ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್, ಟಿಕ್‌ಟಾಕ್ ವಿಡಿಯೊ ಕ್ವಾಲಿಟಿ ಡೌನ್‌!

|

ಮಾಹಾಮಾರಿ ಕೊರೊನಾ ವೈರಾಣು (ಕೋವಿಡ್‌ 19) ಹರಡದಂತೆ ತಡೆಯಲು ಕೇಂದ್ರ ಸರ್ಕಾರ 21 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಘೋಷಿಸಿದೆ. ಈ ಹಿನ್ನಲೆಯಲ್ಲಿ ಅನೇಕ ಸಂಸ್ಥೆಗಳು ಅವರ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ (ವರ್ಕ್ ಫ್ರಂ ಹೋಮ್) ಅವಕಾಶ ನೀಡಿವೆ. ಇನ್ನು ಕೆಲವು ಸಂಸ್ಥೆಗಳು ವೇತನ ಸಹಿತ ರಜೆ ನೀಡಿವೆ. ಸದ್ಯ ಎಲ್ಲರು ಮನೆಯಲ್ಲಿಯೇ ಇರುವುದರಿಂದ ಬೇಸರ ಕಳೆಯಲು ಹಾಗೂ ವರ್ಕ್ ಫ್ರಂ ಹೋಂಗೆ ಇಂಟರ್ನೆಟ್ ಅಗತ್ಯ ಹೆಚ್ಚಾಗಿದೆ.

ವರ್ಕ್ ಫ್ರಮ್ ಹೋಮ್

ಹೌದು, ವರ್ಕ್ ಫ್ರಮ್ ಹೋಮ್ ಗಾಗಿ ವಿಡಿಯೊ ಕಾಲ್ಫರೇನ್ಸ್‌, ಡಾಕ್ಯುಮೆಂಟ್‌ ಕೊಲಾಬ್ರೇಷನ್, ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗಾಗಿ ಇಂಟರ್ನೆಟ್ ಅಧಿಕವಾಗಿದೆ. ಇನ್ನು ಮನೆಯಲ್ಲಿ ಬೇಸರ ಕಳೆಯಲು ಅನೇಕರು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಯೂಟ್ಯೂಬ್, ಹಾಟ್‌ಸ್ಟಾರ್‌ ನಂತಹ ಆನ್‌ಲೈನ್‌ ವಿಡಿಯೊ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ಗಳ ಬಳಕೆ ಮಾಡುತ್ತಾರೆ. ಹೀಗಾಗಿ ಪ್ರಸ್ತುತ ಡೇಟಾ ಬಳಕೆ ಅತೀ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ವಿಡಿಯೊ ಕಂಟೆಂಟ್‌ ಸಂಸ್ಥೆಗಳು ಕಡಿಮೆ ಕ್ವಾಲಿಟಿ ವಿಡಿಯೊ ಪ್ರಸಾರಕ್ಕೆ ಮುಂದಾಗಿವೆ.

ಲಾಕ್‌ಡೌನ್‌

ಸದ್ಯ ಲಾಕ್‌ಡೌನ್‌ ವ್ಯವಸ್ಥೆ ಇರುವುದರಿಂದ ಇಂಟರ್ನೆಟ್ ಬಳಕೆ ಅಧಿಕವಾಗಿದೆ. ಲಕ್ಷಾಂತರ ಬಳಕೆದಾರರನ್ನು ಏಕಕಾಲದಲ್ಲಿ ನಿಭಾಯಿಸುವುದು ಪ್ರತಿದಿನವೂ ಕಠಿಣ ಕಾರ್ಯವಾಗಿದೆ. ಈ ಹಿನ್ನಲೆಯಲ್ಲಿ ವಿಡಿಯೊ ಸ್ಟ್ರೀಮಿಂಗ್ ಕಂಪನಿಗಳು ವಿಡಿಯೊ ರೆಸಲ್ಯೂಶನ್ ಅನ್ನು ಕಡಿಮೆ ಮಾಡಲು ನಿರ್ಧಾರ ತೆಗೆದುಕೊಂಡಿವೆ. HD, ಅಲ್ಟ್ರಾ HDಯಲ್ಲಿ ವಿಡಿಯೊ ಸ್ಟ್ರೀಮಿಂಗ್‌ ನೀಡುತ್ತಿದ್ದ ಸಂಸ್ಥೆಗಳು ಈಗ ವಿಡಿಯೊ ಗುಣಮಟ್ಟವನ್ನು ಎಸ್‌ಡಿ (ಸ್ಟ್ಯಾಂಡರ್ಡ್ ಡೆಫಿನಿಷನ್) ಕ್ವಾಲಿಟಿಗೆ ಇಳಿಸಿವೆ.

ಯಾವೆಲ್ಲಾ ವಿಡಿಯೊ ಸ್ಟ್ರೀಮಿಂಗ್‌ ಸಂಸ್ಥೆಗಳು ಈ ನಿರ್ಧಾರ ಮಾಡಿವೆ

ಯಾವೆಲ್ಲಾ ವಿಡಿಯೊ ಸ್ಟ್ರೀಮಿಂಗ್‌ ಸಂಸ್ಥೆಗಳು ಈ ನಿರ್ಧಾರ ಮಾಡಿವೆ

ಪ್ರಮುಖ ವಿಡಿಯೊ ಸ್ಟ್ರಿಮಿಂಗ್ ಸಂಸ್ಥೆಗಳು HD, ಅಲ್ಟ್ರಾ HDಯಲ್ಲಿ ವಿಡಿಯೊ ಸ್ಟ್ರೀಮಿಂಗ್ ಕ್ವಾಲಿಟಿಯಿಂದ ವಿಡಿಯೊಗಳ ಗುಣಮಟ್ಟವನ್ನು ಈಗ ಎಸ್‌ಡಿ ಕ್ವಾಲಿಟಿಗೆ ಇಳಿಸಿವೆ. ಜನಪ್ರಿಯ ಸೋನಿ, ಗೂಗಲ್, ಫೇಸ್‌ಬುಕ್, ವಯಾಕಾಮ್ 18, ಎಂಎಕ್ಸ್ ಪ್ಲೇಯರ್, ಹಾಟ್‌ಸ್ಟಾರ್, ಜೀ, ಟಿಕ್‌ಟಾಕ್, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋಗಳು ಈ ನಿರ್ಧಾರ ತೆಗೆದುಕೊಂಡಿವೆ.

ವಿಡಿಯೊ ಕ್ವಾಲಿಟಿಯಲ್ಲಿ ಇಳಿಕೆಗೆ ಕಾರಣವೇನು?

ವಿಡಿಯೊ ಕ್ವಾಲಿಟಿಯಲ್ಲಿ ಇಳಿಕೆಗೆ ಕಾರಣವೇನು?

ಈಗಾಗಲೇ ತಿಳಿಸಿರುವಂತೆ ಪ್ರಸ್ತುತ ಹೆಚ್ಚಿನವರು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ, ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರ ಸಂಖ್ಯೆಯು ಹೆಚ್ಚಾಗಿದೆ. ಈ ಎಲ್ಲ ತಾಣಗಳ ಸರ್ವರ್‌ಗಳನ್ನು ನಿಭಾಯಿಸಬಲ್ಲವರ ಸಂಖ್ಯೆ ಇಡಿಮೆ ಇದೆ. ಆದ್ದರಿಂದ, ವಿಡಿಯೊ ಗುಣಮಟ್ಟವನ್ನು ಹೆಚ್‌ಡಿಯಿಂದ ಎಸ್‌ಡಿ ರೆಸಲ್ಯೂಶನ್‌ಗೆ ಬದಲಾಯಿಸುವುದರಿಂದ ಸರ್ವರ್‌ಗಳಲ್ಲಿ ಕಡಿಮೆ ಒತ್ತಡ ಬರುತ್ತದೆ. ಇದು ಎಲ್ಲಾ ಬಳಕೆದಾರರಿಗೆ ಸ್ಥಿರವಾದ ಸ್ಟ್ರೀಮಿಂಗ್ ಅನ್ನು ಅರ್ಥೈಸುತ್ತದೆ.

Best Mobiles in India

English summary
According to the joint letter shared by the companies, the HD and ultra-HD resolution videos will now be switched to SD.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X