ರೀಲ್‌ ಅಲ್ಲಾ, ರಿಯಲ್‌ ಸಂಶೋಧನೆಗಳು..!

Posted By:

ಕಲ್ಪನೆಗೆ ಮಿತಿಯಿಲ್ಲ. ಅವಿಷ್ಕಾರಕ್ಕೆ ಕೊನೆಯಿಲ್ಲ ಎಂಬಂತೆ ವಿಜ್ಞಾನಿಗಳು ಹೊಸ ಹೊಸ ಸಂಶೋಧನೆ ನಡೆಸುತ್ತಿದ್ದಾರೆ.ಆದರೆ ಕೆಲವೊಂದು ಸಂಶೋಧನೆಗಳು ನಾವು ಊಹಿಸಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಕೆಲವು ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳಿವೆ. ಮೊಬೈಲ್‌ ಚಾರ್ಜ್‌ ಮಾಡಲು ಇನ್ನು ವಿದ್ಯುತ್‌ ಬೇಡವಂತೆ.! ಮನೆಗಳಿಗೆ ವೈರ್‌ ಇಲ್ಲದೆಯೇ ವಿದ್ಯುತ್‌ ಬರುತ್ತದೆಯಂತೆ.! ಈ ರೀತಿ ಆಗುತ್ತಾ ಎಂದು ನೀವು ಕೇಳಬೇಡಿ.ನಾವು ಸಂಶೋಧನೆ ಮಾಡಿ ಸಕ್ಸಸ್‌ ಆಗುತ್ತೇವೆ ಎಂದು ಹೇಳುತ್ತಿದ್ದಾರೆ ಕಂಪೆನಿಗಳು. ಹೀಗಾಗಿ ಇಲ್ಲಿ ಹೊಸ ಸಂಶೋಧನೆಗಳು ಮತ್ತು ಈಗಾಗಲೇ ಇರುವ ಸಂಶೋಧನೆಗೆ ಸಂಬಂಧಿಸಿದ ಕೆಲವುಸ್ವಾರಸ್ಯಕರ ವಿಷಯಗಳ ಬಗ್ಗೆ ಮಾಹಿತಿ ಮತ್ತು ವೀಡಿಯೋಗಳಿವೆ. ಒಂದೊಂದೆ ಪುಟಗಳನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ತಲೆಯಿದ್ದವರಿಗೆ ಮಾತ್ರ ಈ ಸಾಧನಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ರೀಲ್‌ ಅಲ್ಲಾ ರಿಯಲ್‌ ಸಂಶೋಧನೆಗಳು!

ಮೆದುಳು ಹೇಗೆ ಆಲೋಚನೆ ಮಾಡುತ್ತದೋ ಅದೇ ರೀತಿಯಾಗಿ ನಮ್ಮ ಕೈಗಳು ಕೆಲಸ ಮಾಡಿದ್ರೆ .! ಇದು ಈಗ ಸಾಧ್ಯ ಸಂಶೋಧಕರು ಹೊಸ ರೊಬೊಟ್‌ ಕಂಡು ಹಿಡಿದಿದ್ದಾರೆ. ಈ ವೀಡಿಯೋದಲ್ಲಿ ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡಬಹುದು.

ರೀಲ್‌ ಅಲ್ಲಾ ರಿಯಲ್‌ ಸಂಶೋಧನೆಗಳು!

ಸ್ಪೇಸ್ ಷಟಲ್ ನಲ್ಲಿರುವ ಥರ್ಮಲ್‌ ಟೈಲ್‌ ತುಂಬ ಬಿಸಿ ಇರುತ್ತದೆ. ಆದರೆ ಅದನ್ನು ಹೊರ ತೆಗದು ಕೆಲ ಸೆಕೆಂಡ್‌ನಲ್ಲಿ ಕೈಯಲ್ಲೇ ಮುಟ್ಟ ಬಹುದು. ಹೌದಾ? ಈ ವೀಡಿಯೋ ನೋಡಿ ನಿಮಗೆ ತಿಳಿಯುತ್ತೆ.

ರೀಲ್‌ ಅಲ್ಲಾ ರಿಯಲ್‌ ಸಂಶೋಧನೆಗಳು!

ಹಡಗು ಸಾಮಾನ್ಯವಾಗಿ ನೀರಿನ ಮೇಲೆ ಚಲಿಸುತ್ತದೆ. ಇದು ನಿಮಗೆಲ್ಲ ತಿಳಿದಿದೆ. ಆದರೆ ಅಮೆರಿಕದಲ್ಲಿ ಒಂದು ಹಡಗು ಇದೆ ಇದು ನೀರಿನ ಮೇಲೆ ನೇರವಾಗಿ, ಅರ್ಧ ನೀರಿನ ಒಳಗೆ ಹೇಗೆ ಬೇಕಾದ್ರೂ ಚಲಿಸುತ್ತದೆ. ಆಶ್ವರ್ಯವಾಯಿತೆ ಈ ಮಾಹಿತಿ ಓದಿ. ಹಾಗಾದ್ರೆ ಈ ವೀಡಿಯೋ ನೋಡಿ.

ರೀಲ್‌ ಅಲ್ಲಾ ರಿಯಲ್‌ ಸಂಶೋಧನೆಗಳು!

ವಿದ್ಯುತ್‌ನಿಂದ ನಾವು ನಮ್ಮಲ್ಲಿರುವ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಚಾರ್ಜ್‌ ಮಾಡುತ್ತೇವೆ. ಆದರೆ ಇನ್ನು ಮುಂದೆ ಚಾರ್ಜ್‌ ಮಾಡಲು ವಿದ್ಯುತ್‌ ಬೇಡವಂತೆ.! UBeam ಎನ್ನುವ ಕಂಪೆನಿಯೊಂದು ವಾತಾವರಣದಲ್ಲಿರುವ ಆಲ್ಟ್ರಾ ಸೌಂಡ್‌ನ್ನು ಬಳಸಿ ಚಾರ್ಜ್‌ ಮಾಡುವ ಚಾರ್ಜ್‌ರನ್ನು ಕಂಡು ಹಿಡಿಯಲು ಸಂಶೋಧನೆ ನಡೆಸುತ್ತಿದ್ದಾರೆ.

ರೀಲ್‌ ಅಲ್ಲಾ ರಿಯಲ್‌ ಸಂಶೋಧನೆಗಳು!

ಕುರುಡರು ಬ್ರೈಲ್‌ ಲಿಪಿಯನ್ನು ಬಳಸಿ ಓದುವುದನ್ನು ನೀವು ಕೇಳಿರುತ್ತೀರಿ.ಆದರೆ ಇಲ್ಲಿ ಬ್ರೈನ್‌ ಪೋರ್ಟ್ ಎನ್ನುವ ಒಂದು ಕಂಪೆನಿ ಒಂದು ಕುರುಡರಿಗಾಗಿ ಒಂದು ವಿಶೇಷ ಕನ್ನಡಕ ಅಭಿವೃದ್ಧಿ ಪಡಿಸಿದ್ದಾರೆ. ಈ ಕನ್ನಡಕವನ್ನು ಧರಿಸಿದ್ರೆ ಅವರು ಯಾರ ಸಹಾವಿಲ್ಲದೆ ನಡೆಯಬಹುದು,ಆಟ ಆಡಬಹುದು. ಈ ವಿಶೇಷ ಕನ್ನಡಕ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಈ ವೀಡಿಯೋ ನೋಡಿ

ರೀಲ್‌ ಅಲ್ಲಾ ರಿಯಲ್‌ ಸಂಶೋಧನೆಗಳು!

ನಮ್ಮ ದೇಹದ ಸಣ್ಣ ಭಾಗವನ್ನು ಪ್ರಿಂಟ್‌ ತೆಗೆಯಬಹುದು. ಬಯೋ ಇಂಜಿನಿಯರ್‌ಗಳು ಇದಕ್ಕಾಗಿ 3ಡಿ ಪ್ರಿಂಟರ್‌ನ್ನು ಅಭಿವೃದ್ಧಿ ಪಡಿಸಿದ್ದಾರೆ.

ರೀಲ್‌ ಅಲ್ಲಾ ರಿಯಲ್‌ ಸಂಶೋಧನೆಗಳು!

ಇನ್ನು ಮನೆಗಳಿಗೆ ವೈರ್‌ ಇಲ್ಲದೇ ವಿದ್ಯುತ್‌ ಬಂದರೆ ಅಶ್ಚರ್ಯ‌ವಿಲ್ಲ. ಯಾಕೆಂದರೆ ವೈಟ್ರಿಸಿಟಿ( WiTricity) ಎನ್ನುವ ಕಂಪೆನಿಯೊಂದು ವೈರ್‌ ಇಲ್ಲದೇ ವಿದ್ಯುತ್‌ ಕಳುಹಿಸಲೇ ಸಾಧ್ಯವೇ ಎನ್ನುವುದನ್ನು ಸಂಶೋಧನೆ ಮಾಡುತ್ತಿದೆ. ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಈ ಡೆಮೋ ವೀಡಿಯೋ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Click Here For New Concept Upcoming Smartphones Gallery

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot