ಲೆನೊವೊ ಥಿಂಕ್‌ ಫೋನ್‌ ಬಿಡುಗಡೆ! ಥಿಂಕ್‌2ಥಿಂಕ್‌ ಕನೆಕ್ಟ್‌ ಫೀಚರ್ಸ್‌ ವಿಶೇಷ!

|

ಟೆಕ್‌ ಮಾರುಕಟ್ಟೆಯಲ್ಲಿ ಲೆನೊವೊ ಕಂಪೆನಿ ತನ್ನ ಮೊದಲ ಲೆನೊವೊ ಥಿಂಕ್‌ಫೋನ್‌ ಲಾಂಚ್‌ ಮಾಡಿದೆ. ಇದು ಮೊಟೊರೊಲಾದ ಬ್ಯುಸಿನೆಸ್‌ ಗ್ರೆಡ್‌ ಸ್ಮಾರ್ಟ್‌ಫೋನ್‌ ಆಗಿದ್ದು, ಮೊಟೊ ಕಿ ಸೇಫ್‌ ನೊಂದಿಗೆ ಬರುತ್ತದೆ. ಇದು ಬಳಕೆದಾರರ ಸೂಕ್ಷ್ಮ ಡೇಟಾವನ್ನು ಪ್ರೊಟೆಕ್ಟ್‌ ಮಾಡುವುದಕ್ಕಾಗಿ ಹೆಚ್ಚುವರಿ ಲೇಯರ್‌ ಅನ್ನು ಸೇರಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 ಪ್ರೊಸೆಸರ್ ಅನ್ನು ಹೊಂದಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಲೆನೊವೊ

ಹೌದು, ಲೆನೊವೊ ಕಂಪೆನಿ ಹೊಸ ಲೆನೊವೊ ಥಿಂಕ್‌ ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದು 6.6-ಇಂಚಿನ ಪೋಲ್ಇಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಅಲ್ಲದೆ ಥಿಂಕ್‌ಫೋನ್ ಮತ್ತು ಥಿಂಕ್‌ಪ್ಯಾಡ್ ಲ್ಯಾಪ್‌ಟಾಪ್‌ಗಳ ನಡುವೆ ತಡೆರಹಿತ ಏಕೀಕರಣವನ್ನು ಒದಗಿಸುವ ಹೊಸ ಥಿಂಕ್‌2ಥಿಂಕ್‌ ಕನೆಕ್ಟ್‌ ಫೀಚರ್ಸ್‌ ಅನ್ನು ಸಹ ಪರಿಚಯಿಸುತ್ತಿದೆ. ಇನ್ನುಳಿದಂತೆ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ,

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಲೆನೊವೊ ಥಿಂಕ್‌ ಫೋನ್‌ 6.6 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಇದು 2400 × 1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್‌ ಮತ್ತು HDR10+ ಬೆಂಬಲವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ಪಂಚ್ ಹೋಲ್ ನಾಚ್‌ ಹೊಂದಿದ್ದು, ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಲೇಯರ್ ಅನ್ನು ಒಳಗೊಂಡಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಲೆನೊವೊ ಥಿಂಕ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಮೆಮೊರಿ ಕಾರ್ಡ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಲೆನೊವೊ ಥಿಂಕ್‌ಫೋನ್ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸೆನ್ಸಾರ್‌, ಎರಡನೇ ಕ್ಯಾಮೆರಾ 13MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2MP ಸೆನ್ಸಾರ್‌ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ಫೋನ್ 32MP ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ?

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ?

ಲೆನೊವೊ ಥಿಂಕ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 68W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆದಿದೆ. ಅಲ್ಲದೆ ಚಾರ್ಜ್ ಪೋರ್ಟ್ ಮತ್ತು ಡೇಟಾ ವರ್ಗಾವಣೆಗಾಗಿ USB 3.1 ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 15W ವರೆಗೆ ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದರೊಂದಿಗೆ ಈ ಡಿವೈಸ್‌ ಸ್ಟಿರಿಯೊ ಸ್ಪೀಕರ್ ಸೆಟಪ್ ಮತ್ತು ಡಾಲ್ಬಿ ಅಟ್ಮಾಸ್ ಆಡಿಯೊ ಬೆಂಬಲವನ್ನು ಸಹ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌ ಅನ್ನು ಬೆಂಬಲಿಸಲಿದೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಲೆನೊವೊ ಥಿಂಕ್‌ಫೋನ್‌ IP68 ರೇಟಿಂಗ್‌ ಅನ್ನು ಹೊಂದಿದ್ದು, ಡಸ್ಟ್‌ ಆಂಡ್‌ ವಾಟರ್‌ ರೆಸಿಸ್ಟೆನ್ಸಿಯನ್ನು ಹೊಂದಿದೆ. ಇದು MIL-STD 810H ರೇಟಿಂಗ್ ಅನ್ನು ಸಹ ಹೊಂದಿದೆ. ಇದರಿಂದ 1.25 ಮೀಟರ್‌ ಆಳದ ನೀರಿನಲ್ಲೂ ಇದು ಯಾವುದೇ ರೀತಿಯ ಡ್ಯಾಮೇಜ್‌ ಆಗೋದಿಲ್ಲ. ಹಾಗೆಯೇ ಸ್ಮಾರ್ಟ್‌ಫೋನ್ ಎಡ ಅಂಚಿನಲ್ಲಿ ಕೆಂಪು ಉಚ್ಚಾರಣಾ ಬಣ್ಣದೊಂದಿಗೆ ಗ್ರಾಹಕೀಯಗೊಳಿಸಬಹುದಾದ ಕೀಲಿಯನ್ನು ಹೊಂದಿದೆ. ಇದು ಬಳಕೆದಾರರಿಗೆ ಅತ್ಯಂತ ನಿರ್ಣಾಯಕ ವ್ಯಾಪಾರ ಮತ್ತು ಕ್ಷೇತ್ರ ಅಪ್ಲಿಕೇಶನ್‌ಗಳನ್ನು ಒಂದು ಕ್ಲಿಕ್‌ನಲ್ಲಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಲೆನೊವೊ ಥಿಂಕ್‌ಫೋನ್‌ನ ಬೆಲೆ ಇನ್ನು ಬಹಿರಂಗವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ ಯುಎಸ್, ಯುರೋಪ್, ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ ಮತ್ತು ಮುಂಬರುವ ತಿಂಗಳುಗಳಲ್ಲಿ ಏಷ್ಯಾದಾದ್ಯಂತ ಆಯ್ದ ದೇಶಗಳಲ್ಲಿ ಲಭ್ಯವಾಗಲಿದೆ.

Best Mobiles in India

Read more about:
English summary
Lenovo ThinkPhone with Think2Think Connectivity Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X