SBI ಡೆಬಿಟ್‌ ಕಾರ್ಡ್‌ ಕಳೆದುಹೋದರೆ, ಮೊದಲು ಈ ಕೆಲಸ ಮಾಡಿ!

|

ನೀವು ಎಸ್‌ಬಿಐ (SBI) ಗ್ರಾಹಕರೇ? ನಿಮ್ಮ SBI ಡೆಬಿಟ್‌ ಕಾರ್ಡ್‌ ಮತ್ತು ಕ್ರೆಡಿಟ್ ಕಾರ್ಡ್‌ ಗಳನ್ನು ಸುರಕ್ಷಿತವಾಗಿ ಕಾಪಾಡುತ್ತೀರಿ. ಅದಾಗ್ಯೂ, ಒಂದು ವೇಳೇ ಕೆಲವೊಮ್ಮೆ ಆಕಸ್ಮಿಕವಾಗಿ ಬಳಕೆದಾರರರು ಡೆಬಿಟ್‌ ಕಾರ್ಡ್‌ (ATM) ಅನ್ನು ಕಳೆದುಕೊಂಡರೇ, ಮತ್ತೆ ಡೆಬಿಟ್‌ ಕಾರ್ಡ್‌ ಪಡೆಯಲು ಮಾರ್ಗ ಇದೆ. ಆದರೆ ಅದಕ್ಕೂ ಮೊದಲು ಸುರಕ್ಷತೆಯ ದೃಷ್ಠಿಯಿಂದ ಗ್ರಾಹಕರು ಕೆಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಬೇಕಿರುತ್ತದೆ. ಏಕೆಂದರೇ ಕಳೆದುಹೋದ ಡೆಬಿಟ್‌ ಕಾರ್ಡ್ ಮೂಲಕ ವಂಚನೆ ಆಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಗ್ರಾಹಕರು ಕೆಲವು ಮುಖ್ಯ ಕೆಲಸಗಳನ್ನು ಮರೆಯದೆ ಮಾಡುವುದು ಉತ್ತಮ.

ಡೆಬಿಟ್

ಎಸ್‌ಬಿಐ ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್ ಅನ್ನು ಕಳೆದುಕೊಂಡರೆ ಫೋನ್ ಕರೆ ಮತ್ತು ಎಸ್‌ಎಮ್‌ಎಸ್‌ ಮೂಲಕ ಬ್ಲಾಕ್ ಮಾಡಬಹುದು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ Blockspace > ಕಾರ್ಡ್‌ನ ಕೊನೆಯ ನಾಲ್ಕು ನಂಬರ್‌ಗಳನ್ನು 567676 ನಂಬರ್‌ಗೆ ಎಸ್‌ಎಮ್‌ಎಸ್‌ ಕಳುಹಿಸಿ. ಎಸ್‌ಬಿಐ ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಲು ಮತ್ತು ಹೊಸ ಕಾರ್ಡ್ ಅನ್ನು ಪಡೆಯಲು ಟೋಲ್-ಫ್ರೀ IVR ವ್ಯವಸ್ಥೆಯನ್ನು ಸಹ ಬಳಸಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಎಸ್‌ಬಿಐ ಡೆಬಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡುವುದು ಹೇಗೆ?

ಎಸ್‌ಬಿಐ ಡೆಬಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡುವುದು ಹೇಗೆ?

ಗ್ರಾಹಕರು ಮೊದಲಿಗೆ ಮಾಹಿತಿಗಾಗಿ 1800 112 211 ಗೆ ಕರೆ ಮಾಡಿ. ಎಸ್‌ಬಿಐ ಕಾರ್ಡ್ ಅನ್ನು ಬ್ಲಾಕ್ ಮಾಡಲು 2 ಅನ್ನು ಒತ್ತಿರಿ. ಕಾರ್ಡ್ ಅನ್ನು ಬ್ಲಾಕ್ ಮಾಡಲು ಖಾತೆ ಸಂಖ್ಯೆಯ ಕೊನೆಯ 5 ಅಂಕೆಗಳನ್ನು ನಮೂದಿಸಿ. ನಿಮ್ಮ ಕಾರ್ಡ್ ಅನ್ನು ಯಶಸ್ವಿಯಾಗಿ ಮುಚ್ಚಲಾಗುತ್ತದೆ. ಮತ್ತು ನಿಮ್ಮ ನೋಂದಾಯಿತ ಫೋನ್ ಸಂಖ್ಯೆಗೆ ನೀವು ಎಸ್‌ಎಮ್‌ಎಸ್‌ ದೃಢೀಕರಣವನ್ನು ಸ್ವೀಕರಿಸುತ್ತೀರಿ.

ಎಸ್‌ಬಿಐ ವೆಬ್‌ಸೈಟ್ ಮೂಲಕ ಬ್ಲಾಕ್ ಮಾಡುವುದು ಹೇಗೆ?

ಎಸ್‌ಬಿಐ ವೆಬ್‌ಸೈಟ್ ಮೂಲಕ ಬ್ಲಾಕ್ ಮಾಡುವುದು ಹೇಗೆ?

* ನೀವು sbicard.com ಲಿಂಕ್ ಮೇಲೆ ಕ್ಲಿಕ್ ಮಾಡಿರಿ
* ಡ್ರಾಪ್-ಡೌನ್ ಮೆನುವಿನಿಂದ 'ವಿನಂತಿ' ಆಯ್ಕೆಯನ್ನು ಆರಿಸಿ.
* ಡ್ರಾಪ್-ಡೌನ್ ಮೆನುವಿನಲ್ಲಿ 'ಮರುಹಂಚಿಕೆ/ಬದಲಿ ಕಾರ್ಡ್' ಆಯ್ಕೆಯನ್ನು ಆರಿಸಿ.
* ಕಾರ್ಡ್ ಸಂಖ್ಯೆಯ ಆಯ್ಕೆಯನ್ನು ಆರಿಸಿ.
* ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

ಮೊಬೈಲ್ ಆಪ್‌ ಮೂಲಕ ಬ್ಲಾಕ್ ಮಾಡುವುದು ಹೇಗೆ?

ಮೊಬೈಲ್ ಆಪ್‌ ಮೂಲಕ ಬ್ಲಾಕ್ ಮಾಡುವುದು ಹೇಗೆ?

* ನಿಮ್ಮ ಮೊಬೈಲ್ ಡಿವೈಸ್‌ನಲ್ಲಿ sbicard ಆಪ್‌ಗೆ ಲಾಗ್ ಇನ್ ಮಾಡಿ.
* ಮೇಲಿನ ಎಡ ಮೂಲೆಯಲ್ಲಿರುವ 'ಮೆನು ಟ್ಯಾಬ್' ಮೇಲೆ ಟ್ಯಾಪ್ ಮಾಡಿ.
* ಡ್ರಾಪ್ ಡೌನ್ ಮೆನುವಿನಿಂದ 'ಸೇವಾ ವಿನಂತಿ' ಆಯ್ಕೆಮಾಡಿ.
* ಡ್ರಾಪ್ ಡೌನ್ ಮೆನುವಿನಿಂದ 'ಮರುಹಂಚಿಕೆ/ ಹೊಸ ಕಾರ್ಡ್' ಆಯ್ಕೆ ಮಾಡಿ
* ಕಾರ್ಡ್ ಸಂಖ್ಯೆಯನ್ನು ಆರಿಸಿ
* ಡ್ರಾಪ್ ಡೌನ್ ಮೆನುವಿನಿಂದ 'ಸಲ್ಲಿಸು' ಆಯ್ಕೆ ಮಾಡಿ

ಬದಲಿ ಡೆಬಿಟ್‌ ಕಾರ್ಡ್‌ ಪಡೆಯುವ ಕಾಲಾವಧಿ

ಬದಲಿ ಡೆಬಿಟ್‌ ಕಾರ್ಡ್‌ ಪಡೆಯುವ ಕಾಲಾವಧಿ

ಮರುಹಂಚಿಕೆ/ ಬದಲಿ ಕಾರ್ಡ್ ಸಂದರ್ಭದಲ್ಲಿ ಗ್ರಾಹಕರು 100ರೂ. ಪಾವತಿಸಬೇಕಿರುತ್ತದೆ. ಈ ಮೊತ್ತಕ್ಕೆ ತೆರಿಗೆ ಕೂಡ ಸೇರ್ಪಡೆಯಾಗಲಿದೆ. ಬದಲಿ ಕಾರ್ಡ್‌ ಗೆ ವಿನಂತಿಸಿದ ನಂತರ, 7 ಕೆಲಸದ ದಿನಗಳಲ್ಲಿ ಹೊಸ ಕಾರ್ಡ್ ಗ್ರಾಹಕರಿಗೆ ಲಭ್ಯವಾಗಲಿದೆ.

Best Mobiles in India

English summary
Lost your SBI Debit card? Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X