ರೇಜರ್‌ನಿಂದ ವಿಶ್ವದ ಮೊದಲ 5G ಗೇಮಿಂಗ್ ಡಿವೈಸ್‌ ಅನಾವರಣ; ಫೀಚರ್ಸ್‌ ಏನು?

|

ಸ್ಮಾರ್ಟ್‌ ಗ್ಯಾಜೆಟ್ಸ್‌ ತಯಾರಿಕಾ ಕಂಪೆನಿಗಳಲ್ಲಿ ಒಂದಾದ ರೇಜರ್ ಕಂಪೆನಿ ಈಗಾಗಲೇ ವಿವಿಧ ರೀತಿಯ ಗೇಮಿಂಗ್ ಹಾರ್ಡ್‌ವೇರ್‌ಗಳನ್ನು ಪರಿಚಯಿಸಿ ಜನಪ್ರಿಯಗೊಂಡಿದೆ. ಈ ಗೇಮಿಂಗ್‌ ಡಿವೈಸ್‌ಗಳು ಯುವ ಪೀಳಿಗೆಗೆ ಹೆಚ್ಚಾಗಿ ಆಕರ್ಷಿತವಾಗುತ್ತಿದೆ. ಇದರ ಬೆನ್ನಲ್ಲೇ ಜಗತ್ತಿನ ಮೊದಲ ವಿಶೇಷ ಗೇಮಿಂಗ್ ಡಿವೈಸ್‌ ಅನ್ನು ಇತ್ತೀಚೆಗೆ ನಡೆದ RazerCon 2022 ಕಾರ್ಯಕ್ರಮದಲ್ಲಿ ಅನಾವರಣ ಮಾಡಲಾಗಿದೆ.

ನಿಂಟೆಂಡೊ

ಹೌದು, ರೇಜರ್ ನಿಂಟೆಂಡೊ ಸ್ವಿಚ್ ಶೈಲಿಯ ಜಗತ್ತಿನ ಮೊದಲ ಆಂಡ್ರಾಯ್ಡ್ ಹ್ಯಾಂಡ್ಹೆಲ್ಡ್ ಡೈವೈಸ್‌ (Android handheld device) ಅನಾವರಣಗೊಳಿಸಿದೆ. ಈ ಡಿವೈಸ್‌ ವಿಶ್ವದ ಮೊದಲ 5G ಗೇಮಿಂಗ್ ಡಿವೈಸ್‌ ಎಂದು ಕರೆಸಿಕೊಳ್ಳಲಿದೆ. ಇನ್ನು ಜಾಗತಿಕವಾಗಿ ಇದನ್ನು ಅನಾವರಣಗೊಳಿಸಿದ್ದು, ಇದರಲ್ಲಿನ ಡಿಸ್‌ಪ್ಲೇ 144Hz ನ ರಿಫ್ರೆಶ್ ರೇಟ್‌ ಪಡದಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದೆ. ಹಾಗಿದ್ರೆ ಇದರ ಬೆಲೆ ಎಷ್ಟು?, ಫೀಚರ್ಸ್‌ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಆಂಡ್ರಾಯ್ಡ್ ಹ್ಯಾಂಡ್ಹೆಲ್ಡ್ ಡೈವೈಸ್‌ 6.8 ಇಂಚಿನ ಅಮೋಲೆಡ್‌ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 2,400×1080 ಪಿಕ್ಸೆಲ್‌ ರೆಸಲ್ಯೂಶನ್‌ ಪಡೆದಿದೆ. ಹಾಗೆಯೇ, 144Hz ನ ರಿಫ್ರೆಶ್ ರೇಟ್‌ ನೀಡಲಿದ್ದು, ಇತರೆ ಡಿವೈಸ್‌ಗಿಂತ 87% ರಷ್ಟು ಹೆಚ್ಚಿನ ಪಿಕ್ಸೆಲ್‌ ರೇಟ್‌ ಆಯ್ಕೆ ಇದರಲ್ಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ರೇಜರ್ ಎಡ್ಜ್ ಹಾಗೂ ವೆರಿಝೋನ್ ಎಕ್ಸ್‌ಕ್ಲೂಸಿವ್ ಎಂದು ಸಹ ಇದನ್ನು ಕರೆಯಲಾಗುತ್ತಿದ್ದು, ಈ ಪ್ರೀಮಿಯಂ ಆಂಡ್ರಾಯ್ಡ್ ಗೇಮಿಂಗ್ ಹ್ಯಾಂಡ್ಹೆಲ್ಡ್ ಸ್ನಾಪ್‌ಡ್ರಾಗನ್ G3x ಜೆನ್ 1 ಚಿಪ್‌ಸೆಟ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಚಿಪ್‌ಸೆಟ್‌ ಸ್ಥಿರವಾದ ಕಾರ್ಯಕ್ಷಮತೆ ಹಾಗೂ ಹೆಚ್ಚಿನ ಫ್ರೇಮ್ ರೇಟ್‌ ನೀಡಲು 2-3x ವೇಗದ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಆಂಡ್ರಾಯ್ಡ್‌ ಹಾಗೂ Xbox ಗೇಮ್‌ಗಳಿಗಾಗಿ ಕಿಶಿ (Kishi) V2 Pro ಎಂಬ ಡಿಟ್ಯಾಚೇಬಲ್ ಕಂಟ್ರೋಲರ್‌ ಆಯ್ಕೆಯನ್ನು ಪಡೆದುಕೊಂಡಿದೆ.

ಬ್ಯಾಟರಿ ಹಾಗೂ ಇತರೆ ಮಾಹಿತಿ

ಬ್ಯಾಟರಿ ಹಾಗೂ ಇತರೆ ಮಾಹಿತಿ

ಈ ಸ್ಮಾರ್ಟ್‌ ಗೇಮಿಂಗ್ ಡಿವೈಸ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಗಂಟೆಗಳ ಕಾಲ ಯಾವುದೇ ತೊಂದರೆ ಇಲ್ಲದೆ ಗೇಮ್‌ನಲ್ಲಿ ತಲ್ಲೀನವಾಗಬಹುದಾಗಿದೆ. ಇನ್ನುಳಿದಂತೆ ಈ ಡಿವೈಸ್‌ನಲ್ಲಿ ಗೇಮಿಂಗ್‌ಗಾಗಿ ಬಳಕೆದಾರರು ಮೈಕ್ರೋಸ್ವಿಚ್ ಬಟನ್‌ಗಳ ಆಯ್ಕೆ ಪಡೆಯಬಹುದು. ಹಾಗೆಯೇ ಅನಲಾಗ್ ಟ್ರಿಗ್ಗರ್‌ಗಳು, ಪ್ರೊಗ್ರಾಮೆಬಲ್ ಮ್ಯಾಕ್ರೋಗಳು ಮತ್ತು ರೇಜರ್ ಹೈಪರ್‌ಸೆನ್ಸ್ ಹ್ಯಾಪ್ಟಿಕ್‌ಗಳೊಂದಿಗೆ ಗೇಮ್‌ ಆಡಬಹುದಾಗಿದೆ.

ರೇಜರ್‌

ಇದರ ಜೊತೆಗೆ ರೇಜರ್‌ ಕಂಪೆನಿಯು ಡೆಡಿಕೇಟೆಡ್ ಆಂಡ್ರಾಯ್ಡ್ ಗೇಮಿಂಗ್ ಡಿವೈಸ್ ಗಾಗಿ ಕ್ಲೌಡ್ ಗೇಮಿಂಗ್ ಸಕ್ರಿಯಗೊಳಿಸಲು ವೆರಿಝೋನ್‌ನ 5G ಸಂಪರ್ಕದೊಂದಿಗೆ ಕೆಲಸ ಮಾಡುತ್ತಿದೆ. ಈ ಗ್ಯಾಜೆಟ್ ಎರಡು ಡಿವೈಸ್‌ಗಳಾಗಿ ಪ್ಯಾಕ್‌ ಆಗಿದ್ದು, ಒಂದು ಡಿಸ್‌ಪ್ಲೇ ವಿಭಾಗವನ್ನು ಹೊಂದಿದ್ದರೆ ಇನ್ನೊಂದು ಡಿಟ್ಯಾಚೇಬಲ್ ಕಂಟ್ರೋಲಿಂಗ್ ಸೆಟ್ ಆಯ್ಕೆ ಹೊಂದಿದೆ. ಅದರಂತೆ ಕ್ಲೌಡ್ ಗೇಮಿಂಗ್‌ಗೆ ಹಾಗೂ ಅಪೆಕ್ಸ್ ಲೆಜೆಂಡ್ಸ್‌ನಂತಹ ಹೈ ಎಂಡ್‌ನ ಮೊಬೈಲ್ ಗೇಮ್‌ಗಳಿಗೆ ಈ ಹ್ಯಾಂಡ್ಹೆಲ್ಡ್ ಸಪೋರ್ಟ್‌ ಮಾಡಲಿದೆ.

ಟ್ವಿಟರ್‌

ಈ ಸಂಬಂಧ ರೇಜರ್ ತನ್ನ ಅಧೀಕೃತ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ನೀಡಿದ್ದು, ಎಡ್ಜ್ ಎಂಬುದು ವಿಶೇಷವಾದ ಸ್ನಾಪ್‌ಡ್ರಾಗನ್ G3x Gen 1 ನಿಂದ ಕಾರ್ಯನಿರ್ವಹಿಸುವ ಅಲ್ಟಿಮೇಟ್ ಆಂಡ್ರಾಯ್ಡ್ ಗೇಮಿಂಗ್ ಹ್ಯಾಂಡ್ಹೆಲ್ಡ್ ಆಗಿದೆ. ಸಕ್ರಿಯ ಕೂಲ್ಡ್ ಗೇಮಿಂಗ್ ಚಿಪ್‌ಸೆಟ್ ಮತ್ತು 144Hz ಅಮೋಲೆಡ್‌ ಡಿಸ್‌ಪ್ಲೇ ಯನ್ನು ಇದು ಹೊಂದಿದ್ದು, ಅದ್ಭುತ ಗೇಮಿಂಗ್ ಕಾರ್ಯಕ್ಷಮತೆಯನ್ನು ಆನಂದಿಸಿ ಎಂದು ಬರೆದುಕೊಂಡಿದೆ.

ಡಿವೈಸ್‌

ಇನ್ನು ರೇಜರ್‌ ಕಂಪೆನಿಯ ಡಿವೈಸ್‌ ಜನವರಿ 2023 ರ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದ್ದು, $399.99 ನಿಗದಿ ಮಾಡಲಾಗಿದೆ. ಹಾಗೆಯೇ ಭಾರತದಲ್ಲಿ ಅಂದಾಜು 32,952ರೂ. ಗಳಲ್ಲಿ ಈ ಗೇಮಿಂಗ್‌ ಗ್ಯಾಜೆಟ್‌ ಲಭ್ಯವಾಗಬಹುದು ಎನ್ನಲಾಗಿದೆ.

Best Mobiles in India

English summary
Razer has become popular by introducing various types of gaming hardware. Now introducing the worlds 1st 5G gaming device.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X