ಒನ್‌ಪ್ಲಸ್‌ ಬಡ್ಸ್‌ ಪ್ರೊ 2 ಅನಾವರಣಕ್ಕೆ ವೇದಿಕೆ ಸಜ್ಜು; ಫೀಚರ್ಸ್‌ ಅಂತೂ ಮಸ್ತ್‌!

|

ಒನ್‌ಪ್ಲಸ್‌ನ ಸ್ಮಾರ್ಟ್‌ಫೋನ್‌ ಹಾಗೂ ಇನ್ನಿತರೆ ಡಿವೈಸ್‌ಗಳಿಗೆ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಇದೆ. ಅದರಲ್ಲೂ ಒನ್‌ಪ್ಲಸ್‌ ಫೋನ್‌ಗಳ ಧಕ್ಷತೆ ಹಾಗೂ ಕಾರ್ಯವೈಖರಿಗೆ ಜನರು ಫಿದಾ ಆಗಿದ್ದಾರೆ. ಇದರ ನಡುವೆ ಒನ್‌ಪ್ಲಸ್‌ ಹೊಸ ಇಯರ್‌ಬಡ್ಸ್‌ ಲಾಂಚ್‌ ಮಾಡಲು ಮುಂದಾಗಿದ್ದು, ಇದು ಡೈನಾಡಿಯೊ-ಟ್ಯೂನ್ ಮಾಡಿದ ಸೌಂಡ್‌ ಆಯ್ಕೆ ಹೊಂದಿದ್ದು, ಬಿಡುಗಡೆಗೂ ಮುನ್ನವೇ ಈ ಇಯರ್‌ಬಡ್ಸ್‌ ಫೀಚರ್ಸ್‌ ಬಗ್ಗೆ ಕೆಲವು ಮಾಹಿತಿ ತಿಳಿದುಬಂದಿದೆ.

ಒನ್‌ಪ್ಲಸ್

ಹೌದು, ಒನ್‌ಪ್ಲಸ್ ತನ್ನ ಮುಂದಿನ ಜನ್‌ನ ಪ್ರಮುಖ ಸ್ಮಾರ್ಟ್‌ಫೋನ್ ಒನ್‌ಪ್ಲಸ್‌ 11 ಅನ್ನು ಮುಂದಿನ ವರ್ಷದ ಆರಂಭದಲ್ಲಿ ಲಾಂಚ್‌ ಮಾಡಲು ಮುಂದಾಗಿದ್ದು, ಇದೇ ವೇಳೆಯಲ್ಲಿ ಒನ್‌ಪ್ಲಸ್‌ ಬಡ್ಸ್‌ ಪ್ರೊ 2 (OnePlus Buds Pro 2 ) ಅನ್ನು ಸಹ ಅನಾವರಣ ಮಾಡಲಾಗುತ್ತಿದೆ. ಈ ಇಯರ್‌ಬಡ್ಸ್‌ 2020 ರಲ್ಲಿ ಲಾಂಚ್‌ ಆಗಿರುವ ಒನ್‌ಪ್ಲಸ್‌ ಬಡ್ಸ್‌ ಪ್ರೊ ನ ಉತ್ತರಾಧಿಕಾರಿಯಾಗಲಿದೆ. ಹಾಗಿದ್ರೆ ಇದರ ಫೀಚರ್ಸ್‌ ಏನು?, ಬೆಲೆ ಎಷ್ಟಿರಬಹುದು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಒನ್‌ಪ್ಲಸ್‌ ಬಡ್ಸ್ ಪ್ರೊ 2 ಲಾಂಚ್‌ ಆಗುವ ಮುನ್ನವೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು, 2020 ರಲ್ಲಿ ಲಾಂಚ್‌ ಆದ ಇಯರ್‌ಬಡ್ಸ್‌ಗೆ ಉತ್ತರಾಧಿಕಾರಿಯಾಗಲಿದೆ. ಅದರಂತೆ ಅಧಿಕೃತವಾಗಿ ಬಹಿರಂಗವಾದ ಮಾಹಿತಿ ಪ್ರಕಾರ, ಈ ಬಡ್ಸ್ ಪ್ರೊ 2 48dB ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಹೊಂದಿದೆ. ಹಾಗೆಯೇ ಇದರ ಹಳೆಯ ವೇರಿಯಂಟ್‌ ಒನ್‌ಪ್ಲಸ್‌ ಬಡ್ಸ್ ಪ್ರೊ 40dB ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್ ಹೊಂದಿತ್ತು.

ಅಧಿಕೃತ

ಇದರ ವಿನ್ಯಾಸವನ್ನು ಅಧಿಕೃತವಾಗಿ ಟೀಸರ್ ಮೂಲಕ ಬಹಿರಂಗಪಡಿಸಲಾಗಿದ್ದು, ಬಡ್ಸ್‌ಗಳ ಶೈಲಿ ಆಫ್‌-ಇಯರ್ ವಿನ್ಯಾಸ ಹೊಂದಿದ್ದು, ಪ್ರತಿ ಬಡ್ಸ್‌ ಮೇಲಿನ ಅರ್ಧವು ಫ್ರಾಸ್ಟೆಡ್ ಮ್ಯಾಟ್ ಫಿನಿಶ್ ಅನ್ನು ಹೊಂದಿದ್ದು, ಕೆಳಗಿನ ಅರ್ಧ ಭಾಗವು ಹೊಳಪಿನ ಶೈಲಿಯನ್ನು ಪಡೆದುಕೊಂಡಿದೆ.

ಬಡ್ಸ್‌

ಕಳೆದ ಬಡ್ಸ್‌ಗೆ ಹೋಲಿಕೆ ಮಾಡಿದರೆ ಈ ಹೊಸ ಬಡ್ಸ್‌ ಅತ್ಯುತ್ತಮ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಹೊಂದಿರುವುದು ಬಹಿರಂಗವಾಗಿದೆ. ಹಾಗೆಯೇ ಹೈ-ರೆಸ್ ಆಡಿಯೋ ಬೆಂಬಲದೊಂದಿಗೆ ಪ್ಯಾಕ್‌ ಆಗಿದೆ. ಇದಿಷ್ಟೇ ಅಲ್ಲದೆ 4000Hz ಅಲ್ಟ್ರಾ-ವೈಡ್‌ಬ್ಯಾಂಡ್ ಶಬ್ದ ಕಡಿತದ ಆಯ್ಕೆ ಹೊಂದಿದ್ದು, ಈ ಬಡ್ಸ್‌ 10Hz~40KHz ಆವರ್ತನ ಪ್ರತಿಕ್ರಿಯೆ ಶ್ರೇಣಿಯನ್ನು ಹೊಂದಿರಲಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಈ ಹೊಸ ಇಯರ್‌ಬಡ್ಸ್‌ಗಳು ಒಂಬತ್ತು ಗಂಟೆಗಳವರೆಗೆ ಬ್ಯಾಟರಿ ಬ್ಯಾಕ್‌ ಅಪ್‌ ನೀಡಲಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ ಬಳಕೆದಾರರು 38 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆಯಬಹುದು. ಹಾಗೆಯೇ ಇದು ವೇಗದ ಚಾರ್ಜಿಂಗ್ ಮತ್ತು ವಾಯರ್‌ಲೆಸ್‌ ಚಾರ್ಜಿಂಗ್ ಆಯ್ಕೆಯನ್ನೂ ಸಹ ಹೊಂದಿದೆ. ಅದರಲ್ಲೂ 10 ನಿಮಿಷಗಳ ಕಾಲ ಚಾರ್ಜ್‌ ಮಾಡಿದರೆ ಮೂರು ಗಂಟೆಗಳ ಬ್ಯಾಟರಿ ಬ್ಯಾಕಪ್ ಪಡೆಯಬಹುದಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಒನ್‌ಪ್ಲಸ್‌ನ ಹಳೆಯ ಆವೃತ್ತಿ ಬೆಲೆ 9,999 ರೂ. ಗಳ ಬೆಲೆ ಹೊಂದಿತ್ತು. ಆದರೆ, ಈ ಹೊಸ ಇಯರ್‌ಬಡ್ಸ್‌ ಬೆಲೆ ಕೊಂಚ ಏರಿಕೆ ಆಗಬಹುದು ಎಂದು ಹೇಳಲಾಗುತ್ತಿದೆ. ಅಂದರೆ 12,000 ರೂ. ಗಳ ಬೆಲೆ ಇರಬಹುದು ಎನ್ನಲಾಗಿದೆ. ಈ ಮೂಲಕ ಈ ಡಿವೈಸ್‌ ಒಪ್ಪೋದ ಪ್ರಮುಖ ಇಯರ್‌ಬಡ್ಸ್‌ನ ಬೆಲೆಯನ್ನೇ ಹೋಲಲಿದೆ. ಇನ್ನು ಬಣ್ಣದ ವಿಚಾರಕ್ಕೆ ಬಂದರೆ ಕಪ್ಪು ಮತ್ತು ಹಸಿರು ಬಣ್ಣದ ಆಯ್ಕೆ ಹೊಂದಿರಲಿದೆ ಎಂದು ತಿಳಿದುಬಂದಿದೆ.

ಲಾಂಚ್‌ ಯಾವಾಗ?

ಲಾಂಚ್‌ ಯಾವಾಗ?

ಈ ಡಿವೈಸ್‌ ಜನವರಿ 4 ರಂದು ಚೀನಾದಲ್ಲಿ ಒನ್‌ಪ್ಲಸ್ 11 ಅನ್ನು ಲಾಂಚ್‌ ಮಾಡಲಾಗುತ್ತಿದ್ದು, ಅದೇ ದಿನ ಈ ಇಯರ್‌ಬಡ್ಸ್‌ ಅನ್ನು ಸಹ ಲಾಂಚ್‌ ಮಾಡಲಾಗುತ್ತದೆ. ಇದಾದ ನಂತರ ಭಾರತದಲ್ಲಿ ಫೆಬ್ರವರಿ 7 ರಂದು ಲಾಂಚ್‌ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

Best Mobiles in India

English summary
OnePlus Buds Pro 2 Set to Launch on January 4 .

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X