆದಿವೆ. ಹಾಗೆಯೇ ಇದನ್ನು ಪೂರ್ಣ ಚಾರ್ಜ್‌ ಮಾಡಿದರೆ 14 ಗಂಟೆಗಳ ವರೆಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಗೂಗಲ್ ಕಿಡ್ಸ್ ಸ್ಪೇಸ್ ಸಹ ಇದರಲ್ಲಿದ್ದು, ಮಕ್ಕಳು ಸುರಕ್ಷತೆಯೊಂದಿಗೆ ಬಳಸಬಹುದಾಗಿದೆ.

 ಪೆನ್‌ 3

ಲೆನೊವೊ ಪ್ರಿಸಿಶನ್ ಪೆನ್‌ 3 ಅನ್ನು ಹೊಂದಿದ್ದು, ಇದು ಬ್ಲೂಟೂತ್‌ನೊಂದಿಗೆ ಸಂಪರ್ಕ ಪಡೆಯಲಿದೆ. ಈ ಮೂಲಕ ಗ್ಯಾಜೆಟ್‌ನ್ನು ಸುಲಭವಾಗಿ ನಿರ್ವಹಣೆ ಮಾಡಬಹುದಾಗಿದೆ. ಪೆನ್‌ನಲ್ಲಿ ನೀಡಲಾದ ಬಟನ್‌ ಬಳಕೆ ಮಾಡಿಕೊಂಡು ರಿಮೋಟ್‌ ಕಂಟ್ರೋಲ್‌ ರೀತಿ ಡಿವೈಸ್‌ ಅನ್ನು ನಿರ್ವಹಿಸಬಹುದು. ಇನ್ನುಳಿದಂತೆ ಸ್ಕ್ರೀನ್‌ ಲಾಕ್ ಆಗಿದ್ದರೂ ಸಹ ಇನ್‌ಸ್ಟಂಟ್ ಆಗಿ ಮೆಮೊ ಪುಟಕ್ಕೆ ತೆರಳಿ ಟಿಪ್ಪಣಿಗಳನ್ನು ಮಾಡಿಟ್ಟುಕೊಳ್ಳಬಹುದಾದ ಫೀಚರ್ಸ್‌ ಸಹ ನೀಡಲಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ಲೆನೊವೊ ಟ್ಯಾಬ್ P11 ಪ್ರೊ ನ 8GB RAM ವೇರಿಯಂಟ್‌ಗೆ 39,999ರೂ. ಗಳನ್ನು ನಿಗದಿ ಮಾಡಲಾಗಿದೆ. ಸ್ಟಾರ್ಮ್ ಗ್ರೇ ಬಣ್ಣದ ಆಯ್ಕೆ ಪಡೆದಿರುವ ಈ ಡಿವೈಸ್‌ ಅಕ್ಟೋಬರ್ 17 ರಿಂದ ಲೆನೊವೊ, ಅಮೆಜಾನ್‌ ಹಾಗೂ ಲೆನೊವೊ ಆಫ್‌ಲೈನ್‌ ಸ್ಟೋರ್‌ಗಳಲ್ಲಿ ಲಭ್ಯವಿರಲಿದೆ. ಇದರ ನಂತರ ಶೀಘ್ರದಲ್ಲಿಯೇ ರಿಟೇಲ್‌ ಸ್ಟೋರ್‌ಗಳಲ್ಲಿಯೂ ಲಭ್ಯವಾಗಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.

Best Mobiles in India

English summary
Lenovo is also among the leading gadget manufacturing companies in the world. Lenovo has just launched the Lenovo Tab P11 Pro.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X