ಕೇಬಲ್ ಮತ್ತು ಡಿ2ಎಚ್‌ ಬ್ಯುಸಿನೆಸ್‌ಗೆ ಕಂಟಕವಾದ 'ನೆಟ್‌ಫ್ಲಿಕ್ಸ್‌'!

|

ಸದ್ಯ ಟಿವಿ ವೀಕ್ಷಣೆಯ ವ್ಯವಸ್ಥೆ ಬದಲಾವಣೆಯ ಹಾದಿಯಲ್ಲಿದ್ದು, ಕೇಬಲ ಮೂಲಕ ಟಿವಿಗೆ ಡಿಶ್‌ ಕನೆಕ್ಷನ್‌ ನೀಡುವ ಪರಂಪರೆ ಮರೆಯಾಗುತ್ತಿದೆ. ಲೈವ್‌ ಟಿವಿ ಸ್ಟಿಕ್‌ ಮತ್ತು ವಿಡಿಯೊ ಸ್ಟ್ರಿಮಿಂಗ್ ಆಪ್‌ಗಳು ವೀಕ್ಷಣೆಯ ಪ್ರಮಾಣ ಹೆಚ್ಚುತ್ತಲೇ ಸಾಗಿದ್ದು ಆದರೆ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌, ಸೇರಿದಂತೆ ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್‌ ಆಪ್‌ಗಳ ಜನಪ್ರಿಯತೆ ಕೇಬಲ ಬ್ಯುಸಿನೆಸ್‌ಗೆ ಮುಳುವಾಗಿ ಪರಿಣಮಿಸಿದೆ.

ಕೇಬಲ್ ಮತ್ತು ಡಿ2ಎಚ್‌ ಬ್ಯುಸಿನೆಸ್‌ಗೆ ಕಂಟಕವಾದ 'ನೆಟ್‌ಫ್ಲಿಕ್ಸ್‌'!

ಹೌದು, ನೆಟ್‌ಪ್ಲಿಕ್ಸ್‌ ಮತ್ತು ಅಮೆಜಾನ್ ಪ್ರೈಮ್‌ ಸೇರಿದಂತೆ ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ಗಳು ದೇಶದ ಕೇಬಲ್ ಬ್ಯುಸಿನೆಸ್‌ ಅನ್ನು ಕ್ರಮೇಣ ಆಕ್ರಮಿಸುತ್ತಿದೆ ಎಂದು ಇತ್ತೀಚಿಗೆ KPMG ವದರಿ ನೀಡಿದೆ. ಪ್ರಸಕ್ತ ವರ್ಷದ (Q4, 2019) ನಾಲ್ಕನೇ ತ್ರೈಮಾಸಿಕದ ಅಂಕಿ ಅಂಶಗಳ ಪ್ರಕಾರ ಕೇಬಲ್‌ ಮತ್ತು ಡಿ2ಎಚ್‌ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಸುಮಾರು 12-15 ಮಿಲಿಯನ್‌ನಷ್ಟು ಕುಸಿತ ಕಂಡುಬಂದಿದೆ ಎಂದು ಸಂಸ್ಥೆಯು ತನ್ನ ವರದಿಯಲ್ಲಿ ತಿಳಿಸಿದೆ.

ಕೇಬಲ್ ಮತ್ತು ಡಿ2ಎಚ್‌ ಬ್ಯುಸಿನೆಸ್‌ಗೆ ಕಂಟಕವಾದ 'ನೆಟ್‌ಫ್ಲಿಕ್ಸ್‌'!

ಪ್ರತಿ ಬಳಕೆದಾರಿಂದ ಸರಾಸರಿ ಆದಾಯ (ARPU) ಮೊದಲ ಮೂರು ತ್ರೈಮಾಸಿಕಗಳಲ್ಲಿ ಡಿಟಿಎಚ್ ಮತ್ತು ಕೇಬಲ್ ಆಪರೇಟರ್‌ಗಳಿಗೆ ಹೆಚ್ಚುಕಡಿಮೆ ಸಮತಟ್ಟಾಗಿತ್ತು. ಆದರೆ ಕಳೆದ ತ್ರೈಮಾಸಿಕದಲ್ಲಿ ಶೇಕಡಾ 10-25 ರಷ್ಟು ಹೆಚ್ಚಳ ಆಗಿರುವುದನ್ನು ತಿಳಿಸಲಾಗಿದೆ. ಹಾಗೆಯೇ ನೆಟ್‌ಫ್ಲಿಕ್ಸ್‌ ಮತ್ತ ಅಮೆಜಾನ್‌ ಪ್ರೈಮ್‌ 11-14 ಮಿಲಿಯನ್‌ ಚಂದಾದಾರರನ್ನು ಒಳಗೊಂಡಿದೆ ಎನ್ನಲಾಗಿದೆ. ಹಾಗಾದರೇ ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

<strong>ಓದಿರಿ : ಬಳಕೆದಾರರಿಗೆ ಅಚ್ಚರಿ ಮೂಡಿಸಲಿವೆ 'ವಾಟ್ಸಪ್'ನ ಕೆಲವು ಟಿಪ್ಸ್ ಮತ್ತು ಟಿಕ್ಸ್!</strong>ಓದಿರಿ : ಬಳಕೆದಾರರಿಗೆ ಅಚ್ಚರಿ ಮೂಡಿಸಲಿವೆ 'ವಾಟ್ಸಪ್'ನ ಕೆಲವು ಟಿಪ್ಸ್ ಮತ್ತು ಟಿಕ್ಸ್!

ಹೆಚ್ಚುತ್ತಿರುವ ಬೇಡಿಕೆ

ಹೆಚ್ಚುತ್ತಿರುವ ಬೇಡಿಕೆ

ಪ್ರಸ್ತುತ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್‌ ಪ್ರೈಮ್‌ ಆಪ್‌ಗಳ ಬೇಡಿಕೆ ಹೆಚ್ಚುತ್ತಿದ್ದು, ಕೇಬಲ್ ಬ್ಯುಸಿನೆಸ್‌ಗೆ ಕ್ರಮೇಣ ಪೆಟ್ಟು ಬೀಳುತ್ತಿದೆ. ಈಗ ಸ್ಮಾರ್ಟ್‌ಟಿವಿ ಮತ್ತು ಆಂಡ್ರಾಯ್ಡ್‌ ಟಿವಿಗಳಲ್ಲಿ ನೆಟ್‌ಪ್ಲಿಕ್ಸ್ ಮತ್ತು ಅಮೆಜಾನ್‌ ಪ್ರೈಮ್ ಒಳಗೊಂಡಂತೆ ಜನಪ್ರಿಯ OTT ಆಪ್ಸ್‌ಗಳು ಇನ್‌ಬಿಲ್ಟ್‌ ಆಗಿ ಲಭ್ಯವಾಗುತ್ತಿವೆ. ಜೊತೆಗೆ ಟೆಲಿಕಾಂ ಸಂಸ್ಥೆಗಳು ರಿಯಾಯಿತಿ ಬೆಲೆಯಲ್ಲಿ ಇಂಟರ್ನೆಟ್‌ ಸೇವೆಯ ಆಫರ್ ನೀಡುತ್ತಿವೆ ಈ ನಿಟ್ಟಿನಲ್ಲಿ ವಿಡಿಯೊ ಸ್ಟ್ರಿಮಿಂಗ್ ಸೇವೆಗಳೆ ಬೇಡಿಕೆ ಅಧಿಕವಾಗುತ್ತಿದ ಎನ್ನಬಹುದು.

ನೆಟ್‌ಫ್ಲಿಕ್ಸ್‌ ಆಪ್

ನೆಟ್‌ಫ್ಲಿಕ್ಸ್‌ ಆಪ್

ಸದ್ಯ ಭಾರೀ ಜನಪ್ರಿಯತೆಗಳಿಸಿರುವ ವಿಡಿಯೊ ಸ್ಟ್ರಿಮಿಂಗ್ ಆಪ್‌ ಇದಾಗಿದ್ದು, ಮೊಬೈಲ್‌, ಆಂಡ್ರಾಯ್ಡ್‌ ಟಿವಿ ಮತ್ತು ಸ್ಮಾರ್ಟ್‌ಟಿವಿಗಳ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗುತ್ತಿದೆ. ನೆಟ್‌ಫ್ಲಿಕ್ಸ್‌ ಆಪ್‌ನಲ್ಲಿ ಜನಪ್ರಿಯ ಟಿವಿ ಕಾರ್ಯಕ್ರಮಗಳನ್ನು ಮತ್ತು ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ಈ ಆಪ್‌ನ ವೆಬ್‌ ಸಿರೀಸ್‌ ಶೋಗಳು ಸಹ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಕ್ವಾಲಿಟಿಯು ಸಹ ಅತ್ಯುತ್ತಮ ಆಗಿದ್ದು, ಚಂದಾದಾರರಾಗಬೇಕು.

<strong>ಓದಿರಿ : ಸ್ಯಾಮ್‌ಸಂಗ್‌ ಫೋನ್‌ ಖರೀದಿಸಬೇಕೆ?..ಹಾಗಿದ್ರೆ ಈ ಆಫರ್‌ ಮಿಸ್‌ ಮಾಡ್ಕೊಬೇಡಿ!</strong>ಓದಿರಿ : ಸ್ಯಾಮ್‌ಸಂಗ್‌ ಫೋನ್‌ ಖರೀದಿಸಬೇಕೆ?..ಹಾಗಿದ್ರೆ ಈ ಆಫರ್‌ ಮಿಸ್‌ ಮಾಡ್ಕೊಬೇಡಿ!

ಅಮೆಜಾನ್‌ ಪ್ರೈಮ್‌

ಅಮೆಜಾನ್‌ ಪ್ರೈಮ್‌

ಅಮೆಜಾನ್‌ ಸಂಸ್ಥೆಗೆ ಸೇರಿದ ಅಮೆಜಾನ್‌ ಪ್ರೈಮ್‌ ಅತ್ಯುತ್ತಮ ವಿಡಿಯೊ ಸ್ಟ್ರಿಮಿಂಗ್ ಆಪ್‌ ಆಗಿ ಗುರುತಿಸಿಕೊಂಡಿದೆ. ಇಲ್ಲಿಯೂ ಸಹ ಗ್ರಾಹಕರು ಜನಪ್ರಿಯ ಟಿವಿ ಕಾರ್ಯಕ್ರಮಗಳು, ಹಿಟ್‌ ಸಿನಿಮಾಗಳು ಮತ್ತು ವೆಬ್‌ ಸಿರೀಸ್‌ ಶೋಗಳನ್ನು ವೀಕ್ಷಿಸಬಹುದಾಗಿದೆ. ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಿದ್ದು, ಜಾಹಿರಾತು ರಹಿತವಾಗಿ ವೀಕ್ಷಿಸುವ ಅವಕಾಶವಿದೆ. ವಿಡಿಯೊಗಳ ಗುಣಮಟ್ಟವು ಹೈ ಕ್ವಾಲಿಟಿಯಲ್ಲಿ ಇರುತ್ತವೆ.

ಹಾಟ್‌ಸ್ಟಾರ್‌ ಆಪ್

ಹಾಟ್‌ಸ್ಟಾರ್‌ ಆಪ್

ಹಾಟ್‌ಸ್ಟಾರ್‌ ಸಹ ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ಆಪ್‌ ಆಗಿದ್ದು, ಲೈವ್‌ ಸ್ಪೋರ್ಟ್ಸ್‌ಗಳನ್ನು ಪ್ರಸಾರ ಮಾಡಿ ಭಾರಿ ಜನಪ್ರಿಯತೆಗಳಿಸಿದೆ. ಹಾಗೆಯೇ ಈ ಆಪ್‌ನಲ್ಲಿಯೂ ಸಹ ಜನಪ್ರಿಯ ಟಿವಿ ಕಾರ್ಯಕ್ರಮಗಳು, ಹಿಟ್‌ ಸಿನಿಮಾಗಳು ಮತ್ತು ವೆಬ್‌ ಸಿರೀಸ್‌ ಶೋಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದ್ದು, ಕೆಲವು ಪ್ರಾದೇಶಿಕ ಭಾಷೆಗಳ ಲಭ್ಯತೆ ಇದೆ. ಅತ್ಯುತ್ತಮ ವೀಕ್ಷಣೆ ಪಡೆಯಲು ಚಂದಾದಾರರಾಗಬೇಕು.

<strong>ಓದಿರಿ : 'ಶಿಯೋಮಿ ಮಿ ಎ3' v/s 'ರಿಯಲ್ ಮಿ 5 ಪ್ರೊ' : ವ್ಯತ್ಯಾಸಗಳೇನು?..ಬೆಲೆ ಎಷ್ಟು?</strong>ಓದಿರಿ : 'ಶಿಯೋಮಿ ಮಿ ಎ3' v/s 'ರಿಯಲ್ ಮಿ 5 ಪ್ರೊ' : ವ್ಯತ್ಯಾಸಗಳೇನು?..ಬೆಲೆ ಎಷ್ಟು?

Best Mobiles in India

English summary
according to KPMG report Cable TV business was a decline of nearly 12-15 million. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X