'ಗೂಗಲ್‌ ಪೇ'ನಲ್ಲಿ ಸ್ಟಾಂಪ್ ಸಂಗ್ರಹಿಸಿ, 2020ರೂ. ನಿಮ್ಮದಾಗಿಸಿಕೊಳ್ಳಿ!

|

ಗೂಗಲ್ ಸಂಸ್ಥೆಯ ಒಡೆತನದ ಗೂಗಲ್ ಪೇ ಹಣ ವರ್ಗಾವಣೆಗೆ ಅತ್ಯುತ್ತಮ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದೆ. ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಗೂಗಲ್ ಪೇ ಆಪ್‌, ಕಳೆದ ದೀಪಾವಳಿ ಹಬ್ಬದಂದೂ ತನ್ನ ಗ್ರಾಹಕರಿಗೆ ಸ್ಟಾಂಪ್ ಕಲೆಹಾಕುವ ಕಂಟೆಸ್ಟ್ ಲಭ್ಯ ಮಾಡಿತ್ತು. ಅದೇ ರೀತಿ ಹೊಸ ವರ್ಷ 2020ರ ಸ್ವಾಗತಕ್ಕೆ ಸ್ಟಾಂಪ್ ಕಲೆಹಾಕುವ ಕಂಟೆಸ್ಟ್ (stamp collection campaign) ಘೋಷಿಸಿದೆ.

ಗೂಗಲ್ ಪೇ

ಹೌದು, ಗೂಗಲ್ ಪೇ ಹೊಸ ವರ್ಷ 2020ರ ಪ್ರಯುಕ್ತ ಸ್ಪಾಂಪ್ ಕಲೆಕ್ಟ್ ಮಾಡುವ ಕ್ಯಾಂಪೇನ್ ಆಯೋಜಿಸಿದೆ. ಈ ಕ್ಯಾಂಪೇನ್‌ನಲ್ಲಿ ಗೂಗಲ್ ಪೇ ಬಳಕೆದಾರರು ಏಳು ಸ್ಟಾಂಪ್ ಕಲೆಕ್ಟ್ ಮಾಡಬೇಕಿದ್ದು, ಏಳು ಸ್ಟಾಂಪ್ ಸಂಗ್ರಹಿಸುವ ಬಳಕೆದಾರರಿಗೆ 2020ರೂ. ವರೆಗೂ ಕ್ಯಾಶ್ ರೀವಾರ್ಡ್‌ ಲಭ್ಯವಾಗಲಿದೆ. ಇನ್ನು ಈ ಕಂಟೆಸ್ಟ್ ಆಂಡ್ರಾಯ್ಡ್ ಫೋನ್ ಮತ್ತು ಐಫೊನ್ ಬಳಕೆದಾರರಿಬ್ಬರಿಗೂ ಲಭ್ಯ ಇದೆ.

ಬಿಲ್ ಪೇಮೆಂಟ್

ಬಳಕೆದಾರರು ಗೂಗಲ್ ಪೇ ತಿಳಿಸಿರುವ ಒಟ್ಟು ಏಳು ಸ್ಟಾಂಪ್ ಗಳನ್ನು ಸಂಗ್ರಹಿಸಬೇಕಿದ್ದು, ಅದಕ್ಕಾಗಿ ಬಳಕೆದಾರರು ಹಣ ವರ್ಗಾವಣೆ ಮಾಡುವ ಹಲವು ಅಗತ್ಯ ಸಂದರ್ಭಗಳಲ್ಲಿ ಗೂಗಲ್ ಪೇ ಆಪ್ ಬಳಕೆ ಮಾಡಬೇಕಿದೆ. ಕನಿಷ್ಠ 300ರೂ. ಮತ್ತು ಅದಕ್ಕಿಂತ ಹೆಚ್ಚಿನ ಬಿಲ್ ಪೇಮೆಂಟ್, ಕನಿಷ್ಠ 98ರೂ. ಮೊಬೈಲ್ ರೀಚಾರ್ಜ್, ಕನಿಷ್ಠ 98ರೂ. ಇತರೆ ಗೂಗಲ್‌ ಪೇ ಅಂಗಡಿಕಾರ/ಬಳಕೆದಾರರಿಗೆ ಸೆಂಡ್ ಮಾಡುವುದು ಅಥವಾ ಗೂಗಲ್‌ ಪೇ ಆಪ್‌ಗೆ ಫ್ರೇಂಡ್‌ ಇನ್ವೈಟ್ ಮಾಡುವುದು.

ಏಳು ಸ್ಪಾಂಪ್

ಈ ರೀತಿ ವಿವಿಧ ಪೇಮೆಂಟ್ ಮೋಡ್‌ ಮಾಡಿದಾಗ ಸ್ಪಾಂಪ್ ಗಳು ಲಭ್ಯವಾಗಲಿವೆ. ಹೀಗೆ ಬಳಕೆದಾರರು ಒಟ್ಟು ಏಳು ಸ್ಟಾಂಪ್ ಸಂಗ್ರಹಿಸಬೇಕು. ಅವುಗಳಲ್ಲಿ ಕೆಳ ಪಟ್ಟಿಯಲ್ಲಿ ಬಲೂನ್, ಡಿಜೆ, ಸನ್‌ಗ್ಲಾಸ್‌(Balloon, DJ, Sunglasses), ಮಧ್ಯದ ಪಟ್ಟಿಯಲ್ಲಿ ಟಾಫಿ, ಸೆಲ್ಫಿ ಮತ್ತು ಪಿಜ್ಜಾ(Toffee, Selfie, Pizza) ಹಾಗೆಯೇ ಕೊನೆಯಲ್ಲಿ ಡಿಸ್ಕೊ(Disco) ಸ್ಟಾಂಪ್ ಸಂಗ್ರಹ ಮಾಡಬೇಕು.

2020ರೂ.ವರೆಗೆ ಕ್ಯಾಶ್‌

ಈ ಅವಧಿಯಲ್ಲಿ ಮೊದಲ ಬಿಲ್ ಪೇಮೆಂಟ್‌ಗೆ ಟಾಫಿ ಸ್ಟಾಂಪ್ ಸಿಗಲಿದೆ ಎಂದು ಗೂಗಲ್ ಹೇಳಿದ್ದು, ಹೀಗೆ ಗೂಗಲ್‌ ಪೇ ಆಪ್‌ನಲ್ಲಿ ಎಲ್ಲ ಏಳು ಸ್ಪಾಂಪ್ ಸಂಗ್ರಹಿಸಿದ ನಂತರ ಬಳಕೆದಾರರಿಗೆ 202ರೂ.ಯಿಂದ 2020ರೂ.ವರೆಗೆ ಕ್ಯಾಶ್‌ ರೀವಾರ್ಡ್‌ ಲಭ್ಯವಾಗಲಿದೆ. ಅಂದಹಾಗೇ ಇದೊಂದು ಸೀಮಿತ ಅವಧಿಯ ಕೊಡುಗೆ ಆಗಿದ್ದು, ಇದೇ ಡಿಸೆಂಬರ್ 31ರೆ ವರೆಗೂ ಚಾಲ್ತಿ ಇರಲಿದೆ.

Most Read Articles
Best Mobiles in India

English summary
The Google Pay offer has gone live on the Android/iOS app of the service, offering cash rewards up to Rs. 2,020. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X