ನೆಟ್‌ಫ್ಲಿಕ್ಸ್‌ನಿಂದ ಹೊಸ ಪ್ರಯತ್ನ; ಮೂರು ಆಡಿಯೋ ಡಿವೈಸ್‌ಗಳ ಲಾಂಚ್‌ಗೆ ದಿನಾಂಕ ಫಿಕ್ಸ್‌

|

ಪ್ರಮುಖ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿರುವ ನೆಟ್‌ಫ್ಲಿಕ್ಸ್‌ ಹಲವಾರು ವೆಬ್‌ಶೋಗಳ ಮೂಲಕ ಹಾಗೂ ವಿಶೇಷ ಚಂದಾದಾರಿಕೆ ಮೂಲಕ ಗ್ರಾಹಕರನ್ನು ಸೆಳೆದಿದೆ. ಹಾಗೆಯೇ ಆಡಿಯೋ ಗ್ಯಾಜೆಟ್‌ವಿಭಾಗದಲ್ಲಿ ಬೋಟ್‌ ತನ್ನದೇ ಆದ ಜನಪ್ರಿತೆ ಪಡೆದುಕೊಂಡಿದೆ. ಈಗ ಇವೆರಡೂ ಒಂದಾಗಿ ಆಡಿಯೋ ಗ್ಯಾಜೆಟ್ ವಿಭಾಗದಲ್ಲಿ ಸದ್ದು ಮಾಡಲು ಮುಂದಾಗಿವೆ. ಅಂತೆಯೇ ಈಗ ನೆಟ್‌ಫ್ಲಿಕ್ಸ್ ಇಂಡಿಯಾ ವಾಯರ್‌ಲೆಸ್‌ ಇಯರ್‌ಬಡ್‌ಗಳು, ಹೆಡ್‌ಫೋನ್‌ಗಳು ಮತ್ತು ಇನ್ನಿತರೆ ಆಡಿಯೊ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಲು ಮುಂದಾಗಿದೆ.

ಪ್ರೊಡಕ್ಟ್‌

ಹೌದು, ನೆಟ್‌ಫ್ಲಿಕ್ಸ್‌ನ ಈ ಪ್ರೊಡಕ್ಟ್‌ಗಳು ನಾಯ್ಸ್‌ಕ್ಯಾನ್ಸಲಿಂಗ್‌ ಫೀಚರ್ಸ್‌ ಅನ್ನು ಪ್ರಮುಖವಾಗಿಸಿರಿಸಿಕೊಂಡಿದ್ದು, ಈ ಎಲ್ಲಾ ಪ್ರೊಡಕ್ಟ್‌ಗಳು ಡಿಸೆಂಬರ್ 20 ರಿಂದ ಮಾರುಕಟ್ಟೆಯಲ್ಲಿ ಲಭ್ಯ ಇರಲಿವೆ. ಬೋಟ್‌‌ X ನೆಟ್‌ಫ್ಲಿಕ್ಸ್‌ ಸ್ಟ್ರೀಮ್ ಆವೃತ್ತಿಯು ಮೂರು ಸೀಮಿತ ಆವೃತ್ತಿಯ ಡಿವೈಸ್‌ಗಳಾದ ಬೋಟ್ ನಿರ್ವಾಣ 751ANC, ಏರ್‌ಡೋಪ್ಸ್‌ 411ANC, ಮತ್ತು ರಾಕರ್ಸ್‌ 333 ಪ್ರೊ ಗಳಿಗೆ ಈಗಾಗಲೇ ಮುಂಗಡ ಬುಕಿಂಗ್‌ ಆರಂಭವಾಗಿದೆ. ಹಾಗಿದ್ರೆ ಇವುಗಳ ಬೆಲೆ ಎಷ್ಟು? ಪ್ರಮುಖ ಫೀಚರ್ಸ್‌ ಏನು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಬೋಟ್‌ ನಿರ್ವಾಣ 751ANC

ಬೋಟ್‌ ನಿರ್ವಾಣ 751ANC

ಈ ವಾಯರ್‌ಲೆಸ್‌ ಹೆಡ್‌ಫೋನ್‌ 40mm ಡ್ರೈವರ್‌ಗಳೊಂದಿಗೆ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ (33 dB ವರೆಗೆ) ಹೊಂದಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 65 ಗಂಟೆಗಳವರೆಗೆ ಬಳಕೆ ಮಾಡಿಕೊಳ್ಳಬಹುದಾಗಿದೆ.

ಬೋಡ್‌ ಏರ್‌ಡೋಪ್ಸ್‌ 411ANC

ಬೋಡ್‌ ಏರ್‌ಡೋಪ್ಸ್‌ 411ANC

ಈ ವಾಯರ್‌ಲೆಸ್‌ ಸ್ಟಿರಿಯೊ ಇಯರ್‌ಬಡ್ಸ್‌ ಸಹ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲಿಂಗ್‌ ಆಯ್ಕೆ (25 dB ವರೆಗೆ) ಹೊಂದಿದ್ದು, ಬಡ್ಸ್‌ಗಳು 10mm ಡ್ರೈವರ್ ನಲ್ಲಿ ಉತ್ತಮ ಸೌಂಡ್ ನೀಡಲಿವೆ. ಇದರ ಜೊತೆಗೆ ಸ್ಪಷ್ಟವಾದ ಕರೆಗಳು, ಗೆಸ್ಚರ್ ಕಂಟ್ರೋಲ್‌, ENx ತಂತ್ರಜ್ಞಾನವನ್ನು ಹೊಂದಿರುವುದು ವಿಶೇಷ. ಈ ಏರ್‌ಡೋಪ್ಸ್‌ ಒಂದು ಪೂರ್ಣ ಚಾರ್ಜ್‌ನಲ್ಲಿ 17.5 ಗಂಟೆಗಳ ವರೆಗೆ ಪ್ಲೇಬ್ಯಾಕ್‌ ನೀಡಲಿದೆ.

ರಾಕರ್ಸ್ 333 ಪ್ರೊ

ರಾಕರ್ಸ್ 333 ಪ್ರೊ

ನೆಕ್‌ಬ್ಯಾಂಡ್ ಶೈಲಿಯ ರಾಕರ್ಸ್ 333 ಪ್ರೊ ಇಯರ್‌ಫೋನ್‌ಗಳು ಡ್ಯುಯಲ್ 10mm ವೇಗದ ಡ್ರೈವರ್‌ಗಳೊಂದಿಗೆ ಹಗುರವಾದ ರಚನೆ ಹೊಂದಿದ್ದು, ಬ್ಲೂಟೂತ್ ಆವೃತ್ತಿ v5.2 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ IPX5 ರೇಟಿಂಗ್‌ನೊಂದಿಗೆ ಬೆವರು ಮತ್ತು ನೀರು ನಿರೋಧಕವಾಗಿದ್ದು, 150mAh ಸಾಮರ್ಥ್ಯದ ಬ್ಯಾಟರಿ ಮತ್ತು ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ.

ವಾಲ್ಯೂಮ್‌

60 ಪರ್ಸೆಂಟ್ ವಾಲ್ಯೂಮ್‌ನೊಂದಿಗೆ 60 ಗಂಟೆಗಳ ಟಾಕ್ ಟೈಮ್ ಅನ್ನು ನೀಡುವುದಾಗಿ ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 20 ಗಂಟೆಗಳ ಪ್ಲೇಬ್ಯಾಕ್ ಸಿಗುತ್ತದೆ ಎನ್ನಲಾಗಿದೆ. ಇನ್ನುಳಿದಂತೆ ಈ ಇಯರ್‌ಫೋನ್‌ ENx ತಂತ್ರಜ್ಞಾನದಿಂದ ಪ್ಯಾಕ್ ಆಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಬೋಟ್‌ ನಿರ್ವಾಣ 751ANC ಡಿವೈಸ್‌ಗೆ 3,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ಬೋಟ್‌ ಏರ್‌ಡೋಪ್ಸ್‌ 411ANC ಇಯರ್‌ಬಡ್ಸ್‌ಗೆ 2,999 ರೂ. ಗಳ ಬೆಲೆ ನಿಗದಿ ಮಾಡಲಾಗಿದ್ದು, ರಾಕರ್ಸ್ 333 ಪ್ರೊ ನೆಕ್‌ಬ್ಯಾಂಡ್‌ಗೆ 1,699 ರೂ.ಗಳ ಬೆಲೆ ಇದೆ. ಈ ಆಡಿಯೊ ಡಿವೈಸ್‌ಗಳು ಪ್ರಸ್ತುತ ಮುಂಗಡ ಬುಕಿಂಗ್ ಸೌಲಭ್ಯ ಕಲ್ಪಿಸಿದ್ದು, ಇವುಗಳ ಮಾರಾಟವು ಡಿಸೆಂಬರ್ 20 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ.

ಬೋಟ್‌

ಆಸಕ್ತ ಗ್ರಾಹಕರು ಬೋಟ್‌ X ನೆಟ್‌ಫ್ಲಿಕ್ಸ್‌ ಸ್ಟ್ರೀಮ್‌ ಎಡಿಷನ್‌ ಡಿವೈಸ್‌ಗಳನ್ನು ಖರೀದಿಸಲು ಬೋಟ್‌ ವೆಬ್‌ಸೈಟ್ ಮತ್ತು ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ಮೈಂತ್ರಾ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳಿಗೆ ಭೇಟಿ ನೀಡಬಹುದಾಗಿದೆ.

ವಿಶೇಷ ಉಡುಗೊರೆ ಎರಡೂ ಪ್ರಮುಖ ಕಂಪೆನಿಗಳು ಒಟ್ಟಾಗಿ ಪರಿಚಯಿಸುತ್ತಿರುವ ಈ ಡಿವೈಸ್‌ಗಳಿಗೆ ವಿಶೇಷ ಆಫರ್‌ ಸಹ ನೀಡಲಾಗಿದೆ. ಅಂದರೆ ಆರಂಭಿಕ ಕೊಡುಗೆಯಲ್ಲಿ ಯಾರು ಮೊದಲು ಈ ಡಿವೈಸ್‌ಗಳನ್ನು ಖರೀದಿ ಮಾಡಲಿದ್ದಾರೋ ಅವರು ಬೋಟ್‌ ಮತ್ತು ನೆಟ್‌ಫ್ಲಿಕ್ಸ್‌ನಿಂದ ಅತ್ಯಾಕರ್ಷಕ ವಿಶೇಷ ಉಡುಗೊರೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ವಿಶೇಷ ಉಡುಗೊರೆ ಎರಡೂ ಪ್ರಮುಖ ಕಂಪೆನಿಗಳು ಒಟ್ಟಾಗಿ ಪರಿಚಯಿಸುತ್ತಿರುವ ಈ ಡಿವೈಸ್‌ಗಳಿಗೆ ವಿಶೇಷ ಆಫರ್‌ ಸಹ ನೀಡಲಾಗಿದೆ. ಅಂದರೆ ಆರಂಭಿಕ ಕೊಡುಗೆಯಲ್ಲಿ ಯಾರು ಮೊದಲು ಈ ಡಿವೈಸ್‌ಗಳನ್ನು ಖರೀದಿ ಮಾಡಲಿದ್ದಾರೋ ಅವರು ಬೋಟ್‌ ಮತ್ತು ನೆಟ್‌ಫ್ಲಿಕ್ಸ್‌ನಿಂದ ಅತ್ಯಾಕರ್ಷಕ ವಿಶೇಷ ಉಡುಗೊರೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಎರಡೂ ಪ್ರಮುಖ ಕಂಪೆನಿಗಳು ಒಟ್ಟಾಗಿ ಪರಿಚಯಿಸುತ್ತಿರುವ ಈ ಡಿವೈಸ್‌ಗಳಿಗೆ ವಿಶೇಷ ಆಫರ್‌ ಸಹ ನೀಡಲಾಗಿದೆ. ಅಂದರೆ ಆರಂಭಿಕ ಕೊಡುಗೆಯಲ್ಲಿ ಯಾರು ಮೊದಲು ಈ ಡಿವೈಸ್‌ಗಳನ್ನು ಖರೀದಿ ಮಾಡಲಿದ್ದಾರೋ ಅವರು ಬೋಟ್‌ ಮತ್ತು ನೆಟ್‌ಫ್ಲಿಕ್ಸ್‌ನಿಂದ ಅತ್ಯಾಕರ್ಷಕ ವಿಶೇಷ ಉಡುಗೊರೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

Best Mobiles in India

English summary
Netflix India ready to launch wireless earbuds, headphones and more audio products.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X