ಒನ್‌ಪ್ಲಸ್ ಏಸ್ ಪ್ರೊ Genshin ಸ್ಮಾರ್ಟ್‌ಫೋನ್‌ ಲಾಂಚ್: ಅತ್ಯಾಕರ್ಷಕ ಫೀಚರ್ಸ್‌!

|

ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಒನ್‌ಪ್ಲಸ್ ಈಗಾಗಲೇ ಅತ್ಯುತ್ತಮ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದರಂತೆ ಕಾಲ ಕಾಲಕ್ಕೆ ಅನುಗುಣವಾದ ವಿವಿಧ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುತ್ತಿದ್ದು, ಇದೀಗ ಹೊಸ ಸೀಮಿತ ಆವೃತ್ತಿಯ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಕಂದು ಬಣ್ಣದ ಆಯ್ಕೆಯಲ್ಲಿ ಕಂಡುಬರುತ್ತದೆ.

Genshin

ಹೌದು, ಒನ್‌ಫ್ಲಸ್ ಕಂಪೆನಿ ಹೊಸ ಸೀಮಿತ ಆವೃತ್ತಿಯ ಒನ್‌ಪ್ಲಸ್ ಏಸ್ ಪ್ರೊ Genshin (OnePlus Ace Pro Genshin) ಸ್ಮಾರ್ಟ್‌ಫೋನ್‌ ಅನ್ನು ಚೀನಾದ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್ ಒನ್‌ಪ್ಲಸ್ ಏಸ್ ಪ್ರೊ ಸ್ಮಾರ್ಟ್‌ಫೋನ್‌ ರೀತಿಯ ಹೋಲಿಕೆ ಇದ್ದರೂ ಸುಧಾರಿತ ಫೀಚರ್ಸ್‌ ಪಡೆದುಕೊಂಡಿದೆ. ಇದು ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 8+ ಜೆನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಕ್ಸಿಜನ್ ಓಎಸ್ 12 ನಿಂದ ರನ್‌ ಆಗಲಿದೆ.

ಉತ್ತಮ ಗೇಮಿಂಗ್

ಉತ್ತಮ ಗೇಮಿಂಗ್ ಕಾರ್ಯಕ್ಷಮತೆಯನ್ನು ನೀಡುವ ಉದ್ದೇಶದಿಂದ ಜನಪ್ರಿಯ ಮೊಬೈಲ್ ಗೇಮ್‌ನ ತಯಾರಕ ಕಂಪೆನಿಯಾದ Genshin ಇಂಪ್ಯಾಕ್ಟ್ ಜೊತೆ ಪಾಲುದಾರಿಕೆ ಪಡೆಯಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಸೂಪರ್‌ ಫಾಸ್ಟ್‌ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಹಾಗಿದ್ರೆ ಇದರ ಇನ್ನಷ್ಟು ಫೀಚರ್ಸ್‌ ಅನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಗೇಮಿಂಗ್‌ ಆಧಾರಿತ ಒನ್‌ಪ್ಲಸ್ ಏಸ್ ಪ್ರೊ Genshin ಇಂಪ್ಯಾಕ್ಟ್ ಲಿಮಿಟೆಡ್ ಆವೃತ್ತಿಯು 6.7 ಇಂಚಿನ ಹಾಗೂ 120Hz ರಿಫ್ರೆಶ್ ರೇಟ್‌ನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ HD+ ರೆಸಲ್ಯೂಶನ್ ಆಯ್ಕೆಯ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಇದರಲ್ಲಿದ್ದು, ಡಿಸ್‌ಪ್ಲೇನಲ್ಲಿ ಪಂಚ್ ಹೋಲ್ ರಚನೆ ಪಡೆದಿದೆ.

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

ಒನ್‌ಪ್ಲಸ್ ಏಸ್ ಪ್ರೊ Genshin ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 8+ ಜೆನ್ 1 ಪ್ರೊಸೆಸರ್ ನಿಂದ ಕಾರ್ಯನಿರ್ವಹಿಸಲಿದ್ದು, ಅಡ್ರಿನೊ ಜಿಪಿಯು ಈ ಸ್ಮಾರ್ಟ್‌ಫೋನ್‌ಗೆ ಶಕ್ತಿ ನೀಡಲಿದೆ. ಹಾಗೆಯೇ ಆಂಡ್ರಾಯ್ಡ್‌ 12 ಆಧಾರಿತ ಆಕ್ಸಿಜನ್ ಓಎಸ್ 12 ಸ್ಮಾರ್ಟ್‌ಫೋನ್‌ ಅನ್ನು ಮಾಡುತ್ತದೆ. ಇನ್ನು 16GB RAM ಹಾಗೂ 512GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆಯಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯವಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಒನ್‌ಪ್ಲಸ್ ಏಸ್ ಪ್ರೊ Genshin ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 50 ಮೆಗಾಪಿಕ್ಸೆಲ್‌ನ ಸೋನಿ ಪ್ರಮುಖ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ನ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್‌ನ ಮ್ಯಾಕ್ರೋ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದರ ಜೊತೆಗೆ 16 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಆಯ್ಕೆ ಇದರಲ್ಲಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಒನ್‌ಪ್ಲಸ್ ಏಸ್ ಪ್ರೊ Genshin ಸ್ಮಾರ್ಟ್‌ಫೋನ್ 4,800mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 150W ಸೂಪರ್‌ ಫಾಸ್ಟ್‌ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇನ್ನುಳಿದಂತೆ ಟೈಪ್-ಸಿ ಪೋರ್ಟ್, ಸ್ಟಿರಿಯೊ ಸ್ಪೀಕರ್ ಮತ್ತು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೀಚರ್ಸ್‌ ಇದರಲ್ಲಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಇದರ ಬೆಲೆ RMB 4,299 (ಭಾರತದಲ್ಲಿ ಸುಮಾರು 48,665ರೂ. ಗಳು). ಇನ್ನು ಈ ಸ್ಮಾರ್ಟ್‌ಫೋನ್ 16GB + 512GB ಸ್ಟೋರೇಜ್‌ನ ಒಂದೇ ವೇರಿಯಂಟ್‌ನಲ್ಲಿ ಲಭ್ಯವಿದ್ದು, ಚೀನಾದಲ್ಲಿ ಅಕ್ಟೋಬರ್ 31 ರಿಂದ ಖರೀದಿಗೆ ಮುಕ್ತವಾಗಲಿದೆ. ಆದರೆ, ಭಾರತವೂ ಸೇರಿದಂತೆ ಇತರೆ ದೇಶಗಳಲ್ಲಿ ಈ ಸ್ಮಾರ್ಟ್‌ಫೋನ್‌ ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

Best Mobiles in India

English summary
OnePlus has already introduced smartphones with the best features in the smartphone segment. Now OnePlus has launched the gaming oriented OnePlus ACE Pro GenShim Impact Limited Edition.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X