ಭಾರತದಲ್ಲಿ ಚೀನಾ ಸ್ಮಾರ್ಟ್‌ಫೋನ್ ತಯಾರಿ
ಮೋದಿಯವರು ವಿದೇಶಿ ಕಂಪನಿಗಳನ್ನು ಬನ್ನಿ ಭಾರತದಲ್ಲಿ ಹಣ ಹೂಡಿ ಎಂದು ಹೇಳುತ್ತಿದ್ದಂತೆಯೇ ಈಗ ಕೂಲ್‌ಪ್ಯಾಡ್ ಭಾರತದಲ್ಲಿ ಉತ್ಪಾದಿಸಲು ಹಣ ಹೂಡುತ್ತಿದೆ.
ಕೂಲ್‌ಪ್ಯಾಡ್ ಚೀನಾದ ಹ್ಯಾಂಡ್‌ಸೆಟ್ ತಯಾರಕ ಕಂಪನಿಯಾಗಿದ್ದು, ಭಾರತದಲ್ಲಿ $300 ಮಿಲಿಯನ್ ಅನ್ನು ಸಂಶೋಧನೆ, ಅಭಿವೃದ್ದಿ ಮತ್ತು ಸ್ಮಾರ್ಟ್‌ಫೋನ್ ತಯಾರಿಸಲು ಹೂಡಿದೆ.

ಓದಿರಿ: ಆಂಡ್ರಾಯ್ಡ್ ಓಎಸ್ ಮಾರ್ಶ್ ಮಲ್ಲೊ ವಿಶೇಷತೆ ಏನು
ಚೀನಾ, ಭಾರತದಲ್ಲಿ ತಯಾರಿಸಿರುವ ಸ್ಮಾರ್ಟ್‌ಫೋನ್ ಹೆಸರು ಕೂಲ್‌ಪ್ಯಾಡ್ ನೋಟ್ 3 ಆಗಿದ್ದು , ಶುಕ್ರವಾರ ಲಾಂಚ್‌ಮಾಡಿದೆ. ಇದರ ಬೆಲೆ ರೂ.8999. ಕೂಲ್‌ಪ್ಯಾಡ್ ವಿಡಿಯೋಕಾನ್ ಕಂಪನಿಯೊಂದಿಗೆ ಸಹಭಾಗಿತ್ವ ಹೊಂದಿ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ತೊಡಗುವುದಾಗಿ ಹೇಳಿದೆ.

''ಮೇಡ್‌ಇನ್ ಇಂಡಿಯಾದ ಕೂಲ್ ಪ್ಯಾಡ್‌ನ ಮೊದಲ ಸ್ಮಾರ್ಟ್‌ಫೋನ್ 2016 ರ ಮೊದಲ ತ್ರೈಮಾಸಿಕದಲ್ಲಿ ಸಿಗಲಿದೆ'' ಎಂದು ಕೂಲ್‌ಪ್ಯಾಡ್ ಉಪಾಧ್ಯಕ್ಷ ಜಾನ್ಸನ್ ಲುವೋ ಹೇಳಿದ್ದಾರೆ. ಕೂಲ್‌ಪ್ಯಾಡ್ ಬಂಡವಾಳ ಹೂಡಲು ಭಾರತ ನಿರ್ಣಾಯಕ ಮಾರುಕಟ್ಟೆಯಾಗಿದೆ. ಇಲ್ಲಿ ಬಂಡವಾಳ ಹೂಡುವುದರಿಂದ ಹೆಚ್ಚು ಕಲಿಯುತ್ತೇವೆ. ಅಲ್ಲದೇ ಎಲ್ಲರ ಕೈಗೆಟಕುವ ಸ್ಮಾರ್ಟ್‌ಫೋನ್‌ಗಳನ್ನು ಇಲ್ಲಿ ಮಾರುಕಟ್ಟೆಗೆ ತರುತ್ತೇವೆ ಎಂದಿದ್ದಾರೆ.
ಓದಿರಿ: ಡಿಜಿಟಲ್ ಇಂಡಿಯಾಗೆ ಇಂಟೆಲ್ ಸಾತ್
ಕೂಲ್‌ಪ್ಯಾಡ್, ಚೀನಾದ ಸರ್ಚ್ ಇಂಜಿನ್ Qihoo 360 ಸಹಭಾಗಿತ್ವದಲ್ಲಿ Dazen ಎಂಬ ಬ್ರಾಂಡ್ ಹೆಸರಿನಲ್ಲಿ ಸ್ಮಾರ್ಟ್‌ಫೋನ್ ಲಾಂಚ್ ಮಾಡಿ 34 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಿತ್ತು. ಈ ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿ 3 ಶತಕೋಟಿ ಲಾಭಗಳಿಸಿತ್ತು. ಕೂಲ್‌ಪ್ಯಾಡ್ ಡ್ಯುಯಲ್ ಸಿಮ್, ಡ್ಯುಯಲ್ ಸ್ಟ್ಯಾಂಡ್‌ಬೈ ಸಹಿತ ನವೀಕರಿಸಿ 4G ಮತ್ತು ಭಾರತದ ಸ್ಥಳೀಯ ಭಾಷೆಗಳಿಗೆ ಸಪೋರ್ಟ್ ಮಾಡುವಂತೆ ಉತ್ಪಾದಿಸಲಾಗಿತ್ತು.

ಕೂಲ್‌ಪ್ಯಾಡ್‌ನ ನೋಟ್3 ಸ್ಮಾರ್ಟ್‌ಪೋನ್ ಇ- ಕಾಮರ್ಸ್ ಅಮೆಜಾನ್ ಸಹಭಾಗಿತ್ವದಲ್ಲಿ ಲಾಂಚ್ ಆಗಲಿದೆ. ನೋಟ್ 3 ಫಿಂಗರ್‌ಪ್ರಿಂಟ್ ಸ್ಕ್ಯಾನರ್, 5.5-inch HD ಡಿಸ್‌ಪ್ಲೇ, 3GB RAM ಮತ್ತು 16 GB ಇಂಟರ್‌ನಲ್ ಮೆಮೊರಿ ಫೀಚರ್ ಹೊಂದಲಿದೆ. 3000 mAH ಬ್ಯಾಟರಿ, 13 mp ಹಿಂದಿನ ಕ್ಯಾಮೆರಾ ಮತ್ತು 5mp ಫ್ರಂಟ್ ಕ್ಯಾಮೆರಾ ಹೊಂದಲಿದೆ.


Click it and Unblock the Notifications








