ಈ ಬೊಂಬಾಟ್‌ ವಿಡಿಯೋ ಎಡಿಟಿಂಗ್‌ ಆಪ್‌ ಈಗ ಆಂಡ್ರಾಯ್ಡ್‌ನಲ್ಲಿ ಲಭ್ಯ!..ಫ್ರೀ ಸಿಗುತ್ತಾ?

|

ಜನಪ್ರಿಯ ವೀಡಿಯೊ ಎಡಿಟಿಂಗ್ ಅಪ್ಲಿಕೇಶನ್ಗಳಲ್ಲಿ ಒಂದಾಗಿರುವ ಲುಮಾಫ್ಯೂಶನ್ (LumaFusion) ಹಲವು ಆಕರ್ಷಕ ಎಡಿಟಿಂಗ್ ಆಯ್ಕೆಗಳನ್ನು ಒಳಗೊಂಡಿದ್ದು, ವಿಡಿಯೋ ಎಡಿಟಿಂಗ್‌ ಬಳಕೆದಾರರಿಗೆ ಆಕರ್ಷಕ ಎನಿಸಿದೆ. ಈ ಅಪ್ಲಿಕೇಶನ್ ವಿಶೇಷವಾಗಿ ಆಪಲ್‌ ಉತ್ಪನ್ನಗಳ ಬಳಕೆದಾರರಿಗೆ ಆಪ್ತವಾಗಿತ್ತು. ಆದ್ರೆ ಲುಮಾಫ್ಯೂಶನ್ ಆಪ್‌ ಈಗ ಆಂಡ್ರಾಯ್ಡ್‌ ಹಾಗೂ ಕ್ರೋಮ್ ಓಎಸ್‌ ಬೀಟಾ ಬಳಕೆದಾರರಿಗೂ ಮುಕ್ತವಾಗಿದೆ.

ಲುಮಾಫ್ಯೂಶನ್ ವಿಡಿಯೋ ಆಪ್‌

ಹೌದು, ಲುಮಾಫ್ಯೂಶನ್ ವಿಡಿಯೋ ಆಪ್‌ ಈಗ ಆಂಡ್ರಾಯ್ಡ್‌ (Android) ಮತ್ತು ಕ್ರೋಮ್ ಓಎಸ್‌ (Chrome OS) ಬೀಟಾ ಬಳಕೆದಾರರಿಗೆ ಲಭ್ಯವಿದೆ. ಅಂದಹಾಗೆ ಲುಮಾಫ್ಯೂಶನ್ ಅಪ್ಲಿಕೇಶನ್ ಈ ಎರಡು ಓಎಸ್‌ ಬಳಕೆದಾರರಿಗೆ ಮೂಲ ಎಡಿಟಿಂಗ್ ಟೂಲ್‌ಗಳ ಸೌಲಭ್ಯವನ್ನು ಒದಗಿಸುತ್ತದೆ. ಯುಎಸ್‌ಬಿ-ಸಿ ಡ್ರೈವ್‌ಗಳಿಂದ ನೇರವಾಗಿ ಎಡಿಟ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿರುವುದು ಪ್ರಮುಖ ಅಂಶ ಎನಿಸಿದೆ.

ಆಂಡ್ರಾಯ್ಡ್‌ ಮತ್ತು ಕ್ರೋಮ್‌

ಲುಮಾಫ್ಯೂಶನ್ ಆಪ್‌ ಅನ್ನು ಆಂಡ್ರಾಯ್ಡ್‌ ಮತ್ತು ಕ್ರೋಮ್‌ ಓಎಸ್‌ ಬಳಕೆದಾರರಿಗೆ ರೂಪಿಸಲಾಗಿದ್ದು, ಆಪ್ ಅನುಭವ iOS ಪ್ರತಿರೂಪದಂತೆಯೇ ಇರುತ್ತದೆ. ಟಚ್ ಮತ್ತು ಕೀಬೋರ್ಡ್ ಇಂಟರ್ಫೇಸ್‌ಗಳೆರಡರಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ಬಳಕೆದಾರರು ಗ್ರಾಫಿಕ್ EQ (Graphic EQ) ಬಳಸಿ ಆಡಿಯೊವನ್ನು ಎಡಿಟ್ ಮಾಡಿ, ಎಫೆಕ್ಟ್‌ ಸೇರಿಸಬಹುದು. ಅಲ್ಲದೇ ಮಲ್ಟಿಲೇಯರ್ ಟೈಟಲ್‌ಗಳನ್ನು ರಚಿಸುವ ಆಯ್ಕೆ ಸೇರಿದಂತೆ ಮತ್ತಷ್ಟು ಆಕರ್ಷಕ ಆಯ್ಕೆಗಳು ಲಭ್ಯವಾಗಲಿವೆ.

ಭಾರತದಲ್ಲಿ ಅಂದಾಜು

ಲುಮಾಫ್ಯೂಶನ್ (LumaFusion) ಅಪ್ಲಿಕೇಶನ್‌ನ ಬೀಟಾ ಆವೃತ್ತಿಯು ಈಗ ಗೂಗಲ್‌ ಪ್ಲೇ ಸ್ಟೋರ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟೋರ್‌ ಮೂಲಕ ಡೌನ್‌ಲೋಡ್ ಮಾಡಲು ಲಭ್ಯವಿದೆ. ಆಸಕ್ತರು 30% ರಷ್ಟು ರಿಯಾಯಿತಿಯನ್ನು ಪಡೆದ ನಂತರ $19.99 (ಭಾರತದಲ್ಲಿ ಅಂದಾಜು 1,633ರೂ) ಪಾವತಿಸಬಹುದು. ಮೂಲ ಬೆಲೆ $29.99 (ಭಾರತದಲ್ಲಿ ಅಂದಾಜು 2,450ರೂ. ಆಗಿದೆ), ಸ್ಥಿರ ಬಿಡುಗಡೆಯನ್ನು ಪೋಸ್ಟ್ ಮಾಡಲು ಬಳಕೆದಾರರು ಪಾವತಿಸಬೇಕಾಗುತ್ತದೆ.

ಲುಮಾಟಚ್ (LumaTouch)

ಲುಮಾಟಚ್ (LumaTouch) ಬಳಕೆದಾರರು ಆಂಡ್ರಾಯ್ಡ್ ಅಥವಾ ಕ್ರೋಮ್ ಓಎಸ್ ಪೋರ್ಟ್‌ನಿಂದ ಯಾವುದೇ ಪ್ರಮುಖ ಲುಮಾಟಚ್ ಫೀಚರ್ಸ್‌ ತಪ್ಪಿಸಿಕೊಳ್ಳಬಾರದು. ಹಾಗೆಯೇ ಇದು ಕಸ್ಟಮ್ LUT ಗಳನ್ನು ಬೆಂಬಲಿಸುತ್ತದೆ, ಆಡಿಯೊ-ದೃಶ್ಯ ಸ್ವತ್ತುಗಳಿಗಾಗಿ ಸ್ಟೋರಿಬ್ಲಾಕ್ಸ್ ಏಕೀಕರಣ ಮತ್ತು 18 ಮತ್ತು 240fps ನಡುವಿನ ಮೀಡಿಯಾ ಯೋಜನೆ ಹೊಂದಿದೆ. ಇತರೆ ಕೆಲವು ವಿಡಿಯೋ ಆಪ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಅಡೊಬ್ ಪ್ರೀಮಿಯರ್‌ ಕ್ಲಿಪ್ (Adobe Premiere Clip)

ಅಡೊಬ್ ಪ್ರೀಮಿಯರ್‌ ಕ್ಲಿಪ್ (Adobe Premiere Clip)

ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೊ ಎಡಿಟಿಂಗ್ ಮಾಡಲು ಸೂಕ್ತ ಆಪ್ ಇದಾಗಿದ್ದು, ವೇಗವಾಗಿ ಎಡಿಟ್ ಮಾಡಬಹುದಾದ ಆಯ್ಕೆಗಳನ್ನು ಹೊಂದಿದೆ. ಆಟೋಮ್ಯಾಟಿಕ್ ಆಗಿ ವಿಡಿಯೊ ಕ್ರಿಯೆಷನ್ ಮಾಡಿಕೊಳ್ಳುವ ಆಯ್ಕೆಯನ್ನ ಸಹ ಇದು ಹೊಂದಿದೆ. ಮ್ಯೂಸಿಕ್, ಫಿಲ್ಟರ್, ಎಫೆಕ್ಟ್, ಟ್ರಿಮ್ಮಿಂಗ್, ಕಟ್ಟಿಂಗ್ ಮತ್ತು ಆಡಿಂಗ್ ಆಯ್ಕೆಗಳನ್ನು ಒಳಗೊಂಡಿರುವ ಜೊತೆಗೆ ಇನ್ನೂ ಹಲವು ಮಲ್ಟಿ ಆಯ್ಕೆಗಳನ್ನು ಹೊಂದಿದೆ.

ಪವರ್‌ ಡೈರೆಕ್ಟರ್ (Power Director)

ಪವರ್‌ ಡೈರೆಕ್ಟರ್ (Power Director)

ಪವರ್‌ ಡೈರೆಕ್ಟರ್ ಆಪ್ ಸರಳವಾದ ಆಯ್ಕೆಗಳನ್ನು ಒಳಗೊಂಡಿದ್ದು, ವಿಡಿಯೊಗಳನ್ನು ಸುಲಭವಾಗಿ ಎಡಿಟ್ ಮಾಡಬಹುದಾಗಿದೆ. ಸುಮಾರು 30 ಭಿನ್ನ ಎಫೆಕ್ಟ್ ಆಯ್ಕೆಗಳನ್ನು ನೀಡಿರುವ ಜೊತೆಗೆ ಫೊಫೇಶನಲ್ ಆಯ್ಕೆಗಳನ್ನು ಸಹ ಕಾಣಬಹುದಾಗಿದೆ. ಗ್ರೀನ್ ಸ್ಕ್ರೀನ್ ವಿಡಿಯೊಗಳನ್ನು ಎಡಿಟ್ ಮಾಡಬಹುದಾಗಿದ್ದು, ಸ್ಲೋ ಮೋಷನ್ ಸಹ ಇದೆ. ವಿಡಿಯೊ ಎಡಿಟ್ ಕುರಿತು ಟ್ಯೂಟೊರಿಲ್ ಮಾಹಿತಿಗಳು ಇವೆ.

ಫಿಲ್ಮೊರಾಗೊ (FilmoraGo)

ಫಿಲ್ಮೊರಾಗೊ (FilmoraGo)

ಬಹುತೇಕ ಬಳಕೆದಾರರನ್ನು ಹೊಂದಿರುವ ಉತ್ತಮ ಸ್ಮಾರ್ಟ್‌ಫೋನ್ ವಿಡಿಯೊ ಎಡಿಟಿಂಗ್ ಆಪ್‌ ಇದಾಗಿದ್ದು, ಇದರಲ್ಲಿ ವಿಡಿಯೊ ಎಡಿಟಿಂಗ್ನಲ್ಲಿ ಟ್ರಿಮ್ಮಿಂಗ್, ಕಟ್ಟಿಂಗ್, ಆಡಿಂಗ್ ಆಯ್ಕೆಗಳು ದೊರೆಯಲಿವೆ. ಸ್ಲೋ ಮೋಷನ್ ಸೇರಿದಂತೆ ಹಲವು ಹೊಸ ಎಫೆಕ್ಟ್‌ಗಳ ಆಯ್ಕೆಗಳನ್ನು ಸಹ ಕಾಣಬಹುದಾಗಿದೆ. ಟೆಂಪ್ಲೇಟ್ಸ್‌ಗಳ ಆಯ್ಕೆಯನ್ನು ಹೊಂದಿದ್ದು, ಎಡಿಟ್‌ ಮಾಡಿರುವ ಕ್ಲಿಪ್‌ಗಳನ್ನು ಪ್ರಿವ್ಯೂವ್ ಮಾಡಬಹುದಾಗಿದೆ.

Best Mobiles in India

English summary
LumaFusion Video editing app now available on Android and Chrome OS in Beta.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X