ಟಾಟಾಸ್ಕೈ ಗ್ರಾಹಕರಿಗೆ ಭರ್ಜರಿ ಗುಡ್‌ನ್ಯೂಸ್‌; ಸಿಗಲಿದೆ ಭರಪೂರ ಮನರಂಜನೆ!

|

ಭಾರತದ ಪ್ರಮುಖ ಡೈರೆಕ್ಟ್ ಟು ಹೋಮ್ (ಡಿಟಿಎಚ್) ಸೇವಾ ಪೂರೈಕೆದಾರ ಟಾಟಾ ಸ್ಕೈ ತನ್ನ ಗ್ರಾಹಕರಿಗೆ ಈಗಾಗಲೇ ಹಲವು ಸೇವೆಗಳನ್ನು ನೀಡಿದೆ. ಚಾನೆಲ್‌ಗಳ ಮನರಂಜನೆಯೊಂದಿಗೆ ಓಟಿಟಿ ಸೇವೆಗಳನ್ನು ಒದಗಿಸಿ ಸೈ ಎನಿಸಿಕೊಂಡಿದೆ. ಇದೀಗ ಟಾಟಾ ಸ್ಕೈ ಹೊಸದಾಗಿ ಮತ್ತೆರಡು ಓಟಿಟಿ ಆಪ್‌ಗಳ ಸೇರ್ಪಡೆ ಮಾಡಿದೆ. ಈ ಮೂಲಕ ಗ್ರಾಹಕರಿಗೆ ಧಮಾಕಾ ಕೊಡುಗೆ ತಿಳಿಸಿದೆ.

ಟಾಟಾಸ್ಕೈ

ಹೌದು, ಜನಪ್ರಿಯ ಟಾಟಾಸ್ಕೈ ಒಟ್ಟು 11 OTT ಚಂದಾದಾರಿಕೆಗಳೊಂದಿಗೆ ಬರುತ್ತಿತ್ತು ಎಂಬುದು ಒಂದು ವಿಶೇಷ ಸಂಗತಿಯಾಗಿತ್ತು. ಇದೀಗ ಸಂಸ್ಥೆಯು 11 OTT ಪ್ಲಾಟ್‌ಫಾರ್ಮ್‌ಗಳ ಬದಲಿಗೆ, ಈಗ ಕಂಪನಿಯು ಆ ಪಟ್ಟಿಗೆ ಇನ್ನೂ ಎರಡು ಪ್ಲಾಟ್‌ಫಾರ್ಮ್‌ಗಳನ್ನು ಸೇರಿಸಿದೆ. ಹೀಗಾಗಿ ಟಾಟಾ ಸ್ಕೈ ಈಗ ಒಟ್ಟು ಹದಿಮೂರು ಓಟಿಟಿಗಳನ್ನು ಒಳಗೊಂಡಂತೆ ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಎರಡು ಹೊಸ ಓಟಿಟಿ ಸೇರ್ಪಡೆ

ಎರಡು ಹೊಸ ಓಟಿಟಿ ಸೇರ್ಪಡೆ

ಟಾಟಾಸ್ಕೈ ಪ್ಲಾಟ್‌ಫಾರ್ಮ್ ನೂತನವಾಗಿ EPIC ON ಮತ್ತು DocuBay-IN10 ಎರಡು ಜನಪ್ರಿಯ OTT ಆಪ್‌ಗಳನ್ನು ಸೇರ್ಪಡೆ ಮಾಡಿದೆ. ಈ ಓಟಿಟಿ ತಾಣಗಳು ಹಲವು ರೋಚಕ ಸಿನಿಮಾಗಳು, ಪ್ರದರ್ಶನಗಳು, ರಿಯಾಲಿಟಿ ಟಿವಿ ಕಂಟೆಂಟ್ ಮತ್ತು ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರಗಳನ್ನು ಜಗತ್ತಿನಾದ್ಯಂತ ಇರುವ ಟಾಟಾ ಸ್ಕೈ ಬಿಂಜ್‌ನಲ್ಲಿರುವ ಕಂಟೆಂಟ್‌ಗೆ ಸೇರಿಸುತ್ತವೆ. ಚಂದಾದಾರರು ಬಿಗ್ ಸ್ಕ್ರೀನ್ ಕನೆಕ್ಟ್ ಡಿವೈಸ್‌ಗಳಲ್ಲಿ (ಟಾಟಾ ಸ್ಕೈ ಬಿಂಜ್+ ಬಾಕ್ಸ್ ಮತ್ತು ಅಮೆಜಾನ್ ಫೈರ್ ಟಿವಿ ಸ್ಟಿಕ್ ನ ಟಾಟಾ ಸ್ಕೈ ಆವೃತ್ತಿ) ಮತ್ತು ಟಾಟಾ ಸ್ಕೈ ಬಿಂಜ್ ಮೊಬೈಲ್ ಆಪ್ ಮೂಲಕ ಅಸ್ತಿತ್ವದಲ್ಲಿರುವ ಚಂದಾದಾರಿಕೆಗಳಲ್ಲಿ ಹೊಸ ಕಂಟೆಂಟ್ ಸೇವೆಗೆ ಆಕ್ಸಸ್ ಮಾಡಲು ಅನುಮತಿಸುತ್ತದೆ.

ರವೀಂದ್ರನಾಥ

ಹೊಸದಾಗಿ ಸೇರ್ಪಡೆ ಆಗಿರುವ EPIC ON ಓಟಿಟಿ ಆಪ್‌ ನಲ್ಲಿ ಲಭ್ಯವಿರುವ ಕೆಲವು ವಿಶ್ವಪ್ರಸಿದ್ಧ ಮಾರ್ಕ್ ವಿಷಯಗಳಲ್ಲಿ ಗಾಂಧಿ, ಧರ್ಮಕ್ಷೇತ್ರ, ಸಿಯಾಸತ್, ರಾಜಾ ರಸೋಯಿ ಔರ್ ಅನ್ಯ ಕಹಾನಿಯಾನ್, ರವೀಂದ್ರನಾಥ ಟ್ಯಾಗೋರ್ ಅವರ ಕಥೆಗಳು ಮತ್ತು ಇನ್ನೂ ಹೆಚ್ಚಿನವು ಸೇರಿವೆ. ಹಾಗೆಯೇ ಹಿಂದಿ ಭಾಷೆಯಲ್ಲಿ ಡಬ್ ಮಾಡಲಾದ ಜನಪ್ರಿಯ ಕೊರಿಯನ್ ನಾಟಕ ಶೀರ್ಷಿಕೆಗಳು ಮತ್ತು ಶಾರ್ಟ್‌ ಸ್ಟೋರಿ ಹೆಚ್ಚು ಭಿನ್ನವಾಗಿರುವ ಕಂಟೆಂಟ್ ಹುಡುಕುತ್ತಿರುವ ಗ್ರಾಹಕರಿಗೆ ಆಕರ್ಷಕ ಎನಸಿಲಿದೆ.

ಕುತೂಹಲಕಾರಿ

ಪ್ರಪಂಚದಾದ್ಯಂತದ ಡಾಕ್ಯುಮೆಂಟರಿಗಳನ್ನು ಸ್ಟ್ರೀಮಿಂಗ್ ಮಾಡುವ ಮನೆಯಾದ ಡಾಕ್ಯುಬೇ, ಪ್ರಕೃತಿ, ವಿಜ್ಞಾನ, ಇತಿಹಾಸ, ವನ್ಯಜೀವಿ, ಪ್ರಯಾಣ, ಅಪರಾಧ, ವಿಶ್ವ ಘಟನೆಗಳು ಮತ್ತು ಹೆಚ್ಚಿನವುಗಳ ಕುರಿತು ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರಗಳನ್ನು ಒಳಗೊಂಡಂತೆ ವಿಶ್ವ ಮಟ್ಟದ ಕುತೂಹಲಕಾರಿ ವಿಷಗಳ ಪ್ರಸಾರ ಮಾಡುತ್ತದೆ. ಇದರಲ್ಲಿ ಹಣಕಾಸು ವಿಷಯ, ಬಿಟ್‌ಕಾಯಿನ್ ಸಂಭಂದಿತ ವಿಷಗಳು ಸೇರಿವೆ.

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌, ಸಾಮಾನ್ಯ ಡಿಟಿಎಚ್ ಸೆಟ್‌ಟಾಪ್‌ಗಳಿಗಿಂತ ಭಿನ್ನವಾಗಿದೆ. ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಇಂಟರ್ನೆಟ್ ಆಧಾರಿತ ಸೇವೆಗಳು ದೊರೆಯುತ್ತವೆ. ಗೂಗಲ್ ಪ್ಲೇ ಸ್ಟೋರ್ ಸೌಲಭ್ಯ ಇರುತ್ತದೆ ಹಾಗೂ ಅಸಿಸ್ಟಂಟ್ ಅಸಿಸ್ಟಂಟ್ ಆಧಾರಿತ ವಾಯಿಸ್ ಸರ್ಚ್ ಆಯ್ಕೆಯು ಒಳಗೊಂಡಿರುತ್ತದೆ. ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ ವಿಡಿಯೊ ಸ್ಟ್ರೀಮಿಂಗ್ ಒದಗಿಸುವ OTT ಆಪ್ಸ್‌ಗಳ ಸಪೋರ್ಟ್‌ ಒಳಗೊಂಡಿದೆ. ಹಾಟ್‌ಸ್ಟಾರ್, ಸನ್‌ನೆಕ್ಸ್ಟ್, ಎರೊಸ್ ನವ್, ಜೀ5 ಮತ್ತು ಹಂಗಾಮಾ ಪ್ಲಸ್‌ ಅಪ್ಲಿಕೇಶನ್ ಗಳ ಸೌಲಭ್ಯ ಇದೆ. ಈ ಆಪ್ಸ್‌ ಅತ್ಯುತ್ತಮ ವಿಡಿಯೊ ಕಂಟೆಂಟ್ ಅಪ್ಲಿಕೇಶನ್‌ಗಳಾಗಿವೆ. ಇನ್ನು ಟಾಟಾಸ್ಕೈನಲ್ಲಿ ನೊಂದಾಯಿಸಿದ ಮೊಬೈಲ್ ನಂಬರ್ ಚೇಂಜ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಟಾಟಾಸ್ಕೈ ರಿಜಿಸ್ಟರ್‌ ಆದ ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಚೇಂಜ್ ಮಾಡಲು ಈ ಕ್ರಮ ಅನುಸರಿಸಿ:

ಟಾಟಾಸ್ಕೈ ರಿಜಿಸ್ಟರ್‌ ಆದ ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಚೇಂಜ್ ಮಾಡಲು ಈ ಕ್ರಮ ಅನುಸರಿಸಿ:

ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಿಂದ ನೇರವಾಗಿ ತಮ್ಮ ವಿಭಿನ್ನ ಬೇಡಿಕೆಗಳನ್ನು ಪೂರೈಸಲು ಉತ್ತಮ ಬೆಂಬಲ ವ್ಯವಸ್ಥೆ ಮತ್ತು ಸ್ವ ಸಹಾಯ ವ್ಯವಸ್ಥೆಯನ್ನು ಹೊಂದಿದೆ. ಈ ಸೌಲಭ್ಯದ ಬಳಸಿಕೊಂಡು ಚಂದಾದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಸುಲಭವಾಗಿ ಬದಲಾಯಿಸಬಹುದು. ನಿಮ್ಮ ನೋಂದಾಯಿತ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಬದಲಾಯಿಸಲು ನೀವು ಬಯಸಿದರೆ, ನೀವು ಟಾಟಾ ಸ್ಕೈ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ನೀವು ಈಗಾಗಲೇ ನೋಂದಾಯಿತ ಬಳಕೆದಾರರಾಗಿದ್ದರೆ. ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ ಮತ್ತು ‘My Account' ಗೆ ಹೋಗಿ ಮತ್ತು ನಂತರ ಪ್ರೊಫೈಲ್ ವಿಭಾಗವನ್ನು ಕ್ಲಿಕ್ ಮಾಡಿ.

ಸೇವ್

ಪ್ರೊಫೈಲ್ ವಿಭಾಗದ ಅಡಿಯಲ್ಲಿ, ನೀವು ನೋಂದಾಯಿತ ಸಂಖ್ಯೆ ಮತ್ತು ಪರ್ಯಾಯ ಸಂಖ್ಯೆಯನ್ನು ನೋಡುತ್ತೀರಿ (ಒದಗಿಸಿದರೆ ಮಾತ್ರ). ‘edit profile' ಬಟನ್ ಕ್ಲಿಕ್ ಮಾಡಿ. ನಂತರ ನೀವು ನೋಂದಾಯಿಸಿದ ಮೊಬೈಲ್ ಸಂಖ್ಯೆಯಾಗಿ ಬಳಸಲು ಬಯಸುವ ಹೊಸ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ. ಹೊಸ ಬದಲಾವಣೆಗಳನ್ನು ಉಳಿಸಲು ಸೇವ್ ಬಟನ್ ಕ್ಲಿಕ್ ಮಾಡಿ. ಒಮ್ಮೆ ನೀವು ನೋಂದಾಯಿತ ಸಂಖ್ಯೆಯನ್ನು ಬದಲಾಯಿಸಿದ ನಂತರ, ನಿಮ್ಮ ಎಲ್ಲಾ ವ್ಯವಹಾರ-ಸಂಬಂಧಿತ ಮತ್ತು ಇತರ ಸಂದೇಶಗಳನ್ನು ಹೊಸ ಸಂಖ್ಯೆಗೆ ಕಳುಹಿಸಲಾಗುತ್ತದೆ.

ನೋಂದಾಯಿತ ಸಂಖ್ಯೆಯನ್ನು ಆಫ್‌ಲೈನ್‌ನಲ್ಲಿ ಬದಲಾಯಿಸಲು ಹೀಗೆ ಮಾಡಿರಿ:

ನೋಂದಾಯಿತ ಸಂಖ್ಯೆಯನ್ನು ಆಫ್‌ಲೈನ್‌ನಲ್ಲಿ ಬದಲಾಯಿಸಲು ಹೀಗೆ ಮಾಡಿರಿ:

ಒಂದು ವೇಳೆ ನೀವು ಮೈ ಟಾಟಾಸ್ಕೈ ಆನ್‌ಲೈನ್ ಖಾತೆಯನ್ನು ಹೊಂದಿಲ್ಲದಿದ್ದರೆ, ನೀವು ಟಾಟಾ ಸ್ಕೈ ಹೆಲ್ಪ್‌ಲೈನ್‌ ಸಂಖ್ಯೆಯನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಅನುಕೂಲಕರವಾಗಿ ಬದಲಾಯಿಸಬಹುದು. (ಹೆಲ್ಪ್‌ಲೈನ್ ಬಳಕೆದಾರರು ವಾಸಿಸುವ ಸ್ಥಳವನ್ನು ಅವಲಂಬಿಸಿ ಬದಲಾಗುತ್ತದೆ) ಒಮ್ಮೆ ನೀವು ಕಸ್ಟಮರ್ ಕೇರ್ ಕಾರ್ಯನಿರ್ವಾಹಕರಿಗೆ ಸಂಪರ್ಕ ಮಾಡಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ನೀವು ಕೇಳಬಹುದು. ಮಾಹಿತಿಗಾಗಿ ನಿಮ್ಮ ಹೆಸರು, ವಿಳಾಸ, ಹಳೆಯ ಸಂಖ್ಯೆ ಮತ್ತು ಇತರ ನಿರ್ಣಾಯಕ ಮಾಹಿತಿಯಂತಹ ಪ್ರಮುಖ ವಿವರಗಳನ್ನು ನೀವು ಶೇರ್ ಮಾಡಬೇಕಾಗುತ್ತದೆ.

Best Mobiles in India

English summary
Now Two More OTT Platforms Available On Tata Sky Binge Service.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X