Subscribe to Gizbot

ಹ್ಯಾಕರ್‌ಗಳಿಂದ ಸಮಸ್ಯೆಗೆ ಸಿಲುಕಿದ 1.3 ದಶಲಕ್ಷ ಆಂಡ್ರಾಯ್ಡ್ ಫೋನ್ಸ್: ಜಿಮೇಲ್ ಖಾತೆದಾರರೇ ಎಚ್ಚರ!

Written By:

ಹ್ಯಾಕರ್‌ಗಳು ಅಂತು ಇಂತೂ ಮತ್ತೊಮ್ಮೆ ಮೊಬೈಲ್‌ ಬಳಕೆದಾರರಿಗೆ ಎಚ್ಚರಿಕೆ ಇಂದಿರಿ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಇನ್ಮುಂದೆಯಾದರೂ ಯಾವುದೇ ಮೊಬೈಲ್‌ ಅಪ್ಲಿಕೇಶನ್‌ಗಳನ್ನು ಅಧಿಕೃತ ಆಪ್ ಸ್ಟೊರ್ ಹೊರತುಪಡಿಸಿ ಬೇರೆ ಯಾವ ಸೈಟ್‌ನಿಂದಲೂ ಆಪ್ ಡೌನ್‌ಲೋಡ್‌ ಮಾಡಿಕೊಳ್ಳದಂತೆ ಶಾಕ್‌ ನೀಡಿದ್ದಾರೆ.

ಹ್ಯಾಕರ್‌ಗಳಿಂದ ಸಮಸ್ಯೆಗೆ ಸಿಲುಕಿದ 1.3 ದಶಲಕ್ಷ ಆಂಡ್ರಾಯ್ಡ್ ಫೋನ್ಸ್: ಎಚ್ಚರ!

ಹೌದು, ಹ್ಯಾಕರ್‌ಗಳು ಸುಮಾರು 1.3 ದಶಲಕ್ಷ ಗೂಗಲ್‌ ಖಾತೆಗಳು, ಇಮೇಲ್‌ಗಳು, ಫೋಟೋಗಳು ಮತ್ತು ಡಾಕ್ಯುಮೆಂಟ್ ಇತರೆ ಮಾಹಿತಿಗಳ ಆಕ್ಸೆಸ್‌ ಅನ್ನು ಪಡೆದಿದ್ದಾರೆ. ಹ್ಯಾಕರ್‌ಗಳು ಈ ರೀತಿ ಆಕ್ಸೆಸ್ ಪಡೆಯುವುದಕ್ಕೆ ನೆರವಾಗಿರುವುದು ಆಂಡ್ರಾಯ್ಡ್ ಮೊಬೈಲ್‌ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡ ಫೇಕ್‌ ಆಪ್‌ಗಳೇ ಕಾರಣ.

ಆಂಡ್ರಾಯ್ಡ್ ಫೋನ್‌ನ ಟಾಪ್ ಭದ್ರತಾ ಕವಚಗಳು

ಅಂದಹಾಗೆ ಈ ಬಗ್ಗೆ 'ಚೆಕ್‌ ಪಾಯಿಂಟ್' ಎಂಬ ಸೈಬರ್ ಸೆಕ್ಯೂರಿಟಿ ಸಂಸ್ಥೆಯ ಕಂಪ್ಯೂಟರ್ ಸಂಶೋಧಕರು ಸಂಶೋಧನೆ ನಡೆಸಿದ್ದಾರೆ. ಅಲ್ಲದೇ ಗೂಗಲ್ ಸಹ ಬುಧವಾರ (ಡಿಸೆಂಬರ್ 30) ಹೌದು, ಕೆಲವು ಸಮಸ್ಯೆಗಳು ಉಂಟಾಗಿದೆ ಎಂದು ಖಚಿತಪಡಿಸಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹ್ಯಾಕರ್‌ಗಳಿಂದ ಸಮಸ್ಯೆಗೆ ಸಿಲುಕಿದ 1.3 ದಶಲಕ್ಷ ಆಂಡ್ರಾಯ್ಡ್ ಫೋನ್ಸ್: ಎಚ್ಚರ!

ಸುಮಾರು 1.3 ದಶಲಕ್ಷ ಗೂಗಲ್‌ ಖಾತೆಗಳು, ಇಮೇಲ್‌ಗಳನ್ನು ಹ್ಯಾಕ್‌ ಮಾಡಿರುವ ಹ್ಯಾಕರ್‌ಗಳು ಡಿಜಿಟಲ್‌ 'ಟೋಕೆನ್‌'ಗಳನ್ನು ಕದಿಯಲು ಗೂಗಲ್‌ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಇದರಿಂದ ಅವರು ಗೂಗಲ್‌ ಸೇವೆಗಳಾದ ಇಮೇಲ್‌, ಫೋಟೋ ಕಲೆಕ್ಷನ್ ಇತರ ಸೇವೆಗಳ ಆಕ್ಸೆಸ್ ಪಡೆಯಬಹುದು. ಆದರೆ ಗೂಗಲ್‌ ಪ್ರಕಾರ, ಹ್ಯಾಕರ್‌ಗಳು ಇನ್ನೂ ಸಹ ಯಾವುದೇ ಮಾಹಿತಿಯನ್ನು ಕಳ್ಳತನ ಮಾಡಿಲ್ಲ ಎಂದು ಹೇಳಿದೆ.

ಹ್ಯಾಕರ್‌ಗಳಿಂದ ಸಮಸ್ಯೆಗೆ ಸಿಲುಕಿದ 1.3 ದಶಲಕ್ಷ ಆಂಡ್ರಾಯ್ಡ್ ಫೋನ್ಸ್: ಎಚ್ಚರ!

ಜಿಮೇಲ್‌ ಬಳಕೆದಾರರ ಸುರಕ್ಷತೆಗಾಗಿ 5 ಫೀಚರ್‌ಗಳು: ಗೂಗಲ್‌

ಹ್ಯಾಕರ್‌ಗಳು ಗೂಗಲ್‌ ಖಾತೆ ಹ್ಯಾಕ್‌ ಮಾಡಲು ಸಾಧ್ಯವಾಗುತ್ತಿರುವುದು ಹೇಗೆ?
ಆಂಟಿವೈರಸ್, ಮಾಲ್‌ವೇರ್‌ಗೆ ಒಳಗಾದ ಸ್ಮಾರ್ಟ್‌ಫೋನ್‌ಗಳು, ಫೇಸ್‌ ಆಂಡ್ರಾಯ್ಡ್ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಆರಂಭಿಸುತ್ತವೆ. ಅವುಗಳಿಗೆ ಹೆಚ್ಚಿನ ರೇಟಿಂಗ್ ನೀಡಿಕೊಳ್ಳಲಾಗುತ್ತದೆ. ಈ ರೀತಿಯ ವಂಚನೆಯಿಂದ ಆಕ್ಸೆಸ್ ಪಡೆಯುತ್ತಾರೆ ಎಂದು 'ಚೆಕ್ ಪಾಯಿಂಟ್' ಸಂಶೋಧಕರು ಹೇಳಿದ್ದಾರೆ.

ಹ್ಯಾಕರ್‌ಗಳಿಂದ ಸಮಸ್ಯೆಗೆ ಸಿಲುಕಿದ 1.3 ದಶಲಕ್ಷ ಆಂಡ್ರಾಯ್ಡ್ ಫೋನ್ಸ್: ಎಚ್ಚರ!

ಗೂಗಲ್‌ ಈಗಾಗಲೇ ಫೇಕ್ ಆಂಡ್ರಾಯ್ಡ್ ಆಪ್‌ಗಳನ್ನು ತನ್ನ ಅಧಿಕೃತ ಆಪ್‌ ಸ್ಟೋರ್‌ನಿಂದ ಡಿಲೀಟ್ ಮಾಡಿದೆ ಎಂದು, ಕಂಪನಿ ಆಂಡ್ರಾಯ್ಡ್ ಸೆಕ್ಯೂರಿಟಿ ನಿರ್ದೇಶಕ ಅಡ್ರಿಯನ್ ಲುಡ್‌ವಿಗ್ ರವರ ಬ್ಲಾಗ್ ಪೋಸ್ಟ್‌ನಿಂದ ತಿಳಿಯಲಾಗಿದೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about:
English summary
Nearly one million Android phones infected by hackers. To know more about this visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot