ಎಲ್‌ಜಿಯಿಂದ ಅಚ್ಚರಿಯ ಡಿಸ್‌ಪ್ಲೇ!..ನಿಮಗೆ ಹೇಗೆ ಬೇಕೋ ಹಾಗೆ ತಿರುಗಿಸಬಹುದು!

|

ದೈತ್ಯ ಎಲೆಕ್ಟ್ರಾನಿಕ್ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಎಲ್‌ಜಿ (LG) ಸ್ಮಾರ್ಟ್‌ಟಿವಿ ಸೇರಿದಂತೆ ವಿವಿಧ ಗೃಹೋಪಯೋಗಿ ಉತ್ಪನ್ನಗಳ ವಿಭಾಗದಲ್ಲಿ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದೆ. ಹಾಗೆಯೇ ಎಲ್‌ಜಿ ಸಂಸ್ಥೆಯು ಡಿಸ್‌ಪ್ಲೇ ತಯಾರಿಕಾ ವಲಯದಲ್ಲಿಯೂ ಸೈ ಎನಿಸಿಕೊಂಡಿದೆ. ಇದೀಗ ಎಲ್‌ಜಿ ಸಂಸ್ಥೆಯು ನೂತನವಾಗಿ ಡಿಸ್‌ಪ್ಲೇಯೊಂದನ್ನು ಪರಿಚಯಿಸಿದ್ದು, ಇದು ಸ್ಟ್ರೆಚ್ ಮಾಡಬಹುದಾದ ರಚನೆಯಲ್ಲಿದೆ.

ಸ್ಟ್ರೆಚಬಲ್ ಡಿಸ್‌ಪ್ಲೇ

ಹೌದು, ದಕ್ಷಿಯ ಕೊರಿಯಾದ ಎಲ್‌ಜಿ ಸಂಸ್ಥೆಯು ಹೊಸದಾಗಿ ಡಿಸ್‌ಪ್ಲೇ ಘೋಷಣೆ ಮಾಡಿದ್ದು, ಇದು ವಿಶ್ವ ಮೊದಲ ಸ್ಟ್ರೆಚಬಲ್ ಡಿಸ್‌ಪ್ಲೇ (stretchable display) ಆಗಿದ್ದು, ಸುಮಾರು 20% ವರೆಗೆ ವಿಸ್ತರಿಸಬಲ್ಲದು. ಈ ಡಿಸ್‌ಪ್ಲೇ ಅನ್ನು 12 ಇಂಚಿನಿಂದ 14 ಇಂಚಿನ ಗಾತ್ರದವರೆಗೆ ವಿಸ್ತರಿಸಬಹುದಾದ ಸ್ಟ್ರೆಚ್ ಮಾಡಬಹುದಾದ ಡಿಸ್‌ಪ್ಲೇ ಅಭಿವೃದ್ಧಿಪಡಿಸಲು ಘೋಷಿಸಿದೆ. ಇನ್ನು ಈ ಅತ್ಯಾಧುನಿಕ ಡಿಸ್‌ಪ್ಲೇಯು ಪ್ರತಿ ಇಂಚಿಗೆ 100 ಪಿಕ್ಸೆಲ್‌ಗಳ ಸಾಂದ್ರತೆಯನ್ನು (ppi) ಹೊಂದಿದೆ.

ಇಂಚಿನ

ಎಲ್‌ಜಿಯ ಈ ಡಿಸ್‌ಪ್ಲೇಯು 12 ಇಂಚಿನ ಗಾತ್ರ ಹೊಂದಿದ್ದು, ರಬ್ಬರ್ ಬ್ಯಾಂಡ್ ತರಹದ ನಮ್ಯತೆಯ ರಚನೆಯನ್ನು ಹೊಂದಿದೆ. ಸ್ಟ್ರೆಚ್ ಮಾಡಿದರೆ ಸುಮಾರು 14 ಇಂಚುಗಳವರೆಗೆ ವಿಸ್ತರಿಸಬಹುದು. ಎಲ್‌ಜಿ ಡಿಸ್‌ಪ್ಲೇ ಬ್ಲಾಗ್‌ನ ಪ್ರಕಾರ ಈ ಡಿಸ್‌ಪ್ಲೇಯ ಮುಕ್ತ-ರೂಪದ ಸ್ವಭಾವವು ಅಸ್ತಿತ್ವದಲ್ಲಿರುವ ಫೋಲ್ಡಬಲ್ ಮತ್ತು ರೋಲ್ ಮಾಡಬಹುದಾದ ತಂತ್ರಜ್ಞಾನವನ್ನು ಮೀರಿಸುವ ಅತ್ಯಾಧುನಿಕ ಪರಿಹಾರವನ್ನು ನೀಡುತ್ತದೆ.

ಪಿಕ್ಸೆಲ್ ಪಿಚ್‌

ಸ್ಟ್ರೆಚಬಲ್ ಡಿಸ್‌ಪ್ಲೇಯು 40um ಗಿಂತ ಕಡಿಮೆಯಿರುವ ಪಿಕ್ಸೆಲ್ ಪಿಚ್‌ನೊಂದಿಗೆ ಮೈಕ್ರೋ-ಎಲ್‌ಇಡಿ ಬೆಳಕಿನ ಮೂಲವನ್ನು ಬಳಸುತ್ತದೆ. ಅಸ್ತಿತ್ವದಲ್ಲಿರುವ ಹೆಚ್ಚಿನ ಮಾನಿಟರ್‌ಗಳೊಂದಿಗೆ ಸ್ಪರ್ಧಿಸುವ ರೆಸಲ್ಯೂಶನ್‌ನಂತೆ ಗಮನಾರ್ಹವಾದ ಬಾಹ್ಯ ಪರಿಣಾಮಗಳನ್ನು ತಡೆದುಕೊಳ್ಳಲು ಅಧಿಕ ಬಾಳಿಕೆಯನ್ನು ಭದ್ರಪಡಿಸುತ್ತದೆ.

ತಂತ್ರಜ್ಞಾನವು ಫ್ಯಾಷನ್

ಎಲ್‌ಜಿ ಡಿಸ್‌ಪ್ಲೇಯ ಈ ತಂತ್ರಜ್ಞಾನವು ಫ್ಯಾಷನ್, ಧರಿಸಬಹುದಾದ ವಸ್ತುಗಳು, ಚಲನಶೀಲತೆ ಮತ್ತು ಗೇಮಿಂಗ್ ಉದ್ಯಮಗಳಲ್ಲಿ ಉಪಯುಕ್ತವಾಗಬಹುದು ಎಂದು ಭವಿಷ್ಯ ನುಡಿದಿದೆ. ಅದರ ತೆಳುವಾದ, ಹಗುರವಾದ ವಿನ್ಯಾಸದ ಜೊತೆಗೆ, ಸ್ಟ್ರೆಚಬಲ್ ಡಿಸ್‌ಪ್ಲೇಯ ಕ್ರಾಂತಿಕಾರಿ ತಂತ್ರಜ್ಞಾನವು ವಿವಿಧ ದೈನಂದಿನ ಸನ್ನಿವೇಶಗಳಿಗೆ ಹೊಸ ರೂಪ ನೀಡಲಿದೆ. ಅಲ್ಲದೇ ಚರ್ಮ, ಬಟ್ಟೆ, ಪೀಠೋಪಕರಣಗಳು, ಆಟೋಮೊಬೈಲ್‌ಗಳು ಮತ್ತು ವಿಮಾನಗಳಂತಹ ಬಾಗಿದ ಮೇಲ್ಮೈಗಳಿಗೆ ಸುಲಭವಾಗಿ ಜೋಡಿಸಬಹುದಾದ ಈ ಅನನ್ಯ ಆವಿಷ್ಕಾರವು ಇದಾಗಿದೆ.

OLED ಮತ್ತು AMOLED ನಡುವಿನ ಪ್ರಮುಖ ವ್ಯತ್ಯಾಸವೇನು?

OLED ಮತ್ತು AMOLED ನಡುವಿನ ಪ್ರಮುಖ ವ್ಯತ್ಯಾಸವೇನು?

ಏನಿದು OLED ಡಿಸ್‌ಪ್ಲೇ?
OLED ಪೂರ್ಣ ರೂಪ -ಆರ್ಗ್ಯಾನಿಕ್ ಲೈಟ್-ಎಮಿಟಿಂಗ್ ಡಯೋಡ್‌ಗಳು, ಫ್ಲಾಟ್ ಲೈಟ್ ಎಮಿಟಿಂಗ್ ತಂತ್ರಜ್ಞಾನವಾಗಿದ್ದು, ಎರಡು ಕಂಡಕ್ಟರ್‌ಗಳ ನಡುವೆ ತೆಳುವಾದ ಫಿಲ್ಮ್‌ಗಳ ಸರಣಿಯನ್ನು ಇರಿಸುವ ಮೂಲಕ ತಯಾರಿಸಲಾಗುತ್ತದೆ. ಓಎಲ್‌ಇಡಿ ಗಳು ಹೊರಸೂಸುವ ಡಿಸ್‌ಪ್ಲೇಗಳಾಗಿದ್ದು, ಅವುಗಳು ಹಿಂಬದಿ ಬೆಳಕು ಅಗತ್ಯವಿಲ್ಲ ಮತ್ತು ಎಲ್‌ಸಿಡಿ ಗಳಿಗಿಂತ ತೆಳುವಾದ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ.

ಏನಿದು AMOLED ಡಿಸ್‌ಪ್ಲೇ?

ಏನಿದು AMOLED ಡಿಸ್‌ಪ್ಲೇ?

AMOLED ಪೂರ್ಣ ರೂಪವು ಸಕ್ರಿಯ-ಮ್ಯಾಟ್ರಿಕ್ಸ್ OLED ಆಗಿದೆ. 'ಸಕ್ರಿಯ-ಮ್ಯಾಟ್ರಿಕ್ಸ್' ಭಾಗವು ಡ್ರೈವಿಂಗ್ ಎಲೆಕ್ಟ್ರಾನಿಕ್ಸ್ ಅಥವಾ TFT ಲೇಯರ್ ಅನ್ನು ಸೂಚಿಸುತ್ತದೆ. ನೀವು ಚಿತ್ರವನ್ನು ಡಿಸ್‌ಪ್ಲೇ ಮಾಡಿದಾಗ, ನೀವು ಒಂದು ಬಾರಿಗೆ ಒಂದು ಸಾಲನ್ನು ಮಾತ್ರ ಬದಲಾಯಿಸಬಹುದಾದ್ದರಿಂದ ನೀವು ಅದನ್ನು ಸಾಲಿನ ಮೂಲಕ ಪ್ರದರ್ಶಿಸುತ್ತೀರಿ. AMOLED TFT ಅನ್ನು ಬಳಸುತ್ತದೆ, ಇದು ಲೈನ್ ಪಿಕ್ಸೆಲ್ ಸ್ಟೇಟ್ಸ್ ಅನ್ನು ನಿರ್ವಹಿಸುವ ಶೇಖರಣಾ ಕೆಪಾಸಿಟರ್ ಅನ್ನು ಒಳಗೊಂಡಿರುತ್ತದೆ ಮತ್ತು ಆದ್ದರಿಂದ ದೊಡ್ಡ ಗಾತ್ರದ (ಮತ್ತು ದೊಡ್ಡ ರೆಸಲ್ಯೂಶನ್) ಡಿಸ್‌ಪ್ಲೇಗಳನ್ನು ಸಕ್ರಿಯಗೊಳಿಸುತ್ತದೆ.

ಪ್ರಮುಖ ಭಿನ್ನತೆಗಳು

ಪ್ರಮುಖ ಭಿನ್ನತೆಗಳು

AMOLED ಮತ್ತು OLED ಡಿಸ್‌ಪ್ಲೇಗಳು ಉತ್ತಮ ಎನಿಸದರೂ, ಕೆಲವೊಂದು ಭಿನ್ನತೆ ಕಾಣಬಹುದು. AMOLED ಡಿಸ್‌ಪ್ಲೇಗಳಿಗೆ ಹೋಲಿಸಿದರೇ, OLED ಡಿಸ್‌ಪ್ಲೇಗಳು ಕಡಿಮೆ ವಿದ್ಯುತ್ ಶಕ್ತಿ ಬಳಕೆ ಮಾಡುತ್ತವೆ. ಹಾಗೆಯೇ OLED ಡಿಸ್‌ಪ್ಲೇಗಳು ಅತ್ಯುತ್ತಮ ಕಾಂಟ್ರಾಸ್ಟ್ ಅನುಪಾತವನ್ನು ನೀಡುತ್ತವೆ. ಇವು ಪಿಕ್ಸೆಲ್‌ಗಳ ಮೇಲೆ ಹೆಚ್ಚಿನ ಮಟ್ಟದ ನಿಯಂತ್ರಣವನ್ನು ಹೊಂದಿದೆ. ಹಾಗೆಯೇ AMOLED ಡಿಸ್‌ಪ್ಲೇಗಳು OLED ಗಳಿಗಿಂತ ವೇಗವಾಗಿ ರಿಫ್ರೆಶ್ ದರಗಳನ್ನು ಹೊಂದಿದೆ. ಇವು ಪ್ರತಿ ಪಿಕ್ಸೆಲ್ ಉತ್ತಮವಾದ ಡಿಸ್‌ಪ್ಲೇ ಬೆಳಕನ್ನು ರವಾನಿಸುವ ಉತ್ತಮ ಕೃತಕ ಕಾಂಟ್ರಾಸ್ಟ್ ಅನುಪಾತವನ್ನು ಒದಗಿಸುತ್ತದೆ.

Best Mobiles in India

English summary
LG unveils a 12-inch stretchable display touted to be the world’s first.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X