ಟ್ವಿಟ್ಟರ್‌ನ ಈ ಹೊಸ ಫೀಚರ್ಸ್‌ ನಿಮಗೆ ಖಂಡಿತಾ ಇಷ್ಟವಾಗುತ್ತೆ; ಏನದು ಗೊತ್ತಾ!?

|

ಎಲಾನ್‌ ಮಸ್ಕ್‌ ಮಾಲೀಕತ್ವದ ಟ್ವಿಟ್ಟರ್‌ ಪ್ಲಾಟ್‌ಫಾರ್ಮ್‌ನಲ್ಲಿ ಶೀಘ್ರವಾಗಿ ಸಾಕಷ್ಟು ಬದಲಾವಣೆಗಳು ಸಂಭವಿಸಿವೆ. ಅದರಲ್ಲೂ ಈ ಹಿಂದೆ ಟ್ವಿಟ್ಟರ್‌ ಬ್ಲೂಟಿಕ್‌ ಚಂದಾದಾರಿಕೆ, ಸರ್ಚ್‌ ಆಯ್ಕೆಯಲ್ಲಿ ಬದಲಾವಣೆ, ರಾಜಕೀಯ ಜಾಹೀರಾತುಗಳ ಪ್ರಸಾರ ಸೇರಿದಂತೆ ಸಾಕಷ್ಟು ಬದಲಾವಣೆ ಈ ಪ್ಲಾಟ್‌ ಫಾರ್ಮ್‌ನಲ್ಲಿ ಕಂಡುಬಂದಿದ್ದು, ಏನಾದರೂ ಮಾಡಿ ಟ್ವಟ್ಟರ್‌ನಲ್ಲಿ ಲಾಭ ಪಡೆಯಲು ಮುಂದಾಗಿರುವ ಮಸ್ಕ್‌ ಈಗ ಬಳಕೆದಾರರಿಗೆ ಮತ್ತೊಂದು ಸೌಲಭ್ಯ ನೀಡಲು ಮುಂದಾಗಿದ್ದಾರೆ.

ಟ್ವಿಟ್ಟರ್‌ನ ಈ ಹೊಸ ಫೀಚರ್ಸ್‌ ನಿಮಗೆ ಖಂಡಿತಾ ಇಷ್ಟವಾಗುತ್ತೆ; ಏನದು ಗೊತ್ತಾ!?

ಹೌದು, ಟ್ವಿಟ್ಟರ್‌ನ ಈ ಬೆಳವಣಿಗೆಗಳು ಹಲವಾರು ಜನರನ್ನು ಬೇಸರಗೊಳಿಸಿದರೆ ಇನ್ನಷ್ಟು ಜನರಿಗೆ ಇಷ್ಟವಾಗುತ್ತಿವೆ. ಅದಾಗ್ಯೂ ಕೆಲವು ಘಟಾನುಘಟಿಗಳೇ ಸಾಕಪ್ಪ ಈ ಟ್ವಿಟ್ಟರ್‌ ಹಾಗೂ ಮಸ್ಕ್‌ ಸಹವಾಸ ಅಂತಾ ಟ್ವಿಟ್ಟರ್‌ ಖಾತೆಯನ್ನು ಬಂದ್‌ ಮಾಡಿದ್ದಾರೆ. ಇದೆಲ್ಲಾ ಬೆಳವಣಿಗೆ ನಡುವೆ ಹೊಸ ಫೀಚರ್ಸ್‌ ಸಾಕಷ್ಟು ಕುತೂಹಲ ಮೂಡಿಸಿದ್ದು, ಬಳಕೆದಾರರಿಗೆ ಇದರಿಂದ ಅನುಕೂಲ ಆಗಲಿದೆ. ಹಾಗಿದ್ರೆ, ಯಾರಿಗೆ ಈ ಸೌಲಭ್ಯ ಲಭ್ಯ?, ಹೊಸ ಫೀಚರ್ಸ್‌ ಏನು?, ಯಾಕಾಗಿ ಇದನ್ನು ಪರಿಚಯಿಸಲಾಗಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಟ್ವಿಟರ್ ಹೋಮ್ ಮತ್ತು ಲೇಟೆಸ್ಟ್ ಟ್ಯಾಬ್‌ಗಳನ್ನು ಫಾರ್ ಯೂ ಹಾಗೂ ಫಾಲೋವರ್ಸ್ ಎಂದು ಬದಲಾಯಿಸುತ್ತಿದೆ. ಇವುಗಳನ್ನು ನಿಮ್ಮ ಟೈಮ್‌ಲೈನ್‌ನ ಮೇಲ್ಭಾಗಕ್ಕೆ ಪಿನ್ ಮಾಡಲಾಗುತ್ತದೆ, ಆದ್ದರಿಂದ ನೀವು ಅವುಗಳ ನಡುವೆ ಸುಲಭವಾಗಿ ಬದಲಾಯಿಸಬಹುದು ಎಂದು ಟ್ವಿಟ್ಟರ್‌ ಮಾಹಿತಿ ನೀಡಿದೆ.

ಟ್ವಿಟ್ಟರ್‌ನ ಈ ಹೊಸ ಫೀಚರ್ಸ್‌ ನಿಮಗೆ ಖಂಡಿತಾ ಇಷ್ಟವಾಗುತ್ತೆ; ಏನದು ಗೊತ್ತಾ!?

ಸ್ಟಾರ್ ಐಕಾನ್ ಅನ್ನು ಟ್ಯಾಪ್ ಮಾಡುವ ಬದಲು ಟೈಮ್‌ಲೈನ್‌ಗಳನ್ನು ಬದಲಾಯಿಸಲು ಬಳಕೆದಾರರು ಮತ್ತಷ್ಟು ಸ್ವೈಪ್ ಮಾಡಬಹುದು ಎಂದು ಟ್ವೀಟ್‌ನಲ್ಲಿ ಟ್ವಿಟರ್ ಬೆಂಬಲ ಖಾತೆ ತಿಳಿಸಿದ್ದು, ಈ ಮೂಲಕ ಬಳಕೆದಾರರು ವಿಶೇಷವಾದ ಹಾಗೂ ಹೊಸ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಹಾಗೆಯೇ, ಐಓಎಸ್‌ನಲ್ಲಿ ಇಂದಿನಿಂದ ಪ್ರಾರಂಭಿಸಲಾಗಿದೆ, ನಿಮಗಾಗಿ ಶಿಫಾರಸು ಮಾಡಲಾದ ಟ್ವೀಟ್‌ಗಳನ್ನು ನೋಡಲು ಟ್ಯಾಬ್‌ಗಳ ನಡುವೆ ಸ್ವೈಪ್ ಮಾಡಿ ಅಥವಾ ನೀವು ಅನುಸರಿಸುತ್ತಿರುವ ಖಾತೆಗಳಿಂದ ಟ್ವೀಟ್‌ಗಳನ್ನು ನೋಡಿ ಎಂದು ಉಲ್ಲೇಖಿಸಿದೆ.

ಟ್ವಿಟರ್ ಬಳಕೆದಾರರು ತಾವು ಅನುಸರಿಸುವ ಕಂಟೆಂಟ್‌ಗಳು ಮತ್ತು ಟ್ರೆಂಡಿಂಗ್ ವಿಷಯಗಳ ನಡುವೆ ಬದಲಾವಣೆ ಮಾಡಲು ಸುಲಭ ಮಾರ್ಗ ಅನುಸರಿಸಬಹುದು. ಮುಖ್ಯ ಟೈಮ್‌ಲೈನ್ ಟಾಪ್, ಇತ್ತೀಚಿನ, ಟ್ರೆಂಡಿಂಗ್ ಮತ್ತು ನೀವು ಅನುಸರಿಸುವ ವಿಷಯಗಳ ನಡುವೆ ಸುಲಭವಾಗಿ ಪಕ್ಕಕ್ಕೆ ಸ್ವೈಪ್ ಮಾಡುವ ಮೂಲಕ ಇದು ಸಹಕಾರಿಯಾಗಲಿದೆ ಎಂದು ಡಿಸೆಂಬರ್ 2022 ರಲ್ಲಿಯೇ ಎಲಾನ್‌ ಮಸ್ಕ್ ಅವರು ಟ್ವೀಟ್‌ ಮಾಡಿದ್ದರು.

ಟ್ವಿಟ್ಟರ್‌ನ ಈ ಹೊಸ ಫೀಚರ್ಸ್‌ ನಿಮಗೆ ಖಂಡಿತಾ ಇಷ್ಟವಾಗುತ್ತೆ; ಏನದು ಗೊತ್ತಾ!?

ಟಿಕ್‌ಟಾಕ್‌ಗೆ ಹೋಲಿಕೆ

ಈ ಹೊಸ ಫೀಚರ್ಸ್‌ ವಾಸ್ತವವಾಗಿ ಟಿಕ್‌ಟಾಕ್‌ಗೆ ಹೋಲಲಿದ್ದು, ಇದು ಜನರು ನೋಡಿದ, ಇಷ್ಟಪಟ್ಟ ಮತ್ತು ಹೆಚ್ಚಿನದನ್ನು ಆಧರಿಸಿ ವಿಷಯವನ್ನು ತೋರಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಟಿಕ್‌ಟಾಕ್‌ ಅಲ್ಗಾರಿದಮ್ ಬಳಕೆದಾರರಿಗೆ ಏನು ನೀಡುತ್ತದೋ ಅದೇ ರೀತಿ ಟ್ವಿಟ್ಟರ್‌ ಸಹ ನೀಡಲಿದೆ. ಈ ಮೂಲಕ ಟಿಕ್‌ಟಾಕ್‌ನಿಂದ ಇದು ಪ್ರೇರೇಪಿತವಾಗಿದೆ ಎಂದು ತಿಳಿದುಬಂದಿದೆ.

ಆಂಡ್ರಾಯ್ಡ್‌ ಬಳಕೆದಾರರು ಕಾಯಬೇಕು
ಸದ್ಯಕ್ಕೆ ಈ ಫಿಚರ್ಸ್‌ ಅನ್ನು ಐಓಎಸ್‌ನಲ್ಲಿ ಮಾತ್ರ ಹೊರತರಲಾಗಿದೆ ಇದು ಆಂಡ್ರಾಯ್ಡ್‌ ಮತ್ತು ಟ್ವಿಟ್ಟರ್‌ನ ನ ವೆಬ್ ಆವೃತ್ತಿಗಳಲ್ಲಿ ಎಂದಿನಿಂದ ಬಳಕೆಗೆ ಬರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಐಓಎಸ್‌ ಬಳಕೆದಾರರು ಶೀಘ್ರದಲ್ಲೇ ತಮ್ಮ ಡಿವೈಸ್‌ಗಳಲ್ಲಿ ಈ ಫೀಚರ್ಸ್‌ ನೋಡಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

ರಾಜಕೀಯ ಜಾಹೀರಾತಿಗೆ ಅನುಮತಿ ನೀಡಿದ ಟ್ವಿಟ್ಟರ್‌
ಈ ಹಿಂದೆ ರಾಜಕೀಯ ವಿಷಯಕ್ಕೆ ಕೆಲವು ನಿರ್ಬಂಧಗಳನ್ನು ಟ್ವಿಟ್ಟರ್‌ನಲ್ಲಿ ವಿಧಿಸಲಾಗಿತ್ತು. ಆದರೆ, ಕಾಲಾನಂತರ ಟ್ವಿಟ್ಟರ್‌ ಅನ್ನು ವಶಕ್ಕೆ ಪಡೆದ ನಂತರ ಲಾಭ ಪಡೆಯುವ ಮಾರ್ಗವಾಗಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಇನ್ಮುಂದೆ ಟ್ವಿಟ್ಟರ್‌ನಲ್ಲಿ ಆರೋಗ್ಯಯುವ ರಾಜಕೀಯ ಜಾಹೀರಾತುಗಳು ಕಾಣಿಸಿಕೊಳ್ಳಲಿವೆ.

Best Mobiles in India

English summary
Musk introduced Twitter's new feature for you.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X