ನಿದ್ರಿಸುತ್ತಾ ಸಂಗೀತಾ ಕೇಳಿ...

Posted By: Staff

ನಮ್ಮಲ್ಲಿ ಕೆಲವರು ಸಂಗೀತಾ ಕೇಳುತ್ತಾ ನಿದ್ದೆ ಮಾಡುವವರಿದ್ದಾರೆ. ಇವರಿಗೆ ರಾತ್ರಿ ಹಾಸಿಗೆಯಲ್ಲಿ ಸಂಗೀತಾ ಕೇಳಲೇ ಬೇಕು ಇಲ್ಲದಿದ್ದರೆ ನಿದ್ದೆ ಬರವುದೇ ಇಲ್ಲ. ಇವರು ಈಯರ್‌ಫೋನ್‌ ಹಾಕಿ ಮಲಗಿದ್ರು ಇದರ ಸೌಂಡ್‌ ಮಾತ್ರ ಉಳಿದವರಿಗೂ ಕೇಳುತ್ತಲೇ ಇರುತ್ತದೆ. ಒಟ್ಟಿನಲ್ಲಿ ಇವರ ಮ್ಯೂಸಿಕ್‌ನಿಂದಾಗಿ ಉಳಿದವರ ನಿದ್ದೆ ಹಾಳಾಗಿ ಹೋಗುತ್ತದೆ.

ಆದ್ರೆ ಇನ್ನು ಮುಂದೆ ಈ ರೀತಿಯ ಸಮಸ್ಯೆ ಬರುವುದಿಲ್ಲ. ಯಾಕಂದ್ರೆ ಸ್ಲೀಪ್‌ಹೋಮ್‌ ಕಂಪೆನಿ ಹೊಸ ಇಯರ್‌ಫೋನ್‌ ರೂಪಿಸಿದೆ. ಮಲಗಿ ಈ ಇಯರ್‌ಫೋನ್‌ನ್ನು ಧರಿಸಿ ಸಂಗೀತಾ ಕೇಳಿದ್ರೆ ನಿಮ್ಮ ಹತ್ತಿರ ಮಲಗಿದವರಿಗೂ ಒಂದು ಚೂರು ಮ್ಯೂಸಿಕ್‌ ಕೇಳುದಿಲ್ವಂತೆ. ಹಾಗಾಗಿ ಇದು ಸಿಇಎಸ್ ಪ್ರದರ್ಶನದಲ್ಲಿ ಫೇಮಸ್‌ ಆಗಿಬಿಟ್ಟಿದೆ.

 

ನಿದ್ರಿಸುತ್ತಾ ಸಂಗೀತಾ ಕೇಳಿ...

ಹೇಗೆ ಹೇರ್‌ಬ್ಯಾಂಡ್‌ನ್ನು ನಾವು ಧರಿಸುತ್ತೇವೋ ಹಾಗೇಯೇ ಇದನ್ನು ನಾವು ಧರಿಸಬೇಕು. ಇದು ಬ್ಲೂಟೂತ್‌ ಆಧಾರಿತ ಇಯರ್‌ಫೋನ್‌ ಆಗಿರುವುದರಿಂದ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬ್ಲೂಟೂತ್‌ ಆನ್‌ ಮಾಡಿ ಸಂಗೀತಾವನ್ನು ಕೇಳಬಹುದು.

ಏಪ್ರಿಲ್‌ನಲ್ಲಿ ಈ ಸಾಧನ ಮಾರುಕಟ್ಟೆಗೆ ಬರಲಿದೆಯಂತೆ. ನೀವು 4360 ರೂಪಾಯಿ (80 ಡಾಲರ್‌ ) ನೀಡಿ ಈ ಹೊಸ ಸ್ಲೀಪ್‌ಹೋಮ್‌ ಖರೀದಿಸಬಹುದು.

ವಿದೇಶದಲ್ಲಿ ಈ ಸಾಧನ ಭಾರೀ ಹಿಟ್‌ ಆಗಿದ್ದು, ದಂಪತಿಗಳು ಈಗಾಗ್ಲೇ ಈ ಸ್ಲೀಪ್‌ಹೋಮ್‌ ಖರೀದಿಗೆ ಬುಕ್ ಮಾಡಿದ್ದಾರಂತೆ..!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot