ನಿಮ್ಮ ಗ್ಯಾಜೆಟ್ ಚಾರ್ಜ್‌ ಮಾಡಲು ವೈಫೈ ಸಾಕು

By Suneel
|

ಟೆಕ್ನಾಲಜಿ ಅಂದ್ರೇನೇ ಅದೊಂತರ ಯಾವಾಗಲು ಹರಿಯುವ ನೀರಿದ್ದ ಹಾಗೆ. ಹೊಸ ಟೆಕ್ನಾಲಜಿ ಯಾವುದಾದರೂ ಬಂತೆಂದರೇ ಅದೇ ಟೆಕ್ನಾಲಜಿ ಕೆಲತಿಂಗಳಲ್ಲೇ ಇನ್ನು ಹೆಚ್ಚು ಅಭಿವೃದ್ದಿಗೊಂಡು ಹೊಸ ಅನುಭವವನ್ನೇ ನೀಡುತ್ತದೆ. ಉದಾಹರಣೆಗೆ ಮೊದಮೊದಲು ಮೊಬೈಲ್‌ನಿಂದ ಮೊಬೈಲ್‌ಗೆ ಫೈಲ್‌ಗಳನ್ನು ಶೇರ್‌ಮಾಡಲು ಬ್ಲೂಟೂತ್‌ ಬಳಸುತ್ತಿದ್ದೆವು. ಈಗ ಶೇರಿಟ್‌ನಂತಹ ಹಲವು ಸ್ಪೀಡ್‌ ಟೆಕ್ನಾಲಜಿಗಳನ್ನು ಫೈಲ್‌, ವಿಡಿಯೋ, ಆಡಿಯೋಗಳನ್ನು ವರ್ಗಾವಣೆಮಾಡಲು ಬಳಸುತ್ತಿದ್ದೇವೆ.

ಓದಿರಿ: ಉಚಿತ ವೈಫೈ ಪಡೆದುಕೊಳ್ಳುವುದು ಹೇಗೆ?

ಆದರೆ ಹೊಸ ಟೆಕ್ನಾಲಜಿ ಒಂದು ನಿಮ್ಮ ಡಿವೈಸ್‌ಗಳನ್ನು ಚಾರ್ಚ್‌ ಮಾಡಲು ವೈಫೈ ಬಳಸಿಕೊಳ್ಳುತ್ತದೆ. ಅಂದರೆ ನಿಮ್ಮ ಕ್ಯಾಮೆರಾ, ಮೊಬೈಲ್‌ನಂತಹ ಗ್ಯಾಜೆಟ್‌ಗಳಿಗೆ ಪವರ್‌ ನೀಡಲು ವೈಫೈ ಸಾಕು. ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ಈ ಬಗ್ಗೆ ವಿಶೇಷ ಮಾಹಿತಿಯನ್ನು ತಿಳಿಸುತ್ತಿದೆ.

ವೈಫೈನಿಂದ ಗ್ಯಾಜೆಟ್‌ಗಳಿಗೆ ಪವರ್

ವೈಫೈನಿಂದ ಗ್ಯಾಜೆಟ್‌ಗಳಿಗೆ ಪವರ್

ಭಾರತೀಯ ಮೂಲದ ಸಂಶೋಧಕರು ಒಳಗೊಂಡಂತೆ ಸಂಶೋಧಕರ ತಂಡವೊಂದು ವೈರ್‌ಗಳ ಸಹಾಯವಿಲ್ಲದೆ ವೈಫೈ ರೂಟರ್‌ನಿಂದ ಹಲವು ರೀತಿಯ ಡಿವೈಸ್‌ಗಳಿಗೆ ಪವರ್‌ ನೀಡುವ ಹೊಸ ಟೆಕ್ನಾಲಜಿ ಅಭಿವೃದ್ದಿಗೊಳಿಸಿದ್ದಾರೆ.

ಪಾಪುಲರ್ ಸೈನ್ಸ್‌

ಪಾಪುಲರ್ ಸೈನ್ಸ್‌

ವೈಫೈ ಆಧಾರದ ಮೇಲೆ ವಿದ್ಯುತ್‌ ನೀಡುವ ಈ ಟೆಕ್ನಾಲಜಿ ಮೋಸ್ಟ್‌ ಇನೋವೇಟಿವ್‌ ಎನಿಸಿದ್ದು ವಾಷಿಂಗ್ಟನ್‌ನಲ್ಲಿ ''ಬೆಸ್ಟ್‌ ಆಫ್‌ ವಾಟ್‌ ನ್ಯೂ 2015'' ಪ್ರಶಸ್ತಿ ಪಡೆದಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಇಲೆಕ್ಟ್ರಾನಿಕ್ ಡಿವೈಸ್‌ಗಳಿದೆ ವಿದ್ಯುತ್

ಇಲೆಕ್ಟ್ರಾನಿಕ್ ಡಿವೈಸ್‌ಗಳಿದೆ ವಿದ್ಯುತ್

ಕ್ಯಾಮೆರಾ ಮತ್ತು ಇತರ ಡಿವೈಸ್‌ಗಳಿಗೆ ಪವರ್‌ನೀಡಲು ವೈಫೈ ಬಳಸಿ ಸೆನ್ಸಾರ್ ಮೂಲಕ ಪವರ್‌ ನೀಡಬಹುದಾಗಿದೆ.

ಪವರ್ ನೀಡುವ ಹೊಸ ಸಿಸ್ಟಮ್‌

ಪವರ್ ನೀಡುವ ಹೊಸ ಸಿಸ್ಟಮ್‌

ವಾಷಿಂಗ್ಟನ್‌ನ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಾಕ್ಟರಲ್‌ ವಿದ್ಯಾರ್ಥಿಗಳ ವಿಶ್ವವಿದ್ಯಾನಿಲಯದ ಈ ಸಂಶೋಧನೆಯ ಪ್ರಮುಖ ಲೇಖಕ '' ವೈಫೈ ಸಿಗ್ನಲ್‌ ಕಡಿಮೆ ಇದ್ದರೂ ಸಹ ಡಿವೈಸ್‌ಗಳಿಗೆ ಪವರ್ ನೀಡಲು ಸಹಾಯಕವಾಗುವ ಹೊಸ ವೈಫೈ ರೂಟರ್‌ ಸಿಸ್ಟಮ್‌ ಅಭಿವೃದ್ದಿ ಪಡಿಸಿರುವುದಾಗಿ ಹೇಳಿದ್ದಾರೆ''.

PoWiFi ಸಿಸ್ಟಮ್‌

PoWiFi ಸಿಸ್ಟಮ್‌

ಈ ಸಿಸ್ಟಮ್‌ ಅನ್ನು ಕ್ಯಾಮೆರಾ ಮತ್ತು ಸೆಲ್‌ ಫೋನ್‌ಗಳಿಗಲ್ಲದೆ ದಿನನಿತ್ಯ ಬಳಸುವ ಕಾಫೀ ಮೇಕರ್, ವಾಷಿಂಗ್‌ ಮಷಿನ್, ಏರ್‌ ಕಂಡಿಷನರ್, ಮೊಬೈಲ್‌ ಡಿವೈಸ್‌ ಗಳಿಗೂ ಪವರ್‌ ನೀಡುವಂತೆ ಅಭಿವೃದ್ದಿ ಪಡಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಚಾಲೆಂಜ್‌

ಚಾಲೆಂಜ್‌

ಆದರೆ ಪ್ರಮುಖ ಚಾಲೆಂಚ್‌ ವಿಷಯವೇನೆಂದರೆ ಕಡಿಮೆ ವಿದ್ಯುತ್‌ ಸಂವೇದಕ ಹೊಂದಿರುವ ಡಿವೈಸ್‌ಗಳಿಗೆ ವಿದ್ಯುತ್ ಪ್ಲಗ್‌ಗಳಿಲ್ಲದೇ ಹೇಗೆ ಪವರ್‌ ನೀಡುವುದು ಎಂಬುದಾಗಿದೆ.

ಪವರ್ ವರ್ಗಾವಣೆ ಹೇಗೆ ?

ಪವರ್ ವರ್ಗಾವಣೆ ಹೇಗೆ ?

ವೈಫೈ ಸಿಗ್ನಲ್‌ಗಳು ಆಪರೇಟಿಂಗ್‌ ಸಿಸ್ಟಮ್‌ ಅನ್ನು (ಡಿವೈಸ್‌ಗಳನ್ನು) ಸಾಂದರ್ಭಿಕವಾಗಿ ಸಿಸ್ಟಮ್‌ಗಳ ಸೈಲೆಂಟ್‌ ಅವಧಿಯಲ್ಲಿ ಪವರ್ ನೀಡುತ್ತವೆ.

ಪವರ್  ವರ್ಗಾವಣೆ ಹೇಗೆ ?

ಪವರ್ ವರ್ಗಾವಣೆ ಹೇಗೆ ?

ಇದುವರೆಗೆ ಬಳಕೆಯಲ್ಲಿಲ್ಲದ ವೈಫೈ ಚಾನೆಲ್‌ಗಳಲ್ಲಿನ 'ಪವರ್‌ ಪಾಕೆಟ್ಸ್'ಗಳನ್ನು ರೂಟರ್‌ಗಳನ್ನು ಆಪ್ಟಿಮೈಜ್‌ ಮಾಡುವ ಮುಖಾಂತರ ವೈಫೈ ಸಿಗ್ನಲ್‌ಗಳನ್ನು ಪ್ರಮುಖವಾಗಿ ಬೀಪಿಂಗ್ ಮಾಡುವ ಮುಖಾಂತರ ಪವರ್‌ ವರ್ಗಾವಣೆ ಮಾಡಲಾಗುತ್ತದೆ.

ವಿದ್ಯುತ್‌ ಸೆನ್ಸಾರ್

ವಿದ್ಯುತ್‌ ಸೆನ್ಸಾರ್

ವೈಫೈ ಮೂಲಕ ವಿದ್ಯುತ್‌ ಅನ್ನು ಸೆಳೆಯಲು ಡಿವೈಸ್‌ಗಳಿಗೆ ಸೆನ್ಸಾರ್‌ ಅನ್ನು ಅಭಿವೃದ್ದಿಪಡಿಸಲಾಗಿದೆ.

 ಟೆಕ್ನಾಲಜಿ ಎಕ್ಸ್‌ಪೆರಿಮೆಂಟ್‌

ಟೆಕ್ನಾಲಜಿ ಎಕ್ಸ್‌ಪೆರಿಮೆಂಟ್‌

ಸಂಶೋಧಕರು PoWiFi ಟೆಕ್ನಾಲಜಿಯನ್ನು ಅಭಿವೃದ್ದಿಪಡಿಸಿದ ನಂತರ VGA ಕ್ಯಾಮೆರಾವೊಂದನ್ನು 17 ಅಡಿ ದೂರದಲ್ಲಿಟ್ಟು ವಿದ್ಯುತ್ ಸ್ಟೋರ್‌ ಮಾಡಲು ಇರಿಸಿ ಯಶಸ್ವಿಯಾಗಿದ್ದಾರೆ.

 PoWiFi

PoWiFi

ಟೆಕ್ನಾಲಜಿಯನ್ನು ರಿಯಲ್‌ ಟೈಮ್‌ನಲ್ಲಿ 6 ಮನೆಗಳಲ್ಲಿ ಟಸ್ಟ್‌ಮಾಡಲಾಗಿದೆ. ಇದು ವೈಫೈ ಸಿಗ್ನಲ್‌ ಕಡಿಮೆ ಇದ್ದರೂ ಸಹ ಡಿವೈಸ್‌ಗಳಿಗೆ ವಿದ್ಯುತ್‌ ನೀಡುವಲ್ಲಿ ಯಶಸ್ವಿಯಾಗಿದೆ.

Best Mobiles in India

English summary
Researchers, including those of Indian-origin, have developed a novel technology that uses a WiFi router to wirelessly power devices such as cameras without degrading the quality of your internet signal.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X