ಗೂಗಲ್ ಆಂಡ್ರಾಯ್ಡ್ ‘ಗೊ’ ಆವೃತ್ತಿಯ 2 ಸಾವಿರದ ಸ್ಮಾರ್ಟ್‌ಫೋನ್!..ಬೆಚ್ಚಿಬೀಳಲಿವೆ ಆಪಲ್, ಶಿಯೋಮಿ!!

|

ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಒದಗಿಸಲು ಸಹಕಾರಿಯಾಗುವ ಆಂಡ್ರಾಯ್ಡ್ ಒರಿಯೊ 'ಗೊ' ಆವೃತ್ತಿ ಭಾರತದ ಮಾರುಕಟ್ಟೆಗೆ ಬರುತ್ತಿದ್ದು, ಈ ಬಗ್ಗೆ ದೇಶದ ಮೊಬೈಲ್ ಕಂಪೆನಿಗಲಾದ ಮೈಕ್ರೋಮ್ಯಾಕ್ಸ್, ಇಂಟೆಕ್ಸ್, ಲಾವಾ ಹಾಗೂ ಕಾರ್ಬನ್ ಸೇರಿ ಇತರ ಸಂಸ್ಥೆಗಳೊಂದಿಗೆ ಗೂಗಲ್ ಒಪ್ಪಂದ ಮಾಡಿಕೊಂಡಿದೆ.!!

ನೆನ್ನೆಯಷ್ಟೆ ಮೈಕ್ರೋಮ್ಯಾಕ್ಸ್ ಇದೇ ತಿಂಗಳು 2000ಕ್ಕೆ ಅತ್ಯಾಧುನಿಕ ಆಯ್ಕೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿ ಕೂಡ ವೈರೆಲ್ ಆಗಿರುವುದರಿಂದ ಭಾರತದ ಕೋಟ್ಯಂತರ ಜನರೊಂದಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿರುವ ಆಂಡ್ರಾಯ್ಡ್ ಒರಿಯೊ 'ಗೊ' ಆವೃತ್ತಿ ಬಗ್ಗೆ ಎಲ್ಲರಿಗೂ ಕುತೋಹಲ ಏರ್ಪಟ್ಟಿದೆ.!!

ಗೂಗಲ್ ಆಂಡ್ರಾಯ್ಡ್ ‘ಗೊ’ ಆವೃತ್ತಿಯ 2 ಸಾವಿರದ ಸ್ಮಾರ್ಟ್‌ಫೋನ್!!

ಇನ್ನು ಆಂಡ್ರಾಯ್ಡ್ ಒರಿಯೊ ಗೊ ಆಪರೇಟಿಂಗ್ ಸಿಸ್ಟಂ ಅನ್ನು ಭಿನ್ನ ವ್ಯವಸ್ಥೆಯನ್ನು ಮಾಡಲಾಗಿದ್ದು, ಆಂಡ್ರಾಯ್ಡ್ ಗೊ ಆವೃತ್ತಿಯಲ್ಲಿ ಹೊಸ ಅಪ್ಲಿಕೇಷನ್‍ಗಳು ಇದಕ್ಕಾಗಿಯೇ ವಿಶೇಷವಾಗಿ ರೂಪುಗೊಂಡಿವೆ. ಹಾಗಾದರೆ, ಆಂಡ್ರಾಯ್ಡ್ ಗೊ ಆವೃತ್ತಿಯ ವಿಶೇಷತೆಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಆಂಡ್ರಾಯ್ಡ್ ಗೊ ಕಾರ್ಯನಿರ್ವಹಣೆ!!

ಆಂಡ್ರಾಯ್ಡ್ ಗೊ ಕಾರ್ಯನಿರ್ವಹಣೆ!!

ಆಂಡ್ರಾಯ್ಡ್ ಗೊ ಆವೃತ್ತಿಯನ್ನು 510 ಎಂಬಿ-1ಜಿಬಿ RAM ಹಾಗೂ 8ಜಿಬಿ ಮೆಮೊರಿ ಹೊಂದಿರುವ ಮೊಬೈಲ್‌ನಲ್ಲಿ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿ ಪಡಿಸಲಾಗಿದೆ. ಈಗಾಗಲೇ ಮೀಡಿಯಾಟೆಕ್ ಹಾಗೂ ಕ್ವಾಲ್ಕಂ ಚಿಪ್ ಸಂಸ್ಥೆಗಳು ಪ್ರೊಸೆಸರ್ ಪೂರೈಕೆ ಮಾಡುತ್ತಿವೆ.!!

ಸಂಗ್ರಹಕ್ಕೆ ಹೆಚ್ಚು ಅವಕಾಶ!!

ಸಂಗ್ರಹಕ್ಕೆ ಹೆಚ್ಚು ಅವಕಾಶ!!

ಆಂಡ್ರಾಯ್ಡ್ ಗೊ ಆವೃತ್ತಿ ಹಾಗೂ ಅದರೊಂದಿಗೆ ನೀಡಲಾಗುವ ಅಪ್ಲಿಕೇಷನ್‍ಗಳು ಕಡಿಮೆ ಮೆಮೊರಿಯಲ್ಲಿ ರೂಪುಗೊಂಡಿರುತ್ತವೆ. ಜಿಮೇಲ್, ಅಸಿಸ್ಟಂಟ್, ಮ್ಯಾಪ್ಸ್, ಪ್ಲೇಸ್ಟೋರ್ನಂತಹ ಅಗತ್ಯ ಆಪ್‌ಗಳು ಮಾತ್ರ ಮುಂಚಿತವಾಗಿಯೇ ಅಳವಡಿಸಿರುವುದರಿಂದ ಇನ್ನಾವುದೇ ಆವೃತ್ತಿ ಆಪರೇಟಿಂಗ್ ಸಿಸ್ಟಂಗಿಂತ ಅತಿ ಕಡಿಮೆ ಸ್ಥಳವನ್ನು ಇದು ಬಳಸುತ್ತದೆ.!!

ಜಿಬೋರ್ಡ್ ಸೇವೆ ಲಭ್ಯ!!

ಜಿಬೋರ್ಡ್ ಸೇವೆ ಲಭ್ಯ!!

ಗೂಗಲ್‌ನ ಜಿಬೋರ್ಡ್ ಕಿಬೋರ್ಡ್‌ನಲ್ಲಿ 220 ಭಾಷೆಗಳ ಆಯ್ಕೆಯನ್ನು ನೀಡಲಾಗಿದೆ. ಆಂಡ್ರಾಯ್ಡ್ ಗೊ ಆವೃತ್ತಿಯಲ್ಲಿನ ಆಟೋ ಕರೆಕ್ಟ್, ಧ್ವನಿ ಮೂಲಕ ಟೈಪಿಸುವುದು ಹಾಗೂ ಇಂಗ್ಲಿಷ್ ಅಕ್ಷರಗಳ ಮೂಲಕ ಇತರೆ ಭಾಷೆಯಲ್ಲಿ ಟೈಪಿಸುವ ಆಯ್ಕೆಗಳನ್ನು ಹೊಂದಿದೆ. ಇಷ್ಟು ಮಾತ್ರವಲ್ಲದೆ ಎಮೋಜಿ, ಜಿಫ್‍ಗಳನ್ನೂ ಹೊಂದಿರುವುದು ಇದರ ವಿಶೇಷವಾಗಿದೆ.!!

How to save WhatsApp Status other than taking screenshots!! Kannada
ಗೂಗಲ್ ಅಸಿಸ್ಟಂಟ್ ಗೊ

ಗೂಗಲ್ ಅಸಿಸ್ಟಂಟ್ ಗೊ

1ಜಿಬಿ ಅಥವಾ ಅದಕ್ಕಿಂತಲೂ ಕಡಿಮೆ ಮೆಮೊರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಇದೇ ಮೊದಲ ಬಾರಿಗೆ ಗೂಗಲ್ ಅಸಿಸ್ಟಂಟ್ ಸಿಗುತ್ತಿದೆ. ಸದಾ ಬಳಕೆದಾರರ ಸಹಾಯಕ್ಕೆ ಸಿದ್ಧವಿರುವ ಈ ಆಪ್‍ ಕೇಳಿದ ಪ್ರಶ್ನೆಗೆ ಉತ್ತರಿಸುವ ಜತೆಗೆ ಹೇಳುವುದನ್ನು ವೇಗವಾಗಿ ಮಾಡಬಲ್ಲದು. ಇಂತಹ ಸೇವೆ 2000ಕ್ಕೆ ಎಂದರೆ ಶಾಕ್ ಆಗದೆ ಇರುವುದೇ?

ಫೈಲ್ಸ್ ಗೊ ಆಯ್ಕೆ!!

ಫೈಲ್ಸ್ ಗೊ ಆಯ್ಕೆ!!

ಟೌನ್‌ಲೋಡ್ ಮಾಡಿದ ಅಥವಾ ನೇರವಾಗಿ ಮೊಬೈಲ್‌ಗೆ ಉಳಿಸಿಕೊಂಡ ಫೈಲ್‌ಗಳನ್ನು ಸುಲಭವಾಗಿ ಹುಡುಕುವ ಆಯ್ಕೆಯನ್ನು ಆಂಡ್ರಾಯ್ಡ್ ಗೊ ಆವೃತ್ತಿ ಹೊಂದಿದೆ. ಬಹಳ ಸುಲಭವಾಗಿ ಅನಗತ್ಯ ಫೈಲ್‌ಗಳನ್ನು ಡಿಲೀಟ್ ಮಾಡಲು ಸಹಾಯವಾಗುವಂತೆ ಫೈಲ್ಸ್ ಗೊ ಒಳಗೆ ಬೇರೆ ಬೇರೆ ಕಡತಗಳು ರೂಪುಗೊಳ್ಳುತ್ತವೆ.!!

ಗೂಗಲ್ ಪ್ಲೇ ಪ್ರೊಟೆಕ್ಟ್!!

ಗೂಗಲ್ ಪ್ಲೇ ಪ್ರೊಟೆಕ್ಟ್!!

ಆಪಲ್ ಸ್ಟೋರ್‌ನಷ್ಟೆ ಅತ್ಯುತ್ತಮ ಆಪ್ ಸ್ಟೋರ್‌ ಅನ್ನು ರಚಿಸುವ ಭಾರ ಗೂಗಲ್‌ ಮೇಲಿದೆ. ಆಪ್‍ ಮತ್ತು ಇತರೆ ಮಾಹಿತಿ ಸಂಗ್ರಹವನ್ನು 24/7 ಸುರಕ್ಷಿತವಾಗಿಡಲು ಸಹಕಾರಿಯಾಗ ವ್ಯವಸ್ಥೆ ಆಂಡ್ರಾಯ್ಡ್ ಗೂ ಮಾದರಿಯಲ್ಲಿ ಇರಲಿದೆ.!! ಹಾಗಾಗಿ, ಇನ್ನು ಆಂಡ್ರಾಯ್ಡ್ ಬಳಕೆದಾರರಿಗೆ ರಕ್ಷಣೆಯೂ ಸಹ ಕಡಿಮೆ ಬೆಲೆಯಲ್ಲಿ.!!

Best Mobiles in India

English summary
Micromax will be one of the first India-based smartphone manufacturers to release an Android Go-based phone. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X