Just In
Don't Miss
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Movies
'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
- News
Budget 2023; ಬಜೆಟ್ನಲ್ಲಿ ಹೊಸ ವಿಚಾರವಿಲ್ಲ, ಇದು ಘೋಷಣೆಗಳ ಮತ್ತು ಕೇವಲ ಪ್ರಚಾರದ ಬಜೆಟ್:ಎಂ.ಬಿ.ಪಾಟೀಲ್
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಂದು ಮೊಟೊ G42 ಫೋನ್ ಫಸ್ಟ್ ಸೇಲ್!..ಸಿಗುತ್ತೆ ಭರ್ಜರಿ ಡಿಸ್ಕೌಂಟ್!
ಭಾರತದಲ್ಲಿ ಮೊಟೊರೊಲಾ ಮೊಬೈಲ್ ಸಂಸ್ಥೆಯು ಈಗಾಗಲೇ ಹಲವು ಭಿನ್ನ ಶ್ರೇಣಿಯಲ್ಲಿ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಇತ್ತೀಚಿಗಷ್ಟೆ ಮೊಟೊ G42 ಸರಣಿಯಲ್ಲಿ ಬಿಡುಗಡೆ ಮಾಡಿರುವ ಮೊಟೊ G42 ಸ್ಮಾರ್ಟ್‌ಫೋನ್ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಇನ್ನು ಈ ಫೋನ್ ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಮೂಲಕ ಇಂದು (ಜುಲೈ. 11) ಮೊದಲ ಸೇಲ್ ಪ್ರಾರಂಭಿಸಲಿದೆ.

ಹೌದು, ಮೊಟೊ G42 5G ಸ್ಮಾರ್ಟ್‌ಫೋನ್ ಇಂದು ಮಧ್ಯಾಹ್ನ 12ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಫಸ್ಟ್ ಸೇಲ್ ಶುರು ಮಾಡಲಿದೆ. ಇನ್ನು ಈ ಫೋನ್ 60Hz ರೀಫ್ರೇಶ್ ರೇಟ್ ಡಿಸ್‌ಪ್ಲೇ ಒಳಗೊಂಡಿದ್ದು, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದರೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ.

ಹಾಗೆಯೇ ಈ ಫೋನ್ ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಈ ಫೋನ್ ಇದು 20W ಟರ್ಬೊಪವರ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಹಾಗಾದರೇ ಮೊಟೊ G42 5G ಸ್ಮಾರ್ಟ್‌ಫೋನ್ ಬೆಲೆ ಎಷ್ಟು?.. ಈ ಫೋನಿನ ಫೀಚರ್ಸ್‌ಗಳೇನು? ಏನಾದ್ರೂ ಆಫರ್ ಇದೆಯಾ? ಈ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಮೋಟೋ G42 ಸ್ಮಾರ್ಟ್‌ಫೋನ್ 6.4 ಇಂಚಿನ ಫುಲ್ ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಪಡೆದಿದೆ. ಇದಲ್ಲದೆ 60Hz ರಿಪ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಈ ಫೋನಿನ ಡಿಸ್‌ಪ್ಲೇ ಸ್ಕ್ರೀನ್ ಟು ಬಾಡಿ ನಡುವಿನ ಅನುಪಾತ 83.9% ಆಗಿದೆ. ಇದು 411 ಪಿಪಿಐ ಸಾಂದ್ರತೆಯನ್ನು ಹೊಂದಿದೆ.

ಪ್ರೊಸೆಸರ್ ಯಾವುದು?
ಮೋಟೋ G42 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ನಲ್ಲಿ ಕಾಯರ್ಯನಿರ್ವಹಿಸಲಿದೆ. ಈ ಫೋನ್ ಆಂಡ್ರೆನೊ 610 GPU ಸಪೋರ್ಟ್ ಹೊಂದಿದೆ. ಹಾಗೆಯೇ 4GB RAM ಮತ್ತು 64 GB ಆನ್‌ಬೋರ್ಡ್ uMCP ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬಳಸಿ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.

ಕ್ಯಾಮೆರಾ ಸೆನ್ಸಾರ್ ಹೇಗಿದೆ?
ಮೋಟೋ G42 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ f/1.8 ಲೆನ್ಸ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮೈಕ್ರೊ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ ವೀಡಿಯೊ ಕರೆ ಹಾಗೂ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇದು f/2.2 ಲೆನ್ಸ್‌ನೊಂದಿಗೆ ಬರುತ್ತದೆ.

ಬ್ಯಾಟರಿ ಸಾಮರ್ಥ್ಯ
ಮೋಟೋ G42 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 20W ಟರ್ಬೊಪವರ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಈ ಬ್ಯಾಟರಿ ಸಿಂಗಲ್ ಚಾರ್ಜ್‌ನಲ್ಲಿ 30 ಗಂಟೆಗಳ ಬ್ಯಾಕಪ್ ಅನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11ac, ಬ್ಲೂಟೂತ್ v5.0, FM ರೇಡಿಯೋ, GPS/ A-GPS, NFC, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ.

ಇತರೆ ಫೀಚರ್ಸ್
ಇದಲ್ಲದೇ ಮೋಟೋ G42 ಸ್ಮಾರ್ಟ್‌ಫೋನ್ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಗೈರೊಸ್ಕೋಪ್ ಸೆನ್ಸಾರ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ ಬರುತ್ತದೆ. ಇದು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದ್ದು, ಡಾಲ್ಬಿ ಅಟ್ಮೋಸ್ ಅನ್ನು ಬೆಂಬಲಿಸಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ IP52-ರೇಟೆಡ್ ವಾಟರ್-ರೆಪೆಲ್ಲೆಂಟ್ ಬಿಲ್ಡ್ ಅನ್ನು ಹೊಂದಿದೆ. ಈ ಫೋನ್‌ನಲ್ಲಿ My UX ಫೀಚರ್ಸ್ ನೀಡಲಾಗಿದ್ದು, ಇದರ ಮೂಲಕ ನಿಮ್ಮ ಡಿವೈಸ್ ಅನ್ನು ನೀವು ಸನ್ನೆಗಳ ಮೂಲಕ ಕಂಟ್ರೋಲ್ ಮಾಡಬಹುದಾಗಿದೆ. ಜೊತೆಗೆ ಎಂಟರ್‌ಟೈನ್‌ಮೆಂಟ್ ಅನ್ನು ಕಸ್ಟ್‌ಮೈಸ್ ಮಾಡುವುದಕ್ಕೆ ಕೂಡ ಸಾದ್ಯವಾಗಲಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಮೋಟೋ G42 ಸ್ಮಾರ್ಟ್‌ಫೋನ್ 4GB RAM + 64GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 13,999 ರೂ. ಬೆಲೆ ಹೊಂದಿದೆ. ಈ ಸ್ಮಾರ್ಟ್‌ಫೋನ್ ಅಟ್ಲಾಂಟಿಕ್ ಗ್ರೀನ್ ಮತ್ತು ಮೆಟಾಲಿಕ್ ರೋಸ್ ಬಣ್ಣಗಳ ಆಯ್ಕೆಯಲ್ಲಿ ಬರುತ್ತದೆ. ಇನ್ನು ಈ ಫೋನ್ ಇದೇ ಜುಲೈ 11 ರಿಂದ ಫ್ಲಿಪ್‌ಕಾರ್ಟ್ ಮತ್ತು ದೇಶದ ಆಯ್ದ ರಿಟೇಲ್ ಸ್ಟೋರ್‌ಗಳ ಮೂಲಕ ಫಸ್ಟ್ ಸೇಲ್ ನಡೆಸಲಿದೆ.

ಲಾಂಚ್ ಆಫರ್ ಏನಿದೆ?
ಮೋಟೋ G42 ಸ್ಮಾರ್ಟ್‌ಫೋನ್ ಲಾಂಚ್ ಆಫರ್‌ನಲ್ಲಿ ನಿಮಗೆ 1,000 ರೂ.ವರೆಗೆ ರಿಯಾಯಿತಿ ದೊರೆಯಲಿದೆ. ಇದು SBI ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ ಅನ್ವಯಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 2,549 ರೂ ಮೌಲ್ಯದ ಪ್ರಯೋಜನಗಳನ್ನು ಸಹ ನೀಡಲಿದೆ. ಅಂದರೆ ಜಿಯೋ ಬಳಕೆದಾರರು ಈ ಸ್ಮಾರ್ಟ್‌ಫೋನ್ ಖರೀದಿಸಿದರೆ 419ರೂ ಬೆಲೆಯ ಪ್ಲಾನ್ ಲಭ್ಯವಾಗಲಿದೆ. ಇನ್ನು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಕ್ ಕಾರ್ಡ್ ಮೂಲಕ ಖರೀದಿಸಿದರೆ ನಿಮಗೆ ಬ್ಯಾಂಕ್ 5% ಕ್ಯಾಶ್‌ಬ್ಯಾಕ್ ಆಫರ್ ನೀಡಲಿದೆ. ಇದರೊಂದಿಗೆ ಫ್ಲಿಪ್‌ಕಾರ್ಟ್‌ನ ಪೇ ಲೇಟರ್ ಮೂಲಕ ಖರೀದಿಸಿದರೆ ನಿಮಗೆ 100 ಮೌಲ್ಯದ ಫ್ಲಿಪ್‌ಕಾರ್ಟ್ ಗಿಫ್ಟ್ ಕಾರ್ಡ್ ದೊರೆಯಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470