ಫ್ಲಿಪ್‌ಕಾರ್ಟ್ ಉದ್ಯೋಗಿಗಳಿಗೆ ಜಾಕ್‌ಪಾಟ್!..ಕೋಟ್ಯಾಧಿಪತಿಗಳಾದರು ಹಲವರು!!

|

ಅಮೆರಿಕದ ವಾಲ್‌ಮಾರ್ಟ್, ಇ-ಕಾಮರ್ಸ್ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಫ್ಲಿಪ್‌ಕಾರ್ಟ್ ಸಂಸ್ಥೆಯ ಸಾವಿರಾರು ಷೇರುದಾರರು ಕೋಟ್ಯಧಿಪತಿಗಳು ಅಥವಾ ಮಿಲಿಯನೇರ್ ಗಳಾಗಲಿದ್ದಾರೆ. ಇನ್ನು ಫ್ಲಿಪ್‌ಕಾರ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಮತ್ತು ಮಾಜಿ ಉದ್ಯೋಗಿಗಳೂ ಸಹ ಶ್ರೀಮಂತರಾಗಲಿದ್ದಾರೆ.

ಫ್ಲಿಪ್‌ಕಾರ್ಟ್ ಕಂಪನಿಯಲ್ಲಿ ಸುಮಾರು 10 ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, 3 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಹಾಗೂ ಮಾಜಿ ಉದ್ಯೋಗಿಗಳು ಷೇರುಗಳನ್ನು ಹೊಂದಿದ್ದಾರೆ. ವಾಲ್‌ಮಾರ್ಟ್ ತೆಕ್ಕೆಗೆ ಫ್ಲಿಪ್‌ಕಾರ್ಟ್ ಬಿದ್ದಿದ್ದರಿಂದ ಫ್ಲಿಪ್‌ಕಾರ್ಟ್‌ನ ಸಿಬ್ಬಂದಿಗಳಿಗೆ 3,350 ಕೋಟಿಗಳಷ್ಟು ಲಾಭ ಆಗಲಿದೆ ಎಂದು ತಿಳಿದುಬಂದಿದೆ.

ಫ್ಲಿಪ್‌ಕಾರ್ಟ್ ಉದ್ಯೋಗಿಗಳಿಗೆ ಜಾಕ್‌ಪಾಟ್!..ಕೋಟ್ಯಾಧಿಪತಿಗಳಾದರು ಹಲವರು!!

ಸಂಸ್ಥೆಯೊಂದರ ಗರಿಷ್ಠ ಪ್ರಮಾಣದ ಪಾಲು ಬಂಡವಾಳವನ್ನು ಇನ್ನೊಂದು ಸಂಸ್ಥೆ ಖರೀದಿಸಿದಾಗ, ಸಾಲ ಮರುಪಾವತಿಯ ಸಮಸ್ಯೆ ಇರದಿದ್ದರೆ, ಉದ್ಯೋಗಿಗಳು ತಮ್ಮ ಬಳಿಯಲ್ಲಿ ಇರುವ 'ಇಎಸ್‌ಒಪಿ'ಗಳನ್ನು ನಗದಿಗೆ ಪರಿವರ್ತಿಸಿಕೊಳ್ಳಲು ಅವಕಾಶ ಇರಲಿದೆ. ಹಾಗಾಗಿ, ಫ್ಲಿಪ್‌ಕಾರ್ಟ್ ಸಂಸ್ಥೆಯ ಕೆಲ ಹಿರಿಯ ಅಧಿಕಾರಿಗಳು ಕೋಟ್ಯಾಧಿಪತಿಗಳಾಗಲಿದ್ದಾರೆ.

ಫ್ಲಿಪ್‌ಕಾರ್ಟ್ ಉದ್ಯೋಗಿಗಳಿಗೆ ಜಾಕ್‌ಪಾಟ್!..ಕೋಟ್ಯಾಧಿಪತಿಗಳಾದರು ಹಲವರು!!

ಫ್ಲಿಪ್‌ಕಾರ್ಟ್ ಸಂಸ್ಥೆಯ ಕೆಲ ಹಾಲಿ ಮತ್ತು ಮಾಜಿ ನೌಕರರು 'ಇಎಸ್‌ಒಪಿ'ಗಳ ಮರು ಖರೀದಿಯನ್ನು ತುಂಬ ಕಾತರದಿಂದ ಎದುರು ನೋಡುತ್ತಿದ್ದಾರೆ. ಇವರಲ್ಲಿ ಮಿಂತ್ರಾ ಮತ್ತು ಜಬೊಂಗ್‌ನ ಸಿಬ್ಬಂದಿಯೂ ಸೇರಿದ್ದಾರೆ. ಸಂಸ್ಥೆ ತೊರೆದವರಲ್ಲಿಯೂ ಕೆಲವರು 'ಇಎಸ್‌ಒಪಿ'ಗಳನ್ನು ಹೊಂದಿದ್ದಾರೆ ಎಂದು ಫ್ಲಿಪ್‌ಕಾರ್ಟ್ ಮೂಲಗಳು ತಿಳಿಸಿವೆ.

ಫ್ಲಿಪ್‌ಕಾರ್ಟ್ ಸಂಸ್ಥೆಯಲ್ಲಿ 'ಇಎಸ್‌ಒಪಿ'ಗಳನ್ನು ಹೊಂದಿರುವವರ ಸಂಖ್ಯೆ 2 ಸಾವಿರ ದಾಟಬಹುದು. ಒಪ್ಪಂದದ ಪ್ರಕಾರ ಇವರಲ್ಲಿ 250 ಜನರು 'ಇಎಸ್‌ಒಪಿ'ಗಳನ್ನು ನಗದಾಗಿ ಪರಿವರ್ತಿಸಿಕೊಳ್ಳಲು ಅರ್ಹರಾಗಲಿದ್ದಾರೆ' ಎಂದು ಸಂಸ್ಥೆಯ ಮಾರಾಟ ತಂಡದ ಉದ್ಯೋಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ಫ್ಲಿಪ್‌ಕಾರ್ಟ್‌, ಕಳೆದ ಐದು ವರ್ಷಗಳಲ್ಲಿ ನಾಲ್ಕು ಬಾರಿ 'ಇಎಸ್‌ಒಪಿ'ಗಳನ್ನು ನಗದಾಗಿ ಪರಿವರ್ತಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.

ಓದಿರಿ: ಶಿಯೋಮಿ 'ರೆಡ್‌ಮಿ ಎಸ್‌2' ಸ್ಮಾರ್ಟ್‌ಫೋನ್ ಬಿಡುಗಡೆಗೆ ಮತ್ತೆ ಬೆಚ್ಚಿತು ಮೊಬೈಲ್ ಜಗತ್ತು!

ಓದಿರಿ: ಈ ಅದ್ಬುತ 'ಏರ್‌ ಸೆಲ್ಫೀ' ಡ್ರೋಣ್ ಬಗ್ಗೆ ತಿಳಿದರೆ ಶಾಕ್ ಆಗ್ತೀರಾ!!

Best Mobiles in India

English summary
Walmart’s acquisition of Flipkart rakes in $500m moolah for Flipsters. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X