ಮಾರ್ಕೆಟಿಂಗ್‌ ಮಾಡುವುದಕ್ಕೆ ಹೊಸ ಫೀಚರ್ಸ್ ಪರಿಚಯಿಸಿದ ಲಿಂಕ್ಡ್‌ಇನ್‌!

|

ಲಿಂಕ್ಡ್‌ಇನ್‌ ಪ್ರೋಫೇಷನಲ್‌ ಸೊಶೀಯಲ್‌ ನೆಟ್‌ವರ್ಕ್‌ನಲ್ಲಿ ಪ್ರಖ್ಯಾತಿ ಪಡೆದುಕೊಂಡಿದೆ. ಉದ್ಯೋಗ ಹುಡುಕುವ ಯುವಜನತೆಗೆ ಲಿಂಕ್ಡ್‌ಇನ್‌ ವೆಬ್‌ಸೈಟ್‌ ಸಾಕಷ್ಟು ಉಪಯುಕ್ತವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಲಿಂಕ್ಡ್‌ಇನ್‌ ಮೂಲಕವೇ ಸಾಕಷ್ಟು ಮಂದಿ ಉದ್ಯೋಗವನ್ನು ಹುಡುಕಿಕೊಂಡಿದ್ದಾರೆ. ಇದೀಗ ಲಿಂಕ್ಡ್‌ಇನ್‌ ತನ್ನ ಬಳಕೆದಾರರ ಅನುಭವವನ್ನು ಉತ್ತಮ ಪಡಿಸಲು ಹೊಸ ಹೆಜ್ಜೆ ಇರಿಸಿದೆ. ಇದಕ್ಕಾಗಿ ಹೊಸ ಫೀಚರ್ಸ್‌ಗಳನ್ನು ಶ್ರೇಣಿಯನ್ನು ಬಿಡುಗಡೆ ಮಾಡಿದೆ.

ಲಿಂಕ್ಡ್‌ಇನ್

ಹೌದು, ಲಿಂಕ್ಡ್‌ಇನ್ ಅಪ್ಲಿಕೇಶನ್‌ ತನ್ನ ಬಳಕೆದಾರರಿಗಾಗಿ ಹೊಸ ಫೀಚರ್ಸ್‌ಗಳ ಸರಣಿಯನ್ನು ಪರಿಚಯಿಸಿದೆ. ಇನ್ನು ಈ ಫೀಚರ್ಸ್‌ಗಳನ್ನು ಲಿಂಕ್ಡ್‌ಇನ್ ಮಾರ್ಕೆಟಿಂಗ್ ಸೊಲ್ಯೂಷನ್ಸ್ ಗೆ ಸೇರಿಸುತ್ತಿದೆ. ಈ ಹೊಸ ಫೀಚರ್ಸ್‌ಗಳು ಮಾರಾಟಗಾರರಿಗೆ ಲೈವ್ ಈವೆಂಟ್‌ಗಳನ್ನು ನಡೆಸುವ ಮೂಲಕ ಹೆಚ್ಚಿನ ಪ್ರಗತಿ ಸಾಧಿಸಲು ಅನುಕೂಲಮಾಡಿಕೊಡಲಿದೆ. ಜೊತೆಗೆ ತಮ್ಮ ಬ್ರಾಂಡ್-ಬಿಲ್ಡ್‌ ಮಾಡುವುದಕ್ಕೆ ಸಹಾಯಕವಾಗಲಿದೆ. ಹಾಗಾದ್ರೆ ಲಿಂಕ್ಡ್‌ ಇನ್‌ ಪರಿಚಯಿಸಿರುವ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆರ್ಟಿಕಲ್ಸ್ ಫಾರ್ ಪೇಜಸ್‌

ಆರ್ಟಿಕಲ್ಸ್ ಫಾರ್ ಪೇಜಸ್‌

ಲಿಂಕ್ಡ್‌ಇನ್‌ ಹೊಸದಾಗಿ ಪರಿಚಯಿಸಿರುವ ಹೊಸ ಫೀಚರ್ಸ್‌ಗಳಲ್ಲಿ ಆರ್ಟಿಕಲ್ಸ್ ಫಾರ್ ಪೇಜಸ್‌ ಕೂಡ ಒಂದಾಗಿದೆ. ಇದು ಬಳಕೆದಾರರಿಗೆ ಪ್ಲಾಟ್‌ಫಾರ್ಮ್‌ನಲ್ಲಿ ದೀರ್ಘ-ಸ್ವರೂಪದ ಕಂಟೆಟ್‌ ಅನ್ನು ಪೋಸ್ಟ್ ಮಾಡಲು ಅವಕಾಸ ನೀಡಲಿದೆ. ಇದರಿಂದ ಬಳಕೆದಾರರು ಲಿಂಕ್ಡ್‌ಇನ್ ಅನ್ನು ಬಿಡದೆಯೇ ವೃತ್ತಿಪರ ವಿಷಯದಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲಿದೆ. ಇದರಿಂದ ನೀವು ಪ್ರಮುಖ ವಿಚಾರಗಳನ್ನು ಹಂಚಿಕೊಳ್ಳುವುದಕ್ಕೆ ಅವಕಾಶ ಸಿಗಲಿದೆ. ಇದಲ್ಲದೆ ಲಿಂಕ್ಡ್‌ಇನ್‌ನ ಆರ್ಟಿಕಲ್ಸ್ ಫಾರ್ ಪೇಜಸ್‌ ಬಳಕೆದಾರರಿಗೆ ವಿಷಯವನ್ನು ಓದುವುದಕ್ಕೆ ಅನುಮತಿಸಲಿದೆ.

ಲೈವ್ ಈವೆಂಟ್‌ಗಳು

ಲೈವ್ ಈವೆಂಟ್‌ಗಳು

ಇನ್ನು ಬಳಕೆದಾರರ ಅನುಕೂಲಕ್ಕಾಗಿ ಲೈವ್‌ ಈವೆಂಟ್‌ಗಳನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರು ಲಿಂಕ್ಡ್‌ಇನ್ ಲೈವ್ ಮತ್ತು ಲಿಂಕ್ಡ್‌ಇನ್ ಈವೆಂಟ್‌ಗಳನ್ನು ನಿಗದಿಪಡಿಸಬಹುದು. ಈ ಈವೆಂಟ್‌ಗಳನ್ನು ಲಿಂಕ್ಡ್ ಲೈವ್ ಈವೆಂಟ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ವಿತರಿಸಲಾಗುತ್ತದೆ. ಅಲ್ಲದೆ ಬಳಕೆದಾರರು ತಮ್ಮ ಸ್ಟ್ರೀಮ್ ಅನ್ನು ಪ್ರೇಕ್ಷಕರ ಜೊತೆಗೆ ಶೇರ್‌ ಮಾಡಲು ಅನುವು ಮಾಡಿಕೊಡುತ್ತದೆ. ಇನ್ನು ಈ ರಿಜಿಸ್ಟ್ರಂಟ್‌ಗಳು ಮತ್ತು ಈವೆಂಟ್ ಲೈವ್‌ ಅನ್ನು ಸುಲಭವಾಗಿ ಹಂಚಿಕೊಳ್ಳಬಹುದು.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಲಿಂಕ್ಡ್‌ಇನ್ ತನ್ನ ಬಳಕೆದಾರರಿಗೆ ತಮ್ಮ ಬ್ರ್ಯಾಂಡ್-ಬಿಲ್ಡ್‌ ಮಾಡುವುದಕ್ಕೆ ಸೂಕ್ತವಾಗುವ ಫಿಚರ್ಸ್‌ ಅನ್ನು ಸಹ ಪರಿಚಯಿಸಿದೆ. ತಮ್ಮ ಬ್ರಾಂಡ್‌ ಬಿಲ್ಡ್‌ ಮಾಡುವುದಕ್ಕೆ ತಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡಲು ಮೂರು ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಇವುಗಳು ಹೊಸ ಬ್ರಾಂಡ್ ಲಿಫ್ಟ್ ಟೆಸ್ಟಿಂಗ್ ಫೀಚರ್ ಅನ್ನು ಒಳಗೊಂಡಿದೆ. ಇದು ಬಳಕೆದಾರರಿಗೆ ತಮ್ಮ ಬ್ರ್ಯಾಂಡ್ ಮೇಲೆ ಲಿಂಕ್ಡ್ಇನ್ ಜಾಹೀರಾತುಗಳ ಎಫೆಕ್ಟ್‌ ಅನ್ನು ಅಳೆಯುವುದಕ್ಕೆ ಅನುವು ಮಾಡಿಕೊಡಲಿದೆ.

ಫೀಚರ್

ಇದಲ್ಲದೆ ರೀಚ್ ಆಪ್ಟಿಮೈಸೇಶನ್ ಫೀಚರ್ ಕೂಡ ಪರಿಚಯಿಸಿದೆ. ಈ ಹೊಸ ಫಿಚರ್ಸ್‌ ಬಳಕೆದಾರರಿಗೆ ಜಾಹೀರಾತುಗಳನ್ನು ತೋರಿಸುವ ಇತರೆ ಮೆಂಬರ್‌ಶಿಪ್‌ ಅಕೌಂಟ್‌ ನಂಬರ್‌ ಅನ್ನು ಅತ್ಯುತ್ತಮವಾಗಿಸಲು ಅವಕಾಶ ನೀಡಲಿದೆ. ಈ ಹೊಸ, ಸಂಬಂಧಿತ ಪ್ರೇಕ್ಷಕರಿಗೆ ಬ್ರಾಂಡ್‌ನ ಮಾನ್ಯತೆಯನ್ನು ಹೆಚ್ಚಿಸುತ್ತದೆ. ಇನ್ನು ಈ ಹೊಸ ರೀಚ್ ಮತ್ತು ಫ್ರೀಕ್ವೆನ್ಸಿ ಮುನ್ಸೂಚನೆ ಫೀಚರ್ಸ್‌ ಕ್ಯಾಂಪೇನ್ ಮ್ಯಾನೇಜರ್ ಫಲಿತಾಂಶಗಳನ್ನು ಅಳೆಯಲು ಸಹಾಯಕವಾಗಲಿದೆ.

ಲಿಂಕ್ಡ್‌ಇನ್‌

ಇನ್ನು ಕಳೆದ ವರ್ಷ ಲಿಂಕ್ಡ್‌ಇನ್‌ ಅಪ್ಲಿಕೇಶನ್‌ ತನ್ನ ಸಂಭಾಷಣೆಯನ್ನು ಚಾಟ್‌ನಿಂದ ನೇರವಾಗಿ ವೀಡಿಯೊ ಕರೆಗಳಿಗೆ ಸುಲಭವಾಗಿ ಬದಲಾಯಿಸುವ ಫೀಚರ್ಸ್‌ ಸೇರಿಸಿತ್ತು. ಇದರಲ್ಲಿ ನೀವು ಸಂದೇಶವನ್ನು ಟೈಪ್ ಮಾಡುವ ಟೆಕ್ಸ್ಟ್‌ ಬಾಕ್ಸ್‌ ಪಕ್ಕದಲ್ಲಿರುವ ವೀಡಿಯೊ ಕರೆ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ. ವೀಡಿಯೊ ಕರೆಗಾಗಿ ಲಭ್ಯವಿರುವ ಅಪ್ಲಿಕೇಶನ್‌ಗಳಿಂದ ನೀವು ಆಯ್ಕೆ ಮಾಡಬಹುದಾಗಿದೆ. ಅಲ್ಲದೆ ಸೈನ್ ಇನ್ ಮಾಡಬಹುದು ಮತ್ತು ಲಿಂಕ್ ಅನ್ನು ಹಂಚಿಕೊಳ್ಳಬಹುದಾಗಿದೆ.

ಲಿಂಕ್ಡ್ಇನ್

ಇನ್ನು ಈ ಹೊಸ ಲಿಂಕ್ಡ್ಇನ್ ಫೀಚರ್ಸ್‌ ನಮ್ಮ ವೈವಿಧ್ಯಮಯ, ಅಂತರ್ಗತ ಮತ್ತು ವಿಶ್ವಾಸಾರ್ಹ ಸಮುದಾಯವನ್ನು ಸಾಕಾರಗೊಳಿಸುತ್ತದೆ ಎಂದು ಲಿಂಕ್ಡ್‌ ಇನ್‌ ಹೇಳಿದೆ. ಅಲ್ಲದೆ ಇದು ಸರಳ, ಹೆಚ್ಚು ಆಧುನಿಕ ಮತ್ತು ಹೆಚ್ಚು ಅರ್ಥಗರ್ಭಿತವಾಗಿದೆ, ಇದು ಸುಲಭವಾದ ಸಂಚರಣೆ ಮತ್ತು ಅನ್ವೇಷಣೆಗೆ ಅನುವು ಮಾಡಿಕೊಡಲಿದೆ. ಇನ್ನು ನೀವು ಫೋಸ್ಟ್‌ ಮಾಡಿರುವ ಸ್ಟೋರಿಗಳು 24 ಗಂಟೆಗಳ ಕಾಲ ಉಳಿಯುವುದರಿಂದ, ಬಳಕೆದಾರರು ತಮ್ಮ ವೃತ್ತಿಪರ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ಶೇರ್‌ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಲಿಂಕ್ಡ್‌ಇನ್ ಸ್ಟೋರೀಸ್ ಫೀಚರ್ಸ್‌ ಅನುಮತಿಸಲಿದೆ.

Best Mobiles in India

Read more about:
English summary
Here are the new features that Linkedin is adding to the platform and how users can benefit from them.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X