ಭಾರತದಲ್ಲಿ 'ನೋಕಿಯಾ T21 ಟ್ಯಾಬ್‌' ಲಾಂಚ್‌: ಬರೋಬ್ಬರಿ 8,000mAh ಬ್ಯಾಟರಿ!

|

ಟೆಕ್‌ ವಲಯದಲ್ಲಿ ಎವರ್‌ಗ್ರೀನ್‌ ಮೊಬೈಲ್‌ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿರುವ ನೋಕಿಯಾ ಸಂಸ್ಥೆಯು ಇತ್ತೀಚಿಗೆ ಗ್ಲೋಬಲ್‌ ಮಾರುಕಟ್ಟೆಗೆ ನೋಕಿಯಾ T21 ಟ್ಯಾಬ್ಲೆಟ್‌ ಪರಿಚಯಿಸಿತ್ತು. ಇದೀಗ ನೋಕಿಯಾ ಕಂಪೆನಿಯು ಅಧಿಕೃತವಾಗಿ ದೇಶಿಯ ಮಾರುಕಟ್ಟೆಗೆ ನೋಕಿಯಾ T21 ಟ್ಯಾಬ್ಲೆಟ್‌ (Nokia T21 tablet) ಅನ್ನು ಲಾಂಚ್‌ ಮಾಡಿದೆ. ಇದು ಬರೋಬ್ಬರಿ 8000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರುವ ಪ್ಲಸ್‌ ಪಾಯಿಂಟ್‌ ಆಗಿ ಕಾಣಿಸಿಕೊಂಡಿದೆ.

ನೋಕಿಯಾ T21

ಹೌದು, ನೋಕಿಯಾ ಕಂಪೆನಿ ಹೊಸದಾಗಿ ನೋಕಿಯಾ T21 ಟ್ಯಾಬ್ಲೆಟ್ ಡಿವೈಸ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಟ್ಯಾಬ್‌ 4GB RAM + 64GB ವೇರಿಯಂಟ್‌ ಆಯ್ಕೆ ಪಡೆದಿದ್ದು, ಆಂಡ್ರಾಯ್ಡ್‌ 12 ಓಎಸ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಮುಂಬರುವ ಎರಡು ಅಂಡ್ರಾಯ್ಡ್‌ ಓಎಸ್‌ ಅಪ್‌ಡೇಟ್‌ ಪಡೆಯುವ ಆಯ್ಕೆ ಪಡೆದಿದೆ. ಇದು OZO ಆಡಿಯೋ ಸಪೋರ್ಟ್‌ ಪಡೆದಿದ್ದು, ಹೆಚ್‌ಡಿ ಗುಣಮಟ್ಟದ ವಿಡಿಯೋ ಪ್ಲೇ ಮಾಡುತ್ತದೆ. ಇನ್ನುಳಿದಂತೆ ಈ ಡಿವೈಸ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನೋಕಿಯಾ T21 ಟ್ಯಾಬ್‌ ಡಿಸ್‌ಪ್ಲೇ ರಚನೆ ಹೇಗಿದೆ?

ನೋಕಿಯಾ T21 ಟ್ಯಾಬ್‌ ಡಿಸ್‌ಪ್ಲೇ ರಚನೆ ಹೇಗಿದೆ?

ನೋಕಿಯಾ T21 ಟ್ಯಾಬ್‌ 10.36 ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 2000 x 1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ನೀಡಲಿದೆ. ಇದು 400 ನಿಟ್ಸ್ ಬ್ರೈಟ್‌ನೆಸ್‌ ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೆ ರಚನೆಯ ಅನುಪಾತ 5:3 ರಷ್ಟಿದ್ದು, SGS ಲೋ ಬ್ಲೂ ಲೈಟ್‌ ಪ್ರಮಾಣೀಕರಣವನ್ನು ಪಡೆದಿದೆ.

ಪ್ರೊಸೆಸರ್‌ ಯಾವುದು? ಕಾರ್ಯವೈಖರಿ ಏನು?

ಪ್ರೊಸೆಸರ್‌ ಯಾವುದು? ಕಾರ್ಯವೈಖರಿ ಏನು?

ನೋಕಿಯಾ T21 ಟ್ಯಾಬ್‌ ಯುನಿಸೋಕ್‌ T612 ಆಕ್ಟಾ-ಕೋರ್ ಪ್ರೊಸೆಸರ್‌ ವೇಗವನ್ನು ಪಡೆದಿದ್ದು, ಪೂರಕವಾಗಿ ಮಾಲಿ-G57 GPU ಸಪೋರ್ಟ್‌ ಅನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಮತ್ತು 128GB ಸ್ಟೋರೇಜ್‌ ಆಯ್ಕೆಯಲ್ಲಿ ಬರಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ಸಹ ನೀಡಲಿದೆ.

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ನೋಕಿಯಾ T21 ಟ್ಯಾಬ್‌ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಆಟೋಫೋಕಸ್ ಲೆನ್ಸ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್‌ ಅನ್ನು ಬೆಂಬಲಿಸಲಿದೆ. ಇನ್ನು ಟ್ಯಾಬ್‌ನಲ್ಲಿ ವೀಡಿಯೊ ಕರೆ ಮತ್ತು ಸೆಲ್ಫಿ ತೆಗೆದುಕೊಳ್ಳಲು 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ? ಇತರೆ ಫೀಚರ್ಸ್‌ಗಳೇನು?

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ? ಇತರೆ ಫೀಚರ್ಸ್‌ಗಳೇನು?

ನೋಕಿಯಾ T21 ಟ್ಯಾಬ್‌ 8,200mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಈ ಟ್ಯಾಬ್‌ ಸಂಪೂರ್ಣ ಚಾರ್ಜ್‌ನಲ್ಲಿ 3 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದರ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.0, ವೈಫೈ, ಹೆಡ್‌ಫೋನ್ ಜ್ಯಾಕ್, ಜಿಪಿಎಸ್‌, ಯುಎಸ್‌ಬಿ ಟೈಪ್‌ ಸಿ, ಬೆಂಬಲವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನೋಕಿಯಾ T21 ಟ್ಯಾಬ್‌ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. Wi-Fi ವೇರಿಯಂಟ್‌ ಬೆಲೆಯು 17,999ರೂ. ಆಗಿದೆ. ಹಾಗೆಯೇ LTE + Wi-Fi ವೇರಿಯಂಟ್‌ ಬೆಲೆಯು 18,999ರೂ. ಆಗಿದೆ. ಇನ್ನು ಈ ಸಾಧನವು ಚಾರ್ಕೋಲ್‌ ಗ್ರೇ ಬಣ್ಣದ ಆಯ್ಕೆಯನ್ನು ಒಳಗೊಂಡಿದೆ. ಈ ಡಿವೈಸ್‌ನೊಂದಿಗೆಆರಂಭಿಕ ಕೊಡುಗೆಯಾಗಿ ಫ್ಲಿಪ್‌ ಕವರ್ ಉಚಿತವಾಗಿ ಲಭ್ಯ ಆಗಲಿದೆ. ಹಾಗೆಯೇ ಮುಂಗಡ ಬುಕಿಂಗ್ ಪ್ರಕ್ರಿಯೆ ಸಹ ಪ್ರಾರಂಭವಾಗಿದ್ದು, ಮುಂಗಡ ಬುಕ್ ಮಾಡುವ ಗ್ರಾಹಕರಿಗೆ 1,000ರೂ.ಗಳ ರಿಯಾಯಿತಿ ಸಹ ದೊರೆಯುತ್ತದೆ.

Best Mobiles in India

English summary
Nokia T21 price in India starts at Rs 17,999 for the Wi-Fi variant, while the LTE + Wi-Fi variant retails for Rs 18,999. Know complete details in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X