Subscribe to Gizbot

ಹೊಸ ಮಾದರಿಯ ನೋಕಿಯಾ 6 ಸ್ಮಾರ್ಟ್ ಫೋನ್ ಲಾಂಚ್..!

Written By: Lekhaka

ನೋಕಿಯಾ 6 ಸ್ಮಾರ್ಟ್ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಉತ್ತಮವಾಗಿ ಮಾರಾಟವಾಗುತ್ತಿದೆ. HMD ಸಂಸ್ಥೆಯೂ ಲಾಂಚ್ ಮಾಡಿದ ಮೊದಲ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಇದಾಗಿತ್ತು. ಸದ್ಯದ ಬೆಸ್ಟ್ ಸೆಲಿಂಗ್ ನೋಕಿಯಾ ಸ್ಮಾರ್ಟ್ ಫೋನ್ ಇದಾಗಿದ್ದು, ಈ ಸ್ಮಾರ್ಟ್ ಫೋನ್ ಲಾಂಚ್ ಆಗಿ ಶೀಘ್ರವೇ ಒಂದು ವರ್ಷಗಳಾಗಲಿದೆ.

ಹೊಸ ಮಾದರಿಯ ನೋಕಿಯಾ 6 ಸ್ಮಾರ್ಟ್ ಫೋನ್ ಲಾಂಚ್..!

ನೋಕಿಯಾ 6 ಸ್ಮಾರ್ಟ್ ಫೋನ್ ಒಂದು ವರ್ಷವಾದ ಸಂದರ್ಭದಲ್ಲಿ HMD ಸಂಸ್ಥೆಯೂ ಹೊಸ ಮಾದರಿಯ ನೋಕಿಯಾ 6 ಸ್ಮಾರ್ಟ್ ಫೋನ್ ಲಾಂಚ್ ಮಾಡಿದ್ದು, 2018 ಆವೃತ್ತಿಯ ಸ್ಮಾರ್ಟ್ ಫೋನ್ ಇದಾಗಲಿದ್ದು, ಇದಕ್ಕಾಗಿ ನೋಕಿಯಾ ಭರ್ಜರಿ ತಯಾರಿಯನ್ನು ನಡೆಸಿದೆ ಎನ್ನಲಾಗಿದೆ.

ಈಗಾಗಲೇ ನೋಕಿಯಾ 9 ಮತ್ತು ನೋಕಿಯಾ 8 ಸ್ಮಾರ್ಟ್ ಫೋನ್ ಲಾಂಚ್ ಮಾಡಲು ಸಿದ್ಧತೆಯನ್ನು ನಡೆಸಿದ್ದು, ಇದರ ಜೊತೆಗೆ ನೋಕಿಯಾ 6 ಹೊಸ ಆವೃತ್ತಿಯೂ ಲಾಂಚ್ ಆಗಲಿದೆ. ಒಟ್ಟಿನಲ್ಲಿ ನೋಕಿಯಾ ಗ್ರಾಹಕರಿಗೆ ಭರ್ಜರಿ ಆಯ್ಕೆಯೂ ದೊರೆಯಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮತ್ತೆ ನೋಕಿಯಾ ಶಕೆ ಆರಂಭವಾಗಲಿದೆ.

ನೋಕಿಯಾ 6 4GB RAM ಮತ್ತು 32GB ಆವೃತ್ತಿಯಲ್ಲಿ ಮತ್ತೆ ಲಾಂಚ್ ಆಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದ್ದು, ಡಿಸೈನ್ ನಲ್ಲಿಯೂ ಕೊಂಚ ಬದಲಾವಣೆಯನ್ನು ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ. ಡಿಸ್ ಪ್ಲೇ ವಿನ್ಯಾಸವು ಬದಲಾವಣೆಯನ್ನು ಕಾಣಬಹುದಾಗಿದೆ..

ನೋಕಿಯಾದಿಂದ ಶೀಘ್ರವೇ ಎರಡು ಸ್ಮಾರ್ಟ್ ಫೋನ್ ಗಳು ಲಾಂಚ್.!

ಫುಲ್ ಸ್ಕ್ರಿನ್ ಡಿಸ್ ಪ್ಲೇ ವಿನ್ಯಾಸವನ್ನು ಪರಿಚಯಿಸುವ ಸಾಧ್ಯತೆ ಇದ್ದು, ಬ್ರಜಿಲ್ ಲೈನ್ ಮಾದರಿಯಲ್ಲಿ ಕಾಣಿಸಿಕೊಳ್ಳಲಿದ್ದು, ಫಿಂಗರ್ ಫ್ರಿಂಟ್ ಸ್ಕ್ಯಾನರ್ ಹಿಂಭಾಗಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಅಲ್ಲದೇ ಯಾವುದೇ ಫಿಜಿಕಲ್ ಹೋಮ್ ನ್ಯಾವಿಗೇಷನ್ ಬಟನ್ ಗಳನ್ನು ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ. ಅಲ್ಲದೇ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ನೀಡುವ ಸಾಧ್ಯತೆ ಇದೆ.

English summary
Nokia 6 (2018) is likely in the making and the latest reports have tipped that it could be launched in three variants.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot