Subscribe to Gizbot

ಇಂಟರ್ನೆಟ್ ಬಳಕೆಯಲ್ಲಿ ಫೇಸ್‌ಬುಕ್‌ನದ್ದೇ ಮೇಲುಗೈ

Written By:

ಇಂಟರ್ನೆಟ್ ಇಂದಿನ ಆಧುನಿಕ ಯುಗದಲ್ಲಿ ಮೋಡಿ ಮಾಡಿರುವ ಮಾಧ್ಯಮವಾಗಿದೆ. ಜಗತ್ತಿನ ಮೂಲೆಯಲ್ಲಿ ನೀವಿದ್ದರೂ ಕೂಡ ನಿಮ್ಮ ಸ್ನೇಹಿತರಿಗೆ, ಮನೆಯವರಿಗೆ, ಸಂಬಂಧಿಕರಿಗೆ ನಿಮ್ಮನ್ನು ತವರಿತವಾಗಿ ಸಂಪರ್ಕಿಸಬಹುದಾಗಿದೆ. ನೀವು ಬಳಸುತ್ತಿರುವ ಸ್ಮಾರ್ಟ್‌ಫೋನ್‌ನಲ್ಲೂ ಇಂದು ಇಂಟರ್ನೆಟ್ ಬಹುವಾಗಿ ಆಕ್ರಮಿಸಿಕೊಂಡಿದೆ ಎಂದೇ ಹೇಳಬಹುದು.

ಓದಿರಿ: ಚಿತ್ರ ವಿಚಿತ್ರ ಅದ್ಭುತ ಫೋನ್ ಕೇಸ್‌ಗಳು

ಇಂದಿನ ಲೇಖನದಲ್ಲಿ ಇಂಟರ್ನೆಟ್ ಕುರಿತ ಅದ್ಭುತ ವಿಷಯಗಳನ್ನು ನಾವು ಅರಿತುಕೊಳ್ಳಲಿದ್ದು ಬಳಕೆದಾರ ಸ್ನೇಹಿಯಾಗಿ ಇಂಟರ್ನೆಟ್ ಹೇಗೆ ಮಾರ್ಪಾಡುಗೊಂಡಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ನಿಂದ ನೀವು ಅರಿತುಕೊಳ್ಳಲಿರುವಿರಿ.

ಓದಿರಿ: ನಿಮ್ಮ ಫೋನ್‌ನಲ್ಲಿ ವಾಲ್ಯೂಮ್ ಬಟನ್‌ನಿಂದ ಫೋಟೋ ತೆಗೆಯಬಲ್ಲಿರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗಾತ್ರ

ಇಂಟರ್ನೆಟ್‌ನ ಗಾತ್ರ

ಗೂಗಲ್ 2010 ರಲ್ಲಿ ಅನ್ವೇಷಿಸಿದ, ಇಂಟರ್ನೆಟ್‌ನ ಗಾತ್ರ 6 ಮಿಲಿಯನ್ ಟೆರಾಬೈಟ್‌ಗಳಾಗಿತ್ತು.

ವೆಬ್‌ಸೈಟ್‌

ವೆಬ್‌ಸೈಟ್‌

637 ವೆಬ್‌ಸೈಟ್‌ಗಳಿದ್ದು, ಅದರಲ್ಲಿ 250 ಮಿಲಿಯನ್ ಬ್ಲಾಗ್‌ಗಳಿವೆ.

ಡೊಮೇನ್ ಹೆಸರುಗಳು

ಹೊಸ ಡೊಮೇನ್ ಹೆಸರುಗಳು

ಅಂದಾಜು 4,200 ಹೊಸ ಡೊಮೇನ್ ಹೆಸರುಗಳು ಪ್ರತೀ ಗಂಟೆಗೆ ನೋಂದಾವಣೆಯಾಗುತ್ತದೆ,ಅಥವಾ ಪ್ರತೀ ವರ್ಷಕ್ಕೆ 37 ಮಿಲಿಯನ್ ಡೊಮೇನ್ ಹೆಸರುಗಳು ನೋಂದಾವಣೆಯಾಗುತ್ತದೆ.

ಬ್ಲಾಗ್‌

ಬ್ಲಾಗ್‌

ಥಂಬ್ಲರ್.ಕಾಮ್ ಅತ್ಯಧಿಕ ಅಂದರೆ 102 ಮಿಲಿಯನ್ ಬ್ಲಾಗ್‌ಗಳನ್ನು ಹೊಂದಿದೆ.

ಫೇಸ್‌ಬುಕ್

ಫೇಸ್‌ಬುಕ್

ಫೇಸ್‌ಬುಕ್ 1.2 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. 17% ಜನರು ಫೇಸ್‌ಬುಕ್‌ನಲ್ಲೇ ವ್ಯಸ್ತರಾಗಿರುತ್ತಾರೆ.

ಬಳಕೆದಾರರು

ಇಂಟರ್ನೆಟ್ ಬಳಕೆದಾರರು

2.4 ಬಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದಾರೆ. ಅಂದರೆ ಫೇಸ್‌ಬುಕ್‌ನಲ್ಲೇ 50% ಇಂಟರ್ನೆಟ್ ಬಳಕೆದಾರರಿದ್ದಾರೆ ಎಂಬುದು ತಿಳಿಯುತ್ತದೆ.

ಇಮೇಲ್

ಪ್ರಪ್ರಥಮ ಇಮೇಲ್

ಯುಎಸ್ ಪ್ರೊಗ್ರಾಮರ್ ಆಗಿರುವ ರಾಯ್ ಥಾಮಿಲ್‌ಸನ್ 1971 ರಲ್ಲಿ ಪ್ರಪ್ರಥಮ ಇಮೇಲ್ ಅನ್ನು ಕಳುಹಿಸಿದರು.

ಇಮೇಲ್‌

200 ಬಿಲಿಯನ್ ಇಮೇಲ್‌

250 ಬಿಲಿಯನ್ ಇಮೇಲ್‌ಗಳನ್ನು ಪ್ರತೀ ದಿನ ಕಳುಹಿಸಲಾಗುತ್ತದೆ. ಅದರಲ್ಲಿ 81% ಇಮೇಲ್‌ಗಳನ್ನು ಸ್ಪ್ಯಾಮ್‌ಗಳಾಗಿವೆ. ಅಂದರೆ ಪ್ರತೀ ದಿನ 200 ಬಿಲಿಯನ್ ಆಗಿವೆ.

ಟ್ವಿಟ್ಟರ್

ಟ್ವಿಟ್ಟರ್

ಎಸ್‌ಎಮ್‌ಎಸ್ ಆಧಾರಿತ ಸಾಮಾಜಿಕ ನೆಟ್‌ವರ್ಕ್ ಕೋಡ್ ನೇಮ್ twttr ಅನ್ನು ಮೊದಲು ಅನ್ವೇಷಿಸಿದ್ದು ಸ್ಥಾಪಕರಾದ ಜೇಕ್ ಡೋರ್ಸಿಯಾಗಿದ್ದಾರೆ. ಇವರು ಪ್ರಥಮ ಟ್ವೀಟ್ ಅನ್ನು ಮಾರ್ಚ್ 21, 2006 ರಂದು ಮಾಡಿದರು. ಇದೀಗ 1,700 ಟ್ವೀಟ್‌ಗಳು ಪ್ರತೀ ಸೆಕೆಂಡ್‌ಗೆ ಕಳುಹಿಸಲಾಗುತ್ತದೆ.

ಯೂಟ್ಯೂಬ್

ಯೂಟ್ಯೂಬ್

ಪ್ರತೀ ತಿಂಗಳಿಗೆ ನಾಲ್ಕು ಗಂಟೆಯಷ್ಟು ಕಾಲ ಯೂಟ್ಯೂಬ್‌ನಲ್ಲಿ ಬಿಲಿಯನ್ ಜನರು ಪ್ರತೀ ತಿಂಗಳು ವೀಡಿಯೊಗಳನ್ನು ವೀಕ್ಷಿಸುತ್ತಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
check out here the MOST AMAZING FACTS ABOUT THE INTERNET. This is interesting and you will like this.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot