ಭಾರತದಲ್ಲಿ ನೋಕಿಯಾ 2660 ಫ್ಲಿಪ್ ಫೋನ್ ಬಿಡುಗಡೆ! ವಿಶೇಷತೆ ಏನು?

|

ನೋಕಿಯಾ ಕಂಪೆನಿ ಇಂದಿಗೂ ಕೂಡ ಮೊಬೈಲ್‌ ಮಾರುಕಟ್ಟೆಯ ಎವರ್‌ಗ್ರೀನ್‌ ಬ್ರ್ಯಾಂಡ್‌ ಎನಿಸಿಕೊಂಡಿದೆ. ವಿವಿಧ ಮಾದರಿಯ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ ಅಬ್ಬರಗಳ ನಡುವೆಯೂ ನೋಕಿಯಾ ಕಂಪೆನಿ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ. ಇದಲ್ಲದೆ ತನ್ನ ಹೊಸ ಮಾದರಿಯ ಫೀಚರ್‌ ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ನೋಕಿಯಾ 2660 ಫ್ಲಿಪ್ ಫೋನ್‌ ಅನ್ನು ಲಾಂಚ್‌ ಮಾಡಿದೆ. ಈ ಫ್ಲಿಪ್‌ ಫೋನ್‌ ಆಕರ್ಷಕವಾದ ವಿನ್ಯಾಸವನ್ನು ಪಡೆದುಕೊಂಡಿದೆ.

ನೋಕಿಯಾ

ಹೌದು, ನೋಕಿಯಾ ಕಂಪೆನಿ ಭಾರತದಲ್ಲಿ ಹೊಸ ನೋಕಿಯಾ 2660 ಫ್ಲಿಪ್ ಫೋನ್ ಬಿಡುಗಡೆ ಮಾಡಿದೆ. ಈ ಫೋನ್‌ 30+ OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು QVGA ರೆಸಲ್ಯೂಶನ್‌ ಹೊಂದಿರುವ 2.8 ಇಂಚಿನ ಪ್ರೈಮರಿ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ 1.77-ಇಂಚಿನ ಹೊರಗಿನ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ 48MB RAM ಮತ್ತು 128MB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೋಕಿಯಾ 2660 ಫ್ಲಿಪ್ ಫೋನ್‌

ನೋಕಿಯಾ 2660 ಫ್ಲಿಪ್ ಫೋನ್‌ 2.8 ಇಂಚಿನ ಪ್ರೈಮೆರಿ ಡಿಸ್‌ಪ್ಲೇ ಹೊಂದಿದೆ. ಇದು QVGA ರೆಸಲ್ಯೂಶನ್‌ ಅನ್ನು ಪಡೆದಿದೆ. ಇನ್ನು ಈ ಫೋನ್‌ 1.77-ಇಂಚಿನ ಔಟ್ ಡಿಸ್‌ಪ್ಲೇಯನ್ನು ಹೊಂದಿದ್ದು, QQVGA ರೆಸಲ್ಯೂಶನ್‌ ಅನ್ನು ನೀಡಲಿದೆ. ಇದು ಯುನಿಸೋಕ್‌ T107 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, 30+ OS ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 48MB RAM ಮತ್ತು 128MB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 32GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ನೋಕಿಯಾ 2660 ಫ್ಲಿಪ್ ಫೋನ್‌

ನೋಕಿಯಾ 2660 ಫ್ಲಿಪ್ ಫೋನ್‌ 0.3 ಮೆಗಾಪಿಕ್ಸೆಲ್ ಸೆನ್ಸಾರ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದು ಡ್ಯುಯಲ್‌ ಫ್ಲ್ಯಾಷ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ಫೋನ್‌ 2.75W ಚಾರ್ಜಿಂಗ್ ಬೆಂಬಲಿಸುವ 1450mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು ತೆಗೆಯಬಹುದಾದ ಬ್ಯಾಟರಿಯಾಗಿದೆ. ಇನ್ನು ಸಿಂಗಲ್‌ 4G ಸಿಮ್‌ನಲ್ಲಿ ಫೋನ್ ಗರಿಷ್ಠ 24.9 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ. ಅಲ್ಲದೆ ಗರಿಷ್ಠ 6.5 ಗಂಟೆಗಳ ಟಾಕ್ ಟೈಮ್ ಅನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ನೋಕಿಯಾ 2660 ಫ್ಲಿಪ್ ಫೋನ್‌

ಇನ್ನು ನೋಕಿಯಾ 2660 ಫ್ಲಿಪ್ ಫೋನ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v4.2 ಬೆಂಬಲ, ಮೈಕ್ರೋ-ಯುಎಸ್‌ಬಿ 2.0 ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಅನ್ನು ಒಳಗೊಂಡಿದೆ. ಇದು 18.9 x 108 x 55mm ಅಳತೆ ಮತ್ತು 123g ತೂಕವನ್ನು ಹೊಂದಿದೆ. ಇದು ಡ್ಯುಯಲ್-ಸಿಮ್ (ನ್ಯಾನೋ) ಫೋನ್ ಆಗಿದ್ದು 4G ಸಂಪರ್ಕಕ್ಕೆ ಬೆಂಬಲವನ್ನು ಹೊಂದಿದೆ. ಹಾಗೆಯೇ ಮೂರು ಬಣ್ಣ ಆಯ್ಕೆಗಳಲ್ಲಿ ಮಾರಾಟವಾಗಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನೋಕಿಯಾ 2660 ಫ್ಲಿಪ್‌ ಫೋನ್‌ ಭಾರತದಲ್ಲಿ ತನ್ನ ಏಕೈಕ 48MB RAM + 128MB ಸ್ಟೋರೇಜ್‌ ಆಯ್ಕೆಗೆ 4,699ರೂ ಬೆಲೆಯನ್ನು ಹೊಂದಿದೆ. ಕಂಪನಿಯ ವೆಬ್‌ಸೈಟ್ ಪ್ರಕಾರ, ಇದು ಪ್ರಸ್ತುತ ನೋಕಿಯಾದ ವೆಬ್‌ಸೈಟ್‌ನಲ್ಲಿ ಕಪ್ಪು, ನೀಲಿ ಮತ್ತು ಕೆಂಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ನೋಕಿಯಾ

ಇದಲ್ಲದೆ ನೋಕಿಯಾ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ನೋಕಿಯಾ C21 ಪ್ಲಸ್‌ ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಇನ್ನು ನೋಕಿಯಾ C21 ಪ್ಲಸ್‌ ಸ್ಮಾರ್ಟ್‌ಫೋನ್ 6.5 ಇಂಚಿನ LCD ಡಿಸ್‌ಪ್ಲೇ ಅನ್ನು ಹೊಂದಿದ್ದು, 20:9 ರ ಆಕಾರ ಅನುಪಾತವನ್ನು ಇದು ಪಡೆದಿದೆ. ಹಾಗೆಯೇ ಈ ಫೋನ್‌ 720 × 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 2.5D ಕವರ್ ಗ್ಲಾಸ್‌ ರಚನೆಯನ್ನು ಹೊಂದಿದೆ. ಇದು ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಯುನಿಸಾಕ್ SC9863A ಪ್ರೊಸೆಸರ್‌ನಿಂದ ಚಾಲಿತವಾಗಿದೆ.

ಸ್ಮಾರ್ಟ್‌ಫೋನ್

ನೋಕಿಯಾ C21 ಪ್ಲಸ್‌ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಅವುಗಳು ಕ್ರಮವಾಗಿ 3GB RAM ಮತ್ತು 32GB ಹಾಗೂ 4GB RAM ಮತ್ತು 64GB ಸಾಮರ್ಥ್ಯದಲ್ಲಿವೆ. ಇನ್ನು ಬಳಕೆದಾರರು ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು 256GB ವರೆಗೆ ವಿಸ್ತರಿಸಲು ಅವಕಾಶ ನೀಡಲಾಗಿದೆ. ಇನ್ನು ಈ ಫೋನ್ ಗೂಗಲ್‌ ನ ಆಂಡ್ರಾಯ್ಡ್‌ 11 ಗೋ ಎಡಿಷನ್‌ (Android 11 Go) ಆವೃತ್ತಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ನ ಸಪೋರ್ಟ್‌ ಪಡೆದಿದೆ.

Best Mobiles in India

English summary
Nokia 2660 Flip With 0.3-Megapixel Rear Camera Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X