ಗೂಗಲ್‌ನಲ್ಲಿ ಈ ವರ್ಷ ಹೆಚ್ಚಾಗಿ ಹುಡುಕಿದ ಸಿನಿಮಾಗಳಿವು; ಕನ್ನಡದ ಎರಡು ಚಿತ್ರಗಳೂ ಇವೆ!

ಗೂಗಲ್‌

|

ಗೂಗಲ್‌ ಪ್ರತಿವರ್ಷವೂ ಸರ್ಚ್‌ ಇಂಜಿನ್‌ನಲ್ಲಿ ಹೆಚ್ಚು ಹುಡುಕಲಾದ ವಿಷಯಗಳು ಯಾವುದು ಎಂಬುದನ್ನು ವಿಭಾಗವಾರು ಮಾಹಿತಿ ನೀಡುತ್ತದೆ. ಇದರಲ್ಲಿ ಸಿನಿಮಾ ವಿಭಾಗ ಕೂಡ ಪ್ರಮುಖವಾಗಿದೆ. ಈ ಮೂಲಕ ಗೂಗಲ್‌ನಲ್ಲಿ ಯಾವ ಸಿನಿಮಾಗಳಿಗೆ ಹೆಚ್ಚು ಕ್ರೇಜ್‌ ಇತ್ತು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಅಂತೆಯೇ ಈ ವರ್ಷ ಅತೀ ಹೆಚ್ಚು ಹುಡುಕಲಾದ ಸಿನಿಮಾಗಳ ಹೆಸರನ್ನು ಬಹಿರಂಗಪಡಿಸಿದೆ.

ಸಿನಿಮಾ

ಹೌದು, ಈ ವರ್ಷ ಹಲವಾರು ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಹೆಚ್ಚಾಗಿ ಸದ್ದು ಮಾಡಿವೆ. ಅದರಲ್ಲಿ ಕನ್ನಡದ ಹಲವು ಸಿನಿಮಾಗಳು ಸಿನಿ ರಸಿಕರ ಮನತಣಿಸಿವೆ. ಅದರಂತೆ ಗೂಗಲ್‌ನಲ್ಲಿ ಭಾರತೀಯರು ಹೆಚ್ಚು ಹುಡುಕಲಾದ ಕನ್ನಡ ಸಿನಿಮಾ ಯಾವುದು?, ಇತರೆ ಸಿನಿಮಾಗಳು ಯಾವುವು? ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಬ್ರಹ್ಮಾಸ್ತ್ರ: ಪಾರ್ಟ್‌ 1 - ಶಿವ

ಬ್ರಹ್ಮಾಸ್ತ್ರ: ಪಾರ್ಟ್‌ 1 - ಶಿವ

ಬ್ರಹ್ಮಾಸ್ತ್ರ: ಪಾರ್ಟ್‌ 1 - ಶಿವ ಸಿನಿಮಾವನ್ನು ಗೂಗಲ್‌ನಲ್ಲಿ ಹೆಚ್ಚಾಗಿ ಸರ್ಚ್‌ ಮಡಲಾಗಿದೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ನಾಗಾರ್ಜುನ, ಆಲಿಯಾ ಭಟ್, ರಣಬೀರ್ ಕಪೂರ್ ಮುಂತಾದವರು ನಟಿಸಿದ್ದಾರೆ. ಹಾಗೆಯೇ ಈ ಸಿನಿಮಾ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.

ಕಾಶ್ಮೀರ್‌ ಫೈಲ್ಸ್

ಕಾಶ್ಮೀರ್‌ ಫೈಲ್ಸ್

ಕಾಶ್ಮೀರ್‌ ಫೈಲ್ಸ್ ಬಿಡುಗಡೆಯಾದಾಗ ದೇಶದಲ್ಲಿ ರಾಷ್ಟ್ರೀಯತೆಯ ಭಾವನೆ ಎಲ್ಲರಲ್ಲೂ ಉಂಟಾಗಿತ್ತು. ಅದರಲ್ಲೂ ಕೆಲವು ಸರ್ಕಾರಗಳು ಉಚಿತ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದವು. ಹಾಗೆಯೇ ಹೆಚ್ಚು ವಿವಾದಕ್ಕೂ ಗುರಿಯಾದ ಸಿನಿಮಾ ಇದಾಗಿದೆ. ಈ ಸಿನಿಮಾವನ್ನು ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ. 90ರ ದಶಕದ ಮೊದಲು ಕಾಶ್ಮೀರಿ ಪಂಡಿತರನ್ನು ಹೊರಹಾಕಿದ ಕಥೆಯನ್ನು ಈ ಚಿತ್ರ ಆಧರಿಸಿದೆ. ಸದ್ಯಕ್ಕೆ ಈ ಚಿತ್ರವನ್ನು ಜೀ5 ಓಟಿಟಿ ಸೈಟ್‌ನಲ್ಲಿ ವೀಕ್ಷಿಸಬಹುದು.

ಆರ್‌ಆರ್‌ಆರ್‌

ಆರ್‌ಆರ್‌ಆರ್‌

ರಾಜಮೌಳಿ ನಿರ್ದೇಶನದ ಚಿತ್ರ ಆರ್‌ಆರ್‌ಆರ್‌ ತೆಲುಗು ಚಿತ್ರರಂಗವಲ್ಲದೇ ಇಡೀ ಜಗತ್ತಿನಾದ್ಯಂತ ಸದ್ದು ಮಾಡಿದ ಚಿತ್ರವಾಗಿದೆ. ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್, ರಾಮ್ ಚರಣ್ ಮತ್ತು ಆಲಿಯಾ ಭಟ್ ಅಭಿನಯಿಸಿದ್ದಾರೆ. ದೊಡ್ಡ ಬಜೆಟ್ ಚಿತ್ರ ವಾಗಿರುವ ಇದು 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇದರ ನಡುವೆ ಈ ಚಿತ್ರದ ಎರಡನೇ ಭಾಗದ ಕಥೆಯ ಚರ್ಚ ನಡೆಯುತ್ತಿದೆ ಎಂದು ನಿರ್ದೇಶಕ ರಾಜಮೌಳಿ ತಿಳಿಸಿದ್ದಾರೆ. ಈ ಸಿನಿಮಾವನ್ನು ಡಿಸ್ನಿ + ಹಾಟ್‌ಸ್ಟಾರ್‌ ನಲ್ಲಿ ವೀಕ್ಷಿಸಬಹುದು.

ಪುಷ್ಪಾ: ದಿ ರೈಸ್

ಪುಷ್ಪಾ: ದಿ ರೈಸ್

ಪುಷ್ಪಾ: ದಿ ರೈಸ್ ತೆಲುಗು ಸಿನಿಮಾವಾಗಿದ್ದು, ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಗಂಧದ ಮರ ಕಳ್ಳತನದ ಕಥೆ ಆಧಾರಿತವಾಗಿದೆ.

ವಿಕ್ರಮ್

ವಿಕ್ರಮ್

ಲೋಕೇಶ್ ಕನಕರಾಜ್ ನಿರ್ದೇಶನದ ಹಾಗೂ ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ಬಗ್ಗೆ ಗೂಗಲ್‌ ನಲ್ಲಿ ಹೆಚ್ಚು ಹುಡುಕಲಾಗಿದೆ. ವಿಷಯ ಏನೆಂದರೆ ಈ ವರ್ಷ ಹಲವು ತಮಿಳು ಸಿನಿಮಾಗಳು ಬಿಡುಗಡೆಯಾಗಿದ್ದರೂ, ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ತಮಿಳು ಸಿನಿಮಾಗಳಲ್ಲಿ ವಿಕ್ರಮ್ ಒಂದೇ ಆಗಿದೆ.

ಥಾರ್: ಲವ್ ಮತ್ತು ಥಂಡರ್

ಥಾರ್: ಲವ್ ಮತ್ತು ಥಂಡರ್

ಥಾರ್: ಲವ್ ಮತ್ತು ಥಂಡರ್ ಸಿನಿಮಾವನ್ನೂ ಸಹ ಗೂಗಲ್‌ ನಲ್ಲಿ ಹೆಚ್ಚಾಗಿ ಸರ್ಚ್‌ ಮಾಡಲಾಗಿದೆ. ಮಾರ್ವೆಲ್ ಸಿರೀಸ್ ನಲ್ಲಿ ತೆರೆಕಂಡ ಈ ಚಿತ್ರಕ್ಕೆ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೆಯೇ ಈ ಸಿನಿಮಾ ಭಾರತೀಯ ಅಭಿಮಾನಿಗಳನ್ನೂ ಸೆಳೆದಿದೆ.

ಕಾಂತಾರ

ಕಾಂತಾರ

ಕಡಿಮೆ ಬಜೆಟ್ ನಲ್ಲಿ ತೆರೆಕಂಡು ದೇಶಾದ್ಯಂತ ಹೆಚ್ಚು ಸದ್ದು ಮಾಡಿದ ಕನ್ನಡದ ಸಿನಿಮಾ ಕಾಂತಾರ. ಹಾಗೆಯೇ ಈ ಸಿನಿಮಾ ಹಲವು ಭಾಷೆಗಳಲ್ಲೂ ಲಾಂಚ್‌ ಆಗಿದೆ. 16 ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸದ್ಯಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಕಾಂತಾರ ಸಿನಿಮಾವನ್ನು ವೀಕ್ಷಿಸಬಹುದು.

 ಕೆಜಿಎಫ್: ಅಧ್ಯಾಯ 2

ಕೆಜಿಎಫ್: ಅಧ್ಯಾಯ 2

ಕೆಜಿಎಫ್: ಅಧ್ಯಾಯ 2 ಸಿನಿಮಾ ಕನ್ನಡದ ಮತ್ತೊಂದು ಸಿನಿಮಾವಾಗಿದ್ದು, ಇದನ್ನೂ ಸಹ ಗೂಗಲ್‌ ನಲ್ಲಿ ಜನರು ಹೆಚ್ಚಾಗಿ ಸರ್ಚ್‌ ಮಾಡಿದ್ದಾರೆ. ಈ ಸಿನಿಮಾಗೆ ಭಾರತದಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೆಯೇ ಈ ಸಿನಿಮಾವನ್ನು ಅಮೆಜಾನ್ ಪ್ರೈಮ್‌ ಓಟಿಟಿ ಸೈಟ್‌ನಲ್ಲಿ ವೀಕ್ಷಿಸಬಹುದು.

ಲಾಲ್ ಸಿಂಗ್ ಚಡ್ಡಾ, ದೃಶ್ಯಂ 2

ಲಾಲ್ ಸಿಂಗ್ ಚಡ್ಡಾ, ದೃಶ್ಯಂ 2

ಇನ್ನುಳಿದಂತೆ ಲಾಲ್ ಸಿಂಗ್ ಚಡ್ಡಾ, ದೃಶ್ಯಂ 2 ಸಿನಿಮಾಗಳನ್ನು ಸಹ ಗೂಗಲ್‌ನಲ್ಲಿ ಹೆಚ್ಚಾಗಿ ಸರ್ಚ್‌ ಮಾಡಲಾಗಿದೆ. ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಿತ್ರವು ಮಿಶ್ರ ವಿಮರ್ಶೆಗಳನ್ನು ಪಡೆಯಿತು ಎಂಬುದು ಗಮನಿಸಬೇಕಾದ ಸಂಗತಿ. ಹಾಗೆಯೇ ದೃಶ್ಯಂ 2 ಮಲಯಾಳಂನಲ್ಲಿ ಮೋಹನ್ ಲಾಲ್, ತಮಿಳಿನಲ್ಲಿ ಕಮಲ್ ಹಾಸನ್ ಮತ್ತು ಹಿಂದಿಯಲ್ಲಿ ಅಜಯ್ ದೇವಗನ್ ಅಭಿನಯಿಸಿದ್ದಾರೆ.

Best Mobiles in India

English summary
Most searched movies of India in Google.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X