ನಾಯ್ಸ್‌ ಬಡ್ಸ್ ಕಾಂಬ್ಯಾಟ್ ಇಯರ್‌ಬಡ್ಸ್‌ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!

|

ಸ್ಮಾರ್ಟ್‌ ಗ್ಯಾಜೆಟ್‌ ವಿಭಾಗದಲ್ಲಿ ಅದರಲ್ಲೂ ಧರಿಸಬಹುದಾದ ಡಿವೈಸ್‌ಗಳ ವಿಭಾಗದಲ್ಲಿ ನಾಯ್ಸ್‌ ಕಂಪೆನಿಯು ಪ್ರಮುಖ ಸ್ಥಾನ ಪಡೆದುಕೊಂಡಿದ್ದು, ಈ ಕಂಪೆನಿಯ ಸ್ಮಾರ್ಟ್‌ವಾಚ್‌ಗಳು ಇಂದಿಗೂ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಹಾಗೆಯೇ ಹೆಡ್‌ಫೋನ್‌ ಹಾಗೂ ಇಯರ್‌ಬಡ್ಸ್‌ಗಳಿಗೆ ಭಾರೀ ಬೇಡಿಕೆ ಇದ್ದು, ಇದೀಗ ಗೇಮಿಂಗ್‌ ವಲಯವನ್ನು ಕೇಂದ್ರೀಕರಿಸಿಕೊಂಡು ಹೊಸ ಇಯರ್‌ಬಡ್ಸ್‌ಅನ್ನು ನಾಯ್ಸ್‌ ಪರಿಚಯಿಸಿದೆ.

ನಾಯ್ಸ್‌

ಹೌದು, ನಾಯ್ಸ್‌ ಕಂಪೆನಿಯು ಹೊಸ ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡುವ ಮೂಲಕ ಗೇಮಿಂಗ್ ವಾಯರ್‌ಲೆಸ್ ಆಡಿಯೊ ಟೂಲ್ಸ್‌ ವಿಭಾಗಕ್ಕೆ ಎಂಟ್ರಿ ಕೊಟ್ಟಿದೆ. ಈ ಇಯರ್‌ಬಡ್ಸ್‌ ಗಳು ಗೇಮರ್‌ಗಳ ಉತ್ಸಾಹವನ್ನು ಹೆಚ್ಚಿಸುವ ಹಾಗೆ ಶೈಲಿ ಪಡೆದುಕೊಂಡಿದ್ದು, ಗ್ರಾಹಕರಿಗೆ ಹಲವು ಬಣ್ಣದ ಆಯ್ಕೆಯಲ್ಲಿಯೂ ಲಭ್ಯ ಇದೆ. ಹಾಗಿದ್ರೆ, ಈ ಇಯರ್‌ಬಡ್ಸ್‌ನ ಪ್ರಮುಖ ಫೀಚರ್ಸ್‌, ಭಾರತದಲ್ಲಿ ಇದರ ಬೆಲೆ ಸೇರಿದಂತೆ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ದೇಶೀಯ ಸ್ಮಾರ್ಟ್‌ ಡಿವೈಸ್‌ ತಯಾರಕರಾದ ನಾಯ್ಸ್ ತನ್ನ ಮೊದಲ ಗೇಮಿಂಗ್ ವಾಯರ್‌ಲೆಸ್‌ ಇಯರ್‌ಬಡ್‌ಗಳನ್ನು ಅನಾವರಣ ಮಾಡಿದ್ದು, ಇದಕ್ಕೆ ನಾಯ್ಸ್ ಬಡ್ಸ್ ಕಾಂಬ್ಯಾಟ್ ಎಂದು ಹೆಸರಿಸಲಾಗಿದೆ. ಈ ಬಡ್ಸ್‌ ಗೇಮಿಂಗ್ ಉದ್ದೇಶಕ್ಕಾಗಿಯೇ ವಿನ್ಯಾಸಗೊಳಿಸಲಾಗಿದ್ದು, ಸ್ಪಷ್ಟವಾದ ಆಡಿಯೊ ಅನುಭವವನ್ನು ಈ ಬಡ್ಸ್‌ನಲ್ಲಿ ಪಡೆಯಬಹುದಾಗಿದೆ.

ಇನ್-ಇಯರ್ ವಿನ್ಯಾಸ

ಇನ್-ಇಯರ್ ವಿನ್ಯಾಸ

ಈ ನಾಯ್ಸ್ ಬಡ್ಸ್ ಕಾಂಬ್ಯಾಟ್ ಇನ್-ಇಯರ್ ಶೈಲಿಯನ್ನು ಪಡೆದುಕೊಂಡಿದ್ದು, ಟಚ್‌ ಕಂಟ್ರೋಲ್‌ನೊಂದಿಗೆ ಬಳಕೆಗೆ ಇನ್ನಷ್ಟು ಸುಗಮವಾದ ಆಯ್ಕೆ ನೀಡಲಾಗಿದೆ. ಅಂದರೆ ಈ ಟಚ್‌ ಕಂಟ್ರೋಲ್‌ ಮೂಲಕ ಬಳಕೆದಾರರು ಮ್ಯೂಸಿಕ್‌ ಹಾಗೂ ಕರೆಗಳನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದೆ.

ವೇಕ್

ಇದರೊಂದಿಗೆ ವೇಕ್ ಹಾಗೂ ಪೇರ್ ಫೀಚರ್ಸ್‌ ಸೌಲಭ್ಯ ನೀಡಲಾಗಿರುವುದರಿಂದ ಚಾರ್ಜಿಂಗ್‌ ಕೇಸ್‌ನಿಂದ ಬಡ್ಸ್‌ಗಳನ್ನು ಹೊರತೆಗೆದ ತಕ್ಷಣವೇ ನಿಮ್ಮ ಸ್ಮಾರ್ಟ್‌ ಡಿವೈಸ್‌ಗಳಿಗೆ ಇವು ಸುಲಭವಾಗಿ ಸಂಪರ್ಕಗೊಳ್ಳುತ್ತವೆ. ಹಾಗೆಯೇ ಆಂಡ್ರಾಯ್ಡ್‌ ಮತ್ತು ಐಓಎಸ್‌ ಡಿವೈಸ್‌ಗಳೆರಡಕ್ಕೂ ಈ ಇಯರ್‌ಬಡ್ಸ್‌ ಬೆಂಬಲ ನೀಡಲಿದೆ.

ವಾಯ್ಸ್‌ ಅಸಿಸ್ಟೆಂಟ್‌

ವಾಯ್ಸ್‌ ಅಸಿಸ್ಟೆಂಟ್‌

ಇದರಲ್ಲಿ ಗೂಗಲ್‌ ಅಸಿಸ್ಟೆಂಟ್‌ ಹಾಗೂ ಸಿರಿ ವಾಯ್ಸ್‌ ಅಸಿಸ್ಟೆಂಟ್‌ ಸೇವೆ ನೀಡಲಾಗಿದ್ದು, ಇವುಗಳ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ಗೆ ಬರುವ ಕರೆ, ಸಂಗೀತ ಹಾಗೂ ಇನ್ನಿತರೆ ವಿಷಯಗಳನ್ನು ಕಂಟ್ರೋಲ್‌ ಮಾಡಬಹುದಾಗಿದೆ.

ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌

ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌

ಈ ಇಯರ್‌ಬಡ್‌ಗಳು 13mm ಡ್ರೈವರ್ ಯೂನಿಟ್‌ನೊಂದಿಗೆ ಪ್ಯಾಕ್‌ ಆಗಿದ್ದು, 40ms ಅಡಿಯಲ್ಲಿ ಕಡಿಮೆ ಲೇಟೆನ್ಸಿಯನ್ನು ಹೊಂದಿದೆ. ಇದರೊಂದಿಗೆ ವಿವಿಧ ರೀತಿಯ ನಾಯ್ಸ್‌ ಕ್ಯಾನ್ಸಲಿಂಗ್ ಸೌಲಭ್ಯ ಸಹ ಕಲ್ಪಿಸಲಾಗಿದ್ದು, ಈ ಮೂಲಕ ಯಾವುದೇ ಗೊಂದಲ ಹಾಗೂ ಹಿನ್ನೆಲೆ ಶಬ್ಧದ ಅಡಚಣೆ ಇಲ್ಲದೆ ಬೇಕಾದವರ ಜೊತೆಗೆ ಸಂಪರ್ಕದಲ್ಲಿರಬಹುದು.

ಕನೆಕ್ಟಿವಿಟಿ

ಹಾಗೆಯೇ ಕನೆಕ್ಟಿವಿಟಿ ವಿಚಾರದಲ್ಲಿ ಬ್ಲೂಟೂತ್‌ ಆವೃತ್ತಿ 5.3 ಅನ್ನು ಬೆಂಬಲಿಸಲಿದ್ದು, ನಾಯ್ಸ್‌ ಕ್ಯಾನ್ಸಲೇಶನ್‌ ಆಯ್ಕೆ ಇರುವ ಕ್ವಾಡ್ ಮೈಕ್‌ನೊಂದಿಗೆ ಪ್ಯಾಕ್‌ ಆಗಿದೆ. ಇನ್ನುಳಿದಂತೆ ಈ ಬಡ್ಸ್‌ಗಳು IPX5 ರೇಟಿಂಗ್‌ ಹೊಂದಿದ್ದು, ವಾಟರ್‌ ರೆಸಿಸ್ಟೆಂಟ್‌ ಸೌಲಭ್ಯ ಪಡೆದುಕೊಂಡಿವೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ನಾಯ್ಸ್ ಬಡ್ಸ್ ಕಾಂಬ್ಯಾಟ್ ಒಂದು ಪೂರ್ಣ ಚಾರ್ಜ್‌ನಲ್ಲಿ 36 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡಲಿದೆ. ಜೊತೆಗೆ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಸಹ ಇದರಲ್ಲಿದ್ದು, ಇಯರ್‌ಬಡ್‌ಗಳು ಸಹ ಇನ್‌ಸ್ಟಾಚಾರ್ಜ್ ಆಯ್ಕೆ ಪಡೆದುಕೊಂಡಿರುವುದು ವಿಶೇಷ. ಇನ್ನು ಚಾರ್ಜಿಂಗ್‌ ಕೇಸ್‌ ಅನ್ನು ಚಾರ್ಜ್‌ ಮಾಡಲು ಯುಎಸ್‌ಬಿ ಟೈಪ್-ಸಿ ಪೋರ್ಟ್‌ ಆಯ್ಕೆ ನೀಡಲಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ನಾಯ್ಸ್ ಬಡ್ಸ್ ಕಾಂಬ್ಯಾಟ್‌ಗೆ ಭಾರತದಲ್ಲಿ 1,499 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ಸ್ಟೆಲ್ತ್ ಬ್ಲ್ಯಾಕ್, ಕವರ್ಟ್ ವೈಟ್ ಮತ್ತು ಶಾಡೋ ಗ್ರೇ ನ ಮೂರು ಬಣ್ಣದ ಆಯ್ಕೆಯಲ್ಲಿ ಈ ಇಯರ್‌ಬಡ್ಸ್‌ ಲಭ್ಯ ಇದ್ದು, ನಾಯ್ಸ್‌ನ ಆನ್‌ಲೈನ್‌ ಸ್ಟೋರ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
Noise Buds Combat Earbuds have been unveiled and will be available at an affordable price. Details in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X