40 ರ ಹರೆಯಕ್ಕೆ ಕಾಲಿಟ್ಟ ಹಳೆ ಹುಲಿ ಮೈಕ್ರೋಸಾಫ್ಟ್ ಕರಾಮತ್ತೇನು?

By Shwetha
|

ಮೈಕ್ರೋಸಾಫ್ಟ್ 40 ರ ಹರೆಯಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಹೊಸತನದ ಮೆರುಗನ್ನು ತನ್ನಲ್ಲಿ ಪೋಷಿಸುತ್ತಾ ಟಾಪ್ ಕಂಪೆನಿಯೆಂಬ ಹೆಗ್ಗಳಿಕೆಯನ್ನು ಈ ಟೆಕ್ ಕಂಪೆನಿ ಪಡೆದುಕೊಂಡಿದೆ. ಮಾರುಕಟ್ಟೆ ಮೌಲ್ಯವನ್ನು ಅತ್ಯುನ್ನತವಾಗಿ ಗಳಿಸಿರುವ ಈ ಟೆಕ್ ದಿಗ್ಗಜ, ವಿಶ್ವದಾದ್ಯಂತ ಬಿಲಿಯಗಟ್ಟಲೆ ಜನರು ಇದರ ಉತ್ಪನ್ನಗಳನ್ನು ಬಳಸುವಂತೆ ಮಾಡಿದೆ.

[ಓದಿರಿ: ಅತಿ ಸರಳ ಹೆಚ್ಚು ಪರಿಣಾಮಕಾರಿ ಎಕ್ಸೆಲ್ ಕುರಿತು 20 ಸಲಹೆಗಳು]

ಮೈಕ್ರೋಸಾಫ್ಟ್‌ಗೆ ಹೊಸ ಭವಿಷ್ಯ ಬರೆದದ್ದು ವಿಂಡೋಸ್ ಎಂಬುದನ್ನು ಇಲ್ಲಿ ಮರೆಯುವಂತಿಲ್ಲ, ಕಂಪ್ಯೂಟರ್ ಕ್ಷೇತ್ರದಲ್ಲಿ ನಡೆಯುತ್ತಿದ್ದ ಹಾರ್ಡ್‌ವೇರ್ ಆಡಳಿತವನ್ನು ಮಟ್ಟ ಹಾಕಿದ ಸಾಫ್ಟ್‌ವೇರ್ ವಿಂಡೋಸ್. 1985 ರಲ್ಲಿ ಜನನವಾದ ವಿಂಡೋಸ್‌ನ ಇಲ್ಲಿತವರೆಗಿನ ಅತಿವಿಶಿಷ್ಟ ಆಸಕ್ತಿಕರ ಬೆಳವಣಿಗೆಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಪಟ್ಟಿ ಮಾಡುತ್ತಿದ್ದೇವೆ.

ವಿಂಡೋಸ್ 1.0

ವಿಂಡೋಸ್ 1.0

ವಿಂಡೋಸ್‌ನ ಪ್ರಥಮ ಆವೃತ್ತಿಯಾದ ವಿಂಡೋಸ್ 1.0 ಎಮ್‌ಎಸ್ - ಡಾಸ್ ಮೇಲ್ಭಾಗದ ಸರಳ ಹೊದಿಕೆಯಾಗಿದೆ. ಅಕ್ಷರ ಆಧಾರಿತ ಓಎಸ್ ಆ ಕಾಲದಲ್ಲಿ ಹೆಚ್ಚಿನ ಪಿಸಿಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು.

ವಿಂಡೋಸ್ 2.0

ವಿಂಡೋಸ್ 2.0

ಮೈಕ್ರೋಸಾಫ್ಟ್ ವರ್ಡ್ ಮತ್ತು ಎಕ್ಸೆಲ್‌ ಅನ್ನು ಚಾಲನೆ ಮಾಡಿದ ಪ್ರಥಮ ಆಪರೇಟಿಂಗ್ ಸಿಸ್ಟಮ್ ಇದಾಗಿದೆ. ಆಪಲ್‌ನ ಮ್ಯಾಸಿಂತೋಷ್ ಮತ್ತು ಲೀಸಾದ ಕೆಲವನ್ನು ಇದು ಕದ್ದಿದೆ ಎಂಬ ಆರೋಪಕ್ಕೆ ಮೈಕ್ರೋಸಾಫ್ಟ್ ಒಳಗಾಗಿತ್ತು. ಆಪಲ್ ಈ ಕೇಸ್‌ನಲ್ಲಿ ಯಶಸ್ವಿಯಾಗಿಲ್ಲ.

ವಿಂಡೋಸ್ 3.0

ವಿಂಡೋಸ್ 3.0

ವಿಂಡೋಸ್ 3.0 ಪ್ರೊಗ್ರಾಮ್ ಮ್ಯಾನೇಜರ್‌ನಂತಹ ಗ್ರಾಫಿಕಲ್ ಐಕಾನ್‌ಗಳನ್ನು ಮರೆಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ವಿಂಡೋಸ್ 3.1

ವಿಂಡೋಸ್ 3.1

ಐಬಿಎಮ್ ಸ್ಪರ್ಧಿ ಪಿಸಿಗಳಿಗೆ ವಿಂಡೋಸ್ 1990 ಕ್ಕೂ ಹಿಂದೆಯೇ ವಿನ್ಯಾಸಪಡಿಸಿದ ವಿಂಡೋಸ್ ಆವೃತ್ತಿ ಇದಾಗಿತ್ತು.

ವಿಂಡೋಸ್ 95

ವಿಂಡೋಸ್ 95

ಡೆಸ್ಕ್‌ಟಾಪ್‌ಗೆ ಪ್ರಸ್ತುತಪಡಿಸಿದ ವಿಂಡೋಸ್ 95 ನಲ್ಲಿ ಇಂಟರ್ನೆಟ್ ಎಕ್ಸ್‌ಪ್ಲೋರರ್, ರೀಸೈಕಲ್ ಬಿನ್, ಮತ್ತು ಸ್ಟಾರ್ಟ್ ಬಟನ್ ಅನ್ನು ನೋಡಬಹುದಾಗಿದೆ.

ವಿಂಡೋಸ್ 95 ಅತಿ ದೊಡ್ಡ ಒಪ್ಪಂದ

ವಿಂಡೋಸ್ 95 ಅತಿ ದೊಡ್ಡ ಒಪ್ಪಂದ

ವಿಂಡೋಸ್ 95 ಆ ಕಾಲದಲ್ಲಿಯೇ ಅತಿದೊಡ್ಡ ಸುದ್ದಿಯಾಗಿತ್ತು. ಇದರ ಲಾಂಚ್ ಈವೆಂಟ್‌ನಲ್ಲಿ ಜೇ ಲೇನೊ ಬಿಲ್ ಗೇಟ್ಸ್ ಜೊತೆಗೆ ಜತೆಗೂಡಿದ್ದರು. ಇದನ್ನು ಖರೀದಿಸಲು ಜನಸಮೂಹ ಸಾಲುಗಟ್ಟಿ ನಿಂತಿತ್ತು.

ವಿಂಡೋಸ್ 98

ವಿಂಡೋಸ್ 98

ವಿಂಡೋಸ್ 95 ನಂತೆಯೇ ತೋರುವ ಮತ್ತು ಹಾಗೆಯೇ ಇದು ಕಾರ್ಯನಿರ್ವಹಿಸುತ್ತಿತ್ತು. ಆದರೆ ಹೆಚ್ಚು ಸುದೃಢ ಮತ್ತು ಕೆಲವೊಂದು ಫೀಚರ್‌ಗಳನ್ನು ಒಳಗೊಂಡಿತ್ತು.

ವಿಂಡೋಸ್ ಎಮ್‌ಇ (

ವಿಂಡೋಸ್ ಎಮ್‌ಇ ("ಮಿಲೇನಿಯಮ್ ಎಡಿಶನ್")

ಕೆಲವೊಂದು ಗ್ರಾಹಕ ಫೀಚರ್‌ಗಳನ್ನೊಳಗೊಂಡ ಮೂಲ ವಿಂಡೋಸ್ 98 ಇದಾಗಿದೆ. ಇದು ಅಷ್ಟೊಂದು ಚೆನ್ನಾಗಿ ವ್ಯಾಪಾರವನ್ನು ಕಂಡಿಲ್ಲ. ಹೆಚ್ಚಿನ ಜನರು ಮುಂದೆ ಬರಲಿದೆ ಎಂಬ ಎಕ್ಸ್‌ಪಿಗಾಗಿ ಕಾದು ಕುಳಿತಿದ್ದರು.

ಪಾಕೆಟ್ ಪಿಸಿಗಾಗಿ ವಿಂಡೋಸ್

ಪಾಕೆಟ್ ಪಿಸಿಗಾಗಿ ವಿಂಡೋಸ್

ತನ್ನ ಪ್ರಥಮ ಆವೃತ್ತಿಗಳನ್ನು ಮೊಬೈಲ್ ಡಿವೈಸ್‌ಗೆ ಪ್ರಸ್ತುಪಡಿಸುವ ಕಾರ್ಯವನ್ನು ವಿಂಡೋಸ್ ಇದೇ ಸಮಯದಲ್ಲಿ ಆರಂಭಿಸಿತು.

ವಿಂಡೋಸ್ ಎಕ್ಸ್‌ಪಿ

ವಿಂಡೋಸ್ ಎಕ್ಸ್‌ಪಿ

2001 ರಲ್ಲಿ ಎಕ್ಸ್‌ಪಿಯನ್ನು ನಾವು ಕಂಡುಕೊಂಡೆವು. ವಿಂಡೋಸ್ 95 ರ ನಂತರ ಕಂಡುಬಂದ ಅತಿದೊಡ್ಡ ಅಪ್‌ಡೇಟ್ ಇದಾಗಿದೆ.

Best Mobiles in India

English summary
Microsoft has turned 40-years-old today, making it among the oldest tech companies in a time when startups are all the rage. One of the biggest brands by market value, Microsoft makes products that are used by billions of people worldwide.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X