ಪತಿಯನ್ನು ಕಳೆದುಕೊಂಡ ಕ್ರಿಸ್ಟನ್‌ಗೆ ಜೀವನಾಡಿಯಾದ ಫೇಸ್‌ಬುಕ್

Written By:

ಫೇಸ್‌ಬುಕ್ ಎಂಬ ಸಾಮಾಜಿಕ ಜಾಲತಾಣ ಜನರ ಬದುಕಿನಲ್ಲಿ ಅದ್ಭುತಗಳನ್ನೇ ನಡೆಸುತ್ತಿದೆ ಎಂದರೆ ನೀವು ನಂಬಲೇಬೇಕು. ಬರಿಯ ಫೋಟೋ ಶೇರಿಂಗ್, ವಾಲ್‌ಗಳಲ್ಲಿ ಬರೆಯುವುದು, ಚಾಟಿಂಗ್ ಅಲ್ಲದೆಯೇ ಫೇಸ್‌ಬುಕ್ ತಾಣ ಸಾಮಾಜಿಕವಾಗಿಯೂ ಹಲವಾರು ಕಾರ್ಯಗಳಲ್ಲಿ ನೊಂದವರಿಗೆ ಸಾಂತ್ವಾನವನ್ನು ನೀಡಿದೆ. ಅಂತಹುದೇ ಒಂದು ಕಥಾ ಹಂದರವನ್ನು ಬಿಚ್ಚಿಡುವಲ್ಲಿ ಫೇಸ್‌ಬುಕ್ ತನ್ನ ಪತಿಯನ್ನು ಕಳೆದುಕೊಂಡಾಗಕೆಗೆ ಹೊರ ಜಗತ್ತಿನ ನಂಟನ್ನು ಏರ್ಪಡಿಸುವ ಮೂಲಕ ಆಕೆಗೆ ಆಸರೆಯಾಗಿದೆ. ಅದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನಿಮ್ಮದುರು ಬಿಚ್ಚಿಡಲಿದ್ದೇವೆ.

ಓದಿರಿ: ಫೇಸ್‌ಬುಕ್ ಬಗ್ಗೆ ನೀವರಿಯದ ಮಾಹಿತಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೆದುಳಿನ ಒಡೆತದಿಂದ ಮರಣ ಹೊಂದಿದರು

ಫೇಸ್‌ಬುಕ್ ನೊಂದವರಿಗೆ ಸಾಂತ್ವಾನ

ಕ್ರಿಸ್ಟನ್ ಡೋನ್ ಗ್ರೋನ್ ಬರ್ಗ್ ಹಾಗೂ ಅಲೆಕ್ಸ್ ಗ್ರೋನ್ ಬರ್ಗ್ ದಂಪತಿಗಳು 2011 ರಲ್ಲಿ ವಿವಾಹವಾಗಿದ್ದರು. ಆದರೆ ದುರಾದೃಷ್ಟವಶಾತ್ ಅಲೆಕ್ಸ್ ತಮ್ಮ 30 ರ ಹರೆಯದಲ್ಲೇ ಮೆದುಳಿನ ಒಡೆತದಿಂದ ಮರಣ ಹೊಂದಿದರು.

ಕರಾಳವಾದ ಮನಸ್ಥಿತಿ

ಫೇಸ್‌ಬುಕ್ ನೊಂದವರಿಗೆ ಸಾಂತ್ವಾನ

ತನ್ನ 10 ವರ್ಷದ ಒಡನಾಡಿಯನ್ನು ಪತಿಯನ್ನು ಕಳೆದುಕೊಂಡ ಕ್ರಿಸ್ಟನ್‌ಗೆ ಅಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಹ ಅನುಭವವಾಗಿತ್ತು. ಮುಂದಿನ ಬದುಕು ಕರಾಳವಾದ ಮನಸ್ಥಿತಿ ಉಂಟಾಗಿತ್ತು.

ಫೇಸ್‌ಬುಕ್ ಒಡನಾಡಿಗಳು

ಫೇಸ್‌ಬುಕ್ ನೊಂದವರಿಗೆ ಸಾಂತ್ವಾನ

ಆದರೆ ಕ್ರಿಸ್ಟನ್ ನೆರವಿಗೆ ಫೇಸ್‌ಬುಕ್ ಒಡನಾಡಿಗಳು ಬಂದಿದ್ದರು. ತಮ್ಮ ಪತಿಯೊಂದಿಗಿನ ಮಧುರ ನೆನಪುಗಳು, ಆತನೊಂದಿಗೆ ಕಳೆದ ಕ್ಷಣಗಳನ್ನು ಕ್ರಿಸ್ಟನ್ ತಪ್ಪದೇ ಫೇಸ್‌ಬುಕ್‌ ವಾಲ್‌ಗೆ ಹಾಕಿ ನೆನಪುಗಳನ್ನು ಮೆಲುಕು ಹಾಕುತ್ತಿದ್ದರು. ಕ್ರಿಸ್ಟನ್ ಫೇಸ್‌ಬುಕ್ ಮೋಹ ನೋಡಿ ಅಲೆಕ್ಸ್ ಅವರನ್ನು ತಮಾಷೆಯಾಗಿ ಅಣಕಿಸುತ್ತಿದ್ದರಂತೆ.

ಮಧುರ ಅನುಭೂತಿ

ಫೇಸ್‌ಬುಕ್ ನೊಂದವರಿಗೆ ಸಾಂತ್ವಾನ

ಆದರೆ ಕ್ರಿಸ್ಟನ್ ವಾಲ್‌ಗೆ ಹಾಕಿದ ಈ ನೆನಪುಗಳು ಮಧುರ ಅನುಭೂತಿ ಅವರಿಗೆ ದೊಕಿಸಿಕೊಟ್ಟಿದ್ದು ಹಳೆಯ ಮತ್ತು ಹೊಸ ಗೆಳೆಯರನ್ನು. ಅಲೆಕ್ಸ್ ವಿಧಿವಶರಾದ ಸಂದರ್ಭದಲ್ಲಿ ಕ್ರಿಸ್ಟನ್‌ಗೆ ಜೊತೆಯಾದ ಸಂಗಾತಿಗಳು.

ಹೊಸ ಬದುಕಿನ ಬಾಗಿಲನ್ನು ತೆರೆಯಿಸಿತಂತೆ

ಫೇಸ್‌ಬುಕ್ ನೊಂದವರಿಗೆ ಸಾಂತ್ವಾನ

ಅಲೆಕ್ಸ್ ಕ್ರಿಸ್ಟಲ್ ಅವರ ಕೈ ಹಿಡಿದುಕೊಂಡು ಚರ್ಚ್ ಮುಂಭಾಗದಲ್ಲಿ ನಿಂತಿರುವ ಮದುವೆಯ ಫೋಟೋವನ್ನು ಕ್ರಿಸ್ಟಲ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದಾಗ ಅವರಿಗೆ ಸ್ನೇಹಿತರ ಸಾಂತ್ವಾನವೇ ಹೊಸ ಬದುಕಿನ ಬಾಗಿಲನ್ನು ತೆರೆಯಿಸಿತಂತೆ.

ಸ್ಮರಣಾರ್ಥ

ಫೇಸ್‌ಬುಕ್ ನೊಂದವರಿಗೆ ಸಾಂತ್ವಾನ

ಅಲೆಕ್ಸ್ ಅವರ ಸ್ಮರಣಾರ್ಥ ನಡೆದ ಸಮಾರಂಭದಲ್ಲೂ ಅವರ ಕುಟುಂಬ ಮತ್ತು ಸ್ನೇಹಿತರು ಒಟ್ಟು ಸೇರಿದ್ದರು. ಈ ಸಂದರ್ಭದಲ್ಲಿ ಕ್ರಿಸ್ಟಲ್ ಫೇಸ್‌ಬುಕ್‌ನಲ್ಲಿ ಅಲೆಕ್ಸ್ ಕುರಿತಾಗಿ ನೆನಪಿನ ಸರಣಿಯನ್ನೇ ಬರೆದುಕೊಂಡರು. ಅತ್ಯುತ್ತಮ ಸ್ನೇಹಿತನಾಗಿ, ಹಾಸ್ಯಗಾರನಾಗಿ ಒಬ್ಬ ಒಳ್ಳೆಯ ಪತಿಯಾಗಿ ಕ್ರಿಸ್ಟಲ್ ಅಲೆಕ್ಸ್ ಅನ್ನು ಕುರಿತು ವಾಲ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ದುಃಖದ ಮಡುವಿನಿಂದ ಹೊರಬರಲು ಕ್ರಿಸ್ಟಲ್‌ಗೆ ಸಹಾಯ ಮಾಡಿದೆ.

ನೆರವಿನ ಹಸ್ತ

ಫೇಸ್‌ಬುಕ್ ನೊಂದವರಿಗೆ ಸಾಂತ್ವಾನ

ಫೇಸ್‌ಬುಕ್ ಚೀಪ್ ಆಫೀಸರ್ ಶೆರಿಲ್ ಸ್ಯಾಂಡ್‌ಬರ್ಗ್ ಕೂಡ ಈ ಸಮಯದಲ್ಲಿ ಕ್ರಿಸ್ಟಲ್‌ಗೆ ನೆರವಿನ ಹಸ್ತವನ್ನು ಚಾಚಿದ್ದರು. ಶೆರಿಲ್ ಪತಿ ಡೇವ್ ಮರಣ ಹೊಂದಿದ ಸಂದರ್ಭದಲ್ಲೂ ಶೆರಿಲ್ ಅದನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ಲೈಕ್‌ಗಳ ಸುರಿಮಳೆ

ಫೇಸ್‌ಬುಕ್ ನೊಂದವರಿಗೆ ಸಾಂತ್ವಾನ

ಕ್ರಿಸ್ಟಲ್ ಮತ್ತು ಅಲೆಕ್ಸ್ ಪ್ರಯಾಣ ಮಾಡಿದ ಸ್ಥಳಗಳಿಗೆಲ್ಲಾ ಕ್ರಿಸ್ಟಲ್ ಭೇಟಿ ಇತ್ತರು ಮತ್ತು ಆ ನೆನಪುಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಹೆಚ್ಚಿನ ಫೇಸ್‌ಬುಕ್ ಬಳಕೆದಾರರು ಇದಕ್ಕೆ ಲೈಕ್‌ಗಳ ಸುರಿಮಳೆಯನ್ನೇ ಹರಿಸಿದ್ದರು.

ಕ್ರಿಸ್ಟಲ್ ಹಂಚಿಕೊಂಡ ನೆನಪುಗಳು

ಫೇಸ್‌ಬುಕ್ ನೊಂದವರಿಗೆ ಸಾಂತ್ವಾನ

ಫೇಸ್‌ಬುಕ್‌ನಲ್ಲಿ ಕ್ರಿಸ್ಟಲ್ ಹಂಚಿಕೊಂಡ ನೆನಪುಗಳು ಇದೀಗ ಆಕೆಗೆ ಸಾಂತ್ವನ್ನು ನೀಡುತ್ತಿದೆ ಮತ್ತು ಪತಿಯ ದುಃಖವನ್ನು ಮರೆಯುವಲ್ಲಿ ಸಹಕಾರಿಯಾಗಿದೆ.

ಫೇಸ್‌ಬುಕ್ ನನಗೆ ನೆರವಾಗಿದೆ

ಫೇಸ್‌ಬುಕ್ ನೊಂದವರಿಗೆ ಸಾಂತ್ವಾನ

ವ್ಯಕ್ತಿಯ ಸಂಬಂಧಗಳನ್ನು ಎಂದಿಗೂ ಇದು ಸ್ಥಾನಾಂತರಿಸುವುದಿಲ್ಲ ಆದರೆ ಅಲೆಕ್ಸ್‌ನ ಜೀವನದ ನೆನಪನ್ನು ಇತರರೊಂದಿಗೆ ಹಂಚಿಕೊಳ್ಳಲು ಫೇಸ್‌ಬುಕ್ ನನಗೆ ನೆರವಾಗಿದೆ ಮತ್ತು ಅವರಿಲ್ಲ ಎಂಬ ದುಃಖವನ್ನು ನನಗೆ ಅರಗಿಸಿಕೊಳ್ಳಲು ಸಹಾಯಕವಾಗಿದೆ ಎಂಬುದು ಕ್ರಿಸ್ಟಲ್ ಮಾತಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can find how Kristina Doan Gruenberg sharing her passed husband memories through facebook social media.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot