Subscribe to Gizbot

ಆಫ್‌ಲೈನ್‌ನಲ್ಲಿ ದಿಕ್ಕು ತೋರಿಸುವ ಮಾರ್ಗದರ್ಶಕ ಗೂಗಲ್ ಮ್ಯಾಪ್ಸ್

Written By:

ಕಳೆದ ವಾರಷ್ಟೇ, ಗೂಗಲ್ ಆಂಡ್ರಾಯ್ಡ್‌ಗಾಗಿ ಗೂಗಲ್ ಮ್ಯಾಪ್ಸ್‌ನಲ್ಲಿ ನವೀಕರಣಗಳನ್ನು ಹೊರತಂದಿದೆ. ಇದರಿಂದಾಗಿ ಆಫ್‌ಲೈನ್ ಸ್ಥಳೀಯ ಮ್ಯಾಪ್‌ಗಳನ್ನು ನಿಮಗೆ ಡೌನ್‌ಲೋಡ್ ಮಾಡಿಕೊಳ್ಳುವ ಸಾಮರ್ಥ್ಯ ದೊರೆಯಲಿದೆ. ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಟರ್ನ್ ಬೈ ಟರ್ನ್ ನ್ಯಾವಿಗೇಶನ್ ಅನ್ನು ಬಳಸಿಕೊಳ್ಳಬಹುದಾಗಿದೆ. ಭಾರತದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ನವೀಕೃತ ಅಪ್ಲಿಕೇಶನ್‌ಗಳು ಬಿಡುಗಡೆಯಾಗುತ್ತಿದೆ.

ಓದಿರಿ: ಹೊಸ ನವೀಕರಣಗಳ ಮೂಲಕ ಗೂಗಲ್ ಮ್ಯಾಪ್ಸ್ ನಿಮ್ಮ ಮುಂದೆ

ಆಫ್‌ಲೈನ್ ನ್ಯಾವಿಗೇಶನ್ ಹೊರತುಪಡಿಸಿ, ನಿರ್ದಿಷ್ಟ ಸ್ಥಾನದ ಕುರಿತ ಮಾಹಿತಿಯನ್ನು ನಿಮಗೆ ಪ್ರವೇಶಿಸಬಹುದಾಗಿದೆ. ಹತ್ತಿರದ ಪ್ರವಾಸಿ ತಾಣಗಳು, ಬ್ಯಾಂಕ್‌ಗಳು ಎಟಿಎಮ್‌ಗಳ ಮಾಹಿತಿಯನ್ನು ಇದು ನೀಡುತ್ತದೆ. ಆಫ್‌ಲೈನ್ ಮೋಡ್‌ನಲ್ಲಿಯೇ ಗಂಟೆಗಳ ಕಾರ್ಯಾಚರಣೆಯ ಕುರಿತು ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ ಅಂತೆಯೇ ಸಂಪರ್ಕ ವಿವರಗಳೂ ನಿಮಗೆ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೆಲವೊಂದು ಮಿತಿ

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ ಮ್ಯಾಪ್ಸ್ ಕೆಲವೊಂದು ಮಿತಿಯನ್ನು ಪಡೆದುಕೊಂಡಿದೆ. ರಿಯಲ್ ಟೈಮ್ ಟ್ರಾಫಿಕ್ ಮಾಹಿತಿಯನ್ನು ಇಲ್ಲಿ ನಿಮಗೆ ಪಡೆದುಕೊಳ್ಳಲಾಗುವುದಿಲ್ಲ.

ಮೂರು ಮೆನು ಬಟನ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಮ್ಯಾಪ್ಸ್ ತೆರೆಯಿರಿ. ಮೇಲಿನ ಎಡಭಾಗದಲ್ಲಿರುವ ಮೂರು ಮೆನು ಬಟನ್ ಅನ್ನು ಸ್ಪರ್ಶಿಸಿ ಮತ್ತು 'ಆಫ್‌ಲೈನ್ ಏರಿಯಾಸ್' ಸ್ಪರ್ಶಿಸಿ.

ಪರಿಸರದ ನಕ್ಷೆ

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಕೆಳಭಾಗ ಎಡಭಾಗದಲ್ಲಿ, ನೀವು + ಬಟನ್ ಅನ್ನು ಹೊಂದಿರುತ್ತೀರಿ ಅದನ್ನು ಸ್ಪರ್ಶಿಸಿ. ಇದು ಪರಿಸರದ ನಕ್ಷೆಯನ್ನು ನಿಮಗೆ ತೋರಿಸುತ್ತದೆ. ಜೂಮ್ ಇನ್ / ಜೂಮ್ ಔಟ್ ಅನ್ನು ಇಲ್ಲಿ ನಡೆಸಬಹುದಾಗಿದ್ದು ಡೌನ್‌ಲೋಡ್ ಮಾಡಬೇಕಾಗಿರುವ ಪ್ರದೇಶ ಮ್ಯಾಪ್ ಅನ್ನು ಆಯ್ಕೆಮಾಡಿ.

ಆಫ್‌ಲೈನ್ ಡೇಟಾ ಮಾಹಿತಿ

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಕೆಳಭಾಗದಲ್ಲಿ, ಫೋನ್‌ನ ಆಂತರಿಕ ಮೆಮೊರಿಯಲ್ಲಿ ಲಭ್ಯವಿರುವ ಸ್ಥಳದಲ್ಲಿ ಆಫ್‌ಲೈನ್ ಡೇಟಾ ಮಾಹಿತಿ ನಿಮಗೆ ಲಭ್ಯವಾಗುತ್ತದೆ.

ಆಫ್‌ಲೈನ್ ಡೇಟಾ ಡೌನ್‌ಲೋಡ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಡೇಟಾವನ್ನು ಡೌನ್‌ಲೋಡ್ ಮಾಡಲು, ವೈಫೈ ನೆಟ್‌ವರ್ಕ್‌ಗೆ ನೀವು ಸಂಪರ್ಕವನ್ನು ಪಡೆದುಕೊಂಡಿರಬೇಕು. ಹಿಂದಿನ ಡೇಟಾ ಡೌನ್‌ಲೋಡ್ ಮಿತಿ 10 ಎಮ್‌ಬಿ ಆಗಿದ್ದಲ್ಲಿ, ಇದೀಗ 400 ಎಮ್‌ಬಿಗೆ ಏರಿಕೆಯಾಗಿರುತ್ತದೆ.

ಅಪ್‌ಡೇಟ್ ಅಗತ್ಯ

ಆಫ್‌ಲೈನ್ ಗೂಗಲ್ ಮ್ಯಾಪ್ಸ್

30 ದಿನಗಳಲ್ಲಿ ಈ ಡೇಟಾ ಅಂತ್ಯಗೊಳ್ಳುತ್ತದೆ, ತದನಂತರ ಇದನ್ನು ಬಳಸಲು ಅಪ್‌ಡೇಟ್ ಅಗತ್ಯವಿದೆ. ಇನ್ನು ಹಸ್ತಚಾಲಿತವಾಗಿ ಮ್ಯಾಪ್ಸ್ ಅನ್ನು ಅಪ್‌ಡೇಟ್ ಮಾಡುವ ಸೌಕರ್ಯ ಕೂಡ ಇದೆ.

ಧ್ವನಿ ನ್ಯಾವಿಗೇಶನ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಇದೀಗ, ಮೊಬೈಲ್ ಡೇಟಾ / ವೈಫೈ ಆಫ್ ಆಗಿದ್ದಲ್ಲಿ, ಮ್ಯಾಪ್ ಏರಿಯಾದಲ್ಲಿಯೇ ದಿಕ್ಕುಗಳನ್ನು ನಿಮಗೆ ಹುಡುಕಾಡಬಹುದಾಗಿದೆ. ಮೂಲದಿಂದ ಲಕ್ಷ್ಯಕ್ಕೆ ಮಾತ್ರ ಇದು ದಿಕ್ಕನ್ನು ಸೂಚಿಸುವುದಿಲ್ಲ ಬದಲಾಗಿ ಆಫ್‌ಲೈನ್ ಟರ್ನ್ - ಬೈ - ಟರ್ನ್ ಧ್ವನಿ ನ್ಯಾವಿಗೇಶನ್ ಅನ್ನು ನೀಡುತ್ತದೆ.

ಆಫ್‌ಲೈನ್ ಡೈರೆಕ್ಶನ್‌

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಡೈರೆಕ್ಶನ್‌ನಲ್ಲಿ ನಿಖರವಾಗಿ ಕಾರ್ಯನಿರ್ವಹಿಸಲು, ನಿಮ್ಮ ಆಂಡ್ರಾಯ್ಡ್ ಡಿವೈಸ್‌ಗಳ ಜಿಪಿಎಸ್ ಆನ್ ಆಗಿರಬೇಕು. ಆಫ್‌ಲೈನ್ ನ್ಯಾವಿಗೇಶನ್ ಅನ್ನು ನೀವು ಪಡೆದಲ್ಲಿ, ಸ್ಯಾಟಲೈಟ್ ವೀಕ್ಷಣೆ ಮತ್ತು ಟ್ರಾಫಿಕ್ ಮಾಹಿತಿಗಾಗಿ ಆ ಸಮಯದಲ್ಲಿ ಫೋನ್ ಇಂಟರ್ನೆಟ್‌ಗೆ ಸಂಪರ್ಕವನ್ನು ಹೊಂದಿರಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Last week, Google updated its Google Maps for Android with the ability to download offline regional maps and use turn-by-turn navigation, even without an Internet connection.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot