ನೋಕಿಯಾ 5710 XpressAudio ಫೀಚರ್‌ ಫೋನ್‌ ಬಿಡುಗಡೆ! ಅತ್ಯಾಕರ್ಷಕ ಫೀಚರ್ಸ್‌!

|

ನೋಕಿಯಾ ಕಂಪೆನಿಯ ಮೊಬೈಲ್‌ಗಳಿಗೆ ಇಂದಿಗೂ ಟೆಕ್‌ ವಲಯದಲ್ಲಿ ಸಾಕಷ್ಟು ಬೇಡಿಕೆ ಇದೆ. ಇದೇ ಕಾರಣಕ್ಕೆ ಮೊಬೈಲ್‌ ಮಾರುಕಟ್ಟೆಯಲ್ಲಿ ನೋಕಿಯಾ ಕಂಪೆನಿ ಎವರ್‌ಗ್ರೀನ್‌ ಬ್ರ್ಯಾಂಡ್‌ ಎನಿಸಿಕೊಂಡಿದೆ. ಈಗಾಗಲೇ ಹಲವು ರೀತಿಯ ಮೊಬೈಲ್‌ಗಳಲ್ಲಿ ಪರಿಚಯಿಸಿರುವ ನೋಕಿಯಾ ಇದೀಗ ಹೊಸ ನೋಕಿಯಾ 5710 XpressAudio ಫೋನ್‌ ಲಾಂಚ್‌ ಮಾಡಿದೆ. ಇದು ಎಕ್ಸ್‌ಪ್ರೆಸ್‌ ಮ್ಯೂಸಿಕ್‌ (XpressMusic) ಲೈನ್-ಅಪ್ ಅಡಿಯಲ್ಲಿ ಲಭ್ಯವಾಗುತ್ತಿರುವ 4G ಫೀಚರ್‌ ಫೋನ್ ಆಗಿದೆ.

ನೋಕಿಯಾ

ಹೌದು, ನೋಕಿಯಾ ಕಂಪೆನಿ ಭಾರತದಲ್ಲಿ ನೋಕಿಯಾ 5710 ಎಕ್ಸ್‌ಪ್ರೆಸ್‌ ಆಡಿಯೋ ಫೀಚರ್‌ ಫೋನ್‌ ಪರಿಚಯಿಸಿದೆ. ಈ ಫೀಚರ್‌ ಫೋನ್ ಇನ್ ಬಿಲ್ಟ್ ವಾಯರ್‌ಲೆಸ್ ಇಯರ್‌ಬಡ್ಸ್‌ಗಳೊಂದಿಗೆ ಬರಲಿದೆ. ಈ ಇಯರ್‌ಬಡ್ಸ್‌ಗಳನ್ನು ಫೋನ್‌ನಲ್ಲಿಯೇ ಸ್ಟೋರ್‌ ಮಾಡಬಹುದಾಗಿದೆ. ಜೊತೆಗೆ ಚಾರ್ಜ್‌ ಕೂಡ ಮಾಡಬಹುದಾಗಿದೆ. ಅಲ್ಲದೆ ಈ ಫೀಚರ್‌ ಫೋನ್ ಲೌಡ್‌ ಸ್ಪೀಕರ್ಸ್‌, ಆಡಿಯೊ ಕಂಟ್ರೋಲ್‌ ಬಟನ್ಸ್‌ ಮತ್ತು ಬಿಗ್‌ ಬ್ಯಾಟರಿಯನ್ನು ಒಳಗೊಂಡಿದೆ. ಹಾಗಾದ್ರೆ ಈ ಫೀಚರ್‌ ಫೋನಿನ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೋಕಿಯಾ

ನೋಕಿಯಾ 5710 ಎಕ್ಸ್‌ಪ್ರೆಸ್‌ ಆಡಿಯೋ ಫೀಚರ್‌ ಫೋನ್‌ ಇಯರ್‌ಬಡ್ಸ್‌ ಜೊತೆಗೆ ಬರಲಿದೆ. ಈ ಫೋನ್‌ ವಾಯರ್‌ಲೆಸ್ ಇಯರ್‌ಬಡ್ಸ್‌ ಮೂಲಕ ಕಂಪ್ಲೀಟ್‌ ಆಡಿಯೊ ಅನುಭವವನ್ನು ಒದಗಿಸುವುದನ್ನು ಕೇಂದ್ರೀಕರಿಸಿದೆ. ಇದಕ್ಕಾಗಿ ಪ್ಲೇಬ್ಯಾಕ್ ಅನ್ನು ಸುಲಭಗೊಳಿಸಲು ಮೀಸಲಾದ ಮ್ಯೂಸಿಕ್‌ ಬಟನ್‌ಗಳನ್ನು ಹೊಂದಿದೆ. ಇನ್ನು ಫೀಚರ್‌ ಫೋನ್‌ ಇಂಟರ್‌ ಬಿಲ್ಟ್‌ MP3 ಪ್ಲೇಯರ್‌ ಅನ್ನು ಒಳಗೊಂಡಿದೆ. ಇದು ವಾಯರ್‌ಲೆಸ್ FM ರೇಡಿಯೊವನ್ನು ಸಹ ಬೆಂಬಲಿಸಲಿದೆ.

ನೋಕಿಯಾ 5710 ಎಕ್ಸ್‌ಪ್ರೆಸ್‌ ಆಡಿಯೋ

ನೋಕಿಯಾ 5710 ಎಕ್ಸ್‌ಪ್ರೆಸ್‌ ಆಡಿಯೋ ಫೀಚರ್‌ ಫೋನಿನ ಆಕರ್ಷಣೆ ಎಂದರೆ ಇಯರ್‌ಬಡ್ಸ್‌ ಅನ್ನು ಸ್ಟೋರ್‌ ಮಾಡುವುದಕ್ಕೆ ಅವಕಾಶ ನೀಡಿರುವುದು. ಇದರಲ್ಲಿ ಡಿಟ್ಯಾಚೇಬಲ್ ವಾಯರ್‌ಲೆಸ್ ಇಯರ್‌ಬಡ್ಸ್‌ ಅನ್ನು ಸ್ಟೋರ್‌ ಮಾಡಲು ಫೋನಿನ ರಿಯರ್‌ ಪ್ಯಾನೆಲ್‌ನಲ್ಲಿ ಜಾಗವನ್ನು ಮೀಸಲಾಗಿರಸಲಾಗಿದೆ. ಇಯರ್‌ಬಡ್ಸ್‌ಗಳನ್ನು ಇರಿಸಲು ಫೋನ್‌ನ ಹಿಂಭಾಗದಲ್ಲಿ ಸ್ಲೈಡರ್ ಸಿಸ್ಟಮ್ ನೀಡಲಾಗಿದೆ. ಇನ್ನು ಈ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳನ್ನು ಡಿವೈಸ್‌ಗಳ ನಡುವೆ ಬದಲಾಯಿಸಬಹುದಾಗಿದೆ. ಆದರಿಂದ ಈ ಇಯರ್‌ಬಡ್ಸ್‌ ಸ್ಮಾರ್ಟ್‌ಫೋನ್‌ಗೆ ಕೂಡ ಕನೆಕ್ಟ್‌ ಮಾಡಬಹುದಾಗಿದೆ.

ಎಕ್ಸ್‌ಪ್ರೆಸ್‌

ನೋಕಿಯಾ 5710 ಎಕ್ಸ್‌ಪ್ರೆಸ್‌ ಆಡಿಯೋ ಫೀಚರ್‌ ಫೋನ್‌ 1450mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಗಂಟೆಗಳ ಕಾಲ ಉತ್ತಮ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ ಎನ್ನಲಾಗಿದೆ. ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳು VoLTE ಕರೆಗಳನ್ನು ಬೆಂಬಲಿಸುವ ಡಿವೈಸ್‌ಗಳೊಂದಿಗೆ ಎಕೋ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಹೊಂದಿವೆ. ಇನ್ನು ಈ ಡಿವೈಸ್‌ ಒಂದು ವರ್ಷದ ಎಕ್ಸ್‌ಚೇಂಜ್‌ ಗ್ಯಾರಂಟಿಯೊಂದಿಗೆ ಬರಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನೋಕಿಯಾ 5710 ಎಕ್ಸ್‌ಪ್ರೆಸ್‌ ಆಡಿಯೋ ಫಿಚರ್‌ ಫೋನ್‌ ನೋಕಿಯಾ.ಕಾಮ್‌ನಲ್ಲಿ 4,999ರೂ. ಬೆಲೆಗೆ ಲಭ್ಯವಾಗಲಿದೆ. ಇದು ಇದೇ ಸೆಪ್ಟೆಂಬರ್ 19 ರಿಂದ ಎಲ್ಲಾ ರಿಟೇಲ್‌ ಸ್ಟೋರ್‌ಗಳ ಮೂಲಕ , ಪಾಲುದಾರ ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ. ಇನ್ನು ಈ ಫೀಚರ್‌ ಫೋನ್‌ ಕೆಂಪು ಮತ್ತು ಬಿಳಿ, ಕೆಂಪು ಮತ್ತು ಕಪ್ಪು ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ.

ನೋಕಿಯಾ

ಇದಲ್ಲದೆ ನೋಕಿಯಾ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ನೋಕಿಯಾ 2660 ಫ್ಲಿಪ್ ಫೋನ್ ಬಿಡುಗಡೆ ಮಾಡಿದೆ. ಈ ಫೋನ್‌ 2.8 ಇಂಚಿನ ಪ್ರೈಮೆರಿ ಡಿಸ್‌ಪ್ಲೇ ಹೊಂದಿದ್ದು, QVGA ರೆಸಲ್ಯೂಶನ್‌ ಅನ್ನು ಪಡೆದಿದೆ. ಅಲ್ಲದೆ 1.77-ಇಂಚಿನ ಔಟ್ ಡಿಸ್‌ಪ್ಲೇಯನ್ನು ಹೊಂದಿದ್ದು, QQVGA ರೆಸಲ್ಯೂಶನ್‌ ಅನ್ನು ನೀಡಲಿದೆ. ಇದು ಯುನಿಸೋಕ್‌ T107 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, 30+ OS ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 48MB RAM ಮತ್ತು 128MB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 32GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ನೋಕಿಯಾ

ನೋಕಿಯಾ 2660 ಫ್ಲಿಪ್ ಫೋನ್‌ 0.3 ಮೆಗಾಪಿಕ್ಸೆಲ್ ಸೆನ್ಸಾರ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದು ಡ್ಯುಯಲ್‌ ಫ್ಲ್ಯಾಷ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ಫೋನ್‌ 2.75W ಚಾರ್ಜಿಂಗ್ ಬೆಂಬಲಿಸುವ 1450mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು ತೆಗೆಯಬಹುದಾದ ಬ್ಯಾಟರಿಯಾಗಿದೆ. ಇನ್ನು ಸಿಂಗಲ್‌ 4G ಸಿಮ್‌ನಲ್ಲಿ ಫೋನ್ ಗರಿಷ್ಠ 24.9 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ. ಅಲ್ಲದೆ ಗರಿಷ್ಠ 6.5 ಗಂಟೆಗಳ ಟಾಕ್ ಟೈಮ್ ಅನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

Best Mobiles in India

English summary
Nokia 5710 XpressAudio launched in India: Price at Rs 4,999

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X