ಏರ್‌ಟೆಲ್ ಬಳಕೆದಾರರಿಗೆ 2GB ಉಚಿತ ಡೇಟಾ; ಹೇಗೆ ಗೊತ್ತಾ!?

|

ಪ್ರಮುಖ ಟೆಲಿಕಾಂ ಸೇವೆಯಾಗಿರುವ ಏರ್‌ಟೆಲ್‌ ತನ್ನ ಪ್ರತಿಸ್ಪರ್ಧಿ ಜಿಯೋಗೆ ಆರೋಗ್ಯಕರ ಸ್ಪರ್ಧೆ ನೀಡುತ್ತಲೇ ಬರುತ್ತಿದೆ. ಇದರ ಭಾಗವಾಗಿಯೇ ಕಾಲಕಾಲಕ್ಕೆ ಬಳಕೆದಾರರಿಗೆ ಅನುಕೂಲವಾಗುವ ಅನೇಕ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಪರಿಚಯಿಸಲಾಗಿದ್ದು, ಇದೀಗ ಏರ್‌ಟೆಲ್‌ ಗ್ರಾಹಕರು ಅತ್ಯಂತ ಸಂತೋಷ ಪಡುವ ವಿಚಾರವೊಂದನ್ನು ಘೋಷಣೆ ಮಾಡಲಾಗಿದೆ.

ಏರ್‌ಟೆಲ್ ಬಳಕೆದಾರರಿಗೆ 2GB ಉಚಿತ ಡೇಟಾ; ಹೇಗೆ ಗೊತ್ತಾ!?

ಹೌದು, ಏರ್‌ಟೆಲ್‌ ಈಗಾಗಲೇ ಹಲವಾರು ಆಕರ್ಷಕ ರೀಚಾರ್ಜ್‌ ಸೌಲಭ್ಯವನ್ನು ಬಳಕೆದಾರರಿಗೆ ನೀಡುತ್ತಿದ್ದು, ಇದರ ನಡುವೆ ಮತ್ತೊಂದು ಹೊಸ ಸೌಲಭ್ಯವನ್ನು ಘೋಷಣೆ ಮಾಡಲಾಗಿದೆ. ಈ ಮೂಲಕ ಬಳಕೆದಾರರು 2GB ಉಚಿತ ಡೇಟಾ ಆಫರ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಈ ಉಚಿತ ಡೇಟಾ ಹೇಗೆ ಲಭ್ಯವಾಗಲಿದೆ?, ಇದಕ್ಕೆ ನೀವು ಏನು ಮಾಡಬೇಕು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಏರ್‌ಟೆಲ್ ಬಳಕೆದಾರರನ್ನು ಏರ್‌ಟೆಲ್ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡುವಂತೆ ಮಾಡಲು ಏರ್‌ಟೆಲ್‌ ಹಲವಾರು ಕಸರತ್ತುಗಳನ್ನು ಮಾಡುತ್ತಾ ಬರುತ್ತಿದೆ. ಅಂತೆಯೇ ಏರ್‌ಟೆಲ್ ಥ್ಯಾಂಕ್ಸ್ ಆಪ್‌ ಸಆಪ್‌ಗಳಲ್ಲಿ ಬಳಕೆದಾರರಿಗೆ ಸಾಕಷ್ಟು ಅನುಕೂಲಗಳು ಲಭ್ಯವಾಗುತ್ತಿದ್ದು, ಗ್ರಾಹಕರು ಹಲವಾರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಏರ್‌ಟೆಲ್ ಬಳಕೆದಾರರಿಗೆ 2GB ಉಚಿತ ಡೇಟಾ; ಹೇಗೆ ಗೊತ್ತಾ!?

ಉಚಿತ 2GB ಡೇಟಾ ಕೂಪನ್
ಗ್ರಾಹಕರು ಏರ್‌ಟೆಲ್ ಥ್ಯಾಂಕ್ಸ್ ಆಪ್‌ ಬಳಕೆ ಮಾಡಿಕೊಂಡು ರೀಚಾರ್ಜ್ ಮಾಡಿದರೆ 2GB ಉಚಿತ ಡೇಟಾ ಪಡೆದುಕೊಳ್ಳಬಹುದಾಗಿದೆ. ಏರ್‌ಟೆಲ್ ಥ್ಯಾಂಕ್ಸ್ ಎಂಬುದು ಏರ್‌ಟೆಲ್ ಇಂಡಿಯಾದ ಆಂತರಿಕ ಆಪ್‌ ಆಗಿದ್ದು, ಇದು ಗ್ರಾಹಕರಿಗೆ ಎಲ್ಲಾ ರೀತಿಯ ಏರ್‌ಟೆಲ್‌ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತಾ ಬರುತ್ತಿದೆ. ಇನ್ನು 265ರೂ, 359 ರೂ, 549ರೂ, 699 ರೂ, 719 ರೂ ಮತ್ತು 839 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ.

ಇವೆಲ್ಲವೂ ಗ್ರಾಹಕರಿಗೆ ಉಚಿತ 2GB ಡೇಟಾವನ್ನು ನೀಡುವ ಯೋಜನೆಗಳಾಗಿದ್ದು, 359 ರೂ, 549 ರೂ ಹಾಗೂ 699 ರೂ. ಗಳ ವಿಶೇಷ ಪ್ಲ್ಯಾನ್‌ನಲ್ಲಿ ಅಮೆಜಾನ್ ಪ್ರೈಮ್ ಸದಸ್ಯತ್ವ ಲಭ್ಯವಾಗಲಿದೆ. ಹಾಗೆಯೇ 719 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಗೆ ಎಂಟ್ರಿ ಸಿಗಲಿದ್ದು, 839 ರೂ. ಗಳ ರೀಚಾರ್ಜ್‌ನಲ್ಲಿಲ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಗೆ ಪ್ರವೇಶ ಪಡೆಯಲು ಅನುವು ಮಾಡಿಕೊಡುತ್ತದೆ.

ಇಷ್ಟೆಲ್ಲಾ ಸೇವೆ ಪಡೆಯಬೇಕು ಎಂದಾದರೆ ಕಡ್ಡಾಯವಾಗಿ ನೀವು ನಿಮ್ಮ ಫೋನ್‌ನಲ್ಲಿ ಏರ್‌ಟೆಲ್ ಥ್ಯಾಂಕ್ಸ್ ಆಪ್ ಇನ್‌ಸ್ಟಾಲ್‌ ಮಾಡಿಕೊಂಡಿದ್ದೀರಾ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಹಾಗಿದ್ರೆ ಮಾತ್ರ ನೀವು 2GB ಉಚಿತ ಡೇಟಾವನ್ನು ಪಡೆಯಲು ಅರ್ಹರಾಗುತ್ತೀರಿ.

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಪ್ರಚಾರ ಮಾಡುತ್ತಿರುವ ಏರ್‌ಟೆಲ್‌
ಏರ್‌ಟೆಲ್‌ ತನ್ನ ಹೊಸ ಹೊಸ ರೀಚಾರ್ಜ್‌ ಪ್ಲ್ಯಾನ್‌ಗಳ ಜೊತೆಗೆ ತನ್ನದೇ ಆದ ಆಪ್‌ಗಳ ಪ್ರಚಾರಕ್ಕೆ ಮುಂದಾಗಿದ್ದು, ಎಲ್ಲಾ ಸೇವೆಗಳಿಗೂ ಒಂದು ರೀತಿಯ ಕೊಂಡಿ ನಿರ್ಮಾಣ ಮಾಡಿದೆ. ಇದರಿಂದಾಗಿ ಬಳಕೆದಾರರು ಸುಲಭವಾಗಿ ಏರ್‌ಟೆಲ್‌ನ ಎಲ್ಲಾ ಆಪ್‌ಗಳಿಗೆ ಭೇಟಿ ನೀಡುತ್ತಾರೆ ಎನ್ನುವ ಗುರಿ ಇಟ್ಟುಕೊಂಡಿದೆ.

ಅದರಲ್ಲೂ ಹೆಚ್ಚು ಗ್ರಾಹಕರು ಏರ್‌ಟೆಲ್ ಸೇವೆಗಳು ಮತ್ತು ಕೊಡುಗೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಸಹಾಯವಾಗುತ್ತದೆ ಎನ್ನುವುದು ಏರ್‌ಟೆಲ್‌ನ ನಂಬಿಕೆ. ಇದರಲ್ಲಿ ಏರ್‌ಟೆಲ್ ಥ್ಯಾಂಕ್ಸ್ ಆಪ್‌ ಏರ್‌ಟೆಲ್‌ನ ಎಲ್ಲಾ ಸೇವೆಗಳಿಗೆ ಒಂದು ಸ್ಟಾಪ್ ಡಿಜಿಟಲ್ ಪರಿಹಾರವಾಗಿ ಕೆಲಸ ಮಾಡುತ್ತಾ ಬರುತ್ತಿದೆ.

ಏರ್‌ಟೆಲ್ ಬಳಕೆದಾರರಿಗೆ 2GB ಉಚಿತ ಡೇಟಾ; ಹೇಗೆ ಗೊತ್ತಾ!?

ಇನ್ನೊಂದು ವಿಷಯವೆಂದರೆ ಏರ್‌ಟೆಲ್ ಥ್ಯಾಂಕ್ಸ್ ಆಪ್‌ನಲ್ಲಿ ಬಳಕೆದಾರರು ತಮ್ಮ ವ್ಯಾಲೆಟ್‌ಗಳನ್ನು ಮತ್ತೆ ಮತ್ತೆ ರೀಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ. ಏರ್‌ಟೆಲ್ ಥ್ಯಾಂಕ್ಸ್ ಆಪ್‌ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 100+ ಮಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದಿದ್ದಿ, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಆಪ್‌ ಆಂಡ್ರಾಯ್ಡ್‌ ಹಾಗೂ ಐಓಎಸ್‌ ನ ಬಳಕೆದಾರರಿಗೂ ಲಭ್ಯವಿದ್ದು, ಸುಲಭವಾಗಿ ಬೇಕಾದ ರೀಚಾರ್ಜ್‌ ಪ್ಲ್ಯಾನ್ ಮಾಡಿಕೊಳ್ಳಬಹುದಾಗಿದೆ.

ಏರ್‌ಟೆಲ್‌ನ ಪ್ರಮುಖ ಡೇಟಾ ಪ್ಲ್ಯಾನ್‌ಗಳ ವಿವರ

  • 58 ರೂ. ಗಳ ಪ್ಲ್ಯಾನ್‌ನಲ್ಲಿ 3 ಜಿಬಿ ಡೇಟಾ
  • 65 ರೂ. ಗಳ ಪ್ಲ್ಯಾನ್‌ನಲ್ಲಿ 4 GB ಡೇಟಾ
  • 98 ರೂ. ಗಳ ಪ್ಲ್ಯಾನ್‌ನಲ್ಲಿ 5 ಜಿಬಿ ಡೇಟಾ
  • 265 ರೂ. ಗಳ ಪ್ಲ್ಯಾನ್‌ನಲ್ಲಿ ಪ್ರತಿದಿನ 1 GB ಡೆಟಾ
  • 359 ರೂ. ಗಳ ಪ್ಲ್ಯಾನ್‌ನಲ್ಲಿ ಪ್ರತಿದಿನ 2 GB ಡೇಟಾ
  • 549 ರೂ. ಗಳ ಪ್ಲ್ಯಾನ್‌ನಲ್ಲಿ ಪ್ರತಿದಿನ 2 GB ಡೇಟಾ
  • 699 ರೂ. ಗಳ ಪ್ಲ್ಯಾನ್‌ನಲ್ಲಿ ಪ್ರತಿದಿನ 3 GB ಡೇಟಾ
  • 719 ರೂ. ಗಳ ಪ್ಲ್ಯಾನ್‌ನಲ್ಲಿ ಪ್ರತಿದಿನ ಪ್ರತಿದಿನ 1.5 GB ಡೇಟಾ
  • 839 ರೂ. ಗಳ ಪ್ಲ್ಯಾನ್‌ನಲ್ಲಿ ಪ್ರತಿದಿನ 2 GB ಡೇಟಾ
Best Mobiles in India

English summary
Offering 2GB of Free Data to Airtel Users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X