ನೋಕಿಯಾ C12 ಫೋನ್‌ ಬಿಡುಗಡೆ!..ಅಗ್ಗದ ಬೆಲೆ; ದೀರ್ಘ ಬ್ಯಾಟರಿ ಬ್ಯಾಕ್‌ಅಪ್‌!

|

ಮೊಬೈಲ್‌ ವಲಯದ ಎವರ್‌ಗ್ರೀನ್ ಬ್ರ್ಯಾಂಡ್‌ ನೋಕಿಯಾ ಹಲವು ಆಂಡ್ರಾಯ್ಡ್‌ ಮಾದರಿಯ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಸಾಲಿಗೆ ನೂತನವಾಗಿ ನೋಕಿಯಾ C12 ಸ್ಮಾರ್ಟ್‌ಫೋನ್‌ ಅನ್ನು ಸೇರ್ಪಡೆ ಮಾಡಿದೆ. ನೋಕಿಯಾ C12 ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್‌ ಮಾದರಿಯ ಸ್ಮಾರ್ಟ್‌ಫೋನ್‌ ಆಗಿದ್ದು, ಅದಾಗ್ಯೂ, ಕೆಲವೊಂದು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ.

ನೋಕಿಯಾ C12 ಫೋನ್‌ ಬಿಡುಗಡೆ!..ಅಗ್ಗದ ಬೆಲೆ; ದೀರ್ಘ ಬ್ಯಾಟರಿ ಬ್ಯಾಕ್‌ಅಪ್‌!

ಹೌದು, ನೋಕಿಯಾ ದೇಶಿಯ ಮಾರುಕಟ್ಟೆಯಲ್ಲಿ ಇಂದು ನೋಕಿಯಾ C12 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಇನ್ನು ಈ ಫೋನ್ 2 GB RAM ಮತ್ತು 64 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದ್ದು, 3000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ.ಹಾಗೆಯೇ ನೋಕಿಯಾ C12 ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ UniSoC SC9863A ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನುಳಿದಂತೆ ನೋಕಿಯಾ C21 ಪ್ಲಸ್‌ ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಹಾಗೂ ಇದರ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ನೋಕಿಯಾ C12 ಫೋನ್‌ ಬಿಡುಗಡೆ!..ಅಗ್ಗದ ಬೆಲೆ; ದೀರ್ಘ ಬ್ಯಾಟರಿ ಬ್ಯಾಕ್‌ಅಪ್‌!

ನೋಕಿಯಾ C12: ಡಿಸ್‌ಪ್ಲೇ ಮತ್ತು ಪ್ರೊಸೆಸರ್‌
ನೋಕಿಯಾ C12 ಸ್ಮಾರ್ಟ್‌ಫೋನ್ 6.3 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದ್ದು, 20:9 ರ ಆಕಾರ ಅನುಪಾತವನ್ನು ಇದು ಪಡೆದಿದೆ. ಹಾಗೆಯೇ ಈ ಫೋನ್‌ 720 × 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಈ ಡಿಸ್‌ಪ್ಲೇಯು 20:9 ಅನುಪಾತವನ್ನು ಪಡೆದಿದೆ. ಇದು ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಆಕ್ಟಾ ಕೋರ್ UniSoC SC9863A ಪ್ರೊಸೆಸರ್‌ ನಿಂದ ಚಾಲಿತವಾಗಿದೆ.

ನೋಕಿಯಾ C12: ಮೆಮೊರಿ ಮತ್ತು ಓಎಸ್‌
ನೋಕಿಯಾ C12 ಸ್ಮಾರ್ಟ್‌ಫೋನ್ ಸಿಂಗಲ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, 2GB + 64GB ಸಾಮರ್ಥ್ಯದಲ್ಲಿದೆ. ಇನ್ನು ಬಳಕೆದಾರರು ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು 256GB ವರೆಗೆ ವಿಸ್ತರಿಸಲು ಅವಕಾಶ ನೀಡಲಾಗಿದೆ. ಇನ್ನು ಈ ಫೋನ್ ಗೂಗಲ್‌ ನ ಆಂಡ್ರಾಯ್ಡ್‌ 12 ಗೋ ಎಡಿಷನ್‌ (Android 11 Go) ಆವೃತ್ತಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ನ ಸಪೋರ್ಟ್‌ ಪಡೆದಿದೆ.

ನೋಕಿಯಾ C12 ಫೋನ್‌ ಬಿಡುಗಡೆ!..ಅಗ್ಗದ ಬೆಲೆ; ದೀರ್ಘ ಬ್ಯಾಟರಿ ಬ್ಯಾಕ್‌ಅಪ್‌!

ನೋಕಿಯಾ C12: ಕ್ಯಾಮೆರಾ ಮತ್ತು ಬ್ಯಾಟರಿ ಪವರ್
ನೋಕಿಯಾ C12 ಸ್ಮಾರ್ಟ್‌ಫೋನ್‌ ಸಿಂಗಲ್‌ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಪ್ರಾಥಮಿಕ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿದೆ. ಹಾಗೆಯೇ ಮುಂಭಾಗದಲ್ಲಿ 5 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. LED ಫ್ಲ್ಯಾಶ್‌ ಸೌಲಭ್ಯ ವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ 3000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 5W ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ನೋಕಿಯಾ C12: ಇತರೆ ಸೌಲಭ್ಯಗಳು
ನೋಕಿಯಾ C12 ಸ್ಮಾರ್ಟ್‌ಫೋನ್‌ IP52 ರೇಟಿಂಗ್ ಸ್ಲ್ಯಾಶ್‌ ರೆಸಿಸ್ಟೆನ್ಸ್‌ ಸೌಲಭ್ಯ ಪಡೆದಿದ್ದು, 160.6 × 74.3 × 8.75 ಎಂಎಂ ಸುತ್ತಳತೆ ಹೊಂದಿದೆ. ಜೊತೆಗೆ ಡ್ಯುಯಲ್ ಸಿಮ್, 4G, ವೈಫೈ 802.11 b/g/n, ಬ್ಲೂಟೂತ್ 5.2, ಜಿಪಿಎಸ್‌ ಸೌಲಭ್ಯ ಒಳಗೊಂಡಿದೆ. ಹಾಗೆಯೇ ಈ ಫೋನ್‌ ಫೇಸ್‌ ಅನ್‌ಲಾಕ್‌ ಆಯ್ಕೆ ಒಳಗೊಂಡಿದೆ. ಇನ್ನು ಈ ಫೋನ್ ಡಾರ್ಕ್ ಸಯಾನ್, ಲೈಟ್ ಮಿಂಟ್ ಮತ್ತು ಚಾರ್ಕೋಲ್ ಕಲರ್ ಆಯ್ಕೆ ಪಡೆದಿದೆ. ಅಂದಹಾಗೆ ಯುರೋಪ್‌ನಲ್ಲಿ ಈ ಫೋನಿನ ಬೆಲೆಯು € 119 (ಭಾರತದಲ್ಲಿ ಅಂದಾಜು 10,500 ರೂ).

Best Mobiles in India

English summary
Nokia C12 comes in a single 2GB + 64GB configuration and is priced at € 119 (approx Rs 10,500). Know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X