ಭಾರತದಲ್ಲಿ ನಥಿಂಗ್ ಫೋನ್ 1 ಬೆಲೆ ಹೆಚ್ಚಳ! ಕಂಪೆನಿ ಕೊಟ್ಟ ಕಾರಣ ಏನ್‌ ಗೊತ್ತಾ?

|

ಕಳೆದ ತಿಂಗಳು ಟೆಕ್‌ ಮಾರುಕಟ್ಟೆಗೆ ಎಂಟ್ರಿ ನೀಡಿ ಸಾಕಷ್ಟು ಗಮನಸೆಳೆದಿದ್ದ ನಥಿಂಗ್‌ ಫೋನ್‌ 1 ಬೆಲೆಯಲ್ಲಿ ಹೆಚ್ಚಳವನ್ನು ಕಂಡಿದೆ. ತನ್ನ ವಿಶೇಷ ವಿನ್ಯಾಸದ ಕಾರಣಕ್ಕೆ ಭಾರತವೂ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ನಥಿಂಗ್‌ ಫೋನ್‌ 1 ಸಿಕ್ಕಾಪಟ್ಟೆ ಸೌಂಡ್‌ ಮಾಡ್ತಿದೆ. ಆದರೆ ಒಂದು ತಿಂಗಳ ಅವಧಿಯಲ್ಲಿಯೇ ಭಾರತದಲ್ಲಿ ತನ್ನ ಬೆಲೆಯಲ್ಲಿ ಹೆಚ್ಚಳವನ್ನು ಮಾಡುವ ಮೂಲಕ ಮತ್ತೆ ಗ್ರಾಹಕರ ಗಮನ ಸೆಳೆದಿದೆ. ಇನ್ನು ಈ ಬೆಲೆ ಹೆಚ್ಚಳವು ನಥಿಂಗ್ ಫೋನ್ 1ನ ಎಲ್ಲಾ ವೇರಿಯೆಂಟ್‌ ಆಯ್ಕೆಗಳಿಗೂ ಅನ್ವಯಿಸಲಿದೆ.

ನಥಿಂಗ್

ಹೌದು, ಭಾರತದಲ್ಲಿ ನಥಿಂಗ್ ಫೋನ್ 1 ಬೆಲೆಯಲ್ಲಿ ಹೆಚ್ಚಳವನ್ನು ಕಂಡಿದೆ. ನಥಿಂಗ್ ಫೋನ್ 1 ಎಲ್ಲಾ ವೆರಿಯೆಂಟ್‌ ಆಯ್ಕೆಗಳಲ್ಲಿಯೂ 1,000ರೂ, ಹೆಚ್ಚಳವನ್ನು ಮಾಡಲಾಗಿದೆ. ಏರಿಳಿತದ ಕರೆನ್ಸಿ ವಿನಿಮಯ ದರಗಳು ಮತ್ತು ಇತರ ಕಾರಣಗಳಿಂದ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಹೆಚ್ಚಳವಾಗಿದೆ ಎಂದು ನಥಿಂಗ್‌ ಕಂಪನಿ ಹೇಳಿದೆ. ಹಾಗಾದ್ರೆ ನಥಿಂಗ್ ಫೋನ್ 1 ಬೆಲೆಯಲ್ಲಿ ಹೆಚ್ಚಳವಾದ ನಂತರದ ಬೆಲೆ ಎಷ್ಟಿದೆ? ಇದೆಲ್ಲದರ ಬಗ್ಗೆ ತಿಳಿಸಿಕೊಡ್ತೀವಿ ಈ ಲೇಖನವನ್ನು ಓದಿರಿ.

ನಥಿಂಗ್ ಫೋನ್ 1 ಲಾಂಚ್‌ ಆದಾಗ ಇದ್ದ ಬೆಲೆ ಎಷ್ಟು?

ನಥಿಂಗ್ ಫೋನ್ 1 ಲಾಂಚ್‌ ಆದಾಗ ಇದ್ದ ಬೆಲೆ ಎಷ್ಟು?

ಭಾರತದಲ್ಲಿ ನಥಿಂಗ್ ಫೋನ್ (1) ಬಿಡುಗಡೆಯಾದಾಗ 8GB RAM + 128GB ಸ್ಟೋರೇಜ್ ಆಯ್ಕೆಗೆ 32,999ರೂ. ಬೆಲೆಯನ್ನು ಹೊಂದಿತ್ತು. ಅಲ್ಲದೆ 8GB RAM + 256GB ಸ್ಟೋರೇಜ್ ಆಯ್ಕೆಯು 35,999ರೂ. ಹಾಗೂ 12GB RAM + 256GB ಸ್ಟೋರೇಜ್ ಆಯ್ಕೆಯನ್ನು 38,999ರೂ ಬೆಲೆಗೆ ನಿಗಧಿಪಡಿಸಿತ್ತು.

ಬೆಲೆ ಹೆಚ್ಚಳದ ನಂತರದ ಬೆಲೆ ಎಷ್ಟು?

ಬೆಲೆ ಹೆಚ್ಚಳದ ನಂತರದ ಬೆಲೆ ಎಷ್ಟು?

ನಥಿಂಗ್‌ ನಥಿಂಗ್ ಫೋನ್ 1 ಬೆಲೆಯಲ್ಲಿ 1,000ರೂ ಹೆಚ್ಚಳವನ್ನು ಮಾಡಿರುವುದರಿಂದ ಬೇಸ್ ಮಾಡೆಲ್‌ 8GB RAM + 128GB ಸ್ಟೋರೇಜ್ ರೂಪಾಂತರದ ಆಯ್ಕೆಯು 33,999ರೂ. ಬೆಲೆಗೆ ದೊರೆಯಲಿದೆ. ಇದರ 8GB RAM + 256GB ಸ್ಟೋರೇಜ್ ಆವೃತ್ತಿಯ ಬೆಲೆ 36,999ರೂ. ಆಗಿದೆ. ಅಲ್ಲದೆ ಟಾಪ್-ಆಫ್-ಲೈನ್ 12GB RAM + 256GB ಸ್ಟೋರೇಜ್ ಆಯ್ಕೆಯ ಬೆಲೆ ಇದೀಗ 39,999ರೂ. ಆಗಿದೆ. ಇನ್ನು ನಥಿಂಗ್‌ ಫೋನ್‌ 1 ಬೆಲೆ ಹೆಚ್ಚಳವು ಇಂದಿನಿಂದಲೇ ಶುರುವಾಗಲಿದೆ ಎಂದು ನಥಿಂಗ್‌ ಕಂಪೆನಿ ಹೇಳಿಕೊಂಡಿದೆ. ಆದರೆ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಈಗಲೂ ಕೂಡ ಹಳೆಯ ಬೆಲೆಯನ್ನೇ ತೋರಿಸುತ್ತಿರುವುದನ್ನು ಗಮನಿಸಬಹುದು. ಸದ್ಯದಲ್ಲೇ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಬೆಲೆ ಬದಲಾವಣೆಯನ್ನು ಕಾಣಬಹುದಾಗಿದೆ.

ನಥಿಂಗ್ ಫೋನ್ 1 ಫೀಚರ್ಸ್‌ ಹೇಗಿದೆ?

ನಥಿಂಗ್ ಫೋನ್ 1 ಫೀಚರ್ಸ್‌ ಹೇಗಿದೆ?

ನಥಿಂಗ್ ಫೋನ್ (1) 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ HDR10+ ಬೆಂಬಲ, 402 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇದು OIS ಜೊತೆಗೆ EIS ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ ಬರುತ್ತದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೋನಿ IMX471 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌ಗಳೇನು?

ಬ್ಯಾಟರಿ ಮತ್ತು ಇತರೆ ಫೀಚರ್ಸ್‌ಗಳೇನು?

ನಥಿಂಗ್ ಫೋನ್ (1) ಸ್ಮಾರ್ಟ್‌ಫೋನ್‌ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್‌ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, Wi-Fi 6 ಡೈರೆಕ್ಟ್, ಬ್ಲೂಟೂತ್ v5.2, NFC, GPS/A-GPS, ಗ್ಲೋನಾಸ್‌ ಮತ್ತು USB ಟೈಪ್-ಸಿ ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಅಕ್ಸಿಲೆರೊಮೀಟರ್, ಎಲೆಕ್ಟ್ರಾನಿಕ್ ಕಂಪಾಸ್‌, ಗೈರೊಸ್ಕೋಪ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಫೇಸ್ ಅನ್‌ಲಾಕ್ ಬೆಂಬಲವನ್ನು ಕೂಡ ಹೊಂದಿದೆ.

Best Mobiles in India

English summary
Nothing Phone 1 price increased by Rs 1,000 in india

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X