ಜಿಯೋ ಮಾಸ್ಟರ್ ಪ್ಲ್ಯಾನ್; ಒಂದೇ ಸೂರಿನಡಿ ನೂರು ಸೇವೆ ಒದಗಿಸುವ 'ಸೂಪರ್ ಆಪ್'!
300 ಮಿಲಿಯನ್ ಚಂದಾದಾರರನ್ನು ಹೊಂದಿರುವ ಜಿಯೋ ಸದ್ಯ ದೇಶದಲ್ಲಿ ನಂಬರ್ ಒನ್ ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಿದೆ. ಇ ಕಾಮರ್ಸ್ ಕ್ಷೇತ್ರಕ್ಕೂ ಕಾಲಿಟ್ಟಿರುವ ರಿಲಾಯನ್ಸ್ ಇದೀಗ ದೊಡ್ಡ ಮಟ್ಟದಲ್ಲಿ ಇ ಕಾಮರ್ಸ್ ಸೇವೆಯನ್ನು ಪರಿಚಯಿಸಲು ಮುಂದಾಗಿದ್ದು, ಅದಕ್ಕಾಗಿ ಹೊಸ ಆಪ್ ಒಂದನ್ನು ಹೊರತರಲಿದೆ. ಈ ಆಪ್ ಒಂದರಲ್ಲೇ ಒಟ್ಟು ನೂರು ಸೇವೆಗಳು ಗ್ರಾಹಕರಿಗೆ ದೊರೆಯಲಿವೆ.

ಹೌದು, ರಿಲಾಯನ್ಸ್ ಸಂಸ್ಥೆಯು ವಿಶ್ವದಲ್ಲಿಯೇ ದೊಡ್ಡಮಟ್ಟದಲ್ಲಿ ಆನ್‌ಲೈನ್‌ನಿಂದ ಆಫ್‌ಲೈನ್ ಇ ಕಾಮರ್ಸ್ ಸೇವೆಯ ಫ್ಲಾಟ್‌ಪಾರ್ಮ್ ಅನ್ನು ಹುಟ್ಟುಹಾಕಲು ಯೋಜಿಸಿದ್ದು, ಆ ನಿಟ್ಟಿನಲ್ಲಿ ರಿಲಾಯನ್ಸ್ 'ಸೂಪರ್ ಆಪ್' ಅನ್ನು ಹೊರತರಲಿದೆ. ಈ ಆಪ್‌ನಲ್ಲಿ ಆನ್‌ಲೈನ್ ಟಿಕೆಟ್, ಪೇಮೆಂಟ್ ಸೇವೆಗಳನ್ನು ಒಳಗೊಂಡಂತೆ ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ಇ ಫ್ಲಾಟ್‌ಪಾರ್ಮ್ ಸೇವೆಯನ್ನು ಒದಗಿಸಲಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಲೀಡ್‌ನಲ್ಲಿರುವ ಫ್ಲಿಪ್‌ಕಾರ್ಟ್, ಅಮೆಜಾನ್, ಸ್ನಾಪ್‌ಡೀಲ್ ಮತ್ತು ಫ್ರೀಚಾರ್ಜ್ ಇ ಕಾಮರ್ಸ್ ತಾಣಗಳು ಕವರ್ ಮಾಡಿರದ ಸೇವೆಗಳನ್ನು ರಿಲಾಯನ್ಸ್ ನೀಡುವ ಸೂಚನೆಯನ್ನು ವ್ಯಕ್ಯಪಡಿಸಿದೆ. ಹಾಗಾದರೇ ರಿಲಾಯನ್ಸ್ 'ಸೂಪರ್ ಆಪ್' ಮೂಲಕ ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಗ್ರ್ಯಾಂಡ್ ಎಂಟ್ರಿಕೊಡಲು ಹೇಗೆ ಸಜ್ಜಾಗಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಇ ಕಾಮರ್ಸ್ ಎಂಟ್ರಿ
ಈಗಾಗಲೇ ರಿಲಾಯನ್ಸ್ ಸಂಸ್ಥೆಯು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿದ್ದು, ಹಾಗೇ ಇ ಕಾಮರ್ಸ್ ಸೇವೆಗೆ ಬರುವುದು ಸಹ ಹೊಸ ವಿಷಯವೆನಲ್ಲ. ಆದರೆ ಸದ್ಯ ಈಗಿರುವ ಪ್ರಮುಖ ಇ ಕಾಮರ್ಸ್ ತಾಣಗಳಿಗಿಂತ ಭಿನ್ನವಾಗಿ ಗ್ರಾಹಕರಿಗೆ ಪರಿಚಿತವಾಗಲಿರುವುದು ವಿಶೇಷ ಎನಿಸಲಿದೆ.

ಇತರೆ ಇ ಕಾಮರ್ಸ್ ತಾಣಗಳಿಗೆ ಭಯ
ಟೆಲಿಕಾಂ ನೆಟವರ್ಕ್ ಕ್ಷೇತ್ರಕ್ಕೆ ರಿಲಾಯನ್ಸ್ ಜಿಯೊ ಮೂಲಕ ಎಂಟ್ರಿಕೊಟ್ಟು ದೇಶಿಯ ಟೆಲಿಕಾಂ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ರಿಲಾಯನ್ಸ ಇ ಕಾಮರ್ಸ್ ವಲಯದಲ್ಲಿ ಹೊಸ ಕ್ರಾಂತಿ ಮಾಡಲಿದೆ ಎನ್ನಲಾಗುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಜನಪ್ರಿಯ ಇ ಕಾಮರ್ಸ್ ತಾಣಗಳಿಗೆ ಭಯ ಮೂಡಿಸಿದೆ.

ಸೂಪರ್ ಆಪ್
ರಿಲಾಯನ್ಸ್ 'ಸೂಪರ್ ಆಪ್' ಅನ್ನು ಪರಿಚಯಿಸುವ ಮೂಲಕ ಇ ಕಾಮರ್ಸ್ ವಲಯಕ್ಕೆ ಬರಲಿದ್ದು, ಹೆಚ್ಚಿನ ಗ್ರಾಹಕರನ್ನು ತಲುಪುವ ಗುರಿಯನ್ನು ಹೊಂದಿದೆ. ಹಾಗೇ ವ್ಯಾಪಾಸ್ಥರನ್ನು ಇ ಕಾಮರ್ಸ್ ವ್ಯಾಪ್ತಿ ಒಳಗೆ ಸೇರಿಸುವ ಯೋಜನೆಯು ಸಹ ಇದೆ ಎನ್ನಲಾಗಿದೆ.

ಆನ್‌ಲೈನ್ ಟು ಆಫ್‌ಲೈನ್
ಆನ್‌ಲೈನ್ ಟು ಆಫ್‌ಲೈನ್ ಕಾನ್ಸೆಪ್ಟ್ ಅನ್ನು ಹೊಂದಿರುವ ಕಂಪನಿಯು ದೇಶದಲ್ಲಿನ ಸುಮಾರು ಮೂರು ಕೋಟಿ ವ್ಯಾಪಾರಸ್ಥರನ್ನು ಈ ಸೇವೆಯ ವ್ಯಾಪ್ತಿಗೆ ಒಳಪಡಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ವ್ಯಾಪಾರಸ್ಥರ ವ್ಯವಹಾರವನ್ನು ಅಭಿವೃದ್ಧಿ ಪಡೆಸುವುದು ಆಗಿದೆ.

ಒಂದೇ ಸೂರಿನಡಿ ಹಲವು ಸೇವೆಗಳು
ಕಂಪನಿಯ ಸೂಪರ್ ಆಪ್‌ನಲ್ಲಿ ಸೂಪರ್ ಐಡಿಯಾವನ್ನು ಮಾಡಸಿದ್ದು, ಒಟ್ಟು ನೂರು ಸೇವೆಗಳನ್ನು ಈ ಆಪ್‌ನಲ್ಲಿ ಗ್ರಾಹಕರಿಗೆ ಪರಿಚಯಿಸಲಿದೆ. ಗ್ರಾಹಕರಿಗೆ ಅಗತ್ಯವಿರುವ ಟಿಕೆಟ್ ಬುಕ್ಕಿಂಗ್, ಪೇಮೆಂಟ್ಸ್ ಆಯ್ಕೆಗಳು, ಸೇರಿದಂತೆ ಉತ್ಪನ್ನಗಳ ಖರೀದಿ ಮತ್ತು ಮಾರಾಟ ಮಾಡುವ ಸೇವೆಗಳು ಸಹ ಈ ಆಪ್‌ನಲ್ಲಿ ಸೇರಿರಲಿವೆ ಎನ್ನಲಾಗಿದೆ.


Click it and Unblock the Notifications








