ಒನ್‌ಪ್ಲಸ್‌ 10R ಖರೀದಿ ಮಾಡುವ ಗ್ರಾಹಕರಿಗೆ ಇಲ್ಲಿದೆ ಭರ್ಜರಿ ಸಿಹಿಸುದ್ದಿ!

|

ಹಬ್ಬಗಳ ಸಂದರ್ಭದಲ್ಲಿ ಇ ಕಾಮರ್ಸ್‌ ತಾಣಗಳು ಆಕರ್ಷಕ ರಿಯಾಯಿತಿ ನೀಡಿ ಗ್ರಾಹಕರನ್ನು ಸೆಳೆಯುತ್ತವೆ. ಅದರಲ್ಲಿಯೂ ಇ ಕಾಮರ್ಸ್‌ ದೈತ್ಯ ಅಮೆಜಾನ್‌ ಪ್ಲಾಟ್‌ಫಾರ್ಮ್ ಹೆಚ್ಚಿನ ಡಿಸ್ಕೌಂಟ್‌ಗಳ ಮೂಲಕ ಗುರುತಿಸಿಕೊಂಡಿದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳು ಭಾರೀ ಕೊಡುಗೆ ಲಭ್ಯ ಮಾಡುತ್ತದೆ. ಆ ಪೈಕಿ ಸದ್ಯ ಒನ್‌ಪ್ಲಸ್‌ ಕಂಪನಿಯ ಒನ್‌ಪ್ಲಸ್‌ 10R (OnePlus 10R) ಸ್ಮಾರ್ಟ್‌ಫೋನ್‌ ಭರ್ಜರಿ ಆಫರ್‌ ದರದಲ್ಲಿ ಕಾಣಿಸಿಕೊಂಡಿದೆ.

ಟ್ಯಾಗ್‌ನಲ್ಲಿ

ಹೌದು, ಅಮೆಜಾನ್‌ ತಾಣದಲ್ಲಿ ಒನ್‌ಪ್ಲಸ್‌ 10R (OnePlus 10R) ಸ್ಮಾರ್ಟ್‌ಫೋನ್‌ 38,999 ರೂ. ಗಳ ಬೆಲೆಯನ್ನು ಹೊಂದಿದ್ದು, ಆದರೆ ಕೊಡುಗೆಯಲ್ಲಿ 32,999 ರೂ. ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಫೋನ್ 12GB RAM ಸಾಮರ್ಥ್ಯದ ವೇರಿಯಂಟ್ ಆಯ್ಕೆ ಪಡೆದಿದ್ದು, ಜೊತೆಗೆ 150W ವೇಗದ ಚಾರ್ಜಿಂಗ್‌ ಸೌಲಭ್ಯವನ್ನು ಪಡೆದಿದೆ. ಹಾಗಾದರೆ ಒನ್‌ಪ್ಲಸ್‌ 10R (OnePlus 10R) ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಒನ್‌ಪ್ಲಸ್‌ 10R 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080 x 2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಇದು 120 Hz ಡೈನಾಮಿಕ್ ರಿಫ್ರೆಶ್ ರೇಟ್ ಮತ್ತು 720Hz ಟಚ್ ರೆಸ್ಪಾನ್ಸ್ ರೇಟ್‌ ಅನ್ನು ಹೊಂದಿದೆ. ಜೊತೆಗೆ 2.5D ಕರ್ವ್ಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಪಡೆದುಕೊಂಡಿದೆ.

ಪ್ರೊಸೆಸರ್‌ ದಕ್ಷತೆ ಹೇಗಿದೆ

ಪ್ರೊಸೆಸರ್‌ ದಕ್ಷತೆ ಹೇಗಿದೆ

ಒನ್‌ಪ್ಲಸ್‌ 10R 5G ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಮ್ಯಾಕ್ಸ್ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಆಧಾರಿತ OxygenOS 12.1 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಇನ್ನು ಈ ಪ್ರೊಸೆಸರ್‌ 20% ಸುಧಾರಿತ GPU ಕಾರ್ಯಕ್ಷಮತೆ, 25% ಸುಧಾರಿತ ವಿದ್ಯುತ್ ದಕ್ಷತೆ ಮತ್ತು 80% ಉತ್ತಮ AI ಕಾರ್ಯಕ್ಷಮತೆಯನ್ನು ನೀಡುತ್ತದೆ. ಹಾಗೆಯೇ 12 GB RAM ಮತ್ತು 256 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಟ್ರಿಪಲ್ ಕ್ಯಾಮೆರಾ ಸೆನ್ಸಾರ್

ಟ್ರಿಪಲ್ ಕ್ಯಾಮೆರಾ ಸೆನ್ಸಾರ್

ಒನ್‌ಪ್ಲಸ್‌ 10R 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೋನಿ IMX355 ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ GC02M1 ಮ್ಯಾಕ್ರೋ ಲೆನ್ಸ್‌ ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್ ISOCELL S5K3P9 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಸಾಮರ್ಥ್ಯ ಎಷ್ಟು? ಇತರೆ ಫೀಚರ್ಸ್‌ಗಳೇನು?

ಬ್ಯಾಟರಿ ಸಾಮರ್ಥ್ಯ ಎಷ್ಟು? ಇತರೆ ಫೀಚರ್ಸ್‌ಗಳೇನು?

ಒನ್‌ಪ್ಲಸ್‌ 10R 5G ಸ್ಮಾರ್ಟ್‌ಫೋನ್‌ ಎಂಡ್ಯೂರೆನ್ಸ್ ಆವೃತ್ತಿಯ ಮಾದರಿ 4,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 150W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇನ್ನು 80W SuperVOOC ವೇಗದ ಚಾರ್ಜಿಂಗ್ ಹೊಂದಿರುವ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ.

Best Mobiles in India

English summary
OnePlus 10R available in big discount at Amazon Festival sale.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X