ಪೇಟಿಎಮ್ ಬಳಸಿ 'IRCTC' ಇಂದ ರೈಲ್ವೆ ಟಿಕೆಟ್ ಬುಕ್‌ ಮಾಡಬಹುದು!

Written By:

ಭಾರತದ ವಿಶಾಲ ಮೊಬೈಲ್‌ ಪಾವತಿಸುವಿಕೆ ಮತ್ತು ವಾಣಿಜ್ಯ ವೇದಿಕೆಯಾಗಿರುವ ಪೇಟಿಎಮ್, ಇಂದು ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಇಲಾಖೆ ವೇದಿಕೆಗಳಲ್ಲಿ ನಂಬಲಾರ್ಹ ಮತ್ತು ಅನುಕೂಲಕರ ಹಣಪಾವತಿಯ ಆಯ್ಕೆಯಾಗಿದೆ.

ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಇಲಾಖೆ ಆಪ್‌ನಲ್ಲಿ ಪೇಟಿಎಮ್ ವಾಲೆಟ್ ಈಗಾಗಲೇ ಸ್ವೀಕೃತಗೊಂಡಿದ್ದು, ಪೇಟಿಎಮ್‌ ಟೆಕ್ನಾಲಜಿ ಒಗ್ಗೂಡುವಿಕೆ ನಂಬಲಾರ್ಹವಾಗಿದೆ.

ಪೇಟಿಎಮ್ ಬಳಸಿ 'IRCTC' ಇಂದ ರೈಲ್ವೆ ಟಿಕೆಟ್ ಬುಕ್‌ ಮಾಡಬಹುದು!

ಅಂದಹಾಗೆ ಭಾರತದ ವಿಶಾಲ ರೈಲ್ವೆ ಟಿಕೆಟಿಂಗ್ ವೇದಿಕೆಯೊಂದಿಗೆ 'ಪೇಟಿಎಮ್‌' ಸಹಯೋಗಹೊಂದಿದ್ದು, ಪ್ರವಾಸಿಗರಿಗೆ ನಂಬಲಾರ್ಹ ಮತ್ತು ಅನುಕೂಲಕರ ಡಿಜಿಟಲ್‌ ಪಾವತಿಸುವಿಕೆಯನ್ನು ನೀಡುವ ಗುರಿ ಹೊಂದಿದೆ. ಪ್ರವಾಸಿಗರಿಗೆ ಸುಲಭವು ಅನುಕೂಲಕರವು ಆಗಿರುವ ಡಿಜಿಟಲ್‌ ಪಾವತಿಸುವಿಕೆಯ ಪೇಟಿಎಮ್ ಬಳಸಿ, irctc(ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಇಲಾಖೆ) ಇಂದ ರೈಲ್ವೆ ಟಿಕೆಟ್ ಬುಕ್‌ ಮಾಡಬಹುದು. ಇದು ಪ್ರವಾಸಿಗರಿಗೂ ಸಹ ಆಕರ್ಷಕವಾಗಿದೆ.

ಪೇಟಿಎಮ್‌ನ ಉಪಾಧ್ಯಕ್ಷರಾದ ' ಕಿರಣ್ ವಾಸಿರೆಡ್ಡಿ' ಸಹಯೋಗದ ಕುರಿತು ಮಾತನಾಡಿ, " ಪೇಟಿಎಮ್‌ನಲ್ಲಿ ಅತಿ ಸರಳವಾಗಿ ಹಣ ಪಾವತಿಸಲು ಉತ್ತಮ ಕಾರ್ಯಾಚರಣೆ ಹೊಂದಿದ್ದೇವೆ. irctc'ಯಲ್ಲಿ ಉತ್ತಮ ಏಕೀಕರಣ ವ್ಯವಸ್ಥೆ ಹೊಂದಿದ್ದು, ಕೇವಲ ನಂಬಲಾರ್ಹವಾದುದಲ್ಲದೇ, ಹಣ ವರ್ಗಾವಣೆ ಶೀಘ್ರವಾಗಿ ಯಶಸ್ವಿಯಾಗುತ್ತಿದೆ" ಎಂದಿದ್ದಾರೆ.

ಪೇಟಿಎಮ್ ಬಳಸಿ 'IRCTC' ಇಂದ ರೈಲ್ವೆ ಟಿಕೆಟ್ ಬುಕ್‌ ಮಾಡಬಹುದು!

ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಇಲಾಖೆಯೊಂದಿಗಿನ ಸಹಯೋಗ ಒಪ್ಪಂದ ಚಲನೆಯು ಹಣವಿಲ್ಲದೇ ಪಾವತಿಸುವಿಕೆಯಲ್ಲಿ ಪ್ರಮುಖ ಬೆಳವಣಿಗೆಯಾಗಿದ್ದು, ಭಾರತದ ಜನಸಂಖ್ಯಾ ಪ್ರೊಫೈಲ್‌ ಆಧಾರಿತವಾಗಿ ಬಹುಸಂಖ್ಯಾತ ಬಳಕೆದಾರರಿಗೆ ಉಪಯೋಗವಾಗಲಿದೆ. ದಿನನಿತ್ಯ ರೈಲಿನಲ್ಲಿ ಪ್ರವಾಸ ಮಾಡುವ 30 ದಶಲಕ್ಷ ಪ್ರಯಾಣಿಕರಿಗೆ ಈ ಸಹಯೋಗ ವರವಾಗಿದೆ.

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ಜೆ7 ಪ್ರೈಮ್' ಭಾರತದಲ್ಲಿ ಇಂದು ಬಿಡುಗಡೆ: ವಿಶೇಷತೆಗಳು!

 

 

Read more about:
English summary
Now, You Can Book Train Tickets From IRCTC Using Paytm. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot