Just In
- 3 min ago
ಬಂದೇ ಬಿಡ್ತು 'ಮೊಟೊ ರೇಜರ್ 2022 ಫೋಲ್ಡಬಲ್' ಸ್ಮಾರ್ಟ್ಫೋನ್!..ಏನಿದರ ವಿಶೇಷ!
- 2 hrs ago
ಭಾರತದಲ್ಲೂ ಸಿಂಗಲ್ ಚಾರ್ಜರ್ ನೀತಿ ಜಾರಿಗೆ ಬರುತ್ತಾ? ಹಾಗಾದ್ರೆ ನಿಮ್ಮ ಚಾರ್ಜರ್ಗಳ ಕಥೆ ಏನು?
- 3 hrs ago
ಸ್ಯಾಮ್ಸಂಗ್ ಗ್ಯಾಲಕ್ಸಿ A23e ಫೋನಿನ ಫೀಚರ್ಸ್ ಲೀಕ್!..ಇದು 5G ಫೋನಾ?
- 4 hrs ago
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 V/S ಗ್ಯಾಲಕ್ಸಿ Z ಫೋಲ್ಡ್ 3: ಏನಿದೆ ಹೊಸತು?
Don't Miss
- Sports
ಏಷ್ಯಾ ಕಪ್ 2022: ಈತನನ್ನು ತಂಡದಿಂದ ಹೊರಗಿಟ್ಟಿರುವುದು ಆಶ್ಚರ್ಯ ತಂದಿದೆ; ಪಾರ್ಥಿವ್ ಪಟೇಲ್
- Finance
ಅಟಾಲ್ ಪಿಂಚಣಿ ಯೋಜನೆ ಹೂಡಿಕೆ ನಿಯಮ ಬದಲಾವಣೆ, ಹೊಸತೇನು?
- Automobiles
ಆಕರ್ಷಕ ವಿನ್ಯಾಸದ ಹೊಸ ಹಾರ್ಲೆ ಡೇವಿಡ್ಸನ್ ನೈಟ್ಸ್ಟರ್ ಬೈಕ್ ಬಿಡುಗಡೆ
- News
ಬ್ರಿಟಿಷರ ಟ್ರಕ್ಗೆ ಎದೆಕೊಟ್ಟು ನಿಂತ ಕಾರ್ಮಿಕ ಬಾಬು ಗೇನು ಬಲಿದಾನದ ಕಥೆ
- Movies
ರಾಕಿ ಭಾಯ್ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ!
- Lifestyle
ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯ ದಿನದಂದು ಬೇರೆ ಬೇರೆ ರೀತಿಯಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತಾರೆ ಏಕೆ?
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಮೆಟಾ ಕಂಪೆನಿಯಿಂದ ''ಮೆಟಾ ಅವತಾರ್ಸ್ ಸ್ಟೋರ್'' ಬಿಡುಗಡೆ! ಏನಿದರ ವಿಶೇಷ?
ಪ್ರಸ್ತುತ ದಿನಗಳಲ್ಲಿ ವರ್ಚುವಲ್ ಜಗತ್ತಿನ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಮೆಟಾವರ್ಸ್ ಕಲ್ಪನೆಯನ್ನು ಹರಡುವ ಪ್ರಯತ್ನವನ್ನು ಮೆಟಾ ಕಂಪೆನಿ ಮಾಡುತ್ತಿದೆ. ಅದರಂತೆ ಇದೀಗ ಮೆಟಾ ಕಂಪೆನಿ ಹೊಸ ಡಿಜಿಟಲ್ ಡಿಸೈನರ್ ಬಟ್ಟೆ ಸ್ಟೋರ್ ''ಮೆಟಾ ಅವತಾರ್ಸ್ ಸ್ಟೋರ್'' ಅನ್ನು ಪರಿಚಯಿಸಿದೆ. ಇದು ಬಳಕೆದಾರರು ತಮ್ಮ ಅವತಾರ್‌ಗಳ ಮೂಲಕ ಹೊಸ ಅನುಭವ ಪಡೆಯುವುದಕ್ಕೆ ಅನುವು ಮಾಡಿಕೊಡುತ್ತದೆ.

ಹೌದು, ಮೆಟಾ ಕಂಪೆನಿ ಹೊಸ ಮೆಟಾ ಅವತಾರ್ಸ್ ಸ್ಟೋರ್ ಅನ್ನು ಘೋಷಣೆ ಮಾಡಿದೆ. ಹೆಸರೇ ಸೂಚಿಸುವಂತೆ ಈ ಕ್ಲಾತ್ ಸ್ಟೋರ್ ವರ್ಚುವಲ್ ಸ್ಟೋರ್ ಆಗಿದೆ. ಬಳಕೆದಾರರು ವರ್ಚುವಲ್ ಆಗಿ ತಮ್ಮ ಅವತಾರ್‌ಗಳಿಗೆ ಬೇಕಾದ ಬಟ್ಟೆಯನ್ನು ಆಯ್ಕೆ ಮಾಡಬಹುದಾಗಿದೆ. ಈ ಹೊಸ ಸ್ಟೋರ್ ಅನ್ನು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಇನ್‌ಸ್ಟಾಗ್ರಾಮ್‌ನ ಫ್ಯಾಶನ್ ಪಾಲುದಾರಿಕೆಗಳ ಉಪಾಧ್ಯಕ್ಷ ಇವಾ ಚೆನ್ ಅವರೊಂದಿಗೆ ಇನ್‌ಸ್ಟಾಗ್ರಾಮ್ ಲೈವ್ ಟೈಂನಲ್ಲಿ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಈ ಹೊಸ ಮೆಟಾ ಅವತಾರ್ಸ್ ಸ್ಟೋರ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

"ಮೆಟಾ ಅವತಾರ್ಸ್ ಸ್ಟೋರ್" ವಿಶೇಷತೆ ಏನು?
ಮೆಟಾ ಅವತಾರ್ಸ್ ಸ್ಟೋರ್ ಮೆಟಾ ಒಡೆತನದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್‌ನಲ್ಲಿ ಲಭ್ಯವಾಗಲಿದೆ. ಇದು ವರ್ಚುವಲ್ ಸ್ಟೋರ್ ಆಗಿದ್ದು, ಬಳಕೆದಾರರಿಗೆ ದೊಡ್ಡ ಬ್ರ್ಯಾಂಡ್‌ಗಳು ಮತ್ತು ವಿನ್ಯಾಸಕರಿಂದ ಡಿಜಿಟಲ್ ಬಟ್ಟೆಗಳನ್ನು ಖರೀದಿಸಲು ಅವಕಾಶ ನೀಡುತ್ತದೆ. ಈ ಸ್ಟೋರ್ ಬಾಲೆನ್ಸಿಯಾಗ, ಪ್ರಾಡಾ ಮತ್ತು ಥಾಮ್ ಬ್ರೌನ್‌ನ ಬಟ್ಟೆಗಳನ್ನು ಹೊಂದಿರಲಿದೆ. ವರ್ಚುವಲ್‌ನಲ್ಲಿ ಈ ಬಟ್ಟೆಗಳನ್ನು ಪಡೆಯಲು ಬಳಕೆದಾರರು ಎಷ್ಟು ಪಾವತಿಸಬೇಕಾಗುತ್ತದೆ ಅನ್ನೊದನ್ನ ಮೆಟಾ ಬಹಿರಂಗಪಡಿಸಿಲ್ಲ. ಆದರೆ ಪ್ರಸ್ತುತ ಲಭ್ಯವಿರುವ ಎಲ್ಲಾ ಬಟ್ಟೆಗಳು ಎಲ್ಲಾ ಬಳಕೆದಾರರಿಗೆ ಉಚಿತವಾಗಿ ಲಭ್ಯವಿದೆ.

ಇನ್ನು ಮೆಟಾ ಕಂಪೆನಿ ಈ ಸ್ಟೋರ್ ಅನ್ನು ಮುಕ್ತ ಮಾರುಕಟ್ಟೆಯನ್ನಾಗಿ ಮಾಡಲು ಪ್ಲಾನ್ ಮಾಡಿದೆ. ಇದನ್ನು ಐಷಾರಾಮಿ ಬ್ರಾಂಡ್‌ಗಳಿಗೆ ಸೀಮಿತಗೊಳಿಸದೆ ಡೆವಲಪರ್‌ಗಳು ತಮ್ಮದೇ ಆದ ಕ್ಲಾತ್ ಲೈನ್‌ಗಳನ್ನು ಕ್ರಿಯೆಟ್ ಮಾಡಬಹುದು ಮತ್ತು ಮಾರಾಟ ಮಾಡಬಹುದು ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಮಾರ್ಕ್ ಜುಕರ್‌ಬರ್ಗ್ ಪ್ರಕಾರ, "ನಾವು ನಮ್ಮ ಅವತಾರ್ ಸ್ಟೋರ್ ಅನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್‌ನಲ್ಲಿ ಪ್ರಾರಂಭಿಸುತ್ತಿದ್ದೇವೆ. ಆದ್ದರಿಂದ ನೀವು ನಿಮ್ಮ ಅವತಾರವನ್ನು ವಿನ್ಯಾಸಗೊಳಿಸಲು ಡಿಜಿಟಲ್ ಬಟ್ಟೆಗಳನ್ನು ಖರೀದಿಸಬಹುದು. ಈ ಡಿಜಿಟಲ್ ಸರಕುಗಳು ಮೆಟಾವರ್ಸ್‌ನಲ್ಲಿ ನಿಮ್ಮನ್ನು ವ್ಯಕ್ತಪಡಿಸಲು ಪ್ರಮುಖ ಮಾರ್ಗವಾಗಿದೆ ಎಂದಿದ್ದಾರೆ. ಈ ಡಿಸೈನರ್ ಬಟ್ಟೆ ಸ್ಟೋರ್ ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೆ ಲಭ್ಯತೆಯ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ ಮುಂದಿನ ವಾರ ಯುನೈಟೆಡ್ ಸ್ಟೇಟ್ಸ್, ಕೆನಡಾ, ಥೈಲ್ಯಾಂಡ್ ಮತ್ತು ಮೆಕ್ಸಿಕೊದಲ್ಲಿ ಪ್ರಾರಂಭವಾಗಲಿದೆ.

ಇದಲ್ಲದೆ ಮೆಟಾ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ತ್ರಿಡಿ ಅವತಾರಗಳನ್ನು ಪರಿಚಯಿಸಿದೆ. ಇದರಿಂದ ನೀವು ಕೂಡ ಇನ್ಮುಂದೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್‌ನಲ್ಲಿ ತ್ರಿಡಿ ಅವತಾರಗಳನ್ನು ಕ್ರಿಯೆಟ್ ಮಾಡಬಹುದಾಗಿದೆ. ಈ ತ್ರಿಡಿ ಅವತಾರಗಳನ್ನು ನೀವು ಫೇಸ್‌ಬುಕ್, ಮೆಸೆಂಜರ್ ಅಪ್ಲಿಕೇಶನ್, ಇನ್‌ಸ್ಟಾಗ್ರಾಮ್ ಸ್ಟೋರೀಸ್ ಮತ್ತು ಡಿಎಂಗಳಲ್ಲಿ ಗಳು ಮತ್ತು ಮೆಟಾ ಕ್ವೆಸ್ಟ್ ಹೆಡ್‌ಸೆಟ್‌ನಲ್ಲಿ ಬಳಸಬಹುದಾಗಿದೆ.

ಮೆಟಾ 3D ಅವತಾರ್ ಫೀಚರ್ಸ್ ನಿಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಅನುಭವ ನೀಡಲಿದೆ. ಇನ್ನು ಈ ತ್ರಿಡಿ ಅವತಾರ್‌ನಲ್ಲಿ ಕಾಕ್ಲಿಯರ್ ಇಂಪ್ಲಾಂಟ್‌ಗಳು ಮತ್ತು ಕಿವಿಯ ಮೇಲಿನ ಶ್ರವಣ ಡಿವೈಸ್‌ಗಳನ್ನು ಸೇರಿಸುವ ಆಯ್ಕೆಗಳನ್ನು ಕೂಡ ನೀಡಿದೆ. ಇದು ವೀಲ್‌ಚೇರ್‌ಗಳನ್ನು ಸಹ ಒಳಗೊಂಡಿದ್ದು, ಫೇಸ್‌ಬುಕ್ ಸ್ಟಿಕ್ಕರ್‌ಗಳಲ್ಲಿ ಕಾಣಿಸುತ್ತದೆ. ನಿಮ್ಮ ತ್ರಿಡಿ ಅವತಾರಗಳನ್ನು ಹೆಚ್ಚು ಅಧಿಕೃತಗೊಳಿಸಲು ಕೆಲವು ಮುಖದ ಆಕಾರಗಳು ಮತ್ತು ಸ್ಕಿನ್ ಶೇಡರ್‌ಗಳಿಗೆ ಮೆಟಾ ಸೂಕ್ಷ್ಮ ಸೆಟ್ಟಿಂಗ್ಸ್‌ಗಳನ್ನು ಕೂಡ ನೀಡಿದೆ.

ಫೇಸ್‌ಬುಕ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ತ್ರಿಡಿ ಅವತಾರ್ ಬಳಸುವುದು ಹೇಗೆ?
* ಮೊದಲಿಗೆ ನೀವು ನಿಮ್ಮ ಫೋನ್‌ನಲ್ಲಿ ಫೇಸ್‌ಬುಕ್ ಅಪ್ಲಿಕೇಶನ್ ತೆರೆಯಿರಿ ಮತ್ತು ಮೆನುಗೆ ಹೋಗಿ.
* ನಂತರ ಅವತಾರ್‌ಗಳಿಗೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ನಿಮ್ಮ ಅವತಾರ್ ಎಡಿಟ್ ಮಾಡಿ" ಆಯ್ಕೆಯ ಮೇಲೆ ಟ್ಯಾಪ್ ಮಾಡಿ
* ಇದರಲ್ಲಿ, ಉಡುಗೆಗಳು, ಮುಖದ ಆಕಾರಗಳು, ಕಣ್ಣಿನ ಆಕಾರಗಳು, ಕೇಶವಿನ್ಯಾಸ ಇತ್ಯಾದಿಗಳನ್ನು ಒಳಗೊಂಡಂತೆ ನಿಮ್ಮ ಅವತಾರ್ ಅನ್ನು ಕಸ್ಟಮೈಸ್ ಮಾಡಲು ಫೇಸ್‌ಬುಕ್ ನಿಮಗೆ ಅನೇಕ ಆಯ್ಕೆಗಳನ್ನು ನೀಡುತ್ತದೆ.
* ಇದರಲ್ಲಿ ನಿಮ್ಮ ಅವತಾರವನ್ನು ನಿಮ್ಮ ಇಚ್ಛೆಯಂತೆ ಕಸ್ಟಮೈಸ್ ಮಾಡಿ ಮತ್ತು ಅದನ್ನು ಕ್ರಿಯೆಟ್ ಮಾಡಿ.
* ನಂತರ ನೀವು ಕ್ರಿಯೆಟ್ ಮಾಡಿರುವ ಹೊಸ 3D ಅವತಾರ್ ಅನ್ನು ಶೇರ್ ಮಾಡಬಹುದಾಗಿದೆ.
* ಇದಕ್ಕಾಗಿ ನೀವು ಅವತಾರಗಳಿಗೆ ಹೋಗಿ
* ನಂತರ ಕೆಳಗಿರುವ "Share to Feed ಆಯ್ಕೆಯನ್ನು ಟ್ಯಾಪ್ ಮಾಡಿ
* ಇದೀಗ ನಿಮ್ಮ ಅವತಾರವನ್ನು ನಿಮ್ಮ ಫೀಡ್‌ನಲ್ಲಿ ಶೇರ್ ಮಾಡಬಹುದು. ನೀವು ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡುವ ಮೂಲಕ ಮತ್ತು "ಅವತಾರ್" ಅನ್ನು ಟ್ಯಾಪ್ ಮಾಡುವ ಮೂಲಕ ತ್ರಿಡಿ ಅವತಾರ್ ಅನ್ನು ಶೇರ್ ಮಾಡಬಹುದಾಗಿದೆ.

ಫೇಸ್‌ಬುಕ್ ಮೆಸೆಂಜರ್‌ನಲ್ಲಿ ತ್ರೀಡಿ ಅವತಾರ್‌ಗಳನ್ನು ಶೇರ್ ಮಾಡುವುದು ಹೇಗೆ?
ಫೇಸ್‌ಬುಕ್ ಮೆಸೆಂಜರ್ ಚಾಟ್‌ಗಳಲ್ಲಿ ಕೂಡ ನೀವು ನಿಮ್ಮ ಅವತಾರ್‌ನ ಸ್ಟಿಕ್ಕರ್‌ಗಳನ್ನು ಕ್ರಿಯೆಟ್ ಮಾಡಬಹುದು. ಬೇರೆಯವರಿಗೆ ಶೇರ್ ಮಾಡಬಹುದು ಅದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.
* ಮೊದಲಿಗೆ ನೀವು ಮೆಸೆಂಜರ್ ಅಪ್ಲಿಕೇಶನ್ ತೆರೆಯಿರಿ ಮತ್ತು ಚಾಟ್ ಮೇಲೆ ಟ್ಯಾಪ್ ಮಾಡಿ
* ನೀವು ನಿಮ್ಮ ಅವತಾರ್ ಸ್ಟಿಕ್ಕರ್ ಪ್ಯಾಕ್ ವೀಕ್ಷಿಸಲು ಸ್ಟಿಕ್ಕರ್‌ಗಳ ಮೇಲೆ ಟ್ಯಾಪ್ ಮಾಡಿ
* ನಂತರ ನೀವು ಕಳುಹಿಸಲು ಬಯಸುವ ಸ್ಟಿಕ್ಕರ್ ಅನ್ನು ಆರಿಸಿ ಮತ್ತು ಸೆಂಡ್ ಮಾಡಲು ಅದರ ಮೇಲೆ ಟ್ಯಾಪ್ ಮಾಡಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086