ಇನ್ಮುಂದೆ ವಾಟ್ಸಾಪ್‌ನಲ್ಲಿ ಕೂಡ ಲಭ್ಯವಾಗಲಿದೆ ಡಿಜಿಲಾಕರ್‌ ಸೇವೆಗಳು!

|

MyGov ಹೆಲ್ಫ ಡೆಸ್ಕ್‌ ಇದೀಗ ವಾಟ್ಸಾಪ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. MyGov ಹೆಲ್ಫ ಡೆಸ್ಕ್‌ ವಾಟ್ಸಾಪ್‌ ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು, ಇನ್ಮುಂದೆ ಡಿಜಿಲಾಕರ್ ಸೇವೆಗಳು ವಾಟ್ಸಾಪ್‌ನಲ್ಲಿ ಕೂಡ ಲಭ್ಯವಾಗಲಿದೆ. ಅದರಂತೆ ವಾಟ್ಸಾಪ್‌ ಬಳಕೆದಾರರು ಡಿಜಿಲಾಕರ್ ಖಾತೆಯನ್ನು ರಚಿಸುವುದು ಮತ್ತು ದೃಢೀಕರಿಸುವುದು ಮತ್ತು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪ್ರಮಾಣಪತ್ರ ಮುಂತಾದ ದಾಖಲೆಗಳನ್ನು ಡೌನ್‌ಲೋಡ್ ಮಾಡುವುದಕ್ಕೆ ಅವಕಾಶ ಲಭ್ಯವಾಗಲಿದೆ.

ವಾಟ್ಸಾಪ್‌ನಲ್ಲಿ

ಹೌದು, ಡಿಜಿಲಾಕರ್‌ ಸೇವೆ ಇನ್ಮುಂದೆ ವಾಟ್ಸಾಪ್‌ನಲ್ಲಿ ಕೂಡ ಲಭ್ಯವಾಗಲಿದೆ. ಇದಕ್ಕಾಗಿ MyGov ಹೆಲ್ಫ ಡೆಸ್ಕ್‌ ವಾಟ್ಸಾಪ್‌ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ. ಇದರಿಂದ ನಾಗರಿಕರು ವಾಟ್ಸಾಪ್‌ನಲ್ಲಿ MyGov ಹೆಲ್ಪ್‌ಡೆಸ್ಕ್ ಮೂಲಕ ಡಿಜಿಲಾಕರ್ ಸೇವೆಯನ್ನು ಪ್ರವೇಶಿಸಲು ಸಾಧ್ಯವಾಗಲಿದೆ. ಇನ್ನು ಈ ಹೊಸ ಸೇವೆಯಲ್ಲಿ ಬಳಕೆದಾರರು ಡಿಜಿಲಾಕರ್‌ನಲ್ಲಿ ಇಟ್ಟಿರುವ ಡಾಕ್ಯುಮೆಂಟ್‌ಗಳನ್ನು ವಾಟ್ಸಾಪ್‌ ಮೂಲಕ ಡೌನ್‌ಲೋಡ್‌ ಮಾಡಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ ಮೂಲಕ ಡಿಜಿಲಾಕರ್‌ ಸೇವೆಯನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಜಿಲಾಕರ್

ಡಿಜಿಲಾಕರ್ ತಮ್ಮ ಡಿಜಿಟಲ್ ಡಾಕ್ಯುಮೆಂಟ್ ವ್ಯಾಲೆಟ್‌ನಲ್ಲಿ ಅಧಿಕೃತ ಡಿಜಿಟಲ್ ದಾಖಲೆಗಳಿಗೆ ಪ್ರವೇಶವನ್ನು ನೀಡಲಿದೆ. ಡಿಜಿಲಾಕರ್ ವ್ಯವಸ್ಥೆಯಲ್ಲಿ ನೀಡಲಾದ ದಾಖಲೆಗಳನ್ನು ಮೂಲ ಭೌತಿಕ ದಾಖಲೆಗಳೊಂದಿಗೆ ಸಮನಾಗಿರುತ್ತದೆ ಎಂದು ಸರ್ಕಾರ ಈಗಾಗಲೇ ಪರಿಗಣಿಸಿದೆ. ಇದೀಗ ವಾಟ್ಸಾಪ್‌ನಲ್ಲಿ MyGov ಹೆಲ್ಪ್‌ಡೆಸ್ಕ್‌ನಲ್ಲಿ ಡಿಜಿಲಾಕರ್ ಸೇವೆಗಳನ್ನು ಪ್ರವೇಶಿಸಬಹುದು. ಡಿಜಿಲಾಕರ್‌ಡಿಜಿಟಲ್ ಸೇರ್ಪಡೆ ಮತ್ತು ದಕ್ಷ ಆಡಳಿತವನ್ನು ಉತ್ತೇಜಿಸಲು ಸಹಾಯ ಮಾಡಲಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌ನಲ್ಲಿ

ಇನ್ನು ವಾಟ್ಸಾಪ್‌ನಲ್ಲಿ ಡಿಜಿಲಾಕರ್ ಖಾತೆಯನ್ನು ರಚಿಸುವುದು ಮತ್ತು ದೃಢೀಕರಿಸುವುದು, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪ್ರಮಾಣಪತ್ರದಂತಹ ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಇದರಿಂದ ಸರ್ಕಾರಿ ಸೇವೆಗಳನ್ನು ವಾಟ್ಸಾಪ್‌ನಲ್ಲಿಯೇ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಇನ್ನು ಡಿಜಿಲಾಕರ್‌ ನಂತಹ ಹೊಸ ಸೇರ್ಪಡೆಗಳೊಂದಿಗೆ, ವಾಟ್ಸಾಪ್‌ನಲ್ಲಿನ MyGov ಚಾಟ್‌ಬಾಟ್ ನಾಗರಿಕರಿಗೆ ಅಗತ್ಯ ಸೇವೆಗಳನ್ನು ಪ್ರವೇಶಿಸಲು ಅವಕಾಶ ಸಿಗಲಿದೆ.

ವಾಟ್ಸಾಪ್‌

ವಾಟ್ಸಾಪ್‌ ಬಳಕೆದಾರರು ವಾಟ್ಸಾಪ್ ಸಂಖ್ಯೆ +91 9013151515 ಗೆ 'ನಮಸ್ತೆ' ಅಥವಾ 'ಹಾಯ್' ಅಥವಾ 'ಡಿಜಿಲಾಕರ್' ಅನ್ನು ಕಳುಹಿಸುವ ಮೂಲಕ ಚಾಟ್‌ಬಾಟ್ ಅನ್ನು ಬಳಸಬಹುದಾಗಿದೆ. ಇನ್ನು MyGov ಹೆಲ್ಪ್‌ಡೆಸ್ಕ್‌ನಲ್ಲಿ ಡಿಜಿಲಾಕರ್ ಸೇವೆಗಳನ್ನು ವಾಟ್ಸಾಪ್‌ ಮೂಲಕ ಅಗತ್ಯ ಸೇವೆಗಳಿಗೆ ಸರಳೀಕೃತ ಪ್ರವೇಶಿಸಬಹುದಾಗಿದೆ. ಈಗಾಗಲೇ ಸುಮಾರು 100 ಮಿಲಿಯನ್ ಜನರು ಡಿಜಿಲಾಕರ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇದೀಗ ವಾಟ್ಸಾಪ್‌ನಲ್ಲಿ ಡಿಜಿಲಾಕರ್‌ ಸೇವೆಗೆ ಪ್ರವೇಶಿಸುವುದಕ್ಕೆ ಅವಕಾಶವಿರುವುದರಿಂದ ಇದರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.

ಶಿವನಾಥ್

ಇನ್ನು ಈ ಹೊಸ ಸೇವೆಯ ಬಗ್ಗೆ ಪ್ರತಿಕ್ರಿಯಿಸಿರುವ ವಾಟ್ಸಾಪ್‌ನ ಸಾರ್ವಜನಿಕ ನೀತಿಯ ನಿರ್ದೇಶಕ ಶಿವನಾಥ್ ತುಕ್ರಾಲ್ "ಮೈಗೌವ್ ಹೆಲ್ಪ್‌ಡೆಸ್ಕ್ ಅನ್ನು ನೇರವಾಗಿ ವಾಟ್ಸಾಪ್ ಮೂಲಕ ಪ್ರವೇಶಿಸಬಹುದಾದ ಡಿಜಿಲಾಕರ್ ಸೇವೆಗಳೊಂದಿಗೆ ಸಜ್ಜುಗೊಳಿಸುವುದು, ನಾಗರಿಕರಿಗೆ ಅಗತ್ಯ ಸೇವೆಗಳ ಪ್ರಯೋಜನಗಳನ್ನು ವಿಸ್ತರಿಸಲು ನಾವು ತಂತ್ರಜ್ಞಾನದ ಸಾಮರ್ಥ್ಯವನ್ನು ಅನ್‌ಲಾಕ್ ಮಾಡಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಇದು ಡಿಜಿಟಲ್ ಇಂಡಿಯಾ ದೃಷ್ಟಿ ಮತ್ತು ಡಿಜಿಟಲ್ ಸಶಕ್ತ ದೇಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Best Mobiles in India

English summary
MyGov has partnered with WhatsApp to offer new Digilocker services

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X