ಫೇಸ್‌ಬುಕ್‌ನಲ್ಲಿ ಬಳಕೆದಾರರ ಖಾಸಗಿತನದ ರಕ್ಷಣೆಗೆ ಇದೊಂದೆ ದಾರಿ!

|

ಇತ್ತೀಚಿಗೆ ಫೇಸ್‌ಬುಕ್, ವಾಟ್ಸಪ್ ಸೇರಿದಂತೆ ಪ್ರಮುಖ ಸಾಮಾಜಿಕ ತಾಣಗಳಲ್ಲಿ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆಯ ಸುದ್ದಿಗಳು ಹೆಚ್ಚಾಗಿ ಕೇಳಿಬಂದಿವೆ. ಈ ನಿಟ್ಟಿನಲ್ಲಿ ಫೇಸ್‌ಬುಕ್ ಮತ್ತು ವಾಟ್ಸಪ್ ಸಾಕಷ್ಟು ನೂತನ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿವೆ. ಅದಾಗ್ಯೂ ಬಳಕೆದಾರರು ತಮ್ಮ ಖಾಸಗಿ ಮಾಹಿತಿ ಪ್ರೈವೆಸಿಗಾಗಿ ಕೇಲವು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಿದೆ ಎಂದು ಫೇಸ್‌ಬುಕ್ CEO ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.

Off-Facebook Activity

ಹೌದು, ಬಳಕೆದಾರರು ಖಾಸಗಿತನದ ಮಾಹಿತಿ ರಕ್ಷಣೆಗೆ ಫೇಸ್‌ಬುಕ್‌ನಲ್ಲಿ 'ಆಫ್‌ಫೇಸ್‌ಬುಕ್‌ ಆಕ್ಟಿವಿಟಿ' - Off-Facebook Activity ಆಯ್ಕೆಯನ್ನು ಆಫ್‌ ಮಾಡಿಕೊಳ್ಳಬೇಕು. ಈ ಆಯ್ಕೆಯನ್ನು ಆಫ್‌ ಮಾಡುವುದರಿಂದ ಬಳಕೆದಾರರು ವೆಬ್‌ಬ್ರೌಸರ್‌ನಲ್ಲಿ ಸರ್ಚ್ ಮಾಡಿರುವ ಅಂಶಗಳು ಫೇಸ್‌ಬುಕ್‌ನಲ್ಲಿ ಬರದಂತೆ ತಡೆಯಬಹುದು ಎಂದು ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ. ಸದ್ಯ ಈ ಆಯ್ಕೆಯು ಫೇಸ್‌ಬುಕ್‌ ನೂತನ ಆವೃತ್ತಿಯಲ್ಲಿ ಸೇರಿದೆ ಎಂದಿದ್ದಾರೆ.

ಸರ್ಚ್ಇಂಜಿನ್

ಬಳಕೆದಾರರ ಬಳಸುತ್ತಿದ್ದ ಥರ್ಡ್‌ಪಾರ್ಟಿ ಆಪ್ಸ್‌, ಸರ್ಚ್ಇಂಜಿನ್ ಮಾಹಿತಿಗಳನ್ನು ಪರೋಕ್ಷವಾಗಿ ಫೇಸ್‌ಬುಕ್ ಟ್ರಾಕ್ ಮಾಡುತ್ತದೆ. ಹೀಗಾಗಿ ಬಳಕೆದಾರರು ಸರ್ಚ್‌ ಇಂಜಿನ್‌ಗಳಲ್ಲಿ ಯಾವೆಲ್ಲಾ ವಿಷಗಳನ್ನು ಸರ್ಚ್ ಮಾಡುತ್ತಿದ್ದರೊ ಆ ವಿಷಯಗಳಿಗೆ ಸಂಬಂಧಿಸಿದ ಜಾಹಿರಾತುಗಳು ಅವರ ಫೇಸ್‌ಬುಕ್ ಖಾತೆಯಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಸದ್ಯ ಫೇಸ್‌ಬುಕ್ ಪರಿಚಯಿಸಿರುವ 'ಆಫ್‌ಫೇಸ್‌ಬುಕ್‌ ಆಕ್ಟಿವಿಟಿ' ಟೂಲ್ ಬಳಕೆಯು ಬಳಕೆದಾರರ ಖಾಸಗಿತನದ ಸುರಕ್ಷತೆಯ ಮಟ್ಟವನ್ನು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.

ಆಫ್‌ ಫೇಸ್‌ಬುಕ್‌ ಆಕ್ಟಿವಿಟಿ

ಆಫ್‌ ಫೇಸ್‌ಬುಕ್‌ ಆಕ್ಟಿವಿಟಿ

ಫೇಸ್‌ಬುಕ್ ಬಳಕೆದಾರರು ಇತರೆ ಯಾವುದೇ ಆಪ್ಸ್‌ ಬಳಸಲಿ, ಯಾವುದೇ ವೆಬ್‌ಬ್ರೌಸರ್‌ನಲ್ಲಿ ಸರ್ಚ್ ಮಾಡಲಿ ಹಾಗೂ ಒಟ್ಟಾರೆ ಬಳಕೆಅದರರ ಆಕ್ಟಿವಿಟಿಯನ್ನು ಟ್ರಾಕ್ ಮಾಡುತ್ತಿತ್ತು. ಬಳಕೆದಾರರ ಸರ್ಚ್ ಆಕ್ಟಿವಿಟಿ ಆಧಾರದ ಮೇಲೆಯೇ ಅವರ ಫೇಸ್‌ಬುಕ್ ಅಕೌಂಟ್‌ಗಳಲ್ಲಿ ಜಾಹಿರಾತುಗಳು ಬರುತ್ತಿದ್ದವು. ಇದರಿಂದ ಬಳಕೆದಾರರ ಖಾಸಗಿತನ ಭದ್ರತೆ ಲೋಪ ಆಗುತ್ತದೆ ಎಂದು ಫೇಸ್‌ಬುಕ್ ಈಗ ಆಫ್‌ ಫೇಸ್‌ಬುಕ್‌ ಆಕ್ಟಿವಿಟಿ ಟೂಲ್ ಪರಿಚಯಿಸಿದೆ. ಇದರಿಂದ ಬಳಕೆದಾರರು ಆಕ್ಟಿವಿಟಿಯನ್ನು ಫೇಸ್‌ಬುಕ್ ಟ್ರಾಕ್ ಮಾಡುವುದನ್ನು ನಿಯಂತ್ರಿಸಬಹುದಾಗಿದೆ.

ನಿಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಹಂತಗಳನ್ನು ಅನುಸರಿಸಿ

ನಿಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಹಂತಗಳನ್ನು ಅನುಸರಿಸಿ

* ಫೇಸ್‌ಬುಕ್ ಅಪ್ಲಿಕೇಶನ್ ತೆರೆಯಿರಿ
* ಬಲ ಭಾಗದಲ್ಲಿ ಕಾಣಿಸುವ ಮೂರು ಗೆರೆಗಳ ಮೆನು ಒತ್ತಿರಿ.
* ಸೆಟ್ಟಿಂಗ್ ಮತ್ತು ಪ್ರೈವೆಸಿ ಆಯ್ಕೆ ಸೆಲೆಕ್ಟ್ ಮಾಡಿರಿ.
* ಆ ನಂತರ ಸೆಟ್ಟಿಂಗ್ ಆಯ್ಕೆ ಕ್ಲಿಕ್ಕ್ ಮಾಡಿರಿ.
* ನಂತರ ಸ್ಕ್ರಾಲ್ ಮಾಡಿ,> ಆಫ್‌ ಫೇಸ್‌ಬುಕ್‌ ಆಕ್ಟಿವಿಟಿ ಆಯ್ಕೆ ಕಾಣಿಸುತ್ತದೆ.
* ಅಲ್ಲಿ ಮೂರು ಆಯ್ಕೆಗಳು ಕಾಣಿಸುತ್ತವೆ. ಮ್ಯಾನೇಜ್ ಯುವರ್ ಆಫ್‌ ಫೇಸ್‌ಬುಕ್‌ ಆಕ್ಟಿವಿಟಿ, ಕ್ಲಿಯರ್ ಹಿಸ್ಟರಿ ಮತ್ತು ಮೋರ್ ಆಪ್ಶನ್ಸ್‌

Best Mobiles in India

English summary
The 'Off-Facebook Activity' tool is now available to people on Facebook around the world. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X