ಇನ್‌ಸ್ಟಾಗ್ರಾಮ್‌ನಲ್ಲಿ ಮೂರು ಹೊಸ ಫೀಚರ್ಸ್‌; ಬಳಕೆ ಹೇಗೆ?

|

ನೂರಾರು ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರೊಂದಿಗೆ ಮತ್ತಷ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಇನ್‌ಸ್ಟಾಗ್ರಾಮ್‌ ಯಶಸ್ವಿಯಾಗಿದೆ. ಮೆಟಾ ಒಡೆತನದ ಈ ಆಪ್‌ನಲ್ಲಿ ಈಗಾಗಲೇ ರೋಮಾಂಚನಗೊಳಿಸುವ ಫೀಚರ್ಸ್‌ಗಳನ್ನು ನೀಡಲಾಗಿದೆ. ಇದರ ನಡುವೆ ಈಗ ಮತ್ತೆ ಬಳಕೆದಾರರಿಗೆ ವಿಶೇಷ ಅನುಭವ ನೀಡುವ ಉದ್ದೇಶದಿಂದ ವಿಭಿನ್ನ ಫೀಚರ್ಸ್‌ಅನ್ನು ಪರಿಚಯಿಸಲು ಇನ್‌ಸ್ಟಾಗ್ರಾಮ್‌ ಸಿದ್ಧಗೊಂಡಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ಕ್ಯಾಂಡಿಡ್ ಸ್ಟೋರೀಸ್ ಫೀಚರ್ಸ್‌ ಪರೀಕ್ಷಿಸುತ್ತಿದೆ ಎಂದು ತಿಳಿದುಬಂದಿದೆ. ಇದಿಷ್ಟೇ ಅಲ್ಲದೆ ಹೊಸ ಗ್ರೂಪ್‌ ಪ್ರೊಫೈಲ್ ಫೀಚರ್ಸ್‌ ಹಾಗೂ ನೋಟ್ಸ್ ಫೀಚರ್ಸ್ ಅನ್ನು ಇನ್‌ಸ್ಟಾಗ್ರಾಮ್‌ ಪರಿಚಯಿಸಿದೆ. ಹಾಗಿದ್ರೆ ಈ ಹೊಸ ಫೀಚರ್ಸ್‌ ಅನ್ನು ಬಳಕೆದಾರರು ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದು?, ಈ ಮೂರು ಹೊಸ ಫೀಚರ್ಸ್‌ಗಳ ವಿಶೇಷತೆ ಏನು?, ಯಾಕಾಗಿ ಈ ಫೀಚರ್ಸ್‌ಗಳನ್ನು ಇನ್‌ಸ್ಟಾಗ್ರಾಮ್‌ ಪರಿಚಯಿಸುತ್ತಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಏನಿದು ಕ್ಯಾಂಡಿಡ್ ಸ್ಟೋರೀಸ್ ಫೀಚರ್ಸ್‌ ?

ಏನಿದು ಕ್ಯಾಂಡಿಡ್ ಸ್ಟೋರೀಸ್ ಫೀಚರ್ಸ್‌ ?

ಇನ್‌ಸ್ಟಾಗ್ರಾಮ್ ಇನ್ನೇನು ಕೆಲವೇ ದಿನಗಳಲ್ಲಿ ಈ ಫೀಚರ್ಸ್‌ ಅನ್ನು ಬಳಕೆದಾರರಿಗೆ ನೀಡಲಿದೆ. ಈಗಾಗಲೇ ಈ ಕ್ಯಾಂಡಿಡ್ ಸ್ಟೋರೀಸ್ ಫೀಚರ್ಸ್‌ ಅನ್ನು ಪರೀಕ್ಷಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಕ್ಯಾಂಡಿಡ್ ಸ್ಟೋರೀಸ್ ಎನ್ನುವುದು ಬಳಕೆದಾರರು ತಕ್ಷಣಕ್ಕೆ ಏನು ಮಾಡುತ್ತಿದ್ದಾರೆ ಎಂಬುದನ್ನು ಸೆರೆಹಿಡಿಯಲು ಮತ್ತು ಹಂಚಿಕೊಳ್ಳಲು ಇರುವ ಹೊಸ ಮಾರ್ಗವಾಗಿದೆ. ಹಾಗೆಯೇ ಇದು ತಮ್ಮದೇ ಆದ ಕ್ಯಾಂಡಿಡ್ ಸ್ಟೋರೀಸ್‌ಗಳನ್ನು ಹಂಚಿಕೊಳ್ಳುವ ಇತರರಿಗೆ ಮಾತ್ರ ಇದು ಗೋಚರಿಸುತ್ತದೆ.

ಬೀರಿಯಲ್‌ ಆಪ್‌ ಪರಿಕಲ್ಪನೆಯ ನಕಲು

ಬೀರಿಯಲ್‌ ಆಪ್‌ ಪರಿಕಲ್ಪನೆಯ ನಕಲು

ಈ ಫೀಚರ್ಸ್‌ ಬೀರಿಯಲ್‌ ಎಂಬ ಆಪ್‌ ಅಪ್‌ನ ಪರಿಕಲ್ಪನೆಯನ್ನೇ ಹೋಲುತ್ತಿದ್ದು, ಇದು ಆ ಆಪ್‌ನ ನಕಲು ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಜನರು ಫೋಟೋ-ಪರ್ಫೆಕ್ಟ್ ಫೋಟೋಗಳನ್ನು ಅಥವಾ ಶಾರ್ಟ್‌ ವಿಡಿಯೋಗಳನ್ನು ಫಿಲ್ಟರ್‌ಗಳೊಂದಿಗೆ ಶೇರ್‌ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ, ಪ್ಲಾಟ್‌ಫಾರ್ಮ್ ನಲ್ಲಿರುವ ಬಳಕೆದಾರರು ಹೆಚ್ಚು ವಾಸ್ತವಿಕವಾಗಿರಲು ಬಯಸುತ್ತಾರೆ ಎಂದು ಇನ್‌ಸ್ಟಾಗ್ರಾಮ್‌ ಕಂಡುಕೊಂಡಿದೆ. ಈ ಕಾರಣಕ್ಕೆ ಬೀರಿಯಲ್‌ ಆಪ್‌ ಪ್ರೇರಿತ ಫೀಚರ್ಸ್‌ ಅನ್ನು ಆಡ್‌ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಪ್ರಮುಖ ವಿಷಯ ಎಂದರೆ ಫೇಸ್‌ಬುಕ್ ಸ್ಟೋರೀಸ್‌ನಲ್ಲಿಯೂ ಇದೇ ರೀತಿಯ ಫೀಚರ್ಸ್‌ ಅನ್ನು ಪರೀಕ್ಷಿಸಲಾಗುತ್ತಿದೆ ಎಂದು ಕಂಪೆನಿಯೇ ದೃಢಪಡಿಸಿದೆ.

ಗ್ರೂಪ್ ಪ್ರೊಫೈಲ್ ಫೀಚರ್ಸ್‌

ಗ್ರೂಪ್ ಪ್ರೊಫೈಲ್ ಫೀಚರ್ಸ್‌

ಕ್ಯಾಂಡಿಡ್ ಸ್ಟೋರೀಸ್ ಜೊತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಗ್ರೂಪ್‌ ಪ್ರೊಫೈಲ್ ಫೀಚರ್ಸ್‌ ಅನ್ನು ಕೂಡ ಸೇರಿಸುತ್ತಿದೆ. ಇದರಿಂದ ಬಳಕೆದಾರರು ಬೇಕಾದ ವ್ಯಕ್ತಿಗಳ ಜೊತೆ ಪೋಸ್ಟ್‌ಗಳು ಮತ್ತು ಸ್ಟೋರಿಗಳನ್ನು ಹಂಚಿಕೊಳ್ಳಲು ಇದು ಸಹಕಾರಿಯಾಗಿದೆ. ಈ ಗ್ರೂಪ್‌ ಪ್ರೊಫೈಲ್‌ಗಾಗಿ '+'ಐಕಾನ್ ಮೇಲೆ ಟ್ಯಾಪ್ ಮಾಡಬೇಕಿದೆ. ಹಾಗೆಯೇ ನೀವು ಗ್ರೂಪ್ ಪ್ರೊಫೈಲ್‌ಗೆ ಯಾವುದೇ ವಿಷಯವನ್ನು ಹಂಚಿಕೊಂಡಾಗ ಆ ವಿಷಯ ನಿಮ್ಮ ಎಲ್ಲಾ ಫಾಲೋವರ್ಸ್‌ಗಳಿಗೂ ತಿಳಿಯದೆ ಗ್ರೂಪ್‌ನ ಸದಸ್ಯರಿಗೆ ಮಾತ್ರ ಕಾಣಿಸಿಕೊಳ್ಳುತ್ತದೆ ಎಂದು ಇನ್‌ಸ್ಟಾಗ್ರಾಮ್‌ ಮಾಹಿತಿ ನೀಡಿದೆ.

ನೋಟ್ಸ್ ಫೀಚರ್ಸ್‌

ನೋಟ್ಸ್ ಫೀಚರ್ಸ್‌

ಇಷ್ಟೆಲ್ಲಾ ಫೀಚರ್ಸ್‌ಗಳ ಜೊತೆಗೆ ನೋಟ್ಸ್ ಫೀಚರ್ಸ್‌ ಅನ್ನು ಇನ್‌ಸ್ಟಾಗ್ರಾಮ್‌ ಪರಿಚಯಿಸಿದೆ. ಈ ಫೀಚರ್ಸ್‌ ಮೂಲಕ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದು ಮತ್ತು ನಿಮ್ಮ ಸ್ನೇಹಿತರ ಜೊತೆ ಸಂಪರ್ಕದಲ್ಲಿರಬಹುದು. ಇದರಲ್ಲಿ ಬಳಕೆದಾರರು ತಮ್ಮ ಆಲೋಚನೆಗಳನ್ನು 60 ಅಕ್ಷರಗಳ ಪಠ್ಯ ಮತ್ತು ಎಮೋಜಿಗಳೊಂದಿಗೆ ಜನರಿಗೆ ತಿಳಿಸಬಹುದು. ಇದಕ್ಕಾಗಿ ಬಳಕೆದಾರರು ಇನ್‌ಬಾಕ್ಸ್‌ಗೆ ಹೋಗಬೇಕಾಗುತ್ತದೆ. ನಂತರ ತಮಗೆ ಬೇಕಾದವರನ್ನು ಸೆಲೆಕ್ಟ್‌ ಮಾಡಬೇಕಿದೆ. ಇದಾದ ಬಳಿಕ ನೀವು ಪೋಸ್ಟ್ ಮಾಡಬಹುದು. ಈ ನೋಟ್ಸ್‌ 24 ಗಂಟೆಗಳ ಕಾಲ ಕಾಣಿಸಿಕೊಳ್ಳಲಿದ್ದು, ಇನ್‌ಬಾಕ್ಸ್‌ನ ಮೇಲ್ಭಾಗದಲ್ಲಿ ಗೋಚರಿಸುತ್ತವೆ. ಬಳಕೆದಾರರು ನಂತರ DM ಗಳಲ್ಲಿ ಕಾಣಿಸಿಕೊಳ್ಳುವ ನೋಟ್ಸ್‌ಗಳಿಗೆ ಪ್ರತ್ಯುತ್ತರ ನೀಡಬಹುದಾಗಿದೆ.

Best Mobiles in India

Read more about:
English summary
New Features on Instagram with Notes, Group Profiles and More.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X