ಲಾಕ್‌ಡೌನ್ ಬಳಿಕ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ನಡೆ ಏನು?

|

ಚೀನಾದಲ್ಲಿ ಹುಟ್ಟಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಡೆಡ್ಲಿ ಕೊರೊನಾ ವೈರಸ್‌ ಭಾರತದಲ್ಲಿಯೂ ತನ್ನ ಕರಿನೆರಳನ್ನು ತೋರಿಸಿದೆ. ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಲು ಸರ್ಕಾರ ಮೇ.3ರ ವರೆಗೂ ಲಾಕ್‌ಡೌನ್‌ ಮುಂದುವರೆಸಿದೆ. ಲಾಕ್‌ಡೌನ್‌ ಜಾರಿ ಆದಾಗಿನಿಂದ ಎಲ್ಲರೂ ಮನೆಯಲ್ಲಿಯೇ ಇದ್ದಾರೆ. ಅನೇಕ ಉದ್ಯಮಗಳು ಸೇವೆ ನಿಲ್ಲಿಸಿವೆ. ಆ ಪೈಕಿ ಸದಾ ಬ್ಯುಸಿಯಾಗಿರುತ್ತಿದ್ದ ಇ-ಕಾಮರ್ಸ್‌ ತಾಣಗಳ ವ್ಯವಹಾರ ಲಾಕ್‌ಡೌನ್‌ ಅವಧಿಯಲ್ಲಿ ಕ್ಷೀಣಿಸಿರುವುದಂಟು ಸುಳ್ಳಲ್ಲ.

ಕೊರೊನಾ ವೈರಸ್‌ ಹಾವಳಿ

ಎಲ್ಲರು ಅಂದಕೊಂಡಂತೆ ಕೊರೊನಾ ವೈರಸ್‌ ಹಾವಳಿ ಬೇಗನೆ ಇಳಿಮುಖದರೆ, ಮೇ ತಿಂಗಳಿನಿಂದ ಇ-ಕಾಮರ್ಸ್‌ ವಲಯದ ವ್ಯವಹಾರಗಳು ಮತ್ತೆ ಚುರುಕುಗೊಳ್ಳಲಿವೆ ಎನ್ನಲಾಗಿದೆ. ಇ-ಕಾಮರ್ಸ್‌ ವ್ಯವಹಾರವನ್ನು ಹೆಚ್ಚುವ ನಿಟ್ಟಿನಲ್ಲಿ ಇ-ಕಾಮರ್ಸ್ ದೈತ್ಯ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಸೇಲ್‌ ಮೇಳಗಳನ್ನು ಆಯೋಜಿಸುವ ನಿರೀಕ್ಷೆಗಳಿವೆ ಹಾಗೂ ಕೆಲವು ಯೋಜನೆಗಳನ್ನು ಹಾಕಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಮುಂದೆ ಓದಿರಿ.

ವಹಿವಾಟಿನಲ್ಲಿ ಏರಿಕೆ

ವಹಿವಾಟಿನಲ್ಲಿ ಏರಿಕೆ

ಲಾಕ್‌ಡೌನ್ ಬಳಿಕ ಆನ್‌ಲೈನ್ ವಹಿವಾಟುಗಳು ಹಿಂದಿನಂತೆ ಮತ್ತೆ ಶುರುವಾಗಲಿದೆ ಎನ್ನಲಾಗಿದೆ. ಬೇಡಿಕೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದ್ದು, ಈ ಹಿನ್ನಲೆಯಲ್ಲಿ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸ್ಟಾಕ್‌ ಸಂಗ್ರಹಿಸಲು ಬ್ರ್ಯಾಂಡ್‌ ಸಂಸ್ಥೆಗಳಿಗೆ ಕೇಳಿಕೊಂಡಿವೆ ಎಂದು ವರದಿಯಾಗಿದೆ.

ಹೆಚ್ಚಿನ ಬೇಡಿಕೆಯ ನಿರೀಕ್ಷೆ

ಹೆಚ್ಚಿನ ಬೇಡಿಕೆಯ ನಿರೀಕ್ಷೆ

ಲಾಕ್‌ಡೌನ್‌ ಮುಗಿದ ಬಳಿಕ ಆನ್‌ಲೈನ್ ಶಾಪಿಂಗ್‌ನಲ್ಲಿ ಏರಿಕೆ ಆಗುವ ಸಾಧ್ಯತೆಗಳು ಇವೆ. ಸದ್ಯ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಗ್ರಾಹಕರು ಹೆಚ್ಚಾಗಿ ಖರೀದಿಗೆ ಮುಂದಾಗುತ್ತಿಲ್ಲ. ಲಾಕ್‌ಡೌನ್‌ ತೆಗೆದ ಬಳಿಕ ಇ-ಕಾಮರ್ಸ್‌ ವಹಿವಾಟುಗಳು ಹಿಂದಿನಂತೆ ಮತ್ತೆ ಜೋರಾಗುವ ನಿರೀಕ್ಷೆಗಳಿವೆ. ಮುಖ್ಯವಾಗಿ ನಾನ್ ಎಸೆನ್ಸಿಯಲ್ (ಅನಿವಾರ್ಯವಲ್ಲದ ವಸ್ತುಗಳು) ಖರೀದಿ ಹೆಚ್ಚಾಗುವ ನಿರೀಕ್ಷೆಗಳು ಇವೆ.

ಬಿಗ್ ಆಫರ್ ಸಾಧ್ಯತೆ

ಬಿಗ್ ಆಫರ್ ಸಾಧ್ಯತೆ

ಲಾಕ್‌ಡೌನ್‌ನಿಂದಾಗಿ ಕಳೆದ ಕೆಲವು ವಾರಗಳಿಂದ ಯಾವುದೇ ಮಾರಾಟವಿಲ್ಲದ ಕಾರಣ ಇ-ಕಾಮರ್ಸ್‌ಗಳು ಮತ್ತು ಕೆಲವು ಬ್ರಾಂಡೆಡ್‌ ಸಂಸ್ಥೆಗಳು ಮಾರಾಟ ಹೆಚ್ಚಿಸಿಕೊಳ್ಳಲು ಆಫರ್ ನೀಡುವ ಸಾಧ್ಯತೆಗಳಿವೆ. ಆಕರ್ಷಕ ಸೇಲ್ ಮೇಳ ಆಯೋಜಿಸಬಹುದು.

ಗ್ಯಾಡ್ಜೆಟ್ಸ್‌ಗೂ ಬೇಡಿಕೆ

ಗ್ಯಾಡ್ಜೆಟ್ಸ್‌ಗೂ ಬೇಡಿಕೆ

ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಎಸಿಗಳು, ರೆಫ್ರಿಜರೇಟರ್‌ಗಳು, ತೊಳೆಯುವ ಯಂತ್ರಗಳು, ಮುದ್ರಕಗಳು, ವೆಬ್‌ಕ್ಯಾಮ್‌ಗಳು, ವ್ಯಾಕ್ಯೂಮ್ ಕ್ಲೀನರ್‌ಗಳು, ಟಿವಿಗಳಿಗೂ ಹೆಚ್ಚಿನ ಬೇಡಿಕೆ ಸಾಧ್ಯತೆ ಇದೆ. ಹಾಗೂ ಇತರ ಗೃಹ ಉಪಯುಕ್ತ ವಸ್ತುಗಳ ಮಾರಾಟ ಹೆಚ್ಚಾಗುವ ಸಾಧ್ಯತೆ ಇದೆ. ಏಕೆಂದರೇ ಹೆಚ್ಚಿನ ಜನರು ಇ-ಕಾಮರ್ಸ್ ತಾಣಗಳಲ್ಲಿ ಈ ಉತ್ಪನ್ನಗಳ ಬಗ್ಗೆ ಸರ್ಚ್ ಮಾಡಿದ್ದಾರೆ ಎನ್ನಲಾಗಿದೆ.

Best Mobiles in India

English summary
Flipkart and Amazon are planning big sale events in May to get back to business.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X