ಜಾಹೀರಾತು ಬೆಂಬಲಿತ ಚಂದಾದಾರಿಕೆ ಪ್ರಕಟಿಸಿದ ನೆಟ್‌ಫ್ಲಿಕ್ಸ್; ಪ್ಲ್ಯಾನ್‌ ಬೆಲೆ ಎಷ್ಟು?

|

ಕೊರೊನಾ ನಂತರ ಓಟಿಟಿ ಸೇವೆಗಳು ಜಗತ್ತಿನಾದ್ಯಂತ ಜನಪ್ರಿಯತೆ ಪಡೆಯುತ್ತಿವೆ. ಇನ್ನು ನೆಟ್‍ಫ್ಲಿಕ್ಸ್ ವಿಶ್ವದ ಪ್ರಸಿದ್ಧ ಓಟಿಟಿ ಪ್ಲಾಟ್‌ಫಾರ್ಮ್‌ ಆಗಿ ಗುರುತಿಸಿಕೊಂಡಿದ್ದು, ನೆಟ್‍ಫ್ಲಿಕ್ಸ್ ಬಳಕೆದಾರರು ಭಾರತದಲ್ಲೂ ಸಹ ಹೆಚ್ಚಾಗಿಯೇ ಇದ್ದಾರೆ. ಈ ನಡುವೆ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಗ್ರಾಹಕರಿಗೆ ಆರಂಭಿಕ ಪ್ರವೇಶದ ನೂತನ ದರವೊಂದನ್ನು ಪ್ರಕಟಿಸಿದೆ. ಅದೂ ಸಹ ಜಾಹೀರಾತು ಬೆಂಬಲಿತ ಯೋಜನೆಯಲ್ಲಿ.

ನೆಟ್‌ಫ್ಲಿಕ್ಸ್

ಹೌದು, ನೆಟ್‌ಫ್ಲಿಕ್ಸ್ ಕೆಲವು ದೇಶಗಳಲ್ಲಿ ಜಾಹೀರಾತು ಬೆಂಬಲಿತ ಹೊಸ ಪ್ಲ್ಯಾನ್‌ ಬಗ್ಗೆ ಮಾಹಿತಿ ನೀಡಿದೆ. ಆದರೆ, ಭಾರತದಲ್ಲಿ ಇದು ಯಾವಾಗ ಗ್ರಾಹಕರಿಗೆ ಲಭ್ಯ ಇರಲಿದೆ ಎಂಬ ಮಾಹಿತಿಯನ್ನು ತಿಳಿಸಿಲ್ಲ. ಹಾಗೆಯೇ ಇದು ಭಾರತದಲ್ಲಿ ಲಭ್ಯವಾದರೆ ಸುಮಾರು 575ರೂ. ಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಈ ಯೋಜನೆ ಬಗ್ಗೆ ನೆಟ್‌ಫ್ಲಿಕ್ಸ್ ಈ ಹಿಂದೆಯೇ ಮಾಹಿತಿ ನೀಡಿತ್ತು. ಈಗ ಅಂತಿಮವಾಗಿ ಜಾಹೀರಾತು ಬೆಂಬಲಿತ ನೆಟ್‌ಫ್ಲಿಕ್ಸ್ ಯೋಜನೆಯ ಕುರಿತು ಮಾಹಿತಿ ದೃಢಪಡಿಸಿದೆ.

ಜಾಹೀರಾತು

ಇನ್ನು ಈ ಜಾಹೀರಾತು ಬೆಂಬಲಿತ ಯೋಜನೆಯು ಮುಂದಿನ ತಿಂಗಳಿಂದ ಲಭ್ಯವಾಗಲಿದೆ. ಆರಂಭಿಕವಾಗಿ ಈ ಸೌಲಭ್ಯವನ್ನು ಪಡೆಯಲು 12 ದೇಶಗಳನ್ನು ಪಟ್ಟಿ ಮಾಡಿದೆ. ಆದರೆ, ನೆಟ್‌ಫ್ಲಿಕ್ಸ್ ಪಟ್ಟಿ ಮಾಡಿದ ಮೊದಲ ಲಿಸ್ಟ್‌ನಲ್ಲಿ ಭಾರತದ ಇಲ್ಲ. ಇನ್ನು ಯಾವಾಗ ಭಾರತದಲ್ಲಿ ಲಭ್ಯವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್ ಹೆಚ್ಚಿನ ಚಂದಾದಾರರನ್ನು ಸೆಳೆಯಲು ಈ ಹೊಸ ಜಾಹೀರಾತು ಬೆಂಬಲಿತ ಯೋಜನೆಯನ್ನು ಪರಿಚಯಿಸಿದೆ. ಇದರ ಜೊತೆಗೆ ಬಳಕೆದಾರರು ತಮ್ಮ ನೆಟ್‌ಫ್ಲಿಕ್ಸ್ ಖಾತೆಯ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುವುದಿಲ್ಲ ಎಂಬುದನ್ನು ಸಹ ಈ ವೇಳೆ ಸ್ಪಷ್ಟಪಡಿಸಿದೆ.

ಈ ದೇಶಗಳಲ್ಲಿ ಲಭ್ಯ

ಈ ದೇಶಗಳಲ್ಲಿ ಲಭ್ಯ

ಹಾಗೆಯೇ ಆರಂಭಿಕ ಹಂತದಲ್ಲಿ ನವೆಂಬರ್ 1 ರಿಂದ ಕೆನಡಾ ಹಾಗೂ ಮೆಕ್ಸಿಕೋದಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ದೃಢಪಡಿಸಿದೆ. ಇದಾದ ಕೆಲವು ದಿನಗಳ ನಂತರ ಯುಎಸ್‌, ಯುಕೆ, ಆಸ್ಟ್ರೇಲಿಯಾ, ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಕೊರಿಯಾದಲ್ಲಿ ಜಾಹೀರಾತು ಬೆಂಬಲಿತ ಬೇಸಿಕ್ ಪ್ಲ್ಯಾನ್‌ ಲಭ್ಯವಿರಲಿದೆ. ಈ ದೇಶಗಳ ನಂತರ ಸ್ಪೇನ್‌ನಲ್ಲಿ ನವೆಂಬರ್ 10 ರಿಂದ ಬಳಕೆದಾರರು ಈ ಯೋಜನೆಗೆ ಚಂದಾದಾರರಾಗಬಹುದು ಎಂದು ಕಂಪೆನಿ ತಿಳಿಸಿದೆ.

ಗ್ರಾಹಕ

ಜಾಹೀರಾತು ಬೆಂಬಲಿತ ಈ ಯೋಜನೆಗೆ ಚಂದಾದಾರರಾಗಿರುವ ಗ್ರಾಹಕರು ಒಂದು ಸಮಯದಲ್ಲಿ ಒಂದು ಬೆಂಬಲಿತ ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ ಅಥವಾ ಟಿವಿಯಲ್ಲಿ ಹೆಚ್‌ಡಿ ಗುಣಮಟ್ಟದ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ. ಇದರೊಂದಿಗೆ ಜಾಹೀರಾತು ಮುಕ್ತವಾಗಿ ನೆಟ್‌ಫ್ಲಿಕ್ಸ್ ಗೇಮ್‌ಗಳನ್ನು ಆಡಬಹುದಾಗಿದೆ.

ಜಾಹೀರಾತು ಹೇಗೆ ಪ್ರಸಾರವಾಗಲಿದೆ?

ಜಾಹೀರಾತು ಹೇಗೆ ಪ್ರಸಾರವಾಗಲಿದೆ?

ಈ ಯೋಜನೆಯಲ್ಲಿ ಒಂದು ಗಂಟೆಗೆ ಸುಮಾರು 4 ರಿಂದ 5 ನಿಮಿಷಗಳ ಜಾಹೀರಾತುಗಳು ಕಂಟೆಂಟ್‌ ಆಧಾರದ ಮೇಲೆ ಪ್ರಸಾರ ಆಗಲಿವೆ. ಪ್ರಸಾರವಾಗುವ ಎಲ್ಲಾ ಜಾಹೀರಾತುಗಳು 15 ರಿಂದ 30 ಸೆಕೆಂಡುಗಳವರೆಗೆ ಇರುತ್ತದೆ. ಈ ವೇಳೆ ನಿಮಗೆ ಕಿರಿಕಿರಿ ಎನಿಸಿದರೆ ಜಾಹೀರಾತುಗಳನ್ನು ವಿರಾಮಗೊಳಿಸಬಹುದೇ ಹೊರತು ಅವನ್ನು ಸ್ಕಿಪ್ ಮಾಡಲು ಅಥವಾ ಫಾರ್ವರ್ಡ್ ಮಾಡಲು ಖಂಡಿತಾ ಅವಕಾಶ ಇರುವುದಿಲ್ಲ.

ಕಂಟೆಂಟ್‌

ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ಯಾವ ಕಂಟೆಂಟ್‌ಗಳನ್ನು ವೀಕ್ಷಿಸಲು ಇಚ್ಚೆಪಡುತ್ತಾರೋ ಅದೇ ರೀತಿಯ ಜಾಹೀರಾತುಗಳು ಪ್ರಸಾರ ಆಗಲಿವೆ. ಅಷ್ಟೇ ಅಲ್ಲದೆ ವೀಕ್ಷಕರು ಈ ಜಾಹೀರಾತುಗಳನ್ನು ವೈಯಕ್ತೀಕರಿಸಿಕೊಳ್ಳಬಹುದಾದ ಆಯ್ಕೆಯನ್ನೂ ಸಹ ನೀಡಲಾಗಿದೆ.

ಭಾರತದಲ್ಲಿ ಈ ಸೌಲಭ್ಯ ಯಾವಾಗ?

ಭಾರತದಲ್ಲಿ ಈ ಸೌಲಭ್ಯ ಯಾವಾಗ?

ನೆಟ್‌ಫ್ಲಿಕ್ಸ್ ಭಾರತದಲ್ಲಿ ಈ ಜಾಹೀರಾತು ಬೆಂಬಲಿತ ಯೋಜನೆಯನ್ನು ಯಾವಾಗ ಆರಂಭಿಸುತ್ತದೆ ಎಂಬ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ನೆಟ್‌ಫ್ಲಿಕ್ಸ್ ಪ್ರಸ್ತುತ ಭಾರತದಲ್ಲಿ ನಾಲ್ಕು ಯೋಜನೆಗಳ ಮೂಲಕ ಚಂದಾದಾರರನ್ನು ಹೊಂದಿದೆ. ಇದರಲ್ಲಿ ಮೊಬೈಲ್ ಸ್ಟ್ರೀಮಿಂಗ್‌ಗಾಗಿ ತಿಂಗಳಿಗೆ ಆರಂಭಿಕ ದರ 149ರೂ. ಗಳಿಂದ ಪ್ರಾರಂಭ ಮಾಡಿದೆ. ಇದರ ನಂತರ ಬೇಸಿಕ್ ಪ್ಲ್ಯಾನ್ ತಿಂಗಳಿಗೆ 199ರೂ., ಸ್ಟ್ಯಾಂಡರ್ಡ್ ಪ್ಲ್ಯಾನ್ ತಿಂಗಳಿಗೆ 499ರೂ. ಗಳನ್ನು ನಿಗದಿ ಮಾಡಿದ್ದು, 649ರೂ. ಗಳ ಪ್ರೀಮಿಯಂ ಯೋಜನೆಯನ್ನು ಸಹ ಪರಿಚಯಿಸಿದೆ.

Best Mobiles in India

English summary
After Corona, OTT services have increased all over the world. Now Netflix is recognized as the famous OTT platform in the world. Now announced an ad-supported plan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X