ವಿಶ್ವದ ಮೊದಲ 'ಹೈಪರ್‌ಲೂಪ್' ಚಾಲನೆ ಮಾಡಲಿರುವ ಭಾರತೀಯ ಸಂಜಾತೆ!..ಇವರ ಕಥೆಯೇ ರೋಚಕ!!

  |

  ಬುಲೆಟ್ ಟ್ರೇನಿಗಿಂತ, ವಿಮಾನಕ್ಕಿಂತ ವೇಗದ ಸಾರಿಗೆಯಾಗಿರಲಿದೆ ಎಂದು ಹೇಳಲಾಗಿರುವ ಹೈಪರ್‌ಲೂಪ್ ಬಗ್ಗೆ ನಿಮಗೆಲ್ಲಾ ಈಗಾಗಲೇ ತಿಳಿದಿರಬಹುದು. 2024ರ ವೆಳೆಗೆ ಭಾರತದಲ್ಲಿ ಪುಣೆ ಮತ್ತು ಮುಂಬೈ ನಡುವೆ ಓಡಲಿದೆ ಎನ್ನುವ ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆ ಬಗ್ಗೆ ಈಗಾಗಲೇ ಹತ್ತು ಹಲವು ಸುದ್ದಿಗಳು ಭಿತ್ತರವಾಗಿವೆ. ಆದರೆ, ನಾವಿಂದು ಹೇಳುತ್ತಿರುವುದು ವಿಶ್ವದ ಮೊದಲ ಪ್ರಯಾಣಿಕರನ್ನು ಹೊತ್ತಿರುವ ಮೊದಲ 'ಹೈಪರ್‌ಲೂಪ್' ಅನ್ನು ಮುನ್ನೆಡೆಸುವ ಭಾರತೀಯ ಹೆಸರಿನ ವಿಜ್ಞಾನಿಯ ಬಗ್ಗೆ.!

  ಹೌದು, ಹೈಪರ್‌ಲೂಪ್ ಭಾರತಕ್ಕೆ ಮೊದಲು ಬರುತ್ತದೊ ಅಥವಾ ದುಬೈಗೆ ಆ ಕೀರ್ತಿ ಸಿಗುತ್ತದೊ ಎಂಬ ವಿಷಯದ ನಡುವೆಯೇ ಭಾರತೀಯ ಮೂಲದ ಸಂಭಂದವನ್ನು ಹೊಂದಿರುವ ಡಾ. ಅನಿತಾ ಸೇನ್‌ಗುಪ್ತಾ ಎಂಬ ಮಹಿಳಾ ವಿಜ್ಞಾನಿ ವಿಶ್ವದ ಮೊದಲ ಪ್ರಯಾಣಿಕ ಹೈಪರ್‌ಲೂಪ್ ಯೋಜನಯನ್ನು ತಮ್ಮ ತೆಕ್ಕೆಗೆ ಪಡೆದಿದ್ದಾರೆ. ವಿಶ್ವ ವಿಜ್ಞಾನ ಲೋಕದಲ್ಲಿ ಇದೀಗ ತಾರಾ ವರ್ಚಸ್ಸು ಪಡೆದುಕೊಳ್ಳುತ್ತಿರುವ ಡಾ. ಅನಿತಾ ಸೇನ್‌ಗುಪ್ತಾ ಅವರ ಜೀವನದ ಕಥೆಯು ಹೈಪರ್‌ಲೂಪ್‌ನಿಂದ ಮತ್ತಷ್ಟು ರೋಚಕತೆಯನ್ನು ಪಡೆದುಕೊಂಡಿದೆ.

  ವಿಶ್ವದ ಮೊದಲ 'ಹೈಪರ್‌ಲೂಪ್' ಚಾಲನೆ ಮಾಡಲಿರುವ ಭಾರತೀಯ ಸಂಜಾತೆ!.ಇವರ ಕಥೆಯೇ ರೋಚಕ!

  ಅಮೆರಿಕಾದಲ್ಲಿ ಎಂಜಿನಿಯರಿಂಗ್ ಮುಗಿಸಿ ನಾಸಾ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಡಾ. ಅನಿತಾ ಸೇನ್‌ಗುಪ್ತಾ ಅವರ ಜೀವನದ ವರ್ಚಸ್ಸು ಇಲ್ಲಿಯವರೆಗೂ ಟ್ವಿಟ್ಟರ್, ಫೇಸ್‌ಬುಕ್‌ಗಳಲ್ಲಿ ಮಾತ್ರ ಪಡೆದಿತ್ತು. ಆದರೆ, ಪ್ರಯಾಣಿಕರನ್ನು ಹೊತ್ತಿರುವ ಮೊದಲ 'ಹೈಪರ್‌ಲೂಪ್' ಅನ್ನು ಡಾ. ಅನಿತಾ ಸೇನ್‌ಗುಪ್ತಾ ಅವರು ನಿರ್ವಹಣೆ ಮಾಡುತ್ತಾರೆ ಎಂದ ನಂತರ, ಅವರ ಕೀರ್ತಿ ಮುಗಿಲು ಮುಟ್ಟಿದೆ. ಹಾಗಾದರೆ, ಯಾರು ಈ ಭಾರತೀಯ ಹೆಸರನ್ನು ಹೊತ್ತಿರುವ ಡಾ. ಅನಿತಾ ಸೇನ್‌ಗುಪ್ತಾ? ವಿಜ್ಞಾನ ಲೋಕದಲ್ಲಿ ಇವರ ಮಹಾನ್ ಸಾಧನೆಯೇನು ಎಂಬುದನ್ನು ಮುಂದೆ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಯಾರು ಈ ಡಾ. ಅನಿತಾ ಸೇನ್‌ಗುಪ್ತಾ?

  ಟ್ವಿಟ್ಟರ್, ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ಗಲ್ಲಿ ಹೆಚ್ಚು ಮಿಂಚುತ್ತಿರುವ ಡಾ. ಅನಿತಾ ಸೇನ್‌ಗುಪ್ತಾ ಅವರು, ಸ್ಕಾಟ್ಲೆಂಡಿನಲ್ಲಿ ನೆಲೆಸಿ ಬ್ರಿಟೀಷ್ ಯುವತಿಯ ಕೈಹಿಡಿದ ಬೆಂಗಾಲಿ ಎಂಜಿನಿಯರ್ ಸೇನ್‌ಗುಪ್ತಾ ಅವರ ಮಗಳು. ಅಮೆರಿಕಾದಲ್ಲಿ ಎಂಜಿನಿಯರಿಂಗ್ ಓದಿ, ಕ್ಷುದ್ರಗ್ರಹಗಳ ರಾಕೆಟ್ ಹಾರಿಸುವ ವಿಷಯದ ಬಗ್ಗೆ ಪಿಹೆಚ್‌ಡಿ ಮಾಡುತ್ತಲೇ ನಾಸಾ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿದ ಯುವ ಮಹಿಳಾ ವಿಜ್ಞಾನಿ ಇವರು. ನಾಸಾ ಸಂಸ್ಥೆಯಲ್ಲಿ ಬಲುಬೇಗ ಮೇಲಕ್ಕೇರಿದವರು.

  ಕ್ಯೂರಿಯಾಸಿಟಿ ಗಟ್ಟಿಗಿತ್ತಿ!

  ಅಮೆರಿಕಾದವರು 2012ರಲ್ಲಿ ಮಗಳ ಗ್ರಹದತ್ತ ಹಾರಿಬಿಟ್ಟ ಕ್ಯೂರಿಯಾಸಿಟಿ' ಎಂಬ ವಾಹನದ ರೀತಿಯ ರೋಬೋಟ್ ಬಗ್ಗೆ ನಿಗಗೆಲ್ಲಾ ತಿಳಿದಿದೆ. ಆದರೆ, 250 ಶತಕೋಟಿ ಡಾಲರ್ ಯೋಜನೆ ಹಾಗೂ ನಾಸಾ ಕೀರ್ತಿ ಎರಡನ್ನೂ ಮಂಗಳನ ನೆಲದಲ್ಲಿ ತಳವೂರಿಸಿದ್ದು ಇದೇ ಡಾ. ಅನಿತಾ ಸೇನ್‌ಗುಪ್ತಾ. ಇವರ ಒಂದು ಸಾಧನೆ ಈಗಲೂ ನಾಸಾದ ವಿಶ್ವ ವಿಖ್ಯಾತ 'ಕ್ಯೂರಿಯಾಸಿಟಿ' ಯೋಜನೆಯ ಜೊತೆಯಲ್ಲಿದೆ ಎಂದರೆ ನೀವು ನಂಬಲೇಬೇಕು.

  ವಿಶೇಷ ಪ್ಯಾರಾಚೂಟ್ ನಿರ್ಮಿಸಿದ್ದು ಇವರೇ!!

  250 ಶತಕೋಟಿ ಡಾಲರ್ ಯೋಜನೆಯಲ್ಲಿ ತಯಾರಾದ ನಾಸಾದ 'ಕ್ಯೂರಿಯಾಸಿಟಿ' ನೌಕೆಯನ್ನು ನೀವು ನೋಡಿದ್ದಿರಾ ಅಲ್ಲವೇ?. ಆ ನೌಕೆಯು ಮಂಗಳನ ಮೇಲೆ ಸುರಕ್ಷಿತವಾಗಿ ಇಳಿದದ್ದು ಇದೇ ಡಾ. ಅನಿತಾ ಸೇನ್‌ಗುಪ್ತಾ ಅವರ ಯಶಸ್ವಿ ಸಂಶೋಧನೆಯಿಂದ.! ಮಂಗಳ ಗ್ರಹದಲ್ಲಿನ ತೆಳುವಾದ ವಾತಾವರಣದಲ್ಲಿ ಏನನ್ನು ಇಳಿಸಲು ಹೋದಲು ಅದು ಬಹುಬೇಗ ನೆಲಕಚ್ಚುತ್ತದೆ. ಇಂತ ಸಮಸ್ಯೆಯನ್ನು ನಿವಾರಣೆಯಾಗಿದ್ದು ಇದೇ ಡಾ. ಅನಿತಾ ಸೇನ್‌ಗುಪ್ತಾ ಅವರು ಕಂಡುಹಿಡಿದ ವಿಶೇಷ ಪ್ಯಾರಾಚೂಟ್‌ನಿಂದ ಎಂಬುದು ಹೆಮ್ಮೆಯ ವಿಷಯ.!

  ಶ್ಯೂನ್ಯ ಪೆಟ್ಟಿಗೆ ಸೃಷ್ಟಿಕರ್ತೆ!!

  'ಕ್ಯೂರಿಯಾಸಿಟಿ' ನೌಕೆಗೆ ಯಶಸ್ವಿ ಪ್ಯಾರಾಚೂಟ್ ಅನ್ನು ತಯಾರಿಸಿದ್ದ ಡಾ. ಅನಿತಾ ಸೇನ್‌ಗುಪ್ತಾ ಅವರ ಸಾಧನೆ ಅಲ್ಲಿಗೆ ನಿಂತಿಲ್ಲ. ಬದಲಾಗಿ, ವಿಶ್ವದ ಅತಿ ಚಳಿಬಿಂದುವನ್ನು ಸೃಷ್ಟಿಸುವ ಪೆಟ್ಟಿಗೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವಲ್ಲಿ ಅನಿತಾ ಸೇನ್‌ಗುಪ್ತಾ ಅವರ ಸಹಾಯ ಕೂಡ ಗುರುತರವಾಗಿದೆ. ನಿಖರ ಶೂನ್ಯ ಸಮೀಪವನ್ನು ಸಹ ಭೂಮಿಯ ಮೇಲೆ ತಲುಪಲು ಸಾಧ್ಯ ವಿಲ್ಲದಿರುವುದರಿಂದ ಬಾಹ್ಯಾಕಾಶದಲ್ಲಿ ಇದನ್ನು ಸಾಧ್ಯವಾಗಿಸಬಲ್ಲ ಯೋಜನೆಗೆ ಅನಿತಾ ಅವರು ಪ್ರಾಜೆಕ್ಟ್ ಮ್ಯಾನೆಜರ್ ಆಗಿದ್ದರು.

  ಹೈಪರ್‌ಲೂಪ್ ಹೊಣೆ ಹೊತ್ತಿದ್ದಾರೆ ಅನಿತಾ!!

  ಬಾಹ್ಯಾಕಾಶದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಡಾ. ಅನಿತಾ ಸೇನ್‌ಗುಪ್ತಾ ಅವರು, ಈಗ ಭೂಮಿಯ ಮೇಲಿನ ಅತಿವೇಗದ ಸಾರಿಗೆಯಾದ ಹೈಪರ್‌ಲೂಪ್ ಹಿಂದೆ ಬಿದ್ದಿದ್ದಾರೆ. ಹೈಪರ್‌ಲೂಪ್ ಒನ್ ಯೋಜನೆಯಲ್ಲಿ ಸೀನಿಯರ್ ವೈಸ್ ಪ್ರೆಸಿಡೆಂಟ್ ಎಂಬ ಬಹು ಎತ್ತರದ ಹುದ್ದೆಯನ್ನು ಏರಿದ್ದಾರೆ. ಕೊಳವೆ ಮಾರ್ಗವನ್ನು ಪೈಲೆಟ್ ಹಂತದಿಂದ ಜನಬಳಕೆಗೆ ತರುವ ಹೊಣೆಯನ್ನು ಹೊತ್ತಿದ್ದಾರೆ. ಅಂದರೆ, ಪ್ರಯಾಣಿಕರನ್ನು ಹೊತ್ತಿರುವ ಮೊದಲ 'ಹೈಪರ್‌ಲೂಪ್' ಅನ್ನು ಡಾ. ಅನಿತಾ ಸೇನ್‌ಗುಪ್ತಾ ಅವರು ಚಾಲನೆ ಮಾಡುತ್ತಾರೆ.

  ಪ್ರಚಂಡ ಸಾಹಸಿ ಡಾ. ಅನಿತಾ ಸೇನ್‌ಗುಪ್ತಾ!

  ಇಷ್ಟೆಲ್ಲಾ ಯಶಸ್ಸನ್ನು ಗಳಿಸಿಕೊಂಡಿರುವ ಡಾ. ಅನಿತಾ ಸೇನ್‌ಗುಪ್ತಾ ಅವರು ವೈಯಕ್ತಿಕ ಜೀವನದಲ್ಲಿಯೂ ಪ್ರಚಂಡ ಸಾಹಸಿ. ವಿಮಾನವನ್ನು ಹಾರಿಸುವ ,ಆಳ ಸಮುದ್ರದಲ್ಲಿ ಡೈವ್ ಮಾಡುವ, ಹಿಮ ಪರ್ವತವನ್ನು ಸಹ ಏರುವ ಅನಿತಾ ಸೇನ್‌ಗುಪ್ತಾ ಅವರು, ನಿಖರ ಗುರಿ ಇದ್ದರೆ, ಛಲವಿದ್ದರೆ ಮಹಿಳೆಯರಿಗೆ ಆಕಾಶವು ಮಿತಿಯಲ್ಲ, ಆರಂಭವಷ್ಟೆ ಎಂದು ಹೇಳುತ್ತಾರೆ. ಈಗ ಆಕಾಶದಲ್ಲಿ ಚಲಿಸಬೇಕಿದ್ದ ರಾಕೆಟ್ ಅನ್ನು ನೆಲದ ಮೇಲೆ ಓಡಿಸಲು ಶ್ರಮಿಸುತ್ತಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Anita Sengupta is an India-American who hails from West Bengal has worked on NASA’s physics experiment that was responsible to create the coldest spot in the universe.to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more