MusicLM :ಗೂಗಲ್‌ನಿಂದ ಹೊಸ ಟೂಲ್‌; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!

|

ಚಾಟ್‌ಜಿಪಿಟಿ ಬಳಕೆ ಹೆಚ್ಚಾದಂತೆ ಗೂಗಲ್‌ಗೆ ಕೊಂಚ ನಡುಕ ಉಂಟಾದಂತೆ ಆಗಿದೆ. ಇದಕ್ಕಾಗಿಯೇ ಈಗಾಗಲೇ ಹಲವು ಸೇವೆಗಳಲ್ಲಿ ಹೊಸ ಎಐ ಫೀಚರ್ಸ್‌ಗಳನ್ನು ನೀಡುತ್ತಾ ಬರುತ್ತಿದೆ. ಇದರ ಭಾಗವಾಗಿಯೇ ಅಚ್ಚರಿಪಡುವ ಹೊಸ ಸೌಲಭ್ಯವೊಂದನ್ನು ಪರಿಚಯಿಸಲು ಮುಂದಾಗಿದ್ದು, ಈ ಮೂಲಕ ನೀವು ಈವರೆಗೂ ಟೆಕ್‌ ವಲಯದಲ್ಲಿ ಪಡೆಯದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

MusicLM : ಗೂಗಲ್‌ನಿಂದ ಹೊಸ ಟೂಲ್‌; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!

ಹೌದು, ಸ್ಮಾರ್ಟ್‌ಗ್ಯಾಜೆಟ್‌ ವಿಭಾಗದಲ್ಲಿ ವಿಭಿನ್ನ ರೀತಿಯ ಗ್ಯಾಜೆಟ್‌ಗಳು ಬಳಕೆದಾರರಿಗೆ ಹಲವು ರೀತಿಯ ಸೌಕರ್ಯಗಳನ್ನು ನೀಡುತ್ತಾ ಬರುತ್ತಿವೆ. ಆದರೆ. ಈ ರೀತಿಯ ಸೇವೆ ಖಂಡಿತಾ ಬಹುಪಾಲು ಮಂದಿಗೆ ಹೊಸದು ಎನ್ನಬಹುದು. ಯಾಕೆಂದರೆ ಟೆಕ್ಸ್ಟ್‌ ಅನ್ನು ಮ್ಯೂಸಿಕ್‌ ಆಗಿ ಕನ್ವರ್ಟ್‌ ಮಾಡಬಹುದಾಗಿದೆ. ಅರೇ.. ಅದ್ಹೇಗೆ ಸಾಧ್ಯ ಎಂದು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಮೂಡಿದ್ದರೆ ಇಲ್ಲಿದೆ ನೋಡಿ ಸಂಪೂರ್ಣ ವಿವರ.

ಹೊಸ AI ಟೂಲ್ಸ್‌ ಪರಿಚಯಿಸಲು ಮುಂದಾದ ಗೂಗಲ್‌
ಗೂಗಲ್ ಈಗ AI ಉಪಕರಣದ ಬಗ್ಗೆ ಘೋಷಣೆ ಮಾಡಿದ್ದು,ಇದಕ್ಕೆ MusicLM ಎಂದು ಹೆಸರಿಡಲಾಗಿದೆ. ಈ ಮೂಲಕ ಬಳಕೆದಾರರು ಪದಗಳನ್ನು ಸಂಗೀತವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಪಡೆಯಬಹುದಾಗಿದೆ. ಇದಕ್ಕಾಗಿಯೇ ಮ್ಯೂಸಿಕ್ ಎಲ್‌ಎಮ್‌: ಜನರೇಟಿಂಗ್‌ಮ್ಯೂಸಿಕ್‌ ಫ್ರಮ್‌ ಟೆಕ್ಸ್ಟ್‌ ಎಂಬ ಶೀರ್ಷಿಕೆಯ ಸಂಶೋಧನಾ ಪ್ರಬಂಧವನ್ನೂ ಸಹ ಗೂಗಲ್‌ ಬಿಡುಗಡೆ ಮಾಡಿದೆ.

ಇನ್ನು ಸಾಮಾನ್ಯವಾಗಿ 2022 ನೇ ವರ್ಷದಲ್ಲಿ AI ಬಳಕೆ ಬಗ್ಗೆ ಭಾರೀ ವಿಷಯಗಳು ಚರ್ಚೆಯಲ್ಲಿದ್ದವು. ಆದರೆ, ಈ ವರ್ಷ ಇದು ಕಾರ್ಯಾನುಷ್ಠಾನಕ್ಕೆ ಬರುತ್ತಿದೆ. ಯಾಕೆಂದರೆ ಈ ವರ್ಷದ ಆರಂಭದಿಂದ ಇಲ್ಲಿಯವರೆಗಿನ ಟೆಕ್‌ ಬೆಳವಣಿಗೆ ಗಮನಿಸಿದರೆ ಚಾಟ್ ಜಿಪಿಟಿ DALL.E, ಗಿಥಬ್ ಸೇರಿದಂತೆ ಇತರೆ ಹಲವು AI ಟೂಲ್ಸ್ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಇದಿಷ್ಟೇ ಅಲ್ಲದೆ, ವಿಶ್ವದ ಮೊದಲ AI ಇಂಟರ್ನ್‌ಗಳನ್ನು ಸಾಗರೋತ್ತರ ಮಾರ್ಕೆಟಿಂಗ್ ಕಂಪೆನಿಯೊಂದು ನೇಮಿಸಿಕೊಂಡಿದೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿದ್ದು, ಇದಕ್ಕೆ Aiden ಮತ್ತು Aiko ಎಂದು ಹೆಸರು ನೀಡಲಾಗಿದೆ. ಈ ಕಂಪೆನಿಗಳು ಹೊಸ ಉದ್ಯೋಗಿಗಳಿಗೆ ಸ್ವಾಗತ ಕೋರಲಾಗಿರುವ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

MusicLM ಹೇಗೆ ಕೆಲಸ ಮಾಡುತ್ತದೆ?
MusicLM 24 kHz ನಲ್ಲಿ ಸಂಗೀತವನ್ನು ರಚಿಸುತ್ತದೆ. ಪಠ್ಯಕ್ಕೆ ಧ್ವನಿ ನೀಡುವುದರ ಜೊತೆಗೆ, ಗಿಟಾರ್‌ನಂತಹ ಸಂಗೀತ ವಾದ್ಯಗಳ ಎಫೆಕ್ಟ್‌ ಸಹ ಇದರಲ್ಲಿ ಇರಲಿದೆ ಎನ್ನಲಾಗಿದೆ. ಪ್ರಮುಖ ವಿಷಯ ಎಂದರೆ ಇದರಲ್ಲಿ ಸಂಗೀತ ಆಲಿಸುವಾಗ ಮೂಲ ಹಾಡಿನ ಅನುಭವವನ್ನು ನೀಡುತ್ತದೆ. ಇನ್ನು ಸಾಕಷ್ಟು ಸಂಶೋಧನೆಯ ನಂತರ ಗೂಗಲ್‌ನ ಸಂಶೋಧಕರು ಇದನ್ನು ಪ್ರಸ್ತುತಪಡಿಸಿದ್ದಾರೆ. ಅದರಂತೆ ಗೂಗಲ್ ಕೆಲವು ಮಾದರಿಗಳನ್ನು ಈಗಾಗಲೇ ಪರಿಚಯಿಸಿದ್ದು, ಇದರಲ್ಲಿ ಪಠ್ಯವನ್ನು ಹಾಡುಗಳಾಗಿ ಪರಿವರ್ತಿಸಲಾಗಿದೆ. ಈ ಮಾದರಿಯಲ್ಲಿ 30 ಸೆಕೆಂಡುಗಳಿಂದ 5 ನಿಮಿಷಗಳವರೆಗೆ ಸಂಗೀತದ ವಿಡಿಯೋಗಳನ್ನು ರಚಿಸಲಾಗಿದೆ.

MusicLM : ಗೂಗಲ್‌ನಿಂದ ಹೊಸ ಟೂಲ್‌; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!

ಇದರೊಂದಿಗೆ ರಚಿಸಲಾದ ಸಂಗೀತವನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗುತ್ತಿರುವುದು ಇನ್ನಷ್ಟು ಸಂತಸದ ವಿಷಯವಾಗಿರಲಿದೆ. ವಿಷಯ ಏನೆಂದರೆ ಈ ಸಂಗೀತ ಯಾವ ಭಾಷೆಗಳಲ್ಲಿ ಲಭ್ಯವಿರುತ್ತದೆ ಎನ್ನುವುದನ್ನು ಮಾತ್ರ ಗೂಗಲ್‌ ಬಹಿರಂಗಪಡಿಸಿಲ್ಲ.

ನಮ್ಮ ನಿಮ್ಮೆಲ್ಲರ ಉದ್ಯೋಗ ಕಸಿದಿಕೊಳ್ಳಲಿದೆಯೇ ಈ ಎಐ?
ಈ ಎಐ ಅನ್ನು ಎಲ್ಲಾ ಕಡೆ ಈಗ ಬಳಕೆ ಮಾಡಲು ಮುಂದಾಗುವುದೇನೋ ಸರಿ. ಆದರೆ, ಇನ್ಮುಂದೆ ಈ ಎಐ ನಿಂದ ಹಲವಾರು ಜನರ ಉದ್ಯೋಗಕ್ಕೆ ಧಕ್ಕೆ ಉಂಟಾಗುತ್ತವೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಹಾಗೆಯೇ ಇದೊಂದು ಮಾನವೀಯತೆಯ ಅವನತಿ ಎಂದು ಕೆಲವರು ಭಾವಿಸಿದ್ದಾರೆ. ಅದರಂತೆ ಮಾನವರು ಮತ್ತು AI ಗಳು ಸಹ ಇನ್ಮುಂದೆ ಸಮಾನವಾಗಿ ಅಸ್ತಿತ್ವದಲ್ಲಿರಬಹುದು ಮತ್ತು ಇನ್ನೂ ಹೆಚ್ಚಿನ ಉತ್ಪಾದಕತೆಗೆ ಕಾರಣವಾಗಬಹುದು ಎಂದು ಮತ್ತೊಂದಷ್ಟು ಮಂದಿ ವಾಧಿಸುತ್ತಿದ್ದಾರೆ.

ಎಐನಲ್ಲಿ ಗೂಗಲ್‌ ಹೂಡಿಕೆ
ಚಾಟ್‌ಜಿಪಿಟಿ ಯೊಂದಿಗೆ ಸ್ಪರ್ಧಿಸಲು ಮುಂದಾಗಿರುವ ಗೂಗಲ್‌ ಭವಿಷ್ಯದಲ್ಲಿ ವಿವಿಧ ಹೊಸ ಎಐ ಚಾಲಿತ ಉತ್ಪನ್ನಗಳನ್ನು ಪರಿಚಯಿಸಲು ಮುಂದಾಗಿದೆ. ಹಾಗೆಯೇ ಈಗಾಗಲೇ ಮೈಕ್ರೋಸಾಫ್ಟ್ ಗೂಗಲ್‌ಗೆ ಕಠಿಣ ಸ್ಪರ್ಧೆಯನ್ನು ನೀಡಲು ಮುಂದಾಗಿದ್ದು, ಎಐ ನಿಂದ ನಡೆಸಲ್ಪಡುವ ಸರ್ಚ್ ಇಂಜಿನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ಈ ಕಾರಣಕ್ಕೆ ಮೈಕ್ರೋಸಾಫ್ಟ್‌ನೊಂದಿಗೆ ಸ್ಪರ್ಧಿಸಲು ಗೂಗಲ್ ತನ್ನ ಸ್ವಂತ ಆವೃತ್ತಿಯ ಎಐ ಚಾಲಿತ ಸರ್ಚ್ ಎಂಜಿನ್‌ನಲ್ಲಿ ಕೆಲಸ ಮಾಡುತ್ತಿದೆ ಎಂದೂ ಸಹ ವರದಿಯಾಗಿದೆ.

MusicLM : ಗೂಗಲ್‌ನಿಂದ ಹೊಸ ಟೂಲ್‌; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!

MusicLM ಗೆ ಯಾವಾಗ ಲಭ್ಯ?
ಪಠ್ಯ ಪ್ರಾಂಪ್ಟ್‌ಗಳಿಂದ ಸಂಗೀತವನ್ನು ರಚಿಸಬಹುದಾದ ಈ ಟೂಲ್ಸ್‌ ಸಾರ್ವಜನಿಕರಿಗೆ ಯಾವಾಗ ಲಭ್ಯ?, ಹಾಗೂ ಗೂಗಲ್ ಇದನ್ನು ಯಾವಾಗ ಅಧೀಕೃತವಾಗಿ ಬಿಡುಗಡೆ ಮಾಡುತ್ತದೆ ಎಂಬ ಬಗ್ಗೆ ಯಾವುದೇ ವಿವರಗಳಿಲ್ಲ.

Best Mobiles in India

English summary
Google has made a new announcement that will turn text into music. Google named this AI as MusicLM. But there is no information about the language in which the music will be created and when it will be available.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X