ಭವಿಷ್ಯದ ತಂತ್ರಜ್ಞಾನ ಹೇಗಿರುತ್ತದೆ ವೀಡಿಯೋ ಬಿಡುಗಡೆ: ಮ್ಯಾಜಿಕ್ ಲೀಪ್‌

Written By:

ಬಹುಶಃ ಟೆಕ್ನಾಲಜಿ ಈ ರೀತಿ ಬೆಳವಣಿಗೆ ಆಗುತ್ತದೆ ಎಂದು ನೀವು ಊಹಿಸಿರಲು ಸಾಧ್ಯವಿಲ್ಲ. ತಾರ್ಕಿಕವಾಗಿ ಇದು ಸಿಲಿಕಾನ್‌ ವ್ಯಾಲಿ ಕಂಪನಿಯ ಒಂದು ನಿಗೂಢ ವೀಡಿಯೋ. ಕೇವಲ 2 ನಿಮಿಷ 7 ಸೆಕೆಂಡ್‌ಗಳಿರುವ ವೀಡಿಯೋ ಇದು. ಅಂದಹಾಗೆ "A New Morning" ಎಂದು ಕರೆಯುವ ಈ ವೀಡಿಯೋವನ್ನು ಅಮೇರಿಕದ "ಮ್ಯಾಜಿಕ್ ಲೀಪ್" ಕಂಪನಿ ಬಿಡುಗಡೆಮಾಡಿದೆ. ಭವಿಷ್ಯದ ಟೆಕ್ನಾಲಜಿ ಹೇಗಿರುತ್ತದೆ ಎಂಬ ಅಭಿವೃದ್ದಿ ಹೊಂದಿರುವ ವಾಸ್ತವ ವೀಡಿಯೋವನ್ನು ಮ್ಯಾಜಿಕ್ ಲೀಪ್‌ ಈಗ ಬಿಡುಗಡೆ ಮಾಡಿದೆ.

ಚಿತ್ರ ಕೃಪೆ: Magic Leap

ಭವಿಷ್ಯದ ತಂತ್ರಜ್ಞಾನ ಹೇಗಿರುತ್ತದೆ ವೀಡಿಯೋ ಬಿಡುಗಡೆ: ಮ್ಯಾಜಿಕ್ ಲೀಪ್‌

ಹಾಲೋಗ್ರಾಫಿಕ್‌ ತಂತ್ರಜ್ಞಾನದಿಂದ ಪ್ರಪಂಚದ ವಾಸ್ತವತೆ ಭವಿಷ್ಯದಲ್ಲಿ ಹೇಗಿರುತ್ತದೆ ಎಂದು ತೋರಿಸುವ ವರ್ಚುವಲ್‌ ರಿಯಾಲಿಟಿ ವೀಡಿಯೋ ಇದು. ವ್ಯಕ್ತಿಯು ಹೆಡ್‌ ಮೌಂಟೆಡ್‌ ಡಿಸ್‌ಪ್ಲೇಯನ್ನು ಧರಿಸುವುದರಿಂದ, ಆತನು ಮೊದಲು ಕಣ್ಣಿನ ನೇರದಲ್ಲಿ ಕಂಪ್ಯೂಟರ್‌ ಡಿಸ್‌ಪ್ಲೇ ನೋಡಬಹುದು. ನಂತರ ಬಾರ್‌ ಚಾರ್ಟ್‌ ಕಾಣುತ್ತದೆ. ಗ್ರಾಫಿಕ್‌ ಮೂಲಕ ಮೆಸೇಜ್‌ ಅಲರ್ಟ್ ಬರುತ್ತಿರುತ್ತದೆ.

ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?

ನೀವು ಯಾವುದೇ ಸ್ಕೀನ್‌ ಇಲ್ಲದೇ ಕಂಪ್ಯೂಟರ್‌ ಅನ್ನು ಹೇಗೆ ಬಳಸುತ್ತೀರಿ ಎಂಬುದು ಇಲ್ಲಿ ಭವಿಷ್ಯದ ಟೆಕ್ನಾಲಜಿಯ ಅಭಿವೃದ್ದಿಯನ್ನು ತೋರಿಸಲಾಗುತ್ತದೆ. ಅಂದಹಾಗೆ ಮ್ಯಾಜಿಕ್ ಲೀಪ್‌ ಬಿಡುಗಡೆ ಮಾಡಿರುವ ಈ ವೀಡಿಯೋ ನೋಡಿ ಭವಿಷ್ಯದ ಹಾಲೋಗ್ರಾಫಿಕ್‌ ಟೆಕ್ನಾಲಜಿ ಹೇಗಿರುತ್ತದೆ ಎಂದು ನೋಡಿರಿ.

ವೀಡಿಯೋ ಕೃಪೆ: Magic Leap

ಈ ಹಿಂದೆ ಮ್ಯಾಜಿಕ್‌ ಲೀಪ್‌ ಬಿಡುಗಡೆ ಮಾಡಿದ್ದ ವೀಡಿಯೋ ಸಹ ಅಚ್ಚರಿ ವೀಡಿಯೋ ಆಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಸಂಪೂರ್ಣವಾಗಿ ವಾಸ್ತವದಂತೆ ಕಾಣುವಂತೆ ಡಿಜಿಟಲ್ ಸಮುದ್ರದಿಂದ ತಿಮಿಂಗಿಲ ಒಂದು ಹಾರುವ ವೀಡಿಯೋವನ್ನು ಶಾಲೆಯ ಜಿಮ್‌ನಲ್ಲಿ ತೋರಿಸಿದ್ದ ವೀಡಿಯೋ ಒಂದನ್ನು ಬಿಡುಗಡೆ ಮಾಡಿತ್ತು. ಅದು ಹೇಗಿದೆ ನೋಡಿ.

ವೀಡಿಯೋ ಕೃಪೆ: Magic-Tricks

 

English summary
Magic Leap video gives glimpse into future of a new reality. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot